ಮಂಗಳೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.35 ಕೋಟಿ ರೂಪಾಯಿ ಪರಿಹಾರ ನೀಡಲು ವಿಮಾ ಕಂಪೆನಿಗೆ ಮಹತ್ವದ ಆದೇಶ

ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ 1.35 ಕೋಟಿ ರೂಪಾಯಿ ಪರಿಹಾರ ನೀಡಲು ವಿಮಾ ಕಂಪನಿಗೆ ಆದೇಶಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀ ಜೆ.ಎಂ ತೀರ್ಪು ನೀಡಿದ್ದಾರೆ. ಪಣಂಬೂರಿನ ಎಂಸಿಎಫ್ ಸಂಸ್ಥೆಯಲ್ಲಿ ಉದ್ಯೋಗಿ ಯಾಗಿದ್ದು, 2018 ರ ಮೇ 18 ರಂದು ಮಹೇಶ್ ಭಟ್ ಎಂಬವರು ಬೈಕ್ ನಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ರಾಜಸ್ಥಾನ ನೋಂದಣಿಯ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಮಹೇಶ್ ಭಟ್ ಮೃತಪಟ್ಟಿದ್ದರು. ಮಂಗಳೂರಿನ 1ನೇ […]

Continue Reading

ಲೋಕಾಯುಕ್ತ ವಿಶೇಷ ನ್ಯಾಯಾಲಯವು ಹಲವು ಪ್ರಕರಣಗಳಲ್ಲಿ ಕೆಟ್ಟ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಖುಲಾಸೆಗೊಳಿಸಿದೆ

ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಪ್ರಮುಖ ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸುವಷ್ಟು ದಿಟ್ಟತನ ತೋರಿದ್ದಾರೆ: ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ಕೆಟ್ಟ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಪ್ರಮುಖ ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸುವಷ್ಟು ದಿಟ್ಟತನ ತೋರಿದ್ದಾರೆ ಎಂದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ. ಪ್ರಮುಖ ಆರೋಪಿಗಳು ಮತ್ತು ಪ್ರಭಾವಿ ಅಧಿಕಾರಿಗಳ ಪರವಾಗಿ […]

Continue Reading

ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದಿಂದ ನಿವೇಶನ ವಾಪಾಸ್; ಬಿ.ಜೆ.ಪಿ, ಜೆ.ಡಿ.ಎಸ್ ನಾಯಕರು ಯಾವಾಗ..?: ವೈ.ಬಿ.ಚಂದ್ರಕಾಂತ್

ಮೂಡ ಪ್ರಕರಣದಲ್ಲಿ ಸುಳ್ಳನ್ನೆ ಸಾವಿರ ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದ ಬಿ.ಜೆ.ಪಿ.,ಜೆ.ಡಿ.ಎಸ್ ಪಕ್ಷಗಳ ಭ್ರಷ್ಠ ನಾಯಕರ ಮುಖವಾಡ ಕಳಚುವ ದೃಢ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದು, ಪತಿಯ ಈ ನಿರ್ಧಾರಕ್ಕೆ ಅವರ ಪತ್ನಿ ಪಾರ್ವತಿಯವರು ಕೈಜೋಡಿಸಲು ತಾವು ಪಡೆದಿದ್ದ 14 ನೀವೇಶನಗಳನ್ನು ಮೂಡಾಕ್ಕೆ ಮರಳಿಸಿದ್ದಾರೆ. ಆದರೆ ಈಗ ಬಿ.ಜೆ.ಪಿ, ಜೆ.ಡಿ.ಎಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ತಮ್ಮ ಅಕ್ರಮ ಜಮೀನು, ನಿವೇಶನಗಳನ್ನು ಯಾವಾಗ ವಾಪಾಸ್ ಮಾಡುವರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ವಿರೋಧ ಪಕ್ಷಗಳಿಗೆ […]

Continue Reading

ಹೊಡೆಯೋ ದಮ್ಮು.. ‘ಅಮಲಿ’ನಲ್ಲಿ ಮಕ್ಕಳು.!

ಚಿಕ್ಕಮಗಳೂರು ಹಾಸ್ಟೆಲ್ ಮಕ್ಕಳ ನಶೆಯಾಟ.! ಸಿಗರೇಟ್ ಸೇದಿಕೊಂಡು, ಬಿಯರ್ ಹೊಡೆಯುತ್ತಾ, ವೈಟರ್ ಸ್ಮೈಲ್ ಎಳೆದುಕೊಂಡು ಆವಾಂತರ ಸೃಷ್ಟಿಸಿದ ಘಟನೆ ಚಿಕ್ಕಮಗಳೂರು ವಸತಿ ಶಾಲೆಯೊಂದರಲ್ಲಿ ವರದಿಯಾಗಿದೆ. ಬಡತನದ ಕಾರಣಕ್ಕೆ ಹಾಸ್ಟೆಲ್ ನಲ್ಲಿ ಓದುವ ಪ್ರೌಢಶಾಲೆ ವಿದ್ಯಾರ್ಥಿಗಳು ಮದ್ಯ, ತಂಬಾಕಿನ ದಾಸರಾಗಲು ಹೊರಟಿರುವ ಬೆಳವಣಿಗೆ ಚಿಕ್ಕಮಗಳೂರಿನ ವಸತಿ ಶಾಲೆಯೊಂದರಲ್ಲಿ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಬಾಲಕರು ಕೊಠಡಿಯಲ್ಲಿ ಗಲಾಟೆ ಮಾಡುತ್ತಿರುವುದು ಕಂಡ ಭದ್ರತಾ ಸಿಬ್ಬಂದಿ, ಕೊಠಡಿ ಬಳಿ ಹೋದಾಗ ಧೂಮಪಾನದ ವಾಸನೆ ಬಂತು. ಬಾಗಿಲು ತೆಗೆಸಿ ಕೊಠಡಿ ಪರಿಶೀಲನೆ ಮಾಡಿದಾಗ 9 […]

Continue Reading

ಮತ್ತೊಂದು ಬೃಹತ್ ಭೂ ಅಕ್ರಮ ಲೋಕಾಯುಕ್ತದಲ್ಲಿ ದೂರು ದಾಖಲು

ಬರೋಬ್ಬರಿ 300 ಕೋಟಿ ಸರ್ಕಾರಿ ಜಮೀನು ಪರಭಾರೆ ಮಾಡಿರುವ ಕುರಿತು ಲೋಕಾಯುಕ್ತದಲ್ಲಿ ದಾಖಲೆಗಳ ಸಮೇತ ದೂರು ಬೆಂಗಳೂರು ನಗರ ಜಿಲ್ಲಾಡಳಿತದಲ್ಲಿ ಮತ್ತೊಂದು ಬೃಹತ್ ಭೂ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶ್ರೀನಿವಾಸ್ ಹಾಗೂ ವಿಶೇಷ ತಹಶೀಲ್ದಾರ್ ನಾಗರಾಜ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಬರೋಬ್ಬರಿ 300 ಕೋಟಿ ಸರ್ಕಾರಿ ಜಮೀನು ಪರಭಾರೆ ಮಾಡಿರುವ ಕುರಿತು ಲೋಕಾಯುಕ್ತದಲ್ಲಿ ದಾಖಲೆಗಳ ಸಮೇತ ದೂರು ದಾಖಲಾಗಿದೆ. ಬೆಂಗಳೂರು […]

Continue Reading

ಮೂಡಬಿದಿರೆ: ಗುಂಡುಕಲ್ಲು ಮೊಹಿಯುದ್ದೀನ್ ಜುಮ್ಮಾ ಮಸೀದಿ ಚುನಾವಣೆ ಮುಂದಕ್ಕೆ.!

ಮೂಡಬಿದಿರೆಯ ಪಡುಮಾರ್ನಾಡು ಗುಂಡುಕಲ್ಲು ಮೊಹಿಯುದ್ದೀನ್ ಜುಮ್ಮಾ ಮಸೀದಿ ಜಮಾಅತಿನಲ್ಲಿ ಕೆಲವು ಸಮಯಗಳಿಂದ ಸುನ್ನೀ ಸಂಘಟನೆಯ ಎರಡು ವಿಭಾಗಗಳ ಮಧ್ಯೆ ಭಿನ್ನಮತ ತಾರಕಕ್ಕೇರಿತ್ತು. ಇಲ್ಲಿ ಹಿಂದಿನಿಂದಲೂ ಇ.ಕೆ ವಿಭಾಗದ ಪಠ್ಯಕ್ರಮ ಸಿಲೆಬಸ್ ಹಾಗೂ ಇ.ಕೆ ವಿಭಾಗದ ಜಮಾಅತ್ ಹೆಚ್ಚಿರುವುದರಿಂದ ಇನ್ನೊಂದು ವಿಭಾಗ ಮಸೀದಿ ಆಡಳಿತ ಸಮಿತಿಯನ್ನು ವಶಪಡಿಸಲು ಮುಂದಾಗಿತ್ತು. ದ.ಕ ಜಿಲ್ಲಾ ವಕ್ಫ್ ಸಮಿತಿಯ ಮಧ್ಯಸ್ಥಿಕೆಯನ್ನು ಕೋರಿತ್ತು. ಜಿಲ್ಲಾ ವಕ್ಫ್ ಗುಂಡುಕಲ್ಲು ಜಮಾಅತಿ ಆಡಳಿತ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಅಡಳಿತಧಿಕಾರಿಯನ್ನಾಗಿ ಬೆಳ್ತಂಗಡಿಯ ಮಹಮ್ಮದ್ ರಫೀ ಎಂಬವರನ್ನು ನೇಮಕ ಮಾಡಿ, ಚುನಾವಣೆಗೆ […]

Continue Reading

ಮಂಗಳೂರು: ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣ; ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು

ಉರ್ವ ಠಾಣೆಯ ಕಾನ್‌ಸ್ಟೆಬಲ್‌ ವೆಂಕಟೇಶ್‌ ಎಂಬವರನ್ನು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಂಕಟೇಶ್‌ ಎಂಬವರು ಉರ್ವ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ರಾತ್ರಿ ಸುಮಾರು 10.30ರ ವೇಳೆ ಹೆಡ್‌ ಕಾನ್‌ಸ್ಟೆಬಲ್‌ ಪುಷ್ಪರಾಜ್‌ ಅವರು ಕೊಟ್ಟಾರ ಚೌಕಿಯ ಬಳಿಯ ಪಿಜಿ ಒಂದರಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವೆಂಕಟೇಶ್‌ ಅವರು ಬೀಟ್‌ ಕರ್ತವ್ಯ ಸಿಬಂದಿಯವರಾದ ಬಾಳೆಗೌಡ ಮೊಕಾಶಿ ಮತ್ತು ಎಚ್‌.ಜಿ ರೋಹಿದಾಸ್‌ ಅವರಿಗೆ ಈ ವಿಚಾರ […]

Continue Reading

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಮೇಲೆ ರಾಜಕೀಯ ದಾಳಿ.! ಸಮಾಜದ ಹೊಣೆಗಾರಿಕೆ ಏನು.?

ತನಿಖೆಯ ದಾರಿ ತಪ್ಪಿಸಲು, ತನಿಖಾಧಿಕಾರಿಯನ್ನು ಬೆದರಿಸಲು ರೌಡಿಶೀಟರ್ ಪ್ರಕರಣವನ್ನು ಕೇಂದ್ರದ ಸಚಿವರು ಉದ್ದೇಶಪೂರ್ವಕವಾಗಿ ಬಳಸಿಕೊಂಡರೇ.? “‘ಲೋಕಾಯುಕ್ತದ ರಕ್ಷಣೆ’ ಎಂದು ಆಗಾಗ ಬೀದಿಗಿಳಿದ/ಚರ್ಚಿಸಿದ ನಾಗರಿಕ ಸಮಾಜವು ಲೋಕಾಯುಕ್ತದ ಮೇಲೆ ದಾಳಿ ಆಗುವಾಗಲೂ ಪ್ರತಿಕ್ರಿಯೆ ನೀಡುವುದು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಲೋಕಾಯುಕ್ತದ ಎಡಿಜಿಪಿಯಾಗಿರುವ ಚಂದ್ರಶೇಖರ್ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಕೆಲಸ ಮಾಡಿದವರು. ಕೋಮುಗ್ರಸ್ತ ಕರಾವಳಿಯಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ನಾಲ್ವರು ಐಪಿಎಸ್ ಗಳನ್ನು ಅಲ್ಲಿಯ ಜನ ನೆನಪಿಟ್ಟುಕೊಳ್ಳುತ್ತಾರೆ. ಡಾ. ಸುಬ್ರಹ್ಮಣ್ಯೇಶ್ವರ ರಾವ್, ಗೋಪಾಲ್ ಹೊಸೂರು, ಅಮಿತ್ ಸಿಂಗ್ ಮತ್ತು ಚಂದ್ರಶೇಖರ್ ಈ […]

Continue Reading

ಮನೆಯಂಗಳದಲ್ಲೇ ಕಾರಿನಡಿಗೆ ಬಿದ್ದು ಬಾಲಕ ಮೃತ್ಯು; ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡ ಬಳಿ ದುರ್ಘಟನೆ.

ಮನೆಯಂಗಳದಲ್ಲಿ ಮಹಿಳೆಯೊಬ್ಬರು ಕಾರು ಹಿಂದಕ್ಕೆ ತೆಗೆಯುವ ಸಂದರ್ಭ ಮನೆಯ ಮಗುವೇ ಕಾರಿನಡಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕೊಕ್ಕಡ ಮಲ್ಲಿಗೆ ಮಜಲು ಎಂಬಲ್ಲಿ ನಡೆದಿದೆ. ಮಲ್ಲಿಗೆ ಮಜಲು ನಿವಾಸಿ ಅಬ್ದುಲ್ ಹಮೀದ್ ಪುತ್ರ ನವಾಫ್ ಇಸ್ಮಾಯಿಲ್ ಮೃತ ಬಾಲಕ.! ಮನೆಯ ಮಹಿಳೆಯೊಬ್ಬರು ಅಂಗಳದಲ್ಲೇ ಕಾರು ಹಿಂದಕ್ಕೆ ತೆಗೆಯುವ ಸಂದರ್ಭ ಆಕಸ್ಮಿಕವಾಗಿ ಮುಂದಕ್ಕೆ ಚಲಾಯಿಸಿ ಡಿಕ್ಕಿ ಹೊಡೆದಿದೆ. ಶಾಲೆ ಬಿಟ್ಟು ಆಗಷ್ಟೇ ಮನೆಗೆ ಬಂದಿದ್ದ ಬಾಲಕ ನವಾಫ್ ಕಾರಿನಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ […]

Continue Reading

ಮೂಡಬಿದ್ರೆ: ಬೆಂಗಳೂರು ಬಿಟ್ಟರೆ ದಕ್ಷಿಣ ಕನ್ನಡ ಜಿಲ್ಲೆ ಡ್ರಗ್ಸ್ ನಲ್ಲಿ ಎರಡನೇ ಸ್ಥಾನ

ಗಾಂಜಾ, ಡ್ರಗ್ಸ್ ಪಿಡುಗನ್ನು ಸಂಘಟಿತ ಹೋರಾಟದಿಂದ ಮಣಿಸೋಣ: ಇನ್ಸ್ ಪೆಕ್ಟರ್ ಸಂದೇಶ್ ನೂರುಲ್ ಇಸ್ಲಾಂ ಮದ್ರಸ ಈದ್ಗಾ ಮೂಡುಬಿದಿರೆ, ಈದ್ಗಾ ಫ್ರೆಂಡ್ಸ್ ಈದ್ಗಾ ಹಾಗೂ SKSSF ಈದ್ಗಾ ಯುನಿಟ್ ಇದರ ವತಿಯಿಂದ ‘ಇಶಲ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡುಬಿದಿರೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜೆ ಡ್ರಗ್ಸ್, ಗಾಂಜಾ ಪಿಡುಗಿಗೆ ಯುವ ಜನತೆ ಬಲಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಶೇಕಡಾ 50 ರಷ್ಟು ಡ್ರಗ್ಸ್ ದಂಧೆ ಇದ್ದರೆ, ಉಳಿದ ಶೇಕಡಾ 28 ರಷ್ಟು ದಕ್ಷಿಣ ಕನ್ನಡ […]

Continue Reading