ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ; “ಇದು ಕಲಾಪ ನಡೆಸುವ ರೀತಿನಾ? ಗಲಾಟೆ ಮಾಡುವವರನ್ನು ಎತ್ತಿ ಹೊರಗೆ ಹಾಕಿಸಿ

ಸ್ಪೀಕರ್ ಖಾದರ್ ಅವರ ಕಾರ್ಯವೈಖರಿಗೆ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ಅಧಿವೇಶನದಲ್ಲಿ ನಡೆದಿದೆ. ಅಬಕಾರಿ ಕಿಕ್ ಬ್ಯಾಕ್ ಪ್ರಕರಣದ ಚರ್ಚೆ ಹಾಗೂ ಮನರೇಗ ಸಂಬಂಧ ನಿರ್ಣಯ ಮಂಡನೆ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರು ಅಡ್ಡಿಪಡಿಸಿದ ಬಗ್ಗೆ ಸ್ಪೀಕರ್ ಖಾದರ್ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ತಾಳಿರುವುದನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೀಕರ್ ವಿರುದ್ಧವೇ ಕೆಂಡಾಮಂಡಲರಾದರು. ಇತ್ತೀಚೆಗೆ ಕಲಾಪದಲ್ಲಿ ದುರ್ವತನೆ ತೋರಿದ ಬಿಜೆಪಿ ಹಾಗೂ ಜೆಡಿಎಸ್ ನ ಹದಿನಾರರಷ್ಟು ಸದಸ್ಯರನ್ನು ಸ್ಪೀಕರ್ ಖಾದರ್ ಶಿಸ್ತು ಕ್ರಮ ಕೈಗೊಂಡಿದ್ದರು. […]

Continue Reading

ಪಿಲಿಕುಳ ಪ್ರಾಣಿ ಸಂಗ್ರಾಲಯಕ್ಕೆ ಬೀಗ: ಹೈಕೋರ್ಟ್ ಮಹತ್ವದ ಆದೇಶ

ಕರಾವಳಿಯ ಏಕೈಕ ನಿಸರ್ಗಧಾಮ ಆಗಿದ್ದ ಪಿಲಿಕುಳ ಪ್ರಾಣಿ ಸಂಗ್ರಾಲಯ ಇನ್ನು ನೆನಪು ಮಾತ್ರ: ಇಲ್ಲಿನ ಪ್ರಾಣಿಗಳ ತೆರವಿಗೆ ನಡೆಯುತ್ತಿದೆ ಕೆಲಸ ಕಾರ್ಯ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕೈಕ ಪ್ರಾಣಿಗಳ ಸಂಗ್ರಾಲಯ ಆಗಿದ್ದ ಪಿಲಿಕುಳ ZOO ಇನ್ನೂ ನೆನಪು ಮಾತ್ರ.‌ ಮಕ್ಕಳಿಗೂ ಕುಟುಂಬಗಳಿಗೂ ಜನಪ್ರಿಯವಾದ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮ, ಆಡಳಿತದ ನಿರ್ಲಕ್ಷ್ಯ ಹಾಗೂ ಜವಾಬ್ದಾರಿಹೀನತೆಯ ಆರೋಪಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ತೀವ್ರ ಟೀಕೆಗೆ ಗುರಿಯಾಗಿದೆ. ಕರಾವಳಿಯ ಪ್ರಸಿದ್ಧ ZOO ನಲ್ಲಿ ನಡೆದಿರುವ ದುರುಪಯೋಗವನ್ನು ಕಂಡು ಆಘಾತಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳು, […]

Continue Reading

ಜಾತಕದ ನೆಪ; ಎಸ್‌ಸಿ ಸಮುದಾಯದ ಯುವತಿಗೆ ದೇವಸ್ಥಾನದ ಅರ್ಚಕನಿಂದ ಲೈಂಗಿಕ ದೌರ್ಜನ್ಯ, ಪ್ರಕರಣ ದಾಖಲು

ಮದುವೆ ಜಾತಕ ತೋರಿಸುವ ನೆಪದಲ್ಲಿ ಎಸ್‌ಸಿ ಸಮುದಾಯದ ಯುವತಿಗೆ ದೇವಾಲಯದ ಅರ್ಚಕನಿಂದ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಮೂಡಿಗೆರೆ ಪರಿಸರದಲ್ಲಿ ಬೆಳಕಿಗೆ ಬಂದಿದೆ.ಹೊರಟ್ಟಿ ಗ್ರಾಮದ ಪಾರ್ವತಿ ಈಶ್ವರ ದೇವಸ್ಥಾನದ ಅರ್ಚಕ ಕೃಷ್ಣ ರಾವ್ ವಿರುದ್ಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. 23 ವರ್ಷದ ಎಸ್‌ಸಿ ಸಮುದಾಯದ ಯುವತಿ ನೀಡಿರುವ ದೂರಿನಂತೆ, ಮದುವೆಯಲ್ಲಿ ತೊಂದರೆ ಆಗುತ್ತದೆ ಎಂದು ಹೆದರಿಸಿ ಆರೋಪಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 2025ರ ನವೆಂಬರ್ 23ರಿಂದ 2026ರ ಫೆಬ್ರವರಿ […]

Continue Reading

ಕಂಕನಾಡಿ ನಗರ ಪೊಲೀಸರ ಕಾರ್ಯಾಚರಣೆ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಂಚನೆ ಪ್ರಕರಣದ ಆರೋಪಿಯ ಬಂಧನ

ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಕೊಲ್ಲಂ ನಿವಾಸಿ ಜಯಚಂದ್ರ. 2019ರಲ್ಲಿ ಈತನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಅಂದಿನಿಂದ ನಾಪತ್ತೆಯಾಗಿದ್ದ.ನ್ಯಾಯಾಲಯ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು. ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಎನ್ನುವ ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸರು ಈತನನ್ನು ಕೇರಳದ ಕೊಲ್ಲಂ ನಗರದ […]

Continue Reading

ಕುಖ್ಯಾತ ಅಂತಾರಾಜ್ಯ ಇರಾನಿ ಗ್ಯಾಂಗ್‌ನ ಏಳು ಮಂದಿಯನ್ನು ಬಂಧಿಸುವಲ್ಲಿ ಸಬರ್ಬನ್‌ ಠಾಣೆ ಪೊಲೀಸರು ಯಶಸ್ವಿ

ತೆಲಂಗಾಣದ ವಿವಿಧೆಡೆ ಒಂದೇ ದಿನ ಮೂರು ಅಪರಾಧ ಕೃತ್ಯಗಳನ್ನು ಎಸಗಿ ನಗರದಲ್ಲಿ ಆಶ್ರಯ ಪಡೆದಿದ್ದ ಕುಖ್ಯಾತ ಅಂತಾರಾಜ್ಯ ಇರಾನಿ ಗ್ಯಾಂಗ್‌ನ ಏಳು ಮಂದಿಯನ್ನು ಸಬರ್ಬನ್‌ ಠಾಣೆ ಪೊಲೀಸರು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಹಾರಾಷ್ಟ್ರದ ಬೀಡ್‌ ಜಿಲ್ಲೆಯವರಾದ ಜಹೀರ್‌ ಅಬ್ಬಾಸ್ ಅಲಿ, ರಜಾಕ್‌ ಶೇಖುಬ್‌ ಬೇಗ್‌, ಅಲಿಮಿರ್ಜಾ ದರಬೇಶ, ಜಾಫರ್‌ ಅಜಮ್‌ ಸೈಯದ್‌, ಲಾಲ್‌ ಸಮೀರ್‌ ಅಲಿಯಾಸ್‌ ಲಾಲ್‌ಗಾಂಧಿ, ಜಾಫರ್‌ ಅಲಿ ಸೈಯದ್‌ ಹಾಗೂ ಮಧ್ಯಪ್ರದೇಶದ ಭೂಪಾಲ್‌ನ ಖಾಸಿಂ ಜೋಜೋ ಜಾಫ್ರಿ ಬಂಧಿತರು. ಅಪರಾಧಿಗಳ ಪೈಕಿ ಒಬ್ಬ ಮುಂಬೈ ಪೊಲೀಸರ ಮಾಹಿತಿದಾರನಾಗಿಯೂ […]

Continue Reading

ಮಕ್ಕಳ ಮೇಲೆ ‘ಸಾಮಾಜಿಕ ಮಾಧ್ಯಮ’ ಅಡ್ಡಪರಿಣಾಮ; ಜಾಗೃತಿಗಾಗಿ ಪಠ್ಯಕ್ರಮ ಆರಂಭಿಸಿ.. ಸರ್ಕಾರಕ್ಕೆ ವಕೀಲ ಮನೋರಾಜ್ ಪ್ರಸ್ತಾವನೆ

ಸಾಮಾಜಿಕ ಮಾಧ್ಯಮದ ದುಷ್ಪರಿಣಾಮಕ್ಕೆ ಕಡಿವಾಣ; ಸೂಕ್ತ ಪಠ್ಯಕ್ರಮ ಆರಂಭಿಸಲು ಸರ್ಕಾರಕ್ಕೆ ಕಾಂಗ್ರೆಸ್ ಸಲಹೆ ಜಾಗೃತಿ ಶಿಕ್ಷಣವೇ ಮಕ್ಕಳಿಗೆ ಪೂರಕ; ‘ಸೋಶಿಯಲ್ ಮೀಡಿಯಾ’ ಬಗ್ಗೆ ಶಾಲಾ ಮಟ್ಟದಲ್ಲಿ ಪಠ್ಯಕ್ರಮಕ್ಕೆ ಕಾಂಗ್ರೆಸ್ ಕಾನೂನು ಘಟಕ ಸಲಹೆ ‘ಸೋಶಿಯಲ್ ಮೀಡಿಯಾ’ ಬಗ್ಗೆ ಜಾಗೃತಿ ಶಿಕ್ಷಣ ಅನಿವಾರ್ಯ ; ಶಾಲಾ ಮಟ್ಟದಲ್ಲಿ ಪಠ್ಯಕ್ರಮಕ್ಕೆ ಹಿರಿಯ ವಕೀಲ ಮನೋರಾಜ್ ಶಿಫಾರಸು ಮಂಗಳೂರು: ಮಕ್ಕಳ ವಿಚಾರದಲ್ಲಿ ಸಾಮಾಜಿಕ ಮಾಧ್ಯಗಳಿಗೆ ಅಂಕುಶ ಹಾಕುವ ಕುರಿತು ಚರ್ಚೆಗಳು ನಡೆದಿರುವಾಗಲೇ, ರಾಜ್ಯದಲ್ಲೀಗ ಸಾಮಾಜಿಕ ಮಾಧ್ಯಮಗಳ ಬಗ್ಗೆ ಜಾಗೃತಿ ಶಿಕ್ಷಣ ಅಗತ್ಯದ […]

Continue Reading

ಕಾನ್ಫಿಡೆಂಟ್ ಗ್ರೂಪ್ ನ ಮುಖ್ಯಸ್ಥ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ED ಅಧಿಕಾರಿಗಳಿಗೆ ಬೆಂಗಳೂರು ಬಿಟ್ಟು ತೆರಳದಂತೆ ಮಹತ್ವದ ಸೂಚನೆ

‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ಚುರುಕುಗೊಳಿಸಿದ್ದು, ದಾಳಿ ನಡೆಸಲು ಬಂದಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಬೆಂಗಳೂರು ಬಿಟ್ಟು ತೆರಳದಂತೆ ಮಹತ್ವದ ಸೂಚನೆ ನೀಡಿದೆ. ಕೊಚ್ಚಿಯಿಂದ ಆಗಮಿಸಿದ್ದ ಐಆರ್‌ಎಸ್‌ ಅಧಿಕಾರಿ ಕೃಷ್ಣಪ್ರಸಾದ್‌ ನೇತೃತ್ವದ ಅಧಿಕಾರಿಗಳ ತಂಡವು ಕಾನ್ಫಿಡೆಂಟ್ ಗ್ರೂಪ್‌ಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ರಾಯ್ ಅವರ ಈ ದುಡುಕಿನ ನಿರ್ಧಾರಕ್ಕೆ ಐಟಿ ಅಧಿಕಾರಿಗಳ ದಾಳಿ ಹಾಗೂ ಅದರಿಂದ ಉಂಟಾದ […]

Continue Reading

ಕೋಮುವಾದಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಆಸೇ ನಿಯಮ ಉಲ್ಲಂಘಿಸಿದ ದ.ಕ ಜಿಲ್ಲಾಧಿಕಾರಿ ವಿರುದ್ದ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು: ನವೀನ್ ಸೂರಿಂಜೆ

ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಪಾಠ ಕಲಿಯಬೇಕಾದ ಅವಶ್ಯಕತೆ ಇದೆ. ಕಾನೂನು ಸುವ್ಯವಸ್ಥೆ ಎನ್ನುವುದು ಕೇವಲ ಕಾನೂನಿನಿಂದ ಮಾತ್ರ ಜಾರಿಯಲ್ಲಿರುವುದಲ್ಲ. ನಮ್ಮ ನಡತೆಯೂ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ದಂಡಾಧಿಕಾರಿ ಹುದ್ದೆಯವರಂತೂ ಈ ಬಗ್ಗೆ ಹೆಚ್ಚು ಎಚ್ಚರ ಹೊಂದಿರಬೇಕಾಗುತ್ತದೆ. ಇಂದು ನಡೆಯುತ್ತಿರುವ ಮೂಡಬಿದ್ರೆ ಕಂಬಳದ ಆಹ್ವಾನ ಪತ್ರಿಕೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ಜಿಲ್ಲಾಧಿಕಾರಿ ದರ್ಶನ ಎಚ್ ವಿ ಹೆಸರುಗಳಿದ್ದವು. ಆ ಕಂಬಳ […]

Continue Reading

ರಾಜಕೀಯ ಪಕ್ಷದ ಪ್ರಭಾವಿಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿ; ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖೆ ಅಗತ್ಯವಿದೆ: ಹೈಕೋರ್ಟ್

ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳಲ್ಲಿನ ಪ್ರಭಾವಿ ವ್ಯಕ್ತಿಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ಗೃಹ ಸಚಿವ ಜಿ.ಪರಮೇಶ್ವರ್‌ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ದಾಖಲಿಸಿಕೊಂಡಿದೆ. ಅಲ್ಲದೇ, ಇದೊಂದು ಗಂಭೀರ ವಿಚಾರವಾಗಿರುವುದರಿಂದ ನ್ಯಾಯಾಲಯದ ನಿಗಾದಲ್ಲಿ ಕೇಂದ್ರೀಯ ಸಂಸ್ಥೆ ಅಥವಾ ವಿಶೇಷ ತನಿಖಾ ಸಂಸ್ಥೆಯಿಂದ ತನಿಖೆ (ಎಸ್‌ಐಟಿ) ನಡೆಸಬೇಕಾದ ಅಗತ್ಯವಿದೆ’ ಎಂದೂ ಹೇಳಿದೆ. ಮರಳು ಮಾಫಿಯಾಗಳಿಂದ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಕ್ರಮ […]

Continue Reading

ಬ್ಯಾಂಕಿಗೆ ಸಾವಿರಾರು ಕೋಟಿ ವಂಚನೆ, ಹಣ ವರ್ಗಾವಣೆ ಪ್ರಕರಣ: ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ನ ಮಾಜಿ ನಿರ್ದೇಶಕ ಪುನೀತ್ ಗಾರ್ಗ್ ಬಂಧನ

40,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಬ್ಯಾಂಕ್ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (ಆರ್‌ಸಿಒಎಂ) ನ ಮಾಜಿ ನಿರ್ದೇಶಕ ಪುನೀತ್ ಗಾರ್ಗ್ ಅವರನ್ನು ಜಾರಿ ನಿರ್ದೇಶನಾಲಯ ವಿಶೇಷ ಕಾರ್ಯಪಡೆ ಬಂಧಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಜನವರಿ 29, 2026 ರಂದು ಗಾರ್ಗ್ ಅವರನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಈ ಪ್ರಕರಣವು ಆರ್‌ಸಿಒಎಂ ಮತ್ತು ಅದರ ಗುಂಪು ಘಟಕಗಳಿಂದ […]

Continue Reading