ಪುತ್ತೂರು ಕಮ್ಯೂನಿಟಿ ಸೆಂಟರ್ ನ ಸುಮಾರು 108 ವಿದ್ಯಾರ್ಥಿಗಳು ಈ ಬಾರಿ ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ

ಕರಾವಳಿ

ಬೆಂಗಳೂರು ಫಾಲ್ಕನ್ ಕಾಲೇಜು, ಬೀದರ್ ಶಾಹೀನ್, ಶೆಪರ್ಡ್ ಶಾಹೀನ್ ಬೆಂಗಳೂರು, ಬರಕ ಕಾಲೇಜು, ಆಕಾಶ್, ಅಲೆನ್, ಬ್ರಿಲಿಯಂಟ್ ಪಾಲ, ಎಕ್ಸೆಲ್, ಎಕ್ಸ್ಪರ್ಟ್ ಮುಂತಾದ ಹೆಸರಾಂತ ಇಂಟಿಗ್ರೇಟೆಡ್ ಪಿಯು ಕಾಲೇಜು ಮತ್ತು ಲಾಂಗ್ ಟರ್ಮ್ ನೀಟ್ ಕೋಚಿಂಗ್ ಸೆಂಟರ್ ನಲ್ಲಿ ಈ ವಿದ್ಯಾರ್ಥಿಗಳು ತರಬೇತಿ ಪಡೆದವರು. ಕಳೆದ ನಾಲ್ಕು ವಾರ್ಷಿಕ ಅವಧಿಯಲ್ಲಿ ಸೆಂಟರ್ ಮೂಲಕ 229 ವಿದ್ಯಾರ್ಥಿಗಳು ನೀಟ್ ಬರೆದಿದ್ದರು. ಅವರಲ್ಲಿ 79 ವಿದ್ಯಾರ್ಥಿಗಳು MBBS, 25 ವಿದ್ಯಾರ್ಥಿಗಳು BDS, 26 ವಿದ್ಯಾರ್ಥಿಗಳು BAMS ಸೇರಿದಂತೆ ವಿವಿಧ ಮೆಡಿಕಲ್ ವಿಭಾಗದಲ್ಲಿ ಕಲಿಯುತ್ತಿದ್ದಾರೆ. ಇನ್ನು ಕೆಲವರು ನೀಟ್ ಗೆ ತಯಾರಿ ನಡೆಸಿದವರು CET ಬರೆದು ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜ್ ಸೇರಿ ಅಧ್ಯಯನ ಮಾಡುತ್ತಿದ್ದಾರೆ.

ಮೆಡಿಕಲ್ ಕ್ಷೇತ್ರದಲ್ಲಿ ಸೆಂಟರ್ ನ 238 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರಲ್ಲಿ ಕೇವಲ CET ಬರೆದು ಫಾರ್ಮ್ ಡಿ, ಬೀ ಫಾರ್ಮಾ ಮುಂತಾದ ಕೋರ್ಸ್ ಸರಕಾರಿ ಕೋಟಾದಲ್ಲಿ ಪಡೆದವರು ಇದ್ದಾರೆ.

ಈ ಬಾರಿ 108 ವಿದ್ಯಾರ್ಥಿಗಳು ನೀಟ್ ಬರೆಯುತ್ತಿದ್ದಾರೆ. ಕಳೆದ ಐದು ಅವಧಿಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 337. ಇದರಲ್ಲಿ 26% ಯುವಕರು ಮತ್ತು 74% ಯುವತಿಯರು. ರಾಜ್ಯದ ವಿವಿಧ ಮೆಡಿಕಲ್ ಕಾಲೇಜಿನಲ್ಲಿ ಸರಕಾರಿ ಸೀಟಿನ ಮೂಲಕ ನಮ್ಮ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಾರಿಯ ನೀಟ್ ಬರೆಯುವ ವಿದ್ಯಾರ್ಥಿಗಳ ಪೈಕಿ ಮೊದಲ ಬಾರಿ, ಎರಡನೇ ಬಾರಿ, ಮೂರನೇ ಬಾರಿ ನೀಟ್ ಎದುರಿಸುತ್ತಿರುವ ವಿದ್ಯಾರ್ಥಿಗಳು ಇದ್ದಾರೆ. ಸೆಂಟರ್ ನ ಮೂಲಕ ಇರುವ ಮಾನಿಟರಿಂಗ್ ಸಿಸ್ಟಂ ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಗುರಿ ತಲುಪುವವರೆಗೆ ಅವರನ್ನು ಪ್ರೋತ್ಸಾಹಿಸುವ ಪ್ರಕ್ರಿಯೆ ಇದೆ.

ಸೆಂಟರ್ ನ MBBS ವಿದ್ಯಾರ್ಥಿಗಳ ಪೈಕಿ 2b Reservation ಮೂಲಕ 22, Rural Reservation ಮೂಲಕ 14, ಮೆರಿಟ್ 12, ಕನ್ನಡ ಮೀಡಿಯಂ 2 (2A,2B). Sports Reservation 1, ಮೈನಾರಿಟಿ 17, ಹೀಗೆ ಪ್ರತಿಯೊಂದು ಕೆಟಗರಿಯಲ್ಲೂ ಅವರಿಗೆ ಇರುವ ಅವಕಾಶದ ಪ್ರಯೋಜನ ಪಡೆಯಲಾಗಿದೆ.

ಈ ಬಾರಿ ಸೆಂಟರ್ 100 MBBS ಗುರಿಯನ್ನು ತಲುಪಲಿದೆ. 10 ವರ್ಷದಲ್ಲಿ ಈ ಗುರಿಯನ್ನು ತಲುಪಲು ಉದ್ದೇಶ ಮಾಡಲಾಗಿತ್ತು. ವಿದ್ಯಾರ್ಥಿಗಳ ಪರಿಶ್ರಮ, ಹೆತ್ತವರ ಪ್ರೋತ್ಸಾಹ, ಸಮುದಾಯದ ಬೆಂಬಲದಿಂದ ಇದನ್ನು ನಾವು 5 ವರ್ಷದಲ್ಲಿ ಸಾಧಿಸಿದ್ದೇವೆ ಎನ್ನುವುದು ಹೆಮ್ಮೆಯ ವಿಷಯ.

ಇಂದು ದೇಶದಾದ್ಯಂತ ನೀಟ್ ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾರ್ಥಿಸಿ. ಅವರ ಯಶಸ್ಸು ಅವರ ಬದುಕಿನ ಯಶಸ್ಸಿನ ಜೊತೆಗೆ, ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗೆ ಕಾರಣವಾಗಲಿ.