ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆ ಸೃಷ್ಠಿಸಿ ವಂಚಿಸಿದ ಪ್ರಕರಣ, ಆರೋಪಿಯ ಬಂಧನ.

ಕರಾವಳಿ

ಪುತ್ತೂರು: ನ್ಯಾಯಾಲಯಕ್ಕೆ ನಕಲಿ ದಾಖಲೆ ಪತ್ರಗಳನ್ನು ನೀಡಿ, ಆರೋಪಿಯೊಬ್ಬನಿಗೆ ಜಾಮೀನು ಪಡೆಯಲು ವಂಚನೆ ಮಾಡಿದಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನಿವಾಸಿಯೊಬ್ಬರ ಮಾಲಿಕತ್ವದಲ್ಲಿರುವ ಜಮೀನಿನ ಆರ್‌ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್‌ಟಿಸಿಯೆಂದು ನಂಬಿಸಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನೀಡಿ ಆರೋಪಿಗೆ ಜಾಮೀನು ನೀಡುವಂತೆ ಮಾಡಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 84/2025 ಪ್ರಕರಣ ದಾಖಲಾತ್ತು.

ಪ್ರಕರಣದಲ್ಲಿ ನಕಲಿ ದಾಖಲೆ ಪತ್ರ ಸೃಷ್ಟಿಸಿ ಪಿರ್ಯಾದುದಾರರೆಂದು ಹೇಳಿಕೊಂಡು, ನಕಲಿ ಸಹಿ ಮಾಡಿ ನ್ಯಾಯಾಲಯಕ್ಕೆ ವಂಚಿಸುವ ಉದ್ದೇಶದಿಂದ, ಬೆಲೆಬಾಳುವ ಭದ್ರತಾ ಪತ್ರವನ್ನು ನೀಡಿದ್ದ ಪುತ್ತೂರು ಪಡುವನ್ನೂರು ಗ್ರಾಮದ ನಿವಾಸಿ, ಅಬ್ದುಲ್ ಹಾಶೀಮ್ ಪಡುವನ್ನೂರು ಎಂಬಾತನನ್ನು ದಿನಾಂಕ 06.11.2025 ರಂದು ಉಪ್ಪಿನಂಗಡಿ ಪೊಲೀಸರು ದಸ್ತಗಿರಿ ಮಾಡಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿದಿಸಿರುತ್ತದೆ.