ಹಿಂದುಸ್ಥಾನದ ಬಹಳ ಕಡೆಗಳಲ್ಲಿ ಇಸ್ಲಾಮಿನ ಹುಖೂಮತ್ ಸ್ಥಾಪನೆಯಾಗಲಿದೆ

ರಾಷ್ಟ್ರೀಯ

ಮಣ್ಣಿನಡಿಯಲ್ಲಿ ಹುದುಗಿದ್ದ “ತೌಫತುಲ್ ಅಘಾನಿ” ಎಂಬ ಗ್ರಂಥದಲ್ಲಿ ಅಡಗಿದ್ದ ಭವಿಷ್ಯವಾಣಿ.?

ಒಂದು ಸಮುದಾಯವನ್ನು ಅಳಿಸಲು, ಆ ಸಮುದಾಯದ ಜನರನ್ನು ಕೊಂದು ಮುಗಿಸಬೇಕೆಂದಿಲ್ಲ. ಅವರ ಸಾಹಿತ್ಯ, ಸಂಸ್ಕ್ರತಿಯನ್ನು ಅಳಿಸಿದರೆ ಸಾಕು. ಇದು ಸಮುದಾಯಯ ವಿರೋಧಿಗಳ ಷಡ್ಯಂತ್ರ.!

ಇಸ್ಲಾಮಿನ ಅಸ್ಥಿತ್ವವನ್ನು ಅಳಿಸಲು ಇಸ್ಲಾಮಿನ ಕಟ್ಟರ್ ವಿರೋಧಿಗಳಾದ ಯಹೂದಿಗಳು ಮತ್ತು ಪಾಶ್ಚಾತ್ಯ ಸಾಮ್ರಾಜ್ಯಶಾಹಿ ಆತಂಕಿಗಳು ಕಂಡುಕೊಂಡ ಷಡ್ಯಂತ್ರಗಳು ಹಲವಾರು. ಒಂದು, ಇಸ್ಲಾಂ ಆಗಿ ಅದರೊಳಗಿದ್ದುಕೊಂಡೇ, ಇಸ್ಲಾಮಿನ ಇತಿಹಾಸ, ಕರ್ಮಶಾಸ್ತ್ರವನ್ನು ತಿರುಚುತ್ತಾ, ಶಿರ್ಕ್ ಗಳನ್ನು ಸೃಷ್ಟಿಸಿ, ಬಲವನ್ನು ಕುಂದಿಸುವುದು. ಇಸ್ಲಾಮ್ ಸಾಹಿತ್ಯ, ಆರ್ಥಿಕ ಬಲಹೊಂದಿ ಸಮೃದ್ಧಗೊಂಡ ದೇಶದ ಮೇಲೆ ಸುಳ್ಳಾರೋಪ ಹೊರಿಸಿ ದಾಳಿ ಮಾಡಿ, ಇಸ್ಲಾಮಿಕ್ ಸಾಹಿತ್ಯವನ್ನು ನಾಶಮಾಡುವುದು. ಸ್ವತಃ ಆತಂಕವಾದಿಗಳಾದ ಇವರುಗಳು, ಮುಸಲ್ಮಾನರನ್ನು ಆತಂಕವಾದಿಗಳೆಂದು ಸುಳ್ಳು ಸುಳ್ಳೇ ಹೇಳುತ್ತಾ ಬರುವುದು. ಒಂದು ಇಸ್ಲಾಮಿಕ ಸಾಮ್ರಾಜ್ಯದ ಮೇಲೆ ದಾಳಿ ಮಾಡುವಾಗ, ಇತರ ಇಸ್ಲಾಮಿಕ್ ರಾಜ್ಯಗಳನ್ನು ಸ್ನೇಹಿತರನ್ನಾಗಿ ಮಾಡಿ, ದಾಳಿಗೊಳಪಟ್ಟ ರಾಜ್ಯಕ್ಕೆ ಇವರಿಂದ ಸಹಾಯ ಸಹಕಾರ ಸಿಗದಂತೆ ಮಾಡುವುದು. ಸುಖಲೋಲುಪತೆಯಲ್ಲಿ ತೇಲಾಡುತ್ತಾ, ಕಣ್ಣು ಕುರುಡಾದ ಇಸ್ಲಾಮಿ ಭರಣಾಧಿಕಾರಿಗಳಿಗೆ ಇದು ಅರ್ಥ ಅಗದಿರುವುದು ನಮ್ಮ ದುರಂತ.

​ಇರಾಕಿನ ಮೇಲೆ, ಆತಂಕಿ ಅಮೇರಿಕ ಸುಳ್ಳಾರೋಪ ಹೊರಿಸಿ ಆಕ್ರಮಣ ಮಾಡಿ, ಅಲ್ಲಿಯ ಧನ, ದೌಲತ್‌ ಸಂಪತ್ತುಗಳನ್ನು ಕೊಳ್ಳೆ ಹೊಡೆಯಿತು. ಸಾಹಿತ್ಯದ ರಾಜಧಾನಿಯಾದ ಇರಾಕಿನ ಹಲವಾರು ಲೈಬ್ರೇರಿಗಳನ್ನು ಬಾಂಬ್ ಹಾಕಿ ನಾಶ ಮಾಡಿತು. ಅವುಗಳೆಲ್ಲಾ ಇಸ್ಲಾಮಿನ ಮದ್ರಸಗಳಾಗಿದ್ದವು. ಹೀಗೆ ಯುದ್ಧದಲ್ಲಿ ನಾಶವಾದ ಒಂದು ಬೃಹತ್ ಮದ್ರಸವನ್ನು ಪುನರ್ ನಿರ್ಮಾಣ ಮಾಡಲು ಸಮತಟ್ಟುಗೊಳಿಸಿ, ಸ್ಥಳದ ಕಸಗಳನ್ನೇ ಎತ್ತುವಾಗ, ಮಣ್ಣಿನಡಿಯಲ್ಲಿ ಹುದುಗಿದ “ತೌಫತುಲ್ ಅಘಾನಿ” ಎಂಬ ಗ್ರಂಥವೊಂದು ಬೆಳಕಿಗೆ ಬಂತು. ಇದು ಹಿಜರಿ 5-6 ರ ಕೃತಿ ಎಂದು ಅಂದಾಜಿಸಲಾಗಿದೆ. ಇದರ ರಚನೆಕಾರರು ಹಜ್ರತ್ ಅಬ್ದುಲ್ಲ ಬಿನ್ ತಹಿರುಲ್ ಬಗ್ದಾದಿ. ಅವರೊಬ್ಬ ದೀನಿ ಪಂಡಿತರು, ಸೂಫಿವರ್ಯರೂ, ಸಂತರೂ ಆಗಿದ್ದರು.

​ಆ ಗ್ರಂಥದ ಖಾಸ ಅಧ್ಯಾಯವೊಂದರಲ್ಲಿ ಈ ರೀತಿ ಉಲ್ಲೇಖಿಸಲ್ಪಟ್ಟಿದೆ. ಹಿಂದುಸ್ಥಾನದ ಬಹಳ ಕಡೆಗಳಲ್ಲಿ ಇಸ್ಲಾಮಿನ ಹುಖೂಮತ್ ಸ್ಥಾಪನೆಯಾಗಲಿದೆ.  ಆದರೂ ಕೆಲವು ವರುಷಗಳ ನಂತರ, ಈ ದೇಶ ಅಶಾಂತಿಯ ಬಿರುಗಾಳಿಗೆ ಒಳಗಾಗಲಿದೆ. ಇದಕ್ಕೆ ಕಾರಣ ಏನೆಂಬುವುದನ್ನು ಅವರು ಉಲ್ಲೇಖಿಸಿದ ವಿಚಾರ ಬಹಳ ಶೋಚನೀಯ.! “ಅ ದೇಶದ ಮುಸಲ್ಮಾನರು  ಹಂದಿಯ ಚರ್ಬಿ ಮತ್ತು ಹಂದಿಯ ಜಿನ್ಸ್ ನಿಂದ ತಯಾರಿಸಲ್ಪಟ್ಟ ಆಹಾರವನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳುವರು. ಈ ಕಾರಣದಿಂದ ಅವರು ದೀನನ್ನು ಬಿಟ್ಟು ಬಲುದೂರ ಸಾಗುವರು. ಅಲ್ಲಾಹನ ವಿಶ್ವಾಸ ಬರೇ ಬಾಯಲ್ಲಿ, ಮುಖಸ್ತುತಿಯಲ್ಲಿ ಹೊರತು, ಹೃದಯದಲ್ಲಿ ಲವಲೇಶವೂ ಉಳಿಯಲಾರದು” ಎಂದಾಗಿದೆ.

​ಈ ಭವಿಷ್ಯವಾಣಿಗೆ ಪೂರಕ ಪ್ರಯೋಗ ಒಂದು 2011 ರಲ್ಲಿ ಹೊರಬಂತು. ಯೂನಿವರ್ಸಿಟಿ ಆಫ್ ಒರೆಗನ್‌ (oregano) ಇದರ ಪ್ರೊಪೆಸರ್ ಆದ ಡಾ|| ಸ್ಟುವರ್ಡ್ ಡೇವಿಡ್ ಜಾನ್ಸ್, (ಡಿಪಾರ್ಟ್ಮೆಂಟ್ ಆಫ್ ಬಯೋ ಟೆಕ್ನಾಲಜಿಯ ಮುಖ್ಯಸ್ಥ). ಅವರ ವರದಿ ಪ್ರಕಾರ “ಬ್ರೊಯಿಲರ್ ಕೋಳಿ ಮತ್ತು ಹಂದಿಯ ಮಾಂಸದಲ್ಲಿ ಏನೂ ವ್ಯತ್ಯಾಸವಿಲ್ಲ. ಬ್ರೊಯಿಲರ್ ಕೋಳಿಯನ್ನು  ಹುಟ್ಟು ಹಾಕಿದ್ದೇ ಹಂದಿಯ ಮಾದರಿಯಲ್ಲಿ” ಎಂದಾಗಿತ್ತು. ಈ ಸಂಶೋಧನಾ ವರದಿ ಹೊರ ಬಂದೊಡನೆ, ಹಲವು ದೇಶಗಳಲ್ಲಿ ಈ ಕೋಳಿಯನ್ನು ಬ್ಯಾನ್ ಮಾಡಲಾಯಿತು. ಅದೇ ಅಲ್ಲದೆ, ಡಾ|| ಜೋನ್ಸ್ ಈ ಕೋಳಿಯ ಮಾಂಸದಲ್ಲಿ ಸ್ಟಿರಾಮ್ಡ್ ಹಾರ್ಮೋನ್, ಕೆಮಿಕಲ್ ಮತ್ತಿತರ ಹಲವು ವಸ್ತುಗಳನ್ನು ಬೆರೆಸಲಾಗಿದೆ. ಇವೆಲ್ಲಾ ನಮ್ಮ ದೇಹದಲ್ಲಿ ಸೇರಿಕೊಂಡು ನಾವು ಹಲವು ರೋಗಗಳ ಗೂಡಾಗುತ್ತಿದ್ದೇವೆ. ಈ ಕೋಳಿಯ ಹುಟ್ಟು 1960 ರಲ್ಲಿ ಆಯಿತು.

​2011 ರಲ್ಲಿ ಈ ಕೋಳಿಯ ಸೇವನೆಯಿಂದಾಗಿ ಕ್ಯಾನ್ಸರ್, ಥೈರೋಯ್ಡ್, ದಯಾಬಿಟಿಸ್‌ಗಳಂತಹ ಅನೇಕ ಮಾರಕರೋಗಗಳಿಗೆ ಜನ ಬಲಿಯಾಗತೊಡಗಿದರು. ನಾವೆಲ್ಲಾ ಚಿಕ್ಕ ಮಕ್ಕಳಿದ್ದಾಗ ಈ ರೋಗದ ಹೆಸರೇ ಕೇಳಿರಲಿಲ್ಲ. ಈ ಕೋಳಿಗಳಿಗೆ ಕೊಡುವ ಆಹಾರಗಳನ್ನು ಗಮನಿಸಿದಾಗ, ಇದರಿಂದಲೇ ಈ ರೋಗಗಳು ಬರುತ್ತವೆ ಎಂದು ಅಂದಾಜಿಸಬಹುದು. ಇದೆಲ್ಲವನ್ನು ಕಂಡು ಹಿಡಿದ ಡಾ||ಜೋನ್ಸ್ ರವರನ್ನು ಮಾನಸಿಕ ರೋಗಿ ಎಂದು ಘೋಷಿಸಿ, ಆಸ್ಪತ್ರೆಗೆ ದಾಖಲು ಮಾಡಲಾಯಿತು. 2015 ನವೆಂಬರ್‌ ತಿಂಗಳಲ್ಲಿ ಡಾ|| ಜೋನ್ಸ್ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮರಣಪಟ್ಟರು. ಒಂದು ವೇಳೆ ಈ ಅನುಮಾನಾಸ್ಪದ ಮರಣದ ಬಗ್ಗೆ, ನಿರ್ಭೀತಿಯಿಂದ ತನಿಖೆ ನಡೆಯುತ್ತಿದ್ದರೆ ಪಶ್ಚಿಮದ ಕೋಟಿ, ಕೋಟಿ ಬಿಲಿಯನೆರ್ ರವರ ವ್ಯವಹಾರ ನೆಲಕಚ್ಚುತ್ತಿತ್ತು.  ಇದರ ಏಜೆಂಟರುಗಳಾದ ಮುಸ್ಲಿಂ ದೇಶದ ಅರಬ್ ಪತಿಗಳೂ ನೆಲಕಚ್ಚುತ್ತಿದ್ದರು. ಹಾಗಾದಾಗ ನತೀಜ (ಪಲಿತಾಂಶ) ಬಹುಸಂಖ್ಯೆಯ ಮುಸಲ್ಮಾನರು “ಆತ್ಮಶಕ್ತಿ ಕಳಕೊಂಡು ಕಂಗಲಾದರು”
​ಇಸ್ಲಾಮಿನಲ್ಲಿ ಹಲಾಲಾದ ಪ್ರಾಣಿ ಪಕ್ಷಿಗಳನ್ನು ತಿನ್ನುವುದಕ್ಕೂ ಒಂದು ನಿಯಮವಿದೆ. ಅದನ್ನು ಹಲಾಲ್ ಮಾಡುವ ಒಂದು ವಾರದ ಮೊದಲೇ ಕಟ್ಟಿ ಹಾಕಿ ಶುದ್ದ ಆಹಾರವನ್ನೇ ತಿನ್ನಿಸಬೇಕು. ಈ ನಿಯಮ  ಏಕೆಂದರೆ ಕೊಳಚೆಯಲ್ಲಿರುವ ಅಹಾರವನ್ನು ಅದು ಹೋಗಿ ತಿಂದರೆ ಹಲವು ತರದ ವೈರಸ್‌ಗಳು ಅದಕ್ಕೆ ಅಂಟಿಕೊಳ್ಳುವ ಭಯವಿದೆ. ಅಂತ ಪ್ರಾಣಿಗಳನ್ನು, ಕೋಳಿಗಳನ್ನು ತಿಂದಾಗ ನಮಗೂ ರೋಗ ತಗಲುವ ಅಪಾಯವಿದೆ.

ಇಂದು ಕೋಳಿ ಅಂಗಡಿಗಳಲ್ಲಿ ನೋಡಿರಿ. 5 ಚದರ ಅಡಿಯಲ್ಲಿ ನೂರಾರು ಕೋಳಿಗಳಿದ್ದು, ಅಲ್ಲೆ ಅದಕ್ಕೆ ಆಹಾರ ಚೆಲ್ಲುತ್ತಾರೆ. ಕೋಳಿಗಳ ಹಿಕ್ಕೆಯೊಂದಿಗೆ ಬೆರೆತ ಆಹಾರವು ಪುನಃ ಕೋಳಿಯ ಹೊಟ್ತೆ ಸೇರುತ್ತದೆ. ಇದನ್ನು ನೋಡುವಾಗಲೇ ಹೊಟ್ಟೆ ತೊಳಸಲು ಆರಂಭವಾಗುತ್ತದೆ. ನಮ್ಮ ಆರೋಗ್ಯವು ಸರಿ ಇರಬೇಕಾದರೆ ಇದೆಲ್ಲವನ್ನು ನಾವು ಅರ್ಥೈಸಿ, ಸ್ವಲ್ಪ ಗಮನಿಸಬೇಕಾದ ವಿಷಯವಿದೆ.
 
​​​​​ಸಂಗ್ರಹ: ಮಹಮ್ಮದ್ ಬಡ್ಡೂರು