ಸುಳ್ಯ: ತೋಡಿಕಾನ ಗ್ರಾಮದ ಶೆಟ್ಟಿಯಡ್ಕ ಎಂಬಲ್ಲಿ, ಆರೋಪಿಗಳಾದ ಮನು ಪೆರ್ಮುಡ ಹಾಗೂ ಚೆಂಬು ಗ್ರಾಮದ ಆ್ಯಂಟನಿ ಎಂಬವರು ಕಳ್ಳತನದಿಂದ ಕಾನೂನು ಬಾಹಿರವಾಗಿ ನದಿಯಿಂದ ಮರಳನ್ನು ಕದ್ದು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸುಳ್ಯ ಪೊಲೀಸ್ ಠಾಣಾ ಉಪ-ನಿರೀಕ್ಷಕರಾದ ಸಂತೋಷ್ ಬಿ.ಪಿ ರವರು ಸಿಬ್ಬಂದಿಗಳೊಂದಿಗೆ ಖಚಿತ ಮಾಹಿತಿ ಬಂದ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಆರೋಪಿಗಳು ಸದರಿ ಸ್ಥಳದಲ್ಲಿ ಸರಿ-ಸುಮಾರು 50-60 ಮೆಟ್ರಿಕ್ ಟನ್ ತೂಕದ ಸುಮಾರು 20 ಟಿಪ್ಪರ್ ಲೋಡ್ ಮರಳು ಸಂಗ್ರಹವಾಗಿರುವುದು ಕಂಡು ಬಂದಿರುತ್ತದೆ.
ಯಾವುದೇ ಪರವಾನಗಿ ಪಡೆಯದೇ, ಕಾನೂನು ಬಾಹಿರವಾಗಿ ಆರೋಪಿ ಮನು ಪೆರ್ಮುಡನು ಚೆಂಬು ಗ್ರಾಮದ ಆ್ಯಂಟನಿ ಎಂಬಾತನೊಂದಿಗೆ ಸೇರಿಕೊಂಡು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಂಗ್ರಹ ಮಾಡಿ, ಬಳಿಕ ಲಾರಿಗಳಿಗೆ ಲೋಡ್ ಮಾಡಿ ಮಾರಾಟ ಮಾಡುತ್ತಿರುವುದು ತಿಳಿದುಬಂದಿರುತ್ತದೆ.

ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಸ್ಥಳದಲ್ಲಿದ್ದ ಅಂದಾಜು 1.20 ಲಕ್ಷ ರೂಪಾಯಿ ಮೌಲ್ಯದ ಮರಳನ್ನು ಪೊಲೀಸರು ಸ್ವಾಧೀನಪಡಿಸಿ ಆರೋಪಿಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 63/2026 ರಂತೆ ಕಲಂ: 303(2), BNS 2023 ಮತ್ತು ಕಲಂ 4(1),21 Mines and Minarals (Development and Regulationl) Act 1957 ಮತ್ತು ಕಲಂ: 3, 44, Karnataka Mines Minerals concession Rules 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದಾರೆ.
