ಕೊಡಗನ ಕೋಳಿ ನುಂಗಿತ್ತಾ..’ ಬ್ಯಾರಿಸ್ ವರ್ಲ್ಡ್’ ನ್ನು ಇನ್ಪೊ ನುಂಗಿತ್ತಾ..!

ಕರಾವಳಿ

ಕರಾವಳಿಯ ಬ್ಯಾರಿ ಮುಸ್ಲಿಮರ ಅದ್ಯಯನ ಮಾಡಿ ಆಕ್ರಂದನ ಎಂಬ ಸಾಕ್ಷ್ಯಚಿತ್ರವನ್ನು ಕಾಸಿಂ ಅಹ್ಮದ್ ಎಂಬವರ ಪ್ರೊತ್ಸಾಹದಿಂದ ನಿರ್ಮಿಸಿ ಸಮುದಾಯದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿ ಹಲವಾರು ಕ್ರಾಂತಿಕಾರಿ ಪರಿವರ್ತನೆ ಕಾರಣೀಕರ್ತನಾದ ಯುವಸಾಧಕ ಹನೀಫ್ ಪುತ್ತೂರು. ತದನಂತರದ ದಿನಗಳಲ್ಲಿ ರವೂಫ್ ಪುತ್ತಿಗೆಯವರ ಜೊತೆ ಸೇರಿ “ನಂಡೆ ಪೆಂಙಲ್” ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದ ಈ ಯುವಕ. ಇಂದು ಪುತ್ತೂರು ತಾಲೂಕಿನಲ್ಲಿ ಕಮ್ಯುನಿಟಿ ಸೆಂಟರ್ ಎಂಬ ಸಂಸ್ಥೆಯನ್ನು ಕಟ್ಟಿ, ರಾಜ್ಯದಲ್ಲೇ ಮುಸ್ಲಿಮರಿಗೆ ಮಾದರಿ ಯೋಜನೆ ಮಾಡಿ ಚಿರಪರಿಚಿತನಾದ. ಸುನ್ನೀಟುಡೇ ಮೂಲಕ ವೈಚಾರಿಕ ಆಂದೋಲನ ಮಾಡಿದ ಹನೀಫ್ ಪುತ್ತೂರು.

2018ರಲ್ಲಿ ಬ್ಯಾರೀಸ್ ವರ್ಲ್ಡ್ ಎಂಬ ಸಾಮಾಜಿಕ ಜಾಲತಾಣವನ್ನು ನಿರ್ಮಿಸಿ ಈ ಮೂಲಕ ಬ್ಯಾರಿ ಸಮುದಾಯದ ಸಮಗ್ರ ಪರಿಚಯ ಮಾಡುವ ಸದುದ್ದೇಶವನ್ನಿಟ್ಟುಕೊಂಡು, ವೆಬ್ ಸೈಟ್ ರೆಡಿ ಮಾಡಿ ವೆಬ್ ಸೈಟನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದ. ಎಲ್ಲೂ ವೇದಿಕೆಗಳಲ್ಲಿ, ಪೊಟೋಗಳಲ್ಲಿ ಕಾಣಿಸಿಕೊಳ್ಳದೆ, ಸೈಲೆಂಟಾಗಿ ಬಹಳ ಎಫೆಕ್ಟಿವ್ ಆಗಿ ದುಡಿಯುವ ಈ ಯುವಕನ ಆಲೋಚನೆ ಮತ್ತು ಪರಿಶ್ರಮದ ಬ್ಯಾರೀಸ್ ವಲ್ಡ್ ನ ಐಡಿಯಾವನ್ನು ಇತ್ತೀಚೆಗೆ ಭಟ್ಟಿ ಇಳಿಸಿ, ಅದೇ ಪರಿಕಲ್ಪನೆಯಲ್ಲಿ ಬ್ಯಾರಿ ವೆಬ್ ಸೈಟೊಂದನ್ನು ಹರಿದು ಬಿಟ್ಟರು.!ಮೂಲಸೂತ್ರಧಾರಿ ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಬಿಡಿ, ಆತ ಆರಂಭಿಸಿದ ಬ್ಯಾರೀಸ್ ವಲ್ಡ್ ನ ಬಗ್ಗೆ ಪ್ರಸ್ತಾಪವೇ ಇಲ್ಲ.

ಮರ್ಹೂಂ ಹಾಜಿಯೊಬ್ಬರ ಪೋಟೋ ಮತ್ತು ಜೀವನ ಕಥೆಯನ್ನು ನೇರವಾಗಿ ಬ್ಯಾರೀಸ್ ವಲ್ಡ್ ನಿಂದ ಭಟ್ಟಿ ಇಳಿಸಿ ಹಲವಾರು ಮಾಹಿತಿಯನ್ನ ಇಂಗಿಸಿ ಪ್ರಸಾರ ಮಾಡುವಾಗ ಸೌಜನ್ಯಕ್ಕಾದರೂ ಅ ಯುವಕನ ಹೆಸರನ್ನಾದರೂ ಪ್ರಸ್ತಾವಿಸಬೇಕಿತ್ತು. ಅ ಯುವಕ ಹಲವಾರು ವರ್ಷಗಳಿಂದ ಪರಿಶ್ರಮ ಪಟ್ಟು ಬ್ಯಾರಿ ಪ್ರಮುಖರ ಸಂದರ್ಶನ ಮಾಡಿ, ಮಾಹಿತಿ ಕಲೆಹಾಕಿ, ಪ್ರತೀಯೊಬ್ಬರ ವೃತ್ತಿಪರ ಪೋಟೋ ಕ್ಲಿಕ್ಕಿಸಿ, ಮಾಹಿತಿಯನ್ನು ಆಂಗ್ಲ ಬಾಷೆಗೆ ಟ್ರಾನ್ಸ್ ಲೇಟ್ ಮಾಡಿ, ವರದಿಗಾರರಿಗೆ ಸಂಭಳ ನೀಡಿ ಅದನ್ನು ತಮ್ಮ ಸೈಟಿನಲ್ಲಿ ತುಂಬಿದ್ದ. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿದ ಸಾಧನೆಯನ್ನು ಯಾರು ಕನ್ನಹಾಕಿದರೂ.. ಅದು ಶೋಭೆತರುವಂತದ್ದಲ್ಲ.!

ಇಲ್ಲಿ ನಿಜವಾಗಿಯೂ ಆಲೋಚನೆಯ ಕಳ್ಳತನವಾಗಿದೆ. ಶ್ರಮ ವಹಿಸಿದ ವ್ಯಕ್ತಿಯ ಹೆಸರು ಅಥವಾ ಗುರುತು ಇಲ್ಲದೇ ಆತನನ್ನು ಹೈಡ್ ಮಾಡುವ ಈ ಮಾನಸಿಕತೆ ಖಂಡಿತಾ ಕ್ಷಮಿಸಲಾಗದ್ದು. ಈ ವಿಚಾರವಾಗಿ ಆತನಲ್ಲಿ ಮಾತನಾಡಿದಾಗ ಆತ ಹೇಳಿದ್ದು ಹೀಗೆ. ಹಿರಿಯರ ಖುಷಿಗಾಗಿ ತ್ಯಾಗ ಮಾಡಿದೆ. ಬ್ಯಾರಿ ಸಮುದಾಯದ ಕೊಡುಗೆ, ಸಾದನೆ ಬಗ್ಗೆ ವೆಬ್ ಸೈಟ್ ಮಾಡುವಾಗ ಅದನ್ನು ಎಲ್ಲಾ ಭಾಗದಿಂದ ಪರಿಶೀಲಿಸಿ ಅದು ಹೆಚ್ಚು ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಪೂರಕವಾಗಬೇಕು. ಸೌಹಾರ್ಧತೆ ಮತ್ತು ಸಹಯೋಗಕ್ಕೂ ಹೆಚ್ಚು ಅನುಕೂಲ ಆಗಿರಬೇಕು. ಹಾಗಾಗಿ, ಆಲೋಚಿಸಿ ನಿದಾನವಾಗಿಸಿದೆ. ಸೈಟ್ ಮಾಡಿ ಬಿಡುಗಡೆ ಮಾಡುವುದು ಸುಲಭ. ಆದರೆ ಅದರ ಪರಿಣಾಮ-ಪ್ರಯೋಜನ ಮತ್ತು ಫಲಿತಾಂಶದ ಬಗ್ಗೆ ನಮಗೆ ಜವಾಬ್ದಾರಿ ಇಲ್ಲದಿದ್ದರೆ ನಾವು ಮಾಡುವ ಎಲ್ಲಾ ಕೆಲಸವೂ ಉನ್ಮಾದವಲ್ಲದೇ ಬೇರೇನೂ ಆಗುವುದಿಲ್ಲ. ಬ್ಯಾರಿ ಸಮುದಾಯ ಇದನ್ನು ಬೇಗ ಮರೆತು ಬಿಡುತ್ತದೆ. ನಾವು ಬ್ಯಾರೀಸ್ ವಲ್ಡ್ ವಿಭಿನ್ನ ರೀತಿಯಲ್ಲಿ ಮುಂದೆ ಬಿಡುಗಡೆ ಮಾಡುತ್ತೇವೆ ಎಂದು. ಇಷ್ಟು ಸಣ್ಣ ವಯಸ್ಸಿನಲ್ಲಿರುವ ಆತನ ಚಿಂತನೆ, ಸಮುದಾಯದ ಬಗ್ಗೆ ಇರುವ ಕಾಳಜಿ, ದೂರದೃಷ್ಠಿ, ಸಮುದಾಯದ ಯುವ ಪೀಳಿಗೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಆತನ ಸಾಧನೆಯ ಪ್ರಗತಿ ಇದೆಲ್ಲವನ್ನೂ ಮೆಚ್ಚತಕ್ಕದ್ದು. “ಮಂದ ಬೆಳಕಿನಲ್ಲಿ ಕೂತು ಮಂದಹಾಸ ಬೀರಿ, ಪ್ರಾಂಗಣ, ವೇದಿಕೆಯಲ್ಲಿ ಅಟ್ಟಕ್ಕೇರಿದಷ್ಟು ಸುಲಭವಲ್ಲ ಸಾಧನೆ.!”

ಬ್ಯಾರಿ ಎಂಬ ಪದವು ತುಳುವಿನ ಬ್ಯಾರ ಎಂಬ ಶಬ್ದದಿಂದ ಉದ್ಭವಗೊಂಡಿದೆ ಎಂಬ ವಿಶ್ವಾಸ.! ವ್ಯಾಪಾರ ವಹಿವಾಟು ಎಂದು ಅದರ ಅರ್ಥ. ಕೆಲವರು ಧರ್ಮ, ಜಾತಿಯನ್ನು ತಮ್ಮ ಹೊಟ್ಟೆಪಾಡಿಗಾಗಿ ದುರುಪಯೋಗ ಪಡಿಸುತ್ತಾರೆ. ಬ್ಯಾರಿ ಎಂಬ ನಾಮ ಬಳಸಿ, ಬ್ಯಾರಿ ಹೆಸರಿನಲ್ಲಿ ಶ್ರೀಮಂತಿಕೆಯಲ್ಲಿ ಮೆರೆಯುವವರೂ, ಮೆರೆದವರೂ ಇದ್ದಾರೆ. ಬ್ಯಾರಿ ನಾಮವನ್ನೇ ಜಪ-ತಪ ಮಾಡಿಕೊಂಡು ಬ್ಯಾರಿಗಳ ಉದ್ದಾರಕ್ಕಾಗಿ ಧರೆಗಿಳಿದು ಬಂದವರಂತೆ ಅಭಿನಯಿಸಿ ತಮ್ಮ ಜೇಬು ತುಂಬಿಸುವವರೂ ಇದ್ದಾರೆ. ಇಂತವರಿಂದ ಎಂದೂ ಬ್ಯಾರಿ ಸಮುದಾಯ ಉದ್ದಾರವಾಗದು.!