ಪೋಲಿಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ; 248 ಇನ್ಸ್ ಪೆಕ್ಟರ್, 47 ಡಿವೈಎಸ್ಪಿ ಗಳ ವರ್ಗಾವಣೆ

ರಾಜ್ಯ

ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು ಮತ್ತೆ 47 ಡಿವೈಎಸ್ಪಿ ಹಾಗೂ ರಾಜ್ಯದ ವಿವಿದೆಡೆ ಕಾರ್ಯನಿರ್ವಹಿಸುತ್ತಿರುವ 248 ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜ.30 ರಂದು 30 ಡಿವೈಎಸ್ಪಿಗಳನ್ನು ಹಾಗೂ 132 ಇನ್ ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಜಪೆ ಠಾಣೆಗೆ ಮಲ್ಪೆ ವೃತ್ತ ನಿರೀಕ್ಷರಾಗಿದ್ದ ಮಂಜುನಾಥ್ ಎಂ,
ಮೂಡಬಿದ್ರೆಗೆ ನಿತ್ಯಾನಂದ ಪಂಡಿತ್, ಸಂದೇಶ್ ಪಿ.ಜಿ ಸಿದ್ದಾಪುರ ಉತ್ತರಕನ್ನಡ, ಟಿ.ಡಿ ನಾಗರಾಜ್ ಉಡುಪಿ ಟೌನ್ ಗೆ ವರ್ಗಾವಣೆಗೊಂಡಿದ್ದಾರೆ.