ಮಂಗಳೂರು: ಕರ್ನಾಟಕ ರಾಜ್ಯದಿಂದ ಮಂಗಳೂರು ಮಾರ್ಗವಾಗಿ ಕೇರಳ ರಾಜ್ಯದ ತಲಿಪರಂಬು ಎಂಬಲ್ಲಿಗೆ ಯಾವುದೇ ದಾಖಲೆ ಪತ್ರಗಳಿಲ್ಲದೆ ಸುಮಾರು 27 ಕೋಣಗಳನ್ನು ಈಚರ್ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ, ಸಾಗಾಟ ಮಾಡುತ್ತಿರುವುದನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಸಮೀಪ ದಿನಾಂಕ 16-05-2026 ರಂದು ಬೆಳಿಗ್ಗಿನ ಜಾವ 6:00ರ ಸಮಯಕ್ಕೆ ಕಂಕನಾಡಿ ನಗರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್ ರವರ ನೇತ್ರತ್ವದ ಕಂಕನಾಡಿ ಪೊಲೀಸರ ತಂಡ ಬೃಹತ್ ಕಾರ್ಯಾಚರಣೆ ನಡೆಸಿ, ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿ 27 ಕೋಣಗಳನ್ನು, ನಾಲ್ಕು ಮಂದಿ ಆರೋಪಿಗಳನ್ನು ಹಾಗೂ ಜಾನುವಾರುಗಳ ಸಾಗಾಟಕ್ಕೆ ಬಳಸಿದ ಈಚರ್ ವಾಹನವನ್ನು ವಶಪಡಿಸಿಕೊಂಡಿರುರುತ್ತಾರೆ.

ಬಂಧಿತರನ್ನು ಸಯ್ಯದ್ ಮೆಹಬೂಬ್ ಅಲಿ, ಬೊಮ್ಮನಕಟ್ಟೆ ಶಿವಮೊಗ್ಗ. ಅರುಣ ಚಂದ್ರಪ್ಪ ಜಾವಳಿ, ಹಿರೇಕೆರೂರು, ಹಾವೇರಿ. ಹಿರಿಯಣ್ಣ ಗೌಡ, ಅರಸಿಕೇರೆ, ಹಾಸನ. ಸುನೀಲ್ ಲಕ್ಷ್ಮಪ್ಪ ಜಾವಳ್ಳಿ, ಹಿರೆಕೇರೂರು, ಹಾವೇರಿ ಎಂದು ಗುರುತಿಸಲಾಗಿದೆ.

ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 59/2026 ರಂತೆ ಆರೋಪಿತರ ಮೇಲೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿ ಹಿಂಸಾ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
