ನಾಗರಿಕರಿಗೆ ಕಂಠಕವಾದ ಮಲತ್ಯಾಜ್ಯ ಘಟಕ: ವಿಟ್ಲ ಪ.ಪಂ.ವ್ಯಾಪ್ತಿಯ ಅಪ್ಪೆರಿಪಾದೆ ಬಳಿ ಮಲತ್ಯಾಜ್ಯ ಘಟಕದ ಕಾಮಗಾರಿಗೆ ಶಾಸಕ ಅಶೋಕ್ ರೈ ಬ್ರೇಕ್.

ವಿಟ್ಲ ಪ.ಪಂ.ವ್ಯಾಪ್ತಿಯ ಕಾಶಿಮಠ ಅಪ್ಪೆರಿಪಾದೆಯಲ್ಲಿ 2.40 ಕೋಟಿ ಅನುದಾನದಲ್ಲಿ ಮಲತ್ಯಾಜ್ಯ ಘಟಕದ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿದೆ. ಅಪ್ಪೆರಿಪಾದೆ, ಕಾಶಿಮಠ ಸುತ್ತಮುತ್ತ ದೈವಸ್ಥಾನ, ದೇವರಕಟ್ಟೆ, ಮುನ್ನೂರಕ್ಕೂ ಹೆಚ್ಚು ಬಡಕುಟುಂಬಗಳು ಬದುಕುತ್ತಿವೆ. ಈ ಮಧ್ಯೆ ಸ್ಥಳೀಯರ ಗಮನಕ್ಕೆ ತಾರದೇ ಗುಟ್ಟಾಗಿ ಜನವಸತಿ ಪ್ರದೇಶದಲ್ಲಿ ಮಲತ್ಯಾಜ್ಯ ಘಟಕ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತರಾತುರಿಯಲ್ಲಿ ಘಟಕದ ಕಾಮಗಾರಿ ಆರಂಭವಾಗುತ್ತಿದ್ದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಕ್ಷಣವೇ ಯೋಜನೆ ಕೈಬಿಡುವಂತೆ ಮನವಿ ನೀಡಿದ್ದರು. ಆದರೆ ಸ್ಥಳೀಯರ ಕೂಗು ಅಧಿಕಾರಿಗಳ ಕಿವಿಗೆ […]

Continue Reading

ಅಪ್ರಾಪ್ತ ಪತ್ನಿಯೊಂದಿಗೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ; ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಅಪ್ರಾಪ್ತ ಪತ್ನಿಯೊಂದಿಗೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನ ಪತ್ನಿ ಅತ್ಯಾಚಾರದ ದೂರು ದಾಖಲಿಸಿದ್ದ ವ್ಯಕ್ತಿಗೆ 10 ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಹೈಕೋರ್ಟ್‌ನ ನಾಗ್ಪುರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಒಪ್ಪಿಗೆಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿದೆ ಎಂದು ನಿರ್ದಿಷ್ಟಪಡಿಸಿದ ನ್ಯಾಯಮೂರ್ತಿ ಜಿಎ ಸನಪ್ ಅವರ ಪೀಠ, “18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗೆ ಲೈಂಗಿಕ ಸಂಪರ್ಕವು ಅತ್ಯಾಚಾರ ಎಂದು ಹೇಳಬೇಕಾಗಿದೆ, ಅವಳು ಮದುವೆಯಾಗಿದ್ದರೂ ಅಥವಾ […]

Continue Reading

ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿ ತಿರಸ್ಕೃತ

ಮಳಲಿ ಮಸೀದಿಯ ಜಮೀನಿನ ವಿವಾದಕ್ಕೆ ಸಂಬಂಧಿಸಿ ವಿಹಿಂಪ ಪರವಾಗಿ ಸಲ್ಲಿಸಿದ ಅರ್ಜಿಯೊಂದನ್ನು ಮಂಗಳೂರಿನ ಸಹಾಯಕ ಆಯುಕ್ತರ (ಎ.ಸಿ ಕೋರ್ಟ್) ನ್ಯಾಯಾಲಯ ತಿರಸ್ಕರಿಸಿದೆ. ಈ ಹಿಂದೆ ಮಸೀದಿ ಇರುವ ಜಾಗದ ಆರ್‌ಟಿಸಿಯ ಕಾಲಂ 9ರಲ್ಲಿ ಕಂದಾಯ ಭೂಮಿ ಎಂದು ಉಲ್ಲೇಖೀಸಲಾಗಿತ್ತು. ಆದರೆ ಇತ್ತೀಚೆಗೆ ರಾಜ್ಯದಲ್ಲಿ ಉಂಟಾಗಿರುವ ವಕ್ಫ್ ವಿವಾದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿ ಮಳಲಿ ಮಸೀದಿ ಬಗ್ಗೆಯೂ ಅರ್ಜಿ ಸಲ್ಲಿಸಲಾಗಿತ್ತು. ಈ ಹಿಂದಿನ ದಾಖಲೆ ಬದಲಾಯಿಸಬಾರದು. ಈ ಬಗ್ಗೆ ಸಿವಿಲ್‌ ನ್ಯಾಯಾಲಯದಲ್ಲಿರುವ ವ್ಯಾಜ್ಯ ತೀರ್ಮಾನ ಆಗುವವರೆಗೂ ಯಾವುದೇ ಪ್ರಕ್ರಿಯೆ […]

Continue Reading

ಚನ್ನಪಟ್ಟಣ: ಸಟ್ಟಾ ಬಜಾರ್ ನಲ್ಲಿ ಯಾರ ‘ಕೈ’ ಮೇಲು..? ‘ಸಿಂಪತಿ’ ಮತ ಚಕ್ರವ್ಯೂಹ ಭೇದಿಸುತ್ತಾ..? ಮುಸ್ಲಿಂ ಏರಿಯಾಗಳಲ್ಲಿ ರೆಕಾರ್ಡ್ ಓಟಿಂಗ್.!

ಕರ್ನಾಟಕದ ಮೂರು ವಿಧಾನಸಭಾ ಉಪ ಚುನಾವಣೆಗಳ ಪೈಕಿ ಜಿದ್ದಾಜಿದ್ದಿನ ಹಣಾಹಣಿಗೆ ಕಾರಣವಾಗಿದ್ದ ಚನ್ನಪಟ್ಟಣದಲ್ಲಿ ಯಾರು ಗೆಲ್ಲುತ್ತಾರೆ ಅನ್ನುವ ಬಗ್ಗೆ ಬೆಟ್ಟಿಂಗ್ ದಂಧೆ ಬಲು ಜೋರಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕಿಂತ ಇಲ್ಲಿ ಡಿಕೆಶಿ ಬ್ರದರ್ಸ್ ವರ್ಸಸ್ ಕುಮಾರಸ್ವಾಮಿ ಫ್ಯಾಮಿಲಿ ನಡುವಿನ ಪ್ರತಿಷ್ಠೆಯ ಕಣವಾಗಿ ಪರಿವರ್ತನೆಯಾಗಿತ್ತು. ಇದೀಗ ಚುನಾವಣೆ ಮುಗಿದಿದೆ. ನವೆಂಬರ್ 23 ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ನಡುವೆಯೇ ಕ್ಷೇತ್ರದಲ್ಲಿ ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರಗಳು ರಣೋತ್ಸಾಹ ಮೂಡಿಸಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ […]

Continue Reading

ಸಿಡಿದೆದ್ದ ಕಾಂಗ್ರೆಸ್ ಸದಸ್ಯರು.. ಕಂದಾವರ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿಯವರಿಂದ ಗೂಂಡಾ ಸಂಸ್ಕೃತಿ

ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ನಡೆಗೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ಸಿಗರಿಂದ ಧಿಕ್ಕಾರ ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ಬಿಜೆಪಿಯ ಹಿಡಿತದಲ್ಲಿದೆ. ಪಂಚಾಯತ್ ಆಡಳಿತದ ವೈಫಲ್ಯ ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ಸಾಮಾನ್ಯ ಸಭೆಯಲ್ಲಿ ಸಿಡಿದೆಡ್ಡಿದೆ. ಅಧ್ಯಕ್ಷರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ. ಮಾಜಿ ಪಂಚಾಯತ್ ಅಧ್ಯಕ್ಷೆ ಹಾಲಿ ಸದಸ್ಯರಾದ ವಿಜಯಾ ಸುವರ್ಣ ಪಂಚಾಯತ್ ನಲ್ಲಿ ಬಿಜೆಪಿಯ ಗೂಂಡಾ ಸಂಸ್ಕೃತಿ ಬಗ್ಗೆ ಆಕ್ರೋಶವನ್ನು ಹೊರ ಹಾಕಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ […]

Continue Reading

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ & ಪುಸ್ತಕ ಬಹುಮಾನ ಪ್ರಶಸ್ತಿ ಪ್ರಧಾನ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ 2022 ಮತ್ತು 23ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರಧಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಂಗಳೂರಿನ ಉರ್ವ ಸ್ಟೋರ್ ನಲ್ಲಿರುವ ತುಳು ಭವನದಲ್ಲಿ ಬಿಡುಗಡೆಗೊಳಿಸಿದರು. 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, […]

Continue Reading

ವಿಟ್ಲ ಕಂದಾಯ ನಿರೀಕ್ಷಕರ ಕಛೇರಿಯಲ್ಲಿ ನಡೆದ ದಾಂಧಲೆ ಪ್ರಕರಣ: ಪ್ರಮುಖ ಆರೋಪಿ ಹರೀಶ್ ಶೆಟ್ಟಿ ಕಲ್ಮಲೆ ವಿರುದ್ಧ ಮತ್ತೊಂದು ದೂರು.

ಕಂದಾಯ ಕಛೇರಿಗೆ ನುಗ್ಗಿ ನಿರೀಕ್ಷಕರ ಮೇಲೆ ಅಟ್ಟಹಾಸ ಮೆರೆದು ಪೀಠೋಪಕರಣ ಧ್ವಂಸಗೈದ ಆರೋಪಿಗಳು ಬಂಧನದ ಭೀತಿಯಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ ಪ್ರಮುಖ ಆರೋಪಿ ಹರೀಶ್ ಶೆಟ್ಟಿ ಕಲ್ಮಲೆ ಬಂಟ್ವಾಳ ತಾಲೂಕು ಮಿನಿ ವಿಧಾನಸೌಧದ ಶಿರಸ್ತೇದಾರ್ ಕಛೇರಿಗೆ ಅಕ್ರಮ ಪ್ರವೇಶ ಮಾಡಿ ಅಧಿಕಾರಿಗೆ ನಿಂದಿಸಿ, ಬೆದರಿಕೆ ಹಾಕಿದ ಘಟನೆ ನಡೆದಿದೆ. ವಿಟ್ಲ ಠಾಣೆಯಲ್ಲಿ ನಮ್ಮ ವಿರುದ್ಧ ಕೇಸು ದಾಖಲಿಸಲು ನೀನ್ಯಾಕೆ ಹೋಗಿದ್ದಿ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಎಂದು ಹರೀಶ್ ಶೆಟ್ಟಿ ಕಲ್ಮಲೆ ಶಿರಸ್ತೇದಾರ್ ದಿವಾಕರ ಮುಗುಳ್ಯಗೆ ನಿಂದಿಸಿ ಧಮ್ಕಿ […]

Continue Reading

ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಸಾವು. ಪಾಣೆಮಂಗಳೂರು ಸಮೀಪದ ಬೋಳಂಗಡಿಯಲ್ಲಿ ನಡೆದ ದುರ್ಘಟನೆ.

ಅಡಿಕೆ ಕೊಂಡೊಯ್ಯುತ್ತಿದ್ದ ಕಾರ್ಮಿಕ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಪಾಣೆಮಂಗಳೂರು ಸಮೀಪದ ಬೋಳಂಗಡಿಯಲ್ಲಿ ನಡೆದಿದೆ. ಬೋಳಂಗಡಿ ಮಜಲು ಮನೆ ನಿವಾಸಿ ಜಾನ್ ಲೋಬೋ(45)ಮೃತ ಕಾರ್ಮಿಕ. ಬೋಳಂಗಡಿ ಪದ್ಮನಾಭ ಪ್ರಭುಗಳ ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತರ ಪತ್ನಿ ಸ್ವಪ್ನಾ ಅವರ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಸರ್ಕಾರಿ ಬಸ್ ಕಂಡಕ್ಟರ್ ಗೆ ಪ್ರಯಾಣಿಕನಿಂದ ಕಪಾಳಮೋಕ್ಷ; ಆರೋಪಿ ವಿಟ್ಲ ಪೊಲೀಸರ ವಶಕ್ಕೆ

ಪುತ್ತೂರು-ವಿಟ್ಲ-ಕುಳಾಲು ಮಧ್ಯೆ ಸಂಚರಿಸುವ ಪುತ್ತೂರು ಡಿಪೋಗೆ ಸೇರಿದ KA19F2951 ಸಂಖ್ಯೆಯ ಸರ್ಕಾರಿ ಬಸ್ ನಿರ್ವಾಹಕನಿಗೆ ಪ್ರಯಾಣಿಕನೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಚಿಲ್ಲರೆ ಹಣದ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ನಿರ್ವಾಹಕನ ಮೇಲೆ ಪ್ರಯಾಣಿಕ ಏಕಾಏಕಿ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ವಿಟ್ಲ ಠಾಣೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪ್ರಯಾಣಿಕ ಯಾರು, ಎಲ್ಲಿಯವನೆಂಬ ಬಗ್ಗೆ ಪೊಲೀಸ್ ವಿಚಾರಣೆಯಿಂದ ತಿಳಿದು ಬರಬೇಕಾಗಿದೆ.

Continue Reading

ಧರ್ಮ, ಜಾತಿ ಹೆಸರಿನಲ್ಲಿ ನಿಂದನೆ ಆರೋಪ, ಪುನೀತ್ ಕೆರೆಹಳ್ಳಿಗೆ 14 ದಿನಗಳ ನ್ಯಾಯಾಂಗ ಬಂಧನ

ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ಕಾಲಿಯಾ ಎಂಬ ಪದ ಬಳಕೆ ಮಾಡಿದ್ದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪುನೀತ್ ಕೆರೆಹಳ್ಳಿ ವಿರುದ್ಧ ಧರ್ಮ, ಜಾತಿ ಹೆಸರಿನಲ್ಲಿ ನಿಂದನೆ ಆರೋಪ ಮಾಡಲಾಗಿತ್ತು, ಅಲ್ಲದೆ ಎಫ್​ಐಆರ್ ಕೂಡ ದಾಖಲಿಸಿ ರಾತ್ರೋರಾತ್ರಿ ಬಂಧನ ಮಾಡಲಾಗಿದೆ.ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ಸಹಾಯಕ ಬಿ. ಎಸ್. ಅಶೋಕ್ ಅವರು ಪುನೀತ್ ಕೆರೆಹಳ್ಳಿ […]

Continue Reading