ಮಂಗಳೂರಿನಲ್ಲಿ ಮತ್ತೆ ಚಾಕು, ಚೂರಿಯ ಆರ್ಭಟ.. ಈ ಬಾರಿ ಟಾರ್ಗೆಟ್ ಮಾತ್ರ ಅಮಾಯಕ ಹೆಣ್ಮಕ್ಕಳು.. ಏನಾಗುತ್ತಿದೆ ಮಂಗಳೂರಿನಲ್ಲಿ..?

ಕರಾವಳಿ

ಪುರುಷರ ಕಟ್ಟೆಯಲ್ಲಿ ಪೌರುಷ ತೋರಿಸಿದ ದರ್ಮ ರಕ್ಷಕರು ಪುಲ್ ಸೈಲೆಂಟ್.. ಸಂಘಟನೆಗಳ ಉಸ್ಕು ದಮ್ಮಿಲ್ಲ.. ಹಂತಕ, ಸಂತ್ರಸ್ತೆ ಒಂದೇ ಧರ್ಮೀಯರಾದರೆ ಅದು ಅಪರಾಧ ಅಲ್ಲವೇ..

ಒನ್ಸ್ ಎಗೈನ್.. ಮಂಗಳೂರಿನಲ್ಲಿ ಮತ್ತೆ ಚಾಕು,ಚೂರಿಗಳದ್ದೇ ಸದ್ದು. ಮರ್ಡರ್ ಸಿಟಿ ಅಂತ ಕಳಂಕ ಹೊತ್ತಿದ್ದ ಮಂಗಳೂರಿನಲ್ಲಿ ಈ ಬಾರಿ ಮತೀಯ ಸಂಘರ್ಷ, ಮತೀಯ ಹತ್ಯೆಯ ಕಾರಣಕ್ಕಾಗಿ ಸುದ್ದಿ ಮಾಡುತ್ತಿಲ್ಲ. ಬದಲಾಗಿ ಉಭಯ ಧರ್ಮದ ಅಮಾಯಕ ಹೆಣ್ಮಕ್ಕಳು ಟಾರ್ಗೆಟ್ ಆಗುತ್ತಿದ್ದಾರೆ. ಅಸಲಿಗೆ ಹಂತಕರು ಮತ್ತು ಸಂತ್ರಸ್ತೆಯರು ಒಂದೇ ಧರ್ಮಕ್ಕೆ ಸೇರಿರುವುದರಿಂದ ಸಣ್ಣ ಸಣ್ಣ ವಿಚಾರವನ್ನು ಮುನ್ನೆಲೆಗೆ ತಂದು ಧರ್ಮ ರಕ್ಷಣೆಯ ಗೆಟಪ್ ಹೊತ್ತಿದ್ದವರು ಮೌನಕ್ಕೆ ಜಾರಿದ್ದಾರೆ. ಬಿಸಿ ರೋಡಿನ ನಡುರಸ್ತೆಯಲ್ಲೇ ಅಮಾಯಕ ಯುವತಿಯೊಬ್ಬಳು ಡೆಡ್ಲಿ ಮರ್ಡರ್ ಆದರೂ ಈ ಮತೀಯ ಸಂಘಟನೆಗಳು ಉಸ್ಕು ದಮ್ಮು ಎತ್ತುತ್ತಿಲ್ಲ ಅನ್ನುವುದೇ ವಿಷಾದದ ಸಂಗತಿ.

ಹಿಂದೊಮ್ಮೆ ಮಂಗಳೂರಿನಲ್ಲಿ ಮತೀಯ ಕಾರಣಕ್ಕಾಗಿ ಚಾಕು, ಚೂರಿಗಳದ್ದೇ ಸದ್ದು ಕೇಳಿ ಬರುತ್ತಿತ್ತು. ಆದರೆ ಮಂಗಳೂರಿಗೆ ಯಾವಾಗ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಎಸ್ ಪಿ ಅರುಣ್ ಅವರ ಎಂಟ್ರಿಯಾಯಿತೋ ಮತೀಯ ಸಂಬಂಧಿತ ಹತ್ಯಾ ಸರಣಿಗೆ ಪುಲಿಸ್ಟಾಪ್ ಬಿದ್ದಿತು. ನಡು ರಸ್ತೆಯಲ್ಲಿ ಓಡಾಡಲು ಭಯ ಪಡುತ್ತಿದ್ದ ಉಭಯ ಧರ್ಮದವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇಲ್ಲಿನ ಸೂಪರ್ ಕಾಫ್ ಅಧಿಕಾರಿಗಳಿಗೆ ಹ್ಯಾಟ್ಸಾಫ್ ಅಂದರು. ಇಲ್ಲಿ ಮತೀಯ ಹತ್ಯೆಗಳ ಸರಣಿ ಮುಗಿಯುತ್ತಿದ್ದಂತೆ ಇದೀಗ ನಡು ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರು, ಕೆಲಸಕ್ಕೆ ಹೋಗುವ ಅಮಾಯಕ ಹೆಣ್ಮಕ್ಕಳೇ ಟಾರ್ಗೆಟ್ ಆಗುತ್ತಿದ್ದಾರೆ. ವಾರದ ಅಂತರದಲ್ಲಿ ಇಬ್ಬರು ಯುವತಿಯರ ಮೇಲೆ ಭೀಕರ ಹಲ್ಲೆಯಾಗಿದೆ. ಅದರಲ್ಲಿ ಓರ್ವ ಯುವತಿ ನಡುರಸ್ತೆಯಲ್ಲೇ ಸಾವಿಗೀಡಾಗಿದ್ದರೆ, ಇನ್ನೋರ್ವ ಯುವತಿ ಗಂಭೀರ ಗಾಯಗೊಂಡು ಸಾವಿನಿಂದ ಪಾರಾಗಿದ್ದಳು. ಆದರೆ ಹಂತಕರು ಆಯಾಯ ಧರ್ಮಕ್ಕೆ ಸೇರಿದವರಾಗಿದ್ದರಿಂದ ಮಂಗಳೂರಿನಲ್ಲಿ ಯಾವುದೇ ಬಂದ್, ಪ್ರತಿಭಟನೆ ನಡೆಯದೆ ಸಹಜ ಸ್ಥಿತಿಯಲ್ಲೇ ಇದೆ. ಒಂದು ವೇಳೆ ದುಷ್ಕರ್ಮಿ ಅದಲು ಬದಲಾಗಿದ್ದರೆ ಈ ಸಮಾಜದ ರಿಯಾಕ್ಷನ್ ಹೇಗಿರುತ್ತಿತ್ತು ಅಲ್ಲವೇ..ದುಷ್ಕರ್ಮಿ, ಸಂತ್ರಸ್ತೆ ಒಂದೇ ಸಮುದಾಯಕ್ಕೆ ಸೇರಿದರೆ ಅದು ಅಪರಾಧ ಅಲ್ಲವೇ.

ಪುತ್ತೂರಿನ ಪುರುಷರ ಕಟ್ಟೆಯಲ್ಲಿ ಫೇಕ್ ಘಟನೆಗೆ ಬಣ್ಣ ಬಳಿದು ರಂಗಕ್ಕೆ ಇಳಿದ ಸೋಕಾಲ್ಡ್ ಧರ್ಮ ಪುಂಗವರು ಬಂಟ್ವಾಳದ ಘಟನೆ ಬಗ್ಗೆ ಯಾಕೆ ಉಸ್ಕು ದಮ್ಮು ಎತ್ತುತ್ತಿಲ್ಲ. ಕೆಲವು ದಿನಗಳ ಹಿಂದೆ ಇದೇ ಬಂಟ್ವಾಳದಲ್ಲಿ ಶಾಲಾ ವಿದ್ಯಾರ್ಥಿನಿಗೆ ಅದೇ ಸಮುದಾಯದ ಜಬ್ಬಾರ್ ಚೂರಿ ಹಾಕಿದಾಗ ಇಲ್ಲಿ ಯಾವುದೇ ತಲ್ಲಣ ಸೃಷ್ಟಿಯಾಗಿಲ್ಲ . ಇದೀಗ ಬಂಟ್ವಾಳದಲ್ಲಿ ಚೇತನ್ ಅನ್ನುವ ದುಷ್ಕರ್ಮಿ ನಡುರಸ್ತೆಯಲ್ಲೇ ಯುವತಿಗೆ ಚಾಕು ಇರಿದು ಕೊಚ್ಚಿ ಕೊಂದು ಓಡಿ ಹೋದರೂ ಇಲ್ಲಿ ಯಾವುದೇ ಧರ್ಮಕ್ಕೆ ಅಪಾಯವಿಲ್ಲ. ಒಂದು ವೇಳೆ ಇಲ್ಲಿ ನಡೆದ ಎರಡು ಘಟನೆಗಳಲ್ಲಿ ದುಷ್ಕರ್ಮಿ ಧರ್ಮ ಅದಲು ಬದಲಾಗಿದ್ದರೆ ಇಲ್ಲಿ ರಿಯಾಕ್ಷನ್ ಹೇಗಿರುತ್ತಿತ್ತು. ಕೋಮು ದಳ್ಳುರಿಗೆ ಜಿಲ್ಲೆ ಸಿಲುಕುತ್ತಿರಲಿಲ್ಲವೇ..ಧರ್ಮ ಅಪಾಯದಲ್ಲಿದೆ ಎಂದು ಬೊಬ್ಬಿರಿಯುತ್ತಿರಲಿಲ್ಲವೇ..ಯಾಕೆ ಇಷ್ಟು ತಾರತಮ್ಯ. ತಮ್ಮದೇ ಸಮುದಾಯದ ಹೆಣ್ಣುಮಗುವಿಗೆ ಅದೇ ಸಮುದಾಯದ ವ್ಯಕ್ತಿಗಳಿಂದ ಅನ್ಯಾಯ ನಡೆದಾಗ ಆ ಸಮುದಾಯದ ಧರ್ಮ ರಕ್ಷಕರು ಸೈಲೆಂಟ್ ಆಗುವುದು ಯಾಕೆ.. ಕ್ಷುಲ್ಲಕ ಘಟನೆಗಳಿಗೂ ಮತೀಯ ಬಣ್ಣ ಹಚ್ಚಿ ಪೌರುಷ ತೋರಿಸುವವರ ಮೌನ ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ.