ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ; ತನಿಖೆ ನಡೆಸಿ ದಂಡ ಹಾಕಿದ ಒಂಬಡ್ಸ್ ಮನ್

ರಾಜ್ಯ

ಮೂಡಿಗೆರೆ : ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿಯಲ್ಲಿ 2023-24ನೇ ಸಾಲಿನಲ್ಲಿ ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ ನಡದಿದೆ ಎಂದು ತರುವೆ ಗ್ರಾಮದ ಸಾಗರ್ ಎಂಬವರು ದೂರು ನೀಡಿದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಒಂಬಡ್ಸ್‌ಮನ್ ಅಧಿಕಾರಿ ನಟರಾಜ ಪರಿಶೀಲನೆ ನಡೆಸಿ ಅವ್ಯವಹಾರ ನಡೆದಿದ್ದು ಸ್ಪಷ್ಟವಾದ ಕಾರಣ ಅಧ್ಯಕ್ಷರ ಸಹಿತ ಇಬ್ಬರು ಪಿಡಿಒಗಳು, ಕಛೇರಿಯ ಸಿಬ್ಬಂಧಿಗಳಿಬ್ಬರು ಮತ್ತು ನರೇಗಾ ಅಭಿಯಂತರರೋರ್ವರಿಗೆ ಹಾಗೂ ಕಾಯಕಬಂಧುಗಳಿಗೆ ದಂಢ ವಿಧಿಸಿ ಕ್ರಮ ಜರುಗಿಸುವಂತೆ ಆದೇಶ ನೀಡಿರುವ ಪ್ರಕರಣ ವರದಿಯಾಗಿದೆ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಒಂಬಡ್ಸ್ ಮನ್ ಅಧಿಕಾರಿಗಳ ತಂಡ ತರುವೆ ಗ್ರಾಮ ಪಂಚಾಯತಿಗೆ ಆಗಮಿಸಿ ಪರಿಶೀಲನೆ ನಡೆಸಿದಾಗ ಬೆಚ್ಚಿಬಿದ್ದಿದ್ದು ನಾಲ್ಕು ಕಾಮಾಗಾರಿಗಳಾದ ತರುವೇ ಗ್ರಾಮದ ಏಕಲವ್ಯ ವಸತಿ ಶಾಲೆಗೆ ಅಟದ ಮೈಧಾನ ನಿರ್ಮಾಣ, ತರವೆ ಗ್ರಾಮದ ನಾಗಮ್ಮನ ಮನೆಯಿಂದ ಹಕ್ಕೇರದವರಗೆ ಪ್ರವಾಹ ನಿಯಂತ್ರಣ ನೀರಿನ ಕಾಲುವೇ ಅಭಿವೃದ್ದಿ, ತರುವೇ ಗ್ರಾಮದ ಗಾಡಿಕೊಟ್ಟಿಯಿಂದ ಹಳ್ಳದ ಗಂಡಿಯವರೆಗೆ ಪ್ರವಾಹ ನಿಯಂತ್ರಣ ನೀರಿನ ಕಾಲುವೇ ಅಭಿವೃದ್ದಿ, ತರುವೆ ಗ್ರಾಮದ ನಡುಗಡ್ಡ ರಸ್ತೆ ನಿರ್ಮಾಣಗಳಲ್ಲಿ ಅಕ್ರಮಗಳು ಕಂಡು ಬಂದಿದ್ದು, ನಾಲ್ಕು ಪ್ರಕರಣಗಳನ್ನು ಪರಿಶೀಲಿಸಿದ ತಂಡ, ಗ್ರಾ.ಪಂ.ಅಧ್ಯಕ್ಷ ಸತೀಶ್ ಬಿ.ಎಂ, ಪಂಚಾಯಿತ್ ಅಭಿವೃದ್ದಿ ಅಧಿಕಾರಿ ಮಹೇಶ್, ಪ್ರಭಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೃಷ್ಣ, ತಾಂತ್ರಿಕ ಸಹಾಯಕ ಇಂಜನಿಯರ್ ಕೌಶಿಕ್, ಡಾಟ ಎಂಟ್ರಿ ಆಪರೇಟರ್ ಕಾವ್ಯ, ಕಾಯಕ ಬಂದುಗಳಾದ ವಿಜೇಂದ್ರ, ಪ್ರಶಾಂತ್ ಗ್ರಾಮ ಪಂಚಾಯತಿ ಸದಸ್ಯೆಯ ಗಂಡ, ಹಾಗೂ ನೇತ್ರಾವತಿ ಮತ್ತು ಬಿಎಫ್‌ಟಿ ಹರೀಶ್ ಇವರುಗಳಿಗೆ ನಾಲ್ಕು ಪ್ರಕರಣಗಳಿಂದ 47,498 ರೂ.ಗಳ ದಂಢ ವಿದಿಸಿದ್ದಾರೆ.

ಸದಸ್ಯೆ ಸ್ವರೂಪ ಈಕೆಯ ಪತಿ ಕಾಯಕ ಬಂಧು ಪ್ರಶಾಂತ್ ಟಿ.ಜಿ ತಾನೇ ಎನ್ ಎಂಎಂಎಸ್ ನಲ್ಲಿ ಪೋಟೋಗಳನ್ನು ಅಪ್ ಲೋಡ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದು, ಅಪ್ಲೋಡ್ ಮಾಡಲು ಹಿಂದಿನ ಪಿಡಿಒ ಮಹೇಶ್ ಮೌಖಿಕವಾಗಿ ತಿಳಿಸಿದ್ದರು ಎಂದು ಹೇಳಿಕೆ ನೀಡಿದ್ದು, ಇವೆಲ್ಲಾ ದಾಖಲೆಗಳಿಗೂ ಡಿಜಿಟಲ್ ಸಹಿ ಪಂಚಾಯಿತಿ ಅಧ್ಯಕ್ಷ ಸತೀಶ್ ಬಿ.ಎಂ ಮಾಡಿದ್ದಾಗಿ ಒಪ್ಪಿಕೊಂಡಿದ್ದ ಹೇಳಿಕೆಯ ಮೇರೆಗೆ ದಂಢ ವಿಧಿಸಿ ಆದೇಶ ನೀಡಿದ್ದಾರೆ.

ನರೇಗ ಕಾಮಗಾರಿಯಲ್ಲಿ ಅವ್ಯವಹಾರಕ್ಕೆ ಮೂಲ ಕಾರಣರಾಗಿರುವ ಅಧ್ಯಕ್ಷರು ಹಾಗೂ ಸದಸ್ಯರನ್ನು ತಕ್ಷಣವೇ ವಜಾ ಮಾಡುವಂತೆ ಮತ್ತು ಶಿಸ್ತುಕ್ರಮ ಜರುಗಿಸುವುದರೊಂದಿಗೆ ತರುವೆ ಗ್ರಾಮ ಪಂಚಾಯತಿಯನ್ನು ಸೂಪರ್ ಸೀಡ್ ಮಾಡುವಂತೆ ಬಿಜೆಪಿ ಯುವ ಮುಖಂಡ ಸಾಗರ್ ತರುವೆ ಒತ್ತಾಯಿಸಿದ್ದಾರೆ.

ವರದಿ: ಎಂ.ಎ.ಸಲಾವುದ್ದೀನ್