ಮೂಡಿಗೆರೆ :ಸರ್ಕಾರದಿಂದ ಬಂದಂತಹ ಸಿರಿಂಜ್ ಔಷಧಿಗಳನ್ನು ಉಚಿತವಾಗಿ ಕೊಡುವ ಬದಲು ಗುಜುರಿಗೆ ಹಾಕಲು ಸಿದ್ದರಿರುವಾಗ ಪತ್ರಕರ್ತರನ್ನು ಕಂಡ ವೈಧ್ಯರು ಬೆಚ್ಚಿ ಬಿದ್ದ ಪ್ರಕರಣ ವರದಿಯಾಗಿದೆ. ಮೂಡಿಗೆರೆ ಪಶುವೈದ್ಯ ಇಲಾಖೆಗೆ ಸರ್ಕಾರದಿಂದ ಬಂದಂತಹ ಸಿರಿಂಜ್ ಔಷಧಿಗಳನ್ನು ಉಚಿತವಾಗಿ ಕೊಡುವ ಬದಲು ಕೆಲವು ಔಷಧಿ ಅಂಗಡಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಪಶು ವೈಧ್ಯರು.
ಪ್ರಾಣಿಗಳಿಗೆ ಅವುಗಳ ಮಾಲೀಕರಿಂದ ಸಿರಿಂಜ್ ಸೇರಿದಂತೆ ಅದಕ್ಕೆ ಬೇಕಾಗುವಂತಹ ಔಷಧಿಗಳನ್ನು ಚೀಟಿಯಲ್ಲಿ ಬರೆದುಕೊಟ್ಟು, ತಾವು ತಿಳಿಸಿದ ಅಂಗಡಿಯಿಂದ ತರಿಸಿ ನೀಡುತ್ತಿರುವ ವಿಚಾರ ಕೆಲವು ತಿಂಗಳುಗಳಿಂದ ನಡೆಯುತ್ತಿದೆ ಎಂದು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲಾ ಎಂದು ನೊಂದ ವ್ಯಕ್ತಿಯೋರ್ವರು ಪತ್ರಕರ್ತರ ಗಮನಕ್ಕೆ ತಂದಾಗ
ಕಾರ್ಯ ಪ್ರವೃತ್ತರಾದ ಪತ್ರಕರ್ತರು ಪಶು ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದಾಗ ಪತ್ರಕರ್ತರನ್ನು ಕಂಡು ದಂಗಾದ ವೈಧ್ಯರು.

ಸ್ಟೋರ್ ರೂಮಿನಲ್ಲಿ ಜೋಡಿಸುವ ಸಲುವಾಗಿ ಕ್ಲಿನ್ ಮಾಡುತ್ತಿರುವುದಾಗಿ ತಿಳಿಸಿದರು. ವೈಧ್ಯರ ನಡೆಯಿಂದ ಅನುಮಾನಗೊಂಡ ಪತ್ರಕರ್ತರು ಅಲ್ಲಿದ್ದ ಬಾಕ್ಸ್ ಗಳನ್ನು ಬಿಚ್ಚಿದಾಗ ಅವದಿ ಮೀರಿದ ಸಿರಿಂಜ್ ಗಳು ಕಂಡುಬಂದಿದ್ದು, ವರದಿ ಮಾಡಿಕೊಂಡು ಕಾಪೌಂಡ್ ನಿಂದ ಹೊರಗೆ ಬಂದಾಗ ಗುಜುರಿ ಆಟೋದವರು ಗುಜರಿ ತುಂಬಲು ಬಂದಿದ್ದು, ವೈಧ್ಯರು ಕಕ್ಕಾ ಬಿಕ್ಕಿಯಾದರೂ. ನಂತರ ಆಟೋದವರಿಗೆ ಲೆಕ್ಲ ಆಗಿಲ್ಲಾ ಎಂದು ಮೆಲ್ಲನೆ ಹೇಳಿ ಆಟೋವನ್ನು ಕಳಿಸಿದ ಘಟನೆ ಜರುಗಿತು.
ಈ ಬಗ್ಗೆ ಪತ್ರಕರ್ತರು ಪೋನ್ ಮೂಲಕ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತಂದಾಗ ಕ್ರಮ ಜರುಗಿಸುವುದಾಗಿ ತಿಳಿಸಿ ದರು. ಒಟ್ಟಿನಲ್ಲಿ ಬೇಲಿಯೇ ಎದ್ದು ಹೊಲಮೆಯ್ದಂಗೆ ಸರ್ಕಾರದಿಂದ ಬಂದಂತಹ ಔಷಧಿ, ಸಿರಿಂಜ್,ಇನ್ನಿತರೆ ಸಲಕರಣಿಗಳು ಗುಜುರಿ ಪಾಲುಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದೇ ಕಾದು ನೋಡಬೇಕಾಗಿದೆ.
ವರದಿ. ಎಂ.ಪಿ ಸಲಾಹುದ್ದೀನ್
