ಕೆಐಎಡಿಬಿ ಹಗರಣ; ED ತನಿಖಾ ಪ್ರಕ್ರಿಯೆ ಹಿನ್ನೆಲೆ ಎಚ್ಚತ್ತುಕೊಂಡ ಸಿದ್ದು ಸರ್ಕಾರ; ತನಿಖೆಗೆ ನಿರ್ದೇಶನ

ಬೆಂಗಳೂರು: ರಾಜ್ಯದ ಆಡಳಿತ ವರ್ಗದಲ್ಲಿ ಸಂಚಲನ ಸೃಷ್ಟಿಸಿರುವ ಕೆಐಎಡಿಬಿ ಹಗರಣ ಆರೋಪ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದೆ. ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಭೂ ಪರಿಹಾರ ವಿತರಣೆ ಕುರಿತಂತೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಏನಿದು ಆರೋಪ? ದೇವನಹಳ್ಳಿ ಸುತ್ತಮುತ್ತ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ಹಣ ವಿತರಣೆಯಲ್ಲಿ ಅವ್ಯವಹಾರ […]

Continue Reading

ಗುಂಡಿನ ಚಕಮಕಿ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿ. ವಿಕ್ರಂ ಗೌಡ ಕಬ್ಬಿನಾಲೆ ಮೂಲದವರು.

ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯದಂಚಿನ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆ ತೀವ್ರಗೊಂಡಿದ್ದು, ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆಯಲ್ಲಿ ಎನ್​ಕೌಂಟರ್ ನಡೆದಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಎಂಬಾತನನ್ನು ನಕ್ಸಲ್ ನಿಗ್ರಹ ಪಡೆ ಹತ್ಯೆ ಮಾಡಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಕಬ್ಬಿನಾಲೆ ಮೂಲದವನಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಆರಂಭಿಸಿತ್ತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಎನ್‌ಆರ್ ಪುರ ಹಾಗೂ […]

Continue Reading

ಮದ್ಯದ ನಶೆಯಲ್ಲಿ ಹಾವು ಹಿಡಿಯಲು ಹೋಗಿ ಪ್ರಾಣತೆತ್ತ ಯುವಕ; ವಿಟ್ಲದಲ್ಲೊಂದು ಬಡಕುಟುಂಬದ ಯುವಕನ ದಾರುಣ ಅಂತ್ಯ.

ಕುಡಿತದ ಮತ್ತಿನಲ್ಲಿ ಹಾವು ಹಿಡಿಯಲು ಹೋದ ಯುವಕನ ಕೈಗೆ ಹಾವು ಕುಡಿದು ಪರಾರಿಯಾದ ಘಟನೆ ವಿಟ್ಲ ಸಮೀಪ ನಡೆದಿದೆ. ಹಾವು ಕಡಿದು ಕೈಯಲ್ಲಿ ರಕ್ತ ಸೋರುತ್ತಿದ್ದರೂ ಯುವಕನ ನಿರ್ಲಕ್ಷ್ಯ ಹಾಗೂ ಸ್ಥಳೀಯರ ಬೇಜವಾಬ್ದಾರಿಯಿಂದಾಗಿ ಬಡಕುಟುಂಬದ ಯುವಕ ಸಾವನ್ನಪ್ಪಿದ್ದಾನೆ. ವಿಟ್ಲ ಸಮೀಪದ ಮಂಗಲಪದವು ನವಗ್ರಾಮದ ಅಬ್ಬು ಎಂಬವರ ಮನೆ ಪರಿಸರದಲ್ಲಿ ನಾಗರಹಾವು ಬಂದಿದೆ.ಹಾವನ್ನು ಕಂಡ ಸ್ಥಳೀಯರು ಬೊಬ್ಬೆ ಹೊಡೆಯುತ್ತಿದ್ದಂತೆ ಪಕ್ಕದ ಮನೆಯಲ್ಲಿದ್ದ ಪೆರುವಾಯಿ ನಿವಾಸಿ ಸುರೇಶ್ ನಾಯ್ಕ ಬಂದಿದ್ದಾನೆ. ಒಂದಿಷ್ಟು ಮದ್ಯದ ನಶೆಯಲ್ಲಿದ್ದ ಆತ ಹಾವನ್ನು ಹಿಡಿಯುತ್ತೇನೆಂದು ಕೈ […]

Continue Reading

ಪ್ರವಾಸಿಗರಿಗೆ ಮಂಗಳೂರು ಸೇಫಲ್ಲ.!

ಈಜುಕೊಳದಲ್ಲಿ ನೀರಾಟಕ್ಕಿಳಿದು ನಡೆದಿದೆ ಡಜನ್ ಗಟ್ಟಲೆ ಸಾವು ರೆಸಾರ್ಟ್ ನಿರ್ಲಕ್ಷ್ಯ, ಜಿಲ್ಲಾಡಳಿತ ವೈಫಲ್ಯಕ್ಕೆ ಇನ್ನೆಷ್ಟು ಬಲಿ ಬೇಕು..? ಸ್ವಿಮ್ಮಿಂಗ್ ಪೂಲ್ ಈಜಾಟ ಅದು ತಮ್ಮ ಬದುಕಿಗೆ ಅಂತ್ಯ ಹಾಡುತ್ತದೆ ಎಂದು ಅವರು ಅಂದುಕೊಂಡಿರಲಿಕ್ಕಿಲ್ಲ. ಚೆಕ್ ಔಟ್ ಗೆ ಇನ್ನೂ ಒಂದು ಗಂಟೆ ಬಾಕಿ ಇರುವಾಗಲೇ ನೀರಾಟಕ್ಕಿಳಿದ ಆ ಮೂವರು ಯುವತಿಯರ ಬಾಳಿಗೆ ಈಜುಕೊಳವೇ ಯಮನಾಗಿಬಿಟ್ಟಿತು. ವೀಕೆಂಡ್ ರಜೆಯನ್ನು ಎಂಜಾಯ್ ಮಾಡಲು ಬಂದವರು ವಿಲವಿಲ ಒದ್ದಾಡಿ ಪ್ರಾಣಬಿಟ್ಟರು. ಈ ಸಾವಿಗೆ ನ್ಯಾಯವಿಲ್ಲವೇ? ಮೈಸೂರಿನ ದೇವರಾಜ ಮೊಹಲ್ಲಾದ ಕೀರ್ತನಾ, ಕುರುಬರಹಳ್ಳಿಯ […]

Continue Reading

ದೇವಸ್ಥಾನದ ಗರ್ಭಗುಡಿಯೊಳಗೆ ಅರ್ಚಕರಿಬ್ಬರ ಪರಸ್ಪರ ಬಡಿದಾಟ

ಅರ್ಚಕರಿಬ್ಬರು ದೇವಸ್ಥಾನದ ಗರ್ಭ ಗುಡಿಯೊಳಗೆ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಕಲಬುರಗಿಯ ಗಾಣಗಾಪುರದಲ್ಲಿ ನಡೆದಿದೆ. ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದ ಭಕ್ತರಿಗೆ ದರ್ಶನದ ಲೈನ್ ಬಿಡೋ ವಿಚಾರದಲ್ಲಿ ಅರ್ಚಕರಾದ ಕಿರಣ್ ಭಟ್ ಪೂಜಾರಿ ಮತ್ತು ವಲ್ಲಭಟ್ ಪೂಜಾರಿ ಎಂಬುವವರ ಮಧ್ಯೆ ಪೈಟಿಂಗ್ ನಡೆದಿದೆ. ಇಬ್ಬರ ಅರ್ಚಕರ ಮಧ್ಯೆ ತಮ್ಮ ಕಡೆಯವರ ಭಕ್ತರಿಗೆ ಮೊದಲು ಬಿಡಬೇಕು.. ಇಲ್ಲಾ ನಮ್ಮ ಕಡೆಯವರ ಭಕ್ತರಿಗೆ ಮೊದಲು ಬಿಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಜಗಳ ಶುರುವಾಗಿ ಪರಸ್ಪರ ಹೊಡೆದಾಟ ನಡೆಸಿದ್ದಾರೆ. […]

Continue Reading

ಮಾರುತಿ ಸ್ವಿಫ್ಟ್ ಕಾರು ಡಿವೈಡರ್ ಜಂಪ್. ಓರ್ವ ಮೃತ್ಯು, ನೆಲ್ಯಾಡಿ ಬಳಿ ಭೀಕರ ಅಪಘಾತ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ KA-19 Z 7497 ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರು ಡಿವೈಡರ್ ಜಂಪ್ ಮಾಡಿದೆ. ಅಪಘಾತದ ತೀವ್ರತೆಗೆ ಕಾರು ಛಿದ್ರಗೊಂಡಿದ್ದು ಓರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕುಂಬ್ರ ನಿವಾಸಿಯೆಂದು ತಿಳಿದು ಬಂದಿದ್ದು ನೆಲ್ಯಾಡಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಇನ್ನಷ್ಟೇ ತಿಳಿಯಬೇಕಾಗಿದೆ.

Continue Reading

ಆರ್‌ಎಸ್‌ಎಸ್‌ ಕೋಮ ದ್ರವೀಕರಣದ ಸಾಂಸ್ಕೃತಿಕ ರಾಜಕಾರಣಕ್ಕೆ ಮಾರ್ಕ್ಸ್ ವಾದವೇ ಉತ್ತರ – ಯು. ಬಸವರಾಜ್

ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಸಿಪಿಐಎಂ ಇದರ 24ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯುತ್ತಿದ್ದು ಈ ಸಮ್ಮೇಳವನ್ನು ಉದ್ಘಾಟಿಸಿ ಸಿಪಿಐಎಂ ನ ರಾಜ್ಯ ಕಾರ್ಯದರ್ಶಿಯಾದ ಯು. ಬಸವರಾಜ್ ಮಾತನಾಡುತ್ತಾ ಆರ್ ಎಸ್ ಎಸ್ ತನ್ನ ಭಾಷಣಗಳಲ್ಲಿ ಮಾರ್ಕ್ಸ್ ವಾದವನ್ನು ಸದಾ ಅಲ್ಲಗಳೆಯುತ್ತದೆ,ವಿಮರ್ಶಿಸುತ್ತದೆ ಯಾಕೆಂದರೆ ಆರ್ ಎಸ್ ಎಸ್ ಸಿದ್ದಾಂತಗಳಿಗೆ ಮಾರ್ಕ್ಸ್ ವಾದದ ಭಯವಿದೆ ಆರ್ ಎಸ್ ಎಸ್ ನ ಕೋಮು ದೃವೀಕರಣದ ಮತ್ತು ಜನತೆಯನ್ನು ಬೌದ್ಧಿಕ ಗುಲಾಮಗಿರಿಗೆ ತಳ್ಳುವ […]

Continue Reading

ಮಂಗಳೂರು: ವಿಡಿಯೋ ಹುಚ್ಚು; ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವು

ಮಂಗಳೂರು: ವಿಡಿಯೋ ಹುಚ್ಚಿಗಾಗಿ ರೆಸಾರ್ಟ್‌ವೊಂದರ ಈಜುಕೊಳಕ್ಕಿಳಿದ ಮೈಸೂರಿನ ಮೂವರು ಯುವತಿಯರು ಮುಳುಗಿ ಮೃತಪಟ್ಟ ಘಟನೆ ಉಳ್ಳಾಲ ಬಳಿಯ ಸೋಮೆಶ್ವರ ರೆಸಾಟಿನಲ್ಲಿ ನಡೆದಿದೆ. ಉಳ್ಳಾಲದ ಸೋಮೇಶ್ವರದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಮೈಸೂರು ದೇವರಾಜ ಮೊಹಲ್ಲಾದ ಕೀರ್ತನಾ ಎನ್ (21), ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್‌ ನಿವಾಸಿ ನಿಶಿತಾ ಎಂ.ಡಿ (21) ಹಾಗೂ ಮೈಸೂರು ಕೆ.ಆ‌ರ್.ಮೊಹಲ್ಲ ರಾಮಾನುಜ ರಸ್ತೆಯ 11ನೇ ಕ್ರಾಸ್‌ ನಿವಾಸಿ ಪಾರ್ವತಿ ಎಸ್ (20) ಮೃತಪಟ್ಟ ಯುವತಿಯರು. ಮೂರು ಮಂದಿ ಯುವತಿಯರು ಮೈಸೂರಿನವರು […]

Continue Reading

ಉಡುಪಿ: ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಪುತ್ರನ ಥಾರ್ ಜೀಪ್ ಓವರ್ ಸ್ಪೀಡಿಗೆ ರಿಕ್ಷಾ ಚಾಲಕ ದುರ್ಮರಣ

ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ದೇವಿಪ್ರಸಾದ್ ಶೆಟ್ಟಿ ಪುತ್ರ ಪ್ರಜ್ವಲ್ ಶೆಟ್ಟಿ ಚಲಾಯಿಸುತ್ತಿದ್ದ ಐಷಾರಾಮಿ ಥಾರ್ ಜೀಪ್ ಓವರ್ ಸ್ಪೀಡ್ ಗೆ ರಿಕ್ಷಾ ಚಾಲಕನೊಬ್ಬ ಮೃತಪಟ್ಟ ಘಟನೆ ಉಡುಪಿ ಶಿರ್ವ ಬೆಳಪು ಮಿಲಿಟ್ರಿ ಕಾಲೋನಿಯಲ್ಲಿ ನಡೆದಿದೆ. ಕಾಪು ತಾಲೂಕಿನ ಬೆಳಪು ಮಿಲಿಟ್ರಿ ಕಾಲೋನಿಯಲ್ಲಿ ನಡೆದ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಜ್ವಲ್ ಶೆಟ್ಟಿ ಯನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಬೆಳಗಿನ ಜಾವ ಬೈಕಿನಲ್ಲಿ ಹೋಗುತ್ತಿದ್ದ ಬೆಳಪು ನಿವಾಸಿ ಮುಹಮ್ಮದ್ ಹುಸೈನ್ ಮೃತ ದುರ್ದೈವಿ. ಶಿರ್ವ […]

Continue Reading

ಫ್ಯಾಕ್ಟ್ ಚೆಕ್| ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ವಿವಾಹವಾಗಿದ್ದು ಸಿಂಧಿ ಹಿಂದೂ ಯುವಕ ಅನಿಶ್. ಆತ ಮುಸ್ಲಿಂ ಅಲ್ಲ.!

ಈಗಿನ ಜಮಾನದ್ದು ಸೋಷಿಯಲ್ ಮೀಡಿಯಾ ಯುಗ. ಯಾವುದು ಸತ್ಯ, ಯಾವುದು ಸುಳ್ಳು ಅನ್ನುವುದು ಗೊತ್ತಾಗುವ ಮುನ್ನವೇ ವೈರಲ್ ಆಗಿ ಬಿಡುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಬರುವುದೇ ನಿಜವೆಂದು ನಂಬಿ ಫಾರ್ವರ್ಡ್ ಮಾಡಿ ಬಿಡುತ್ತಾರೆ. ಆದರೆ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಕೋಟಾದ ಉದ್ಯಮಿಯೋರ್ವರ ಪುತ್ರ ಮೊಹಮ್ಮದ್ ಅನೀಶ್ ಎಂಬ ಮುಸ್ಲಿಂ ಯುವಕನನ್ನು ವಿವಾಹವಾಗಿದ್ದಾರೆ ಎಂದು ಪೋಸ್ಟ್ ವೈರಲ್ ಆಗಿತ್ತು. ಆದರೆ ಇದರ ಸತ್ಯಾಂಶ ತಿಳಿದಾಗ ವೈರಲ್ ಆಗಿರುವ […]

Continue Reading