ಹದಿಹರೆಯದ ಕನ್ಯೆಯರೇ ಟಾರ್ಗೆಟ್.. ಸರ್ವಾಧಿಕಾರಿ ಕಿಮ್ ಜಾಂಗ್ ಊನ್ ನ ಕರಾಳ ಕೃತ್ಯ ಬಿಚ್ಚಿಟ್ಟ ಯೆನ್ನಿ ಪಾರ್ಕ್

ರಾಷ್ಟ್ರೀಯ

ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದಿರುವ ಯೆನ್ನಿ ಪಾರ್ಕ್ ಎಂಬ ಯುವತಿಯು ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಊನ್ ನ ಕೃತ್ಯಗಳ ಬಗ್ಗೆ ಬಿಚ್ಚಿಟ್ಟಿದ್ದಾಳೆ. ಕಿಮ್ ಜಾಂಗ್ ಊನ್ ಬಗ್ಗೆ ಈಗಾಗಲೇ ಹಲವಾರು ವಿಚಾರಗಳು ಹೊರ ಬಂದಿದ್ದು, ಇದೀಗ ಮತ್ತೊಂದು ಕ್ರೂರ ಮುಖ ಬೆಳಕಿಗೆ ಬಂದಿದೆ. ಆತ ತನ್ನ ಸುಖಕ್ಕಾಗಿ ಪ್ರತಿ ವರ್ಷ ಬರೋಬ್ಬರಿ 25 ಹುಡುಗಿಯರನ್ನು ಆರಿಸಿಕೊಳ್ಳುತ್ತಾನೆ ಎಂದು ಯೆನ್ನಿ ಪಾರ್ಕ್ ಹೇಳಿದ್ದಾರೆ.

ಕಿಮ್ ಪ್ರತಿವರ್ಷ ಶಾಲೆಗಳಿಗೆ ಹೋಗಿ ಅಂದದ ಹುಡುಗಿಯರನ್ನು ಆರಿಸಿದ ಬಳಿಕ ಅವರ ಕುಟುಂಬದ ಸ್ಥಿತಿ ಹಾಗೂ ರಾಜಕೀಯ ಸ್ಥಿತಿಯನ್ನು ಪರಿಶೀಲಿಸಿ ಒಪ್ಪಿಗೆ ಆದ ನಂತರ ಅವರು ಕನ್ಯೆಯರು ಎಂದು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ ಎಂದಿದ್ದಾರೆ. ಪರೀಕ್ಷೆಯ ವೇಳೆ ಬಾಲಕಿಯರ ಮೇಲೆ ಸಣ್ಣ ಪುಟ್ಟ ಗಾಯಗಳಿದ್ದರೆ ಅವರನ್ನು ಬಿಟ್ಟು ಕಳುಹಿಸಲಾಗುತ್ತದೆ. ಕಿಮ್ ಜಾಂಗ್ ತಂಡ ನೀಡುವ ಕಠಿಣ ಪರೀಕ್ಷೆಯ ನಂತರ ಕೆಲವು ಹುಡುಗಿಯರನ್ನು ಮಾತ್ರ ಪ್ರೊಂಗ್ಯಾಂಗ್ ಗೆ ಕಳುಹಿಸಲಾಗುತ್ತದೆ. ಅಲ್ಲಿ ಅವರ ಉದ್ದೇಶ ಸರ್ವಾಧಿಕಾರಿಯ ಆಸೆಗಳನ್ನು ಪೂರೈಸುವುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಯೆನ್ನಿ ಪಾರ್ಕ್ ಹೇಳಿದ್ದಾರೆ.

ಟ್ರೈನಿಂಗ್ ಆಗಿ ಬಂದ ಹುಡುಗಿಯ ತಂಡವನ್ನು ಮೂರು ವಿಶಿಷ್ಟ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ತಂಡವು ಮಸಾಜ್ ನಲ್ಲಿ ತರಬೇತಿ ಪಡೆದರೆ, ಇನ್ನೊಂದು ತಂಡ ಹಾಡುಗಳು ಮತ್ತು ನೃತ್ಯಗಳನ್ನು ಪ್ರದರ್ಶಿಸುವಲ್ಲಿ ತರಬೇತಿ ಪಡೆಯುತ್ತದೆ. ಮೂರನೆಯ ಗುಂಪು ಸರ್ವಾಧಿಕಾರಿ ಮತ್ತು ಇತರ ಪುರುಷರೊಂದಿಗೆ ಲೈಂಗಿಕವಾಗಿ ಅನ್ಯೋನ್ಯವಾಗಿರಬೇಕು. ಈ ಪುರುಷರನ್ನು ಹೇಗೆ ಮೆಚ್ಚಿಸಬೇಕೆಂದು ಅವರು ಕಲಿಯಬೇಕು. ಅದು ಅವರ ಏಕೈಕ ಗುರಿಯಾಗಿದೆ ಎಂಬುದನ್ನು ಯೆನ್ನಿ ಪಾರ್ಕ್ ಬಹಿರಂಗಪಡಿಸಿದ್ದಾಳೆ.