ಕೋವಿಡ್-19 ಲಸಿಕೆಗಳಿಗಾಗಿ ನೀಡಲಾದ COWIN ಪ್ರಮಾಣಪತ್ರಗಳಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮಾಯವಾಗಿದೆ. ಈ ಮೊದಲು ಕೋವಿನ್ ಲಸಿಕೆ ಪಡೆದ ಜನರಿಗೆ ಸಿಗುತ್ತಿದ್ದ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಹಾಕಲಾಗಿತ್ತು.
ಮೋದಿಯವರ ಚಿತ್ರ ತೆಗೆದುಹಾಕಿದ್ದನ್ನು ಬುಧವಾರ ಸಾಮಾಜಿಕ ಮಾಧ್ಯಮ ಬಳಕೆದಾರ ನಡುವೆ ಚರ್ಚೆಗೆ ಕಾರಣವಾಗಿದೆ. ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮಾದರಿ ನೀತಿ ಸಂಹಿತೆ (MCC) ಜಾರಿಗೆ ಬಂದ ತಕ್ಷಣ ಎಲ್ಲ ಸರ್ಕಾರಿ ವೆಬ್ಸೈಟ್ ನಿಂದ ಮೋದಿಯವರ ಭಾವಚಿತ್ರಕ್ಕೆ ಖೋಕ್ ನೀಡಲಾಗಿದೆ ಎನ್ನಲಾಗಿದೆ. ಈತನ್ಮಧ್ಯೆ ಲಸಿಕೆಯ ಅಡ್ಡ ಪರಿಣಾಮದ ಕುರಿತು ದೊಡ್ಡ ಪ್ರಮಾಣದ ಚರ್ಚೆ ಕೂಡ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿದೆ.
ಕೋವಿಡ್ ವ್ಯಾಕ್ಸಿನ್ ಲಸಿಕೆಯಿಂದ ಆರೋಗ್ಯದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ಮೊದಲ ಬಾರಿಗೆ ಕೋರ್ಟ್ ನಲ್ಲಿ ಒಪ್ಪಿಕೊಂಡಿದೆ. ಆಕ್ಸ್ ಫರ್ಡ್ ಅಸ್ಟ್ರಾಜೆನಿಕಾ ಕೋವಿಡ್ ವ್ಯಾಕ್ಸಿನ್ ಕಂಪನಿ ಕೋವಿಶೀಲ್ಡ್ ಮತ್ತು ವ್ಯಾಕ್ಸೇವರಿಯಾ ಎಂಬ ಎರಡು ಕೋವಿಡ್ ಲಸಿಕೆಗಳನ್ನು ತಯಾರಿಸಿದ್ದು ವಿಶ್ವದ ಹಲವೆಡೆ ಈ ಲಸಿಕೆಯನ್ನು ಹಂಚಲಾಗಿತ್ತು.

ಅನೇಕ ಆರೋಗ್ಯ ಸಮಸ್ಯೆಗಳು ವರದಿಯಾದ ಬಳಿಕ ಲಸಿಕೆ ತಯಾರಿಕಾ ಕಂಪನಿ ಕಾನೂನು ಹೋರಾಟ ನಡೆಸಿದ್ದು. ಜೆಮ್ಮಿ ಸ್ಕಾಟ್ ಎಂಬ ವ್ಯಕ್ತಿ ಲಸಿಕೆ ಪಡೆದ ಬಳಿಕ ಗಂಭೀರ ಮೆದುಳು ಸಮಸ್ಯೆಗೆ ಒಳಗಾಗಿರುವ ಬಗ್ಗೆ ಆರೋಪಿಸಿದ್ದರು. ಇನ್ನೂ ಹಲವರು ರಪ್ತು ಹೆಪ್ಪುಗಟ್ಟುವಿಕೆ, ಕಡಿಮೆ ಪ್ಲೇಟ್ ಲೆಟ್ ಕಣ ಸಮಸ್ಯೆಗೂ ಗುರಿಯಾಗಿದ್ದಾರೆ. ಈ ಕೋವಿಡ್ ಲಸಿಕೆಯಿಂದ ಅನೇಕ ಸಮಸ್ಯೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಯುಕೆಯಲ್ಲಿ ಈ ಲಸಿಕೆಯ ಬಳಕೆಯನ್ನು ಬಂದ್ ಮಾಡಲಾಗಿದ್ದು, ಅಪರೂಪದ ಆರೋಗ್ಯ ಸಮಸ್ಯೆ ಬರಬಹುದು ಎಂಬ ವರದಿ ಬಳಿಕ ಲಸಿಕೆ ಬಳಕೆ ಮೇಲೆ ನಿಯಂತ್ರಣ ಹೇರಲಾಗಿದೆ. ಅನೇಕ ಕುಟುಂಬಗಳು ಪರಿಹಾರ ನೀಡಬೇಕೆಂದು ಕೋರಿವೆ.
