ಉಳ್ಳಾಲದ ಪ್ರಸಿದ್ಧ ಉಳ್ಳಾಲ ಸ್ಪೋಟಿಂಗ್ ಅಸೋಸಿಯೇಷನ್ (ರಿ) ಇದರ ಖ್ಯಾತ ಕ್ರಿಕೇಟ್ ಆಟಗಾರ ನಝೀರ್ ಬಸ್ತಿಪಡ್ಪು ಅರೋಗ್ಯದಲ್ಲಿ ದಿಡೀರ್ ಏರುಪೇರಾದ ಕಾರಣ ಮಂಗಳೂರಿನ ಎರಡು ಪ್ರಮುಖ ಆಸ್ಪತ್ರೆಯಲ್ಲಿ ದಾಖಲಾಗಿ ಅಗತ್ಯ ಇರುವ ಎಲ್ಲಾ ಚಿಕಿತ್ಸೆ ಪಡೆದಿದ್ದರೂ ಇದರ ಮದ್ಯೆ ಸರ್ವಶಕ್ತನ ಕರೆಗೆ ಓಗೊಟ್ಟು ಇಹಲೋಕ ಜೀವನಕ್ಕೆ ವಿಧಾಯ ಹೇಳಿದ್ದಾರೆ.ಮೃತರು ಪತ್ನಿ ಮೂರು ಮಕ್ಕಳನ್ನು ಹಾಗೂ ಅಪಾರ ಸಂಖ್ಯೆಯ ಕುಟುಂಬದ ಸದಸ್ಯರನ್ನು, ಅಭಿಮಾನಿ ಬಳಗವನ್ನು ಅಗಲಿದ್ದಾರೆ.ಸರ್ವಶಕ್ತನು ಅವರ ಪರಲೋಕ ಯಾತ್ರೆಯನ್ನು ವಿಜಯಿಗೊಳಿಸಲಿ.
