MDMA ಸಾಗಾಟ ಪ್ರಕರಣ. ಇಬ್ಬರು ಆರೋಪಿಗಳ ಸಹಿತ ಮಾದಕವಸ್ತು ಪೊಲೀಸರ ವಶ

ಕರಾವಳಿ

ವೇಣೂರು: ನಿಷೇಧಿತ MDMA ಮಾದಕವಸ್ತು ಸಾಗಾಟದ ಬಗ್ಗೆ ಮಾಹಿತಿ ಬಂದ ಮೇರೆಗೆ, ವೇಣೂರು ಪೊಲೀಸ್ ಠಾಣಾ ಉಪ-ನಿರೀಕ್ಷಕರು ಪೊಲೀಸ್ ಸಿಬ್ಬಂದಿಗಳೊಂದಿಗೆ ಗುರುವಾಯನಕೆರೆ- ಮೂಡಬಿದ್ರೆ ರಸ್ತೆಯ, ಕಂಬಳದಡ್ಡ ಎಂಬಲ್ಲಿ KA-13 P-2905 ನೋಂದಣಿಯ ಕಾರಿನಲ್ಲಿ ಆರೋಪಿತರಾದ ಮಂಗಳೂರು ಮಿಜಾರು ನಿವಾಸಿ ಮಹಮ್ಮದ್ ತಹ್ನವೀರ್ ಹಾಗೂ ಮೂಡಬಿದ್ರೆ ನಿವಾಸಿ ಮಹಮ್ಮದ್ ಸಲ್ವಾನ್ ಎಂಬವರುಗಳು ಅಕ್ರಮವಾಗಿ ಸುಮಾರು 3.92ಗ್ರಾಂ ತೂಕದ MDMA ಎಂಬ ಮಾದಕವಸ್ತು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ, ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ.

ಮಾದಕವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಕಾರಿನೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆದು ವೇಣೂರು ಠಾಣಾ ಅ.ಕ್ರ.ಸಂ: 41-2026, ಕಲಂ: 8(c), 22(b) NDPS Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.