ಮಾಜಿ ಮುಖ್ಯಮಂತ್ರಿಯೊಬ್ಬರ ಸ್ಟಿಂಗ್ ವಿಡಿಯೋ : ಜಿಲ್ಲೆಯ ಕೆಲವು ಕಾಂಗೈ ನಾಯಕರ ಎದೆಯಲ್ಲಿ ಢವ ಢವ.!

ರಾಜ್ಯ

ಕಾಂಗ್ರೆಸ್ ನಾಯಕಿ ಹೆಸರು ಬಹಿರಂಗ; ಸಂಚಿನಲ್ಲಿ ಇನ್ನೆಷ್ಟು ನಾಯಕರು ಭಾಗಿ.?

ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆಬ್ಬಿಸಿರುವ ಮಾಜಿ ಮುಖ್ಯಮಂತ್ರಿಯೊಬ್ಬರ ಸ್ಟಿಂಗ್ ವಿಡಿಯೋ ಇದೀಗ ಹಲವು ನಾಯಕರ ಭವಿಷ್ಯಕ್ಕೆ ಕುತ್ತು ತರುವ ಸೂಚನೆ ಸ್ಪಷ್ಟವಾಗಿದೆ. ‘ಮಂಗಳೂರು ಮಲ್ಲಿಗೆ’ ಹೆಸರಿನಲ್ಲಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಡಾಡುತ್ತಿದ್ದ ಸ್ಟಿಂಗ್ ವಿಡಿಯೋ ಇದೀಗ ಬಟಾಬಯಲಾಗಿ ಮಾಜಿ ಮುಖ್ಯಮಂತ್ರಿಯೊಬ್ಬರ ಹೆಸರು ತಳುಕು ಹಾಕಿಕೊಂಡು ಸುದ್ದಿಗೆ ಗ್ರಾಸವಾಗಿದ್ದು ಎಲ್ಲರಿಗೂ ತಿಳಿದ ವಿಚಾರ.

ಆದರೆ ಈ ಸ್ಟಿಂಗ್ ವಿಡಿಯೋ ಹಿಂದೆ ಸ್ವಪಕ್ಷೀಯರೇ ಕೈಯಾಡಿಸಿದ್ದು, ಕಾಂಗ್ರೆಸ್ ಗೆ ದೊಡ್ಡ ಹೊಡೆತ ನೀಡಿದೆ. ವಿರೋಧ ಪಕ್ಷಗಳು ಅದರಲ್ಲೂ ಜೆಡಿಎಸ್ ಮುಂಚೂಣಿಯಾಗಿ ಈ ವಿಡಿಯೋ ಹಿಂದಿನ ಆಸಲಿಯತ್ತು ಬಹಿರಂಗಕ್ಕೆ ಮುಂದಾಗಿದ್ದು, ಜೆಡಿಎಸ್ ಪ್ರಮುಖರು ಈ ವಿಡಿಯೋ ಹಿಂದೆ ಕಾಂಗ್ರೆಸ್ ನಾಯಕಿಯೊಬ್ಬರ ಹೆಸರನ್ನು ಮುನ್ನೆಲೆಗೆ ತರುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ.

ಕಾಸರಗೋಡು ಮೂಲದ ಬೆಂಗಳೂರಿನ ಜನಪ್ರತಿನಿಧಿಯೊಬ್ಬರ ಕೃಪಾ ಕಟಾಕ್ಷದಿಂದ ಈ ಹಿಂದೆ ಶಾಸಕ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಂಗಳೂರಿನ ಕಾಂಗೈ ನಾಯಕಿಯೊಬ್ಬಳು, ಖಾಸಗಿ ಮಾಧ್ಯಮವೊಂದರ ಪ್ರಮುಖನೊಬ್ಬನ ಜೊತೆ ಈ ಸ್ಟಿಂಗ್ ವಿಡಿಯೋ ಸೃಷ್ಟಿಗೆ ಕಾರಣಕರ್ತರಾಗಿದ್ದು ಬಯಲಿಗೆ ಬಂದಿದೆ. ಸಂತ್ರಸ್ತೆ ಕೇರಳ ಮೂಲದ ಮುಸ್ಲಿಂ ಮಹಿಳೆಯಾಗಿದ್ದು, ಹಳೆಯ ಪ್ರಕರಣಕ್ಕೆ ಜೀವ ತುಂಬಿ ಮೈನ್ ಸ್ಟ್ರೀಮ್ ಗೆ ತರಲು ಮುಸ್ಲಿಂ ರಾಜಕಾರಣಿಯೊಬ್ಬನ ಪಾತ್ರದ ಬಗ್ಗೆ ದೊಡ್ಡ ಸುದ್ದಿ ಹಬ್ಬಿದೆ. ಆ ಮುಸ್ಲಿಂ ರಾಜಕಾರಣಿ ಯಾರು.? ಅನ್ನುವುದೇ ಇದೀಗ ಕುತೂಹಲದ ಪ್ರಶ್ನೆ.

ಈ ಹಿಂದೆ ರಾಜ್ಯದಲ್ಲಿ ಹಲವು ಸ್ಟಿಂಗ್ ಆಪರೇಶನ್ ನಡೆದರೂ ವಿಡಿಯೋ ಬಿಡುಗಡೆ ನಂತರ ಅದು ತಣ್ಣಗಾಗಿತ್ತು. ಆದರೆ ಈ ಪ್ರಕರಣ ಇದರ ಹಿಂದಿರುವ ಸಂಚುಕೋರರ ಬುಡಕ್ಕೆ ಬಿಸಿ ತಟ್ಟುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಈ ಸಂಚಿನ ಹಿಂದೆ ಜಿಲ್ಲೆಯ ಹಲವು ಕಾಂಗೈ ನಾಯಕರ ಕೈವಾಡದ ಬಗ್ಗೆಯೂ ಗುಸು ಗುಸು ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿಯೊಬ್ಬರು ಇದರ ಹಿಂದೆ ನಡೆದಿರುವ ಷಡ್ಯಂತ್ರ ಬಯಲಿಗೆ ಆಗ್ರಹಿಸುತ್ತಿದ್ದು, ಅವರು ಸತ್ಯ ಬೆಳಕಿಗೆ ಬರುವವರೆಗೆ ಸುಮ್ಮನೆ ಕೂರುವ ಜಾಯಮಾನದವರಲ್ಲ. ಜೊತೆಗೆ ವಿರೋಧ ಪಕ್ಷಗಳು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದು ಹಲವರ ಬಣ್ಣ ಬಯಲಾಗುವ ಸಾಧ್ಯತೆ ಇದೆ.

ಸ್ವಪಕ್ಷೀಯ ಪ್ರಭಾವಿ ನಾಯಕನ ಸ್ಟಿಂಗ್ ವಿಡಿಯೋ ಹಿಂದೆ ಅದೇ ಪಕ್ಷದ ‘ಮಹಾನಾಯಕ’ ನ ಹೆಸರು ಕೂಡ ತಳುಕು ಹಾಕುತ್ತಿದ್ದು, ‘ಮಹಾನಾಯಕ’ ನ ಜೊತೆ ಆತ್ಮೀಯತೆ ಹೊಂದಿರುವ ಕರಾವಳಿ ಭಾಗದ ರಾಜಕಾರಣಿಗಳ ಬಗ್ಗೆಯೂ ಇದೀಗ ಅನುಮಾನ ವ್ಯಕ್ತವಾಗುತ್ತಿದೆ. ಒಂದು ಸ್ಟಿಂಗ್ ವಿಡಿಯೋ ಇದೀಗ ಹಲವರ ನಿದ್ದೆಗೆಡಿಸಿದಂತೂ ಸತ್ಯ. ಕುರ್ಚಿಗಂತು ಕಂಟಕ ತಪ್ಪಿದ್ದಲ್ಲ!