ಬಂಧನ ನಿಯಮವನ್ನೇ ಪಾಲಿಸುತ್ತಿಲ್ಲ ರಾಜ್ಯ ಪೊಲೀಸರು. 70% ಬಂಧನದಲ್ಲಿ ನಿಯಮ ಉಲ್ಲಂಘನೆ: ಎನ್ ಜಿ ಒ ವರದಿ

ರಾಜ್ಯ

ರಾಜ್ಯದ ಪೊಲೀಸರು ಶೇಕಡಾ 70 ರಷ್ಟು ಬಂಧನ ಪ್ರಕರಣಗಳಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಯ ವರದಿ ಬಹಿರಂಗವಾಗಿದೆ. ಲೋಕನೀತಿ, ಸಿಎಸ್ ಡಿ ಎಸ್ ಮತ್ತು ಲಾಲ್ ಫ್ಯಾಮಿಲಿ ಫೌಂಡೇಶನ್ ನೇತೃತ್ವದಲ್ಲಿ ‘ಕಾಮನ್ ಕಾಸ್’ ಎಂಬ ಎನ್ ಜಿ ಒ ಎಲ್ಲ ರಾಜ್ಯಗಳಲ್ಲಿ ಪೊಲೀಸ್ ವ್ಯವಸ್ಥೆಯ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ವರದಿ ಬಹಿರಂಗಪಡಿಸಿದೆ.

ನೆರೆ ರಾಜ್ಯ ಕೇರಳದಲ್ಲಿ ಪೊಲೀಸರು ಶೇಕಡಾ 94 ರಷ್ಟು ಪ್ರತಿಶತ ಬಂಧನ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಜಾರ್ಖಂಡ್ ನಲ್ಲೂ ಕೂಡ ಶೇಕಡಾ 70 ರಷ್ಟು ಜನರು ಪೊಲೀಸರು ಬಂಧನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಪೊಲೀಸರು ಬಂಧನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಶೇಕಡಾ 70 ರಷ್ಟು ಜನರು ಹೇಳಿದ್ದಾರೆ. ಶೇಕಡಾ 13 ರಷ್ಟು ಜನರು ಪೊಲೀಸರು ಬಂಧನ ಪ್ರಕರಣಗಳಲ್ಲಿ ನಿಯಮಗಳನ್ನು ಪಾಲಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಶೇಕಡಾ 17 ರಷ್ಟು ಸಾರ್ವಜನಿಕರು ಕೆಲವೊಮ್ಮೆ ಮಾತ್ರ ಪೊಲೀಸರು ಬಂಧನ ನಿಯಮ ಪಾಲಿಸುತ್ತಾರೆ ಎಂದು ಹೇಳಿದ್ದಾರೆ.

ಕೇರಳದಲ್ಲಿ ಶೇಕಡಾ 94 ರಷ್ಟು ಜನರು ಪೊಲೀಸರು ಬಂಧನ ನಿಯಮ ಪಾಲಿಸುತ್ತಾರೆ ಎಂದು ಹೇಳಿದರೆ, ಶೇಕಡಾ 6 ರಷ್ಟು ಜನರು ಕೆಲವೊಮ್ಮೆ ಮಾತ್ರ ಅನುಸರಿಸುತ್ತಾರೆ ಎಂದು ಹೇಳಿದ್ದಾರೆ. ಜಾರ್ಖಂಡ್ ರಾಜ್ಯದಲ್ಲೂ ಕೂಡ ಪೊಲೀಸರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಸಮೀಕ್ಷೆಯಲ್ಲಿ ಶೇಕಡಾ 43 ರಷ್ಟು ಜನರು ಪೊಲೀಸರು ಬಂಧನ ನಿಯಮಗಳನ್ನು ವಿರಳವಾಗಿ ಅನುಸರಿಸುತ್ತಾರೆ ಎಂದು ಹೇಳಿದ್ದಾರೆ. ಬಿಹಾರದಲ್ಲಿ ಇದು ಶೇಕಡಾ 51 ರಷ್ಟು ಇದೆ.

ಜಾರ್ಖಂಡ್, ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಆರೋಪಿಗಳನ್ನು ವಿಚಾರಣೆ ಮಾಡುವುದನ್ನು ಬಿಟ್ಟು ಸಣ್ಣ ಪ್ರಮಾಣದ ಶಿಕ್ಷೆ ನೀಡಿ ಎಚ್ಚರಿಕೆ ನೀಡುವುದು ಉತ್ತಮ ಎಂದು ಅರ್ಧದಷ್ಟು ಪೊಲೀಸರು ಭಾವಿಸಿದ್ದಾರೆ.

“ಒಡಿಶಾದಲ್ಲಿ ಶೇಕಡಾ 82, ರಾಜಸ್ಥಾನ ಶೇಕಡಾ 77 ಹಾಗೂ ಕೇರಳದಲ್ಲಿ ಶೇಕಡಾ 72 ರಷ್ಟು ಪೊಲೀಸ್ ಸಿಬ್ಬಂದಿಗಳು ನಿಯಮ ಪಾಲಿಸಿ ಕಾನೂನು ಪ್ರಕ್ರಿಯೆ ಅನುಸರಿಸಲು ಆದ್ಯತೆ ನೀಡುತ್ತಿದ್ದಾರೆ. ಆದರೆ ಜಾರ್ಖಂಡ್ ಶೇಕಡಾ 55 ರಷ್ಟು , ಆಂಧ್ರಪ್ರದೇಶ ಶೇಕಡಾ 51 ರಷ್ಟು ಮತ್ತು ಕರ್ನಾಟಕ ಶೇಕಡಾ 51 ರಷ್ಟು ರಾಜ್ಯಗಳು ಕಾನೂನು ವಿಚಾರಣೆಯನ್ನು ಅನುಸರಿಸುವ ಬದಲು ಸಣ್ಣ ಪುಟ್ಟ ಅಪರಾಧಗಳಲ್ಲಿ ಅಪರಾಧಿಗಳಿಗೆ ಸಣ್ಣ ಶಿಕ್ಷೆ ನೀಡುವ ಮಾರ್ಗವನ್ನು ಬೆಂಬಲಿಸುವ ಸಾಧ್ಯತೆ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಹಿಂಸಾಚಾರ ನಡೆಸಿ ಶಿಕ್ಷೆ ನೀಡಬೇಕು

ನಗರ ಪ್ರದೇಶಗಳಲ್ಲಿ ಶೇಕಡಾ 40 ರಷ್ಟು ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿಗಳು ಸಣ್ಣ ಅಪರಾಧಗಳ ಪ್ರಕರಣಗಳಲ್ಲಿ ಕಾನೂನು ವಿಚಾರಣೆಗಿಂತ ಸಣ್ಣ ಶಿಕ್ಷೆಯನ್ನು ನೀಡುವ ಸಾಧ್ಯತೆ ಹೆಚ್ಚು ಇದೆ ಅನ್ನುತ್ತದೆ ವರದಿ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 32 ರಷ್ಟು ಜನರು ಗುಂಪು ಹಿಂಸಾಚಾರ ನಡೆಸಿ ಶಂಕಿತರನ್ನು ಶಿಕ್ಷಿಸುವುದನ್ನು ಸಮರ್ಥಿಸುತ್ತಾರೆ. ಆದರೆ ಕೇರಳದವರು ಹಾಗೆ ಮಾಡುವ ಸಾಧ್ಯತೆ ಕಡಿಮೆ. ಯಾರೂ ಈ ಕಲ್ಪನೆಯನ್ನು ಬೆಂಬಲಿಸುವುದಿಲ್ಲ. ಗುಜರಾತ್ ಪೊಲೀಸರಲ್ಲಿ ಶೇಕಡಾ 57 ರಷ್ಟು ಜನರು ಇದನ್ನು ದೊಡ್ಡ ಪ್ರಮಾಣದಲ್ಲಿ ಸಮರ್ಥಿಸಿದ್ದಾರೆ ಎಂದು ಅಧ್ಯಯನವು ಹೇಳಿದೆ. ಆದರೆ ಕರ್ನಾಟಕದಲ್ಲಿ ಇದು ಶೇಕಡಾ 27 ರಷ್ಟಿದೆ.