ಸುಳ್ಯ: ಚಿನ್ನಾಭರಣ ಕಳ್ಳತನ ಪ್ರಕರಣ; ಆರೋಪಿಗಳಿಂದ ಚಿನ್ನಾಭರಣ ವಶ, ಪ್ರಕರಣ ದಾಖಲು

ಕರಾವಳಿ

ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರು ನೀಡಿರುವ ದೂರಿನಂತೆ, ಪ್ರಕರಣದ ಆರೋಪಿತೆಯಾದ ಶೃತಿ @ ವಿಶ್ಮೀತ ಎಂಬಾಕೆಯೊಂದಿಗೆ ನನ್ನ ತಂದೆಗೆ ಸಂಪರ್ಕವಿದ್ದು, ಆಕೆಗೆ ಪುಣ್ಯಶ್ರೀಯವರ ತಂದೆ ಸಾಲವಾಗಿ ಸರಿ-ಸುಮಾರು 6 ಲಕ್ಷ ರೂಪಾಯಿ ಹಣವನ್ನು ನೀಡಿರುವುದಾಗಿದೆ. ಪಿರ್ಯಾದಿದಾರರು ಸದ್ರಿ ಹಣವನ್ನು ಹಿಂತಿರುಗಿಸುವಂತೆ ಆರೋಪಿತೆ ಶೃತಿ ಯಾನೆ ವಿಶ್ಮೀತರವರಿಗೆ ತಿಳಿಸಿದ ಮೇರೆಗೆ ಆಕೆಯು ಹಣವನ್ನು ಹಿಂತಿರುಗಿಸುವುದಾಗಿ ಒಪ್ಪಿಕೊಂಡು ದಿನಾಂಕ: 07.04.2026 ರಂದು ಪಿರ್ಯಾದಿದಾರರ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರ ಮನೆಗೆ ಬಂದಿರುತ್ತಾರೆ.

ದೂರುದಾರರು ಆ ಬಳಿಕ ಕೆಲಸಕ್ಕೆ ತೆರಳಿದ್ದು, ರಾತ್ರಿ ಮನೆಯ ಕಪಾಟಿನ ಬೀಗದ ಕೀ ಕೆಳಗೆ ಬಿದ್ದಿರುವುದನ್ನು ಕಂಡು ಕಪಾಟನ್ನು ಪರಿಶೀಲಿಸಿದಾಗ ಮನೆಯಲ್ಲಿದ್ದ ರೂ. 5ಲಕ್ಷ ರೂ. ಮೌಲ್ಯದ ಸುಮಾರು 62 ½ ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ತಿಳಿದುಬಂದಿರುತ್ತದೆ.

ಸದ್ರಿ ಕೃತ್ಯವನ್ನು ಪಿರ್ಯಾದಿದಾರರ ಮನೆಗೆ ಬಂದಿದ್ದ ಆರೋಪಿತೆ ಶೃತಿ @ ವಿಶ್ಮೀತ ಎಂಬಾಕೆ ನಡೆಸಿರುವುದಾಗಿ ದೂರು ನೀಡಿದ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 49/2026, ರಂತೆ ಪ್ರಕರಣ ದಾಖಲಿಸಿ, ಪ್ರಕರಣದ ತನಿಖೆ ನಡೆಸಲಾಗಿ ಆರೋಪಿತೆ ಶೃತಿ @ ವಿಶ್ಮೀತ ಎಂಬಾಕೆಯನ್ನು ಹಾಗೂ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವಾದ ಚಿನ್ನಾಭರಣಗಳು ಪತ್ತೆಯಾಗಿದ್ದು, ಕಳವಾದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.