ಪೂಜೆ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣ; ಆರೋಪಿಯ ಹೆಡೆಮುರಿ ಕಟ್ಟಿದ ದ. ಕ. ಜಿಲ್ಲಾ ಸೈಬರ್‌ ಅಪರಾಧ ಪೊಲೀಸರು

ಕರಾವಳಿ

ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ತಕ್ಷಣದಲ್ಲಿ ದೇವರ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ, ನಂಬಿಸಿ ವ್ಯಕ್ತಿಯೊಬ್ಬರಿಗೆ ಸುಮಾರು 24,78,274 ರೂ ಸೈಬರ್‌ ವಂಚನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 87/2025, ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ದ.ಕ ಜಿಲ್ಲೆಯ ಸೈಬರ್ ಅಪರಾಧ ಠಾಣೆಯ ಪೊಲೀಸರು ದಿನಾಂಕ: 04-11-2025 ರಂದು ಆರೋಪಿ ವಾಸುದೇವ ಆರ್‌, ಗೋಕುಲ 1ನೇ ಹಂತ, ಯಶವಂತಪುರ, ಬೆಂಗಳೂರು.‌(ಹಾಲಿ ವಾಸ: ಶ್ರೀನಿವಾಸ ನಗರ, ಸುಂಕದಕಟ್ಟೆ, ಬೆಂಗಳೂರು) ಎಂಬಾತನನ್ನು ದಸ್ತಗಿರಿ ಮಾಡಿ, ಆತನಿಂದ ಕೃತ್ಯಕ್ಕೆ ಬಳಸಿದ ನಾಲ್ಕು ಮೊಬೈಲ್‌ ಫೋನ್‌ ಹಾಗೂ 20,300/- ರೂ. ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ 1,60,300 ಆಗಿರುತ್ತದೆ. ಆರೋಪಿತನನ್ನು ಪೊಲೀಸರು ಇಂದು ಬುಧವಾರ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.