ಭಾರತ ಕಮ್ಯುನಿಸ್ಟ್ ಪಕ್ಷದಿಂದ ಐದು ಕ್ಷೇತ್ರದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ರಾಜ್ಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವು ಏಳು ಕ್ಷೇತ್ರಗಳಲ್ಲಿ ಸ್ಪರ್ದಿಸಲಿದ್ದು, ಐದು ಕ್ಷೇತ್ರದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿತು.

ಆಳಂದ ಕ್ಷೇತ್ರದಲ್ಲಿ ಮೌಲಮುಲ್ಲ, ಜೀವರ್ಗಿಯಲ್ಲಿ ಮಹೇಶ್ ಕುಮಾರ್ ರಾಥೋಡ್, ಕೂಡ್ಲಿಗಿಯಲ್ಲಿ ವೀರಣ್ಣ ಎಚ್, ಸಿರಾದಲ್ಲಿ ಗಿರೀಶ್ ಹಾಗೂ ಕೆ.ಜಿ.ಎಫ್ ನಲ್ಲಿ ಜ್ಯೋತಿ ಬಸು ಅವರು ಚುನಾವಣಾ ಕಣಕ್ಕೆ ಇಳಿಯಲಿದ್ದು, ಚಿಕ್ಕಮಗಳೂರು ಮತ್ತು ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಸಿಪಿಐ ಪಕ್ಷದಿಂದ ಸ್ಪರ್ಧಿಸಲಿದ್ದಾರೆಂದೂ ಪಕ್ಷದ ರಾಜ್ಯ ಖಜಾಂಚಿ ಶಿವರಾಜ ರಾ.ಬಿರಾದಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.