ರಂಗಭೂಮಿ (ರಿ.) ಉಡುಪಿಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ : ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಯ 60ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 20ರಂದು ಉಡುಪಿ ಹೊಟೇಲ್ ಡಯಾನಾದಲ್ಲಿ ಜರುಗಿತು. ರಂಗಭೂಮಿ (ರಿ.) ಉಡುಪಿ” ಯ 2025-26 ನೇ ಸಾಲಿನ ಮಾರ್ಗದರ್ಶಕರಾಗಿ ಡಾ|| ಹೆಚ್. ಶಾಂತರಾಮ್, ಗೌರವಾಧ್ಯಕ್ಷರಾಗಿ ಡಾ| ಹೆಚ್. ಎಸ್. ಬಲ್ಲಾಳ್, ಅಧ್ಯಕ್ಷರಾಗಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆಯಾದರು. 2025-26ನೇ ಸಾಲಿನಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್. ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಯಾಗಿ […]

Continue Reading

ಮಂಜನಾಡಿ ದುರಂತ ಪ್ರಕರಣ: ವರದಿ ನೀಡುವಂತೆ ಪೊಲೀಸ್ ಕಮಿಷನರ್ ಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಮಂಜನಾಡಿಯಲ್ಲಿ ಇಬ್ಬರು ಮಕ್ಕಳು ಮತ್ತು ಎರಡು ಕಾಲುಗಳನ್ನು ಕಳೆದುಕೊಂಡು ಅಸಹಾಯಕಳಾಗಿರುವ ತಾಯಿ ಅಶ್ವಿನಿ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ನವೆಂಬರ್ 17 ರ ಒಳಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅಸಹಾಯಕಳಾಗಿರುವ ತಾಯಿ ಅಶ್ವಿನಿ ಅವರು ಸರಕಾರದ ಪ್ರಧಾನ ಕಾರ್ಯದರ್ಶಿಗೆ ನೀಡಿರುವ ದೂರಿನಲ್ಲಿ ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮನೆ ಕೋಡಿಯಲ್ಲಿ ಮೇ 30 ರಂದು ನಡೆದ ಗ್ರಾಮದ ಅವೈಜ್ಞಾನಿಕ ರಸ್ತೆ ಕಾಮಗಾರಿ ಸಂದರ್ಭ ಯಾವುದೇ […]

Continue Reading

ಬೆಳ್ತಂಗಡಿ: ಹತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ನೆರಿಯಾ ಪೆಟ್ರೋನೆಟ್‌ ಪೈಪ್‌ ಲೈನ್‌ ನಿಂದ 2010 ರಲ್ಲಿ ಪೆಟ್ರೋಲ್‌ ಕಳ್ಳತನಕ್ಕೆ ಸಂಬಂದಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮಾನ್ಯ ನ್ಯಾಯಾಲಯಕ್ಕೂ ಹಾಜರಾಗದೆ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ತಮ್ಮಯ್ಯ ಚಿಬಿದ್ರೆ ಎಂಬವರನ್ನು ಸೆ. 28 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು, ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ, ಬೆಳ್ತಂಗಡಿ ಪೊಲೀಸರು ಆರೋಪಿ ತಮ್ಮಯ್ಯ ಚಿಬಿದ್ರೆಯನ್ನು ತಮ್ಮ ವಶಕ್ಕೆ ಪಡೆದು, ಸೆ.29 ರಂದು ಸುಳ್ಯ […]

Continue Reading

ಗಂಜಿಮಠ: ಪೆರಾರ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷನಿಗೆ 5.48 ಲಕ್ಷ ರೂ. ದಂಡ; ದಂಡ ತೆರಳು ತಪ್ಪಿದ್ದಲ್ಲಿ 3 ತಿಂಗಳ ಜೈಲುವಾಸ

ಚೆಕ್ ಬೌನ್ಸ್ ಪ್ರಕರಣದಲ್ಲಿ ಗಂಜಿಮಠದ ಪೆರಾರ್ ವಿವಿಧೋದ್ದೇಶ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ಅಗಸ್ಟಿನ್ ರಾಡ್ರಿಗಸ್ ಗೆ ಮಂಗಳೂರು ಜೆಎಂಎಫ್ ಸಿ 9ನೇ ನ್ಯಾಯಾಲಯ 5.48 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಗಸ್ಟಿನ್ ಸೊಸೈಟಿಗೆ ಅಧ್ಯಕ್ಷನಾಗಿದ್ದ ಅವಧಿಯಲ್ಲಿ 6 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಸಾಲದ ಮರುಪಾವತಿಗಾಗಿ ನೀಡಿರುವ 5,38,700 ರೂಪಾಯಿ ಮೊತ್ತದ ಚೆಕ್ ಅಮಾನ್ಯವಾಗಿದೆ. ಈ ಬಗ್ಗೆ ಆತನ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. 2021 ರಿಂದ 2025 ರವರೆಗೆ ವಿಚಾರಣೆ ನಡೆದು, […]

Continue Reading

ಅಪ್ರಾಪ್ತೆಯೊಂದಿಗಿನ ಲೈಂಗಿಕ ಸುಖಕ್ಕೆ ಲಕ್ಷ, ಲಕ್ಷ ಡಿಮ್ಯಾಂಡ್. ಪೊಲೀಸರ ಗುಪ್ತ ಕಾರ್ಯಾಚರಣೆ, ವೇಶ್ಯಾವಾಟಿಕೆಗೆ ತಳ್ಳುವ ಗ್ಯಾಂಗ್ ಅಂದರ್

ರಾಜ್ಯವೇ ಬೆಚ್ಚಿ ಬೀಳಿಸುವ ಹೀನಾತಿ ಕೃತ್ಯ. ಅಪ್ರಾಪ್ತೆಯೊಂದಿಗಿನ ಲೈಂಗಿಕ ಸುಖಕ್ಕೆ ಇಪ್ಪತ್ತು ಲಕ್ಷಕ್ಕೆ ಡಿಮ್ಯಾಂಡ್. ಇಡೀ ಪ್ರಕರಣವನ್ನು ಬೇಧಿಸುವಲ್ಲಿ ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು ಗುಪ್ತ ಕಾರ್ಯಾಚರಣೆ ನಡೆಸಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಂತ ಪಿಂಪ್ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮಹಿಳೆ ಮತ್ತು ಪುರುಷರೊಬ್ಬರನ್ನು ಘಟನೆ ಸಂಬಂಧ ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಮೂಲದ ಶೋಭಾ, ತುಳಸಿಕುಮಾರ್ ಎಂಬವರನ್ನು ಬಂಧಿಸಲಾಗಿದೆ. ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಠಾಣೆಯ […]

Continue Reading

ಖೈರ್ಲಂಜಿಯ ಘನ-ಘೋರ ದಲಿತ ಹತ್ಯಾಕಾಂಡ. ಖೈರ್ಲಂಜಿ ಹತ್ಯಾಕಾಂಡ ನಡೆದು ಇಂದಿಗೆ 19 ವರ್ಷ

29-09-20೦6 ರ ಅ ಕರಾಳ ದಿನ ತಮ್ಮ ಅಂತಿಮ ವಿಧಿ ಬರೆಯುವ ದಿನ ಎಂದು ಆ ಅಮಾಯಕ ಕುಟುಂಬದ ಗಮನಕ್ಕೆ ಬರಲೇ ಇಲ್ಲ. ✍️. ಪದರಂಗಿ 20೦6 ಸೆಪ್ಟೆಂಬರ್ 29 ಆ ದಿನ ಸಂಜೆ ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲೂಕಿನ ಖೈರ್ಲಂಜಿ ಗ್ರಾಮದಲ್ಲಿ ಅತೀ ಭೀಕರವಾದ ಮನುಷ್ಯತ್ವವೇ ಇಲ್ಲದ, ಕ್ರೂರ ಮೃಗೀಯ ಕಹಿ ಘಟನೆಯೊಂದು ನಡೆದೇ ಹೋಗುತ್ತದೆ. ​ಬಯ್ಯಲಾಲ್ ಎಂಬ ವಿದ್ಯಾವಂತ ದಲಿತ ಕುಟುಂಬದ ಸದಸ್ಯರ ಭೀಕರ ಹತ್ಯಾಕಾಂಡವೇ ನಡೆಯುತ್ತದೆ. ಆ ಕುಟುಂಬದ ಮುಖ್ಯಸ್ಥನೇ ಬಯ್ಯಲಾಲ್ […]

Continue Reading

ಮಂಗಳೂರಿನಲ್ಲಿ ಬೆಚ್ಚಿಬೀಳಿಸಿದ 1.5 ಕೆಜಿ ಚಿನ್ನದ ಗಟ್ಟಿ ದರೋಡೆ ಪ್ರಕರಣ: ನಾಲ್ವರು ಆರೋಪಿಗಳು ಅಂದರ್

ಚಾಯ್ಸ್ ಗೋಲ್ಡ್ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಪ್ರಾಪ್ತ ಯುವಕನೇ ದರೋಡೆಯ ಮಾಸ್ಟರ್ ಮೈಂಡ್.! ಕ್ಷಣ ಮಾತ್ರದಲ್ಲಿ ಒಂದೂವರೆ ಕೆ.ಜಿ ಚಿನ್ನದ ಗಟ್ಟಿ ದರೋಡೆ ಪ್ರಕರಣ ನಡೆಯುವ ಮೂಲಕ ನಗರದಲ್ಲಿ ಸಂಚಲನ ಮೂಡಿಸಿದ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಕಾರ್‌ಸ್ಟ್ರೀಟ್‌ನಲ್ಲಿ ನಡೆದಿದ್ದ ಚಿನ್ನದ ಗಟ್ಟಿ ದರೋಡೆ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಸೆಪ್ಟೆಂಬರ್ 29ರಂದು ಬಂಧಿಸಿದ್ದಾರೆ. ಸೆಪ್ಟೆಂಬರ್ 26ರಂದು ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಚಾಯ್ಸ್ ಗೋಲ್ಡ್ ಆಭರಣ ಅಂಗಡಿಯ ಕೆಲಸಗಾರ ಮುಸ್ತಫಾ ಎಂಬಾತನ ಮೇಲೆ […]

Continue Reading

ಇನ್ನೊಬ್ಬರ ಆರ್ ಟಿ ಸಿ ತನ್ನದೆಂದು ನಂಬಿಸಿ ನ್ಯಾಯಾಲಯಕ್ಕೆ ನೀಡಿ ವಂಚನೆ: ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ಸ.ನಂ. 33//9 ರಲ್ಲಿ 0.08.50 ಎಕ್ರೆ ಜಮೀನಿಗೆ ಎನ್ ಅಬೂಬಕ್ಕರ್ ಎಂಬವರು ಮಾಲಿಕನಾಗಿದ್ದು. ಅವರು ಸದ್ರಿ ಜಮೀನಿಗೆ ಸಂಬಂಧಿಸಿ ದಿನಾಂಕ 31.12.2024 ರಂದು ಪುತ್ತೂರು ತಾಲೂಕು ಕಚೇರಿಯಲ್ಲಿರುವ ಆರ್‌ಟಿಸಿ ಕೇಂದ್ರದಿಂದ ಅವರ ಹಕ್ಕಿನ ಜಮೀನಿನ ಬಾಬ್ತು ಪಹಣಿ ಪತ್ರವನ್ನು ತೆಗೆದು ನೋಡಿದಾಗ, ಸದ್ರಿ ಪಹಣಿ ಪತ್ರದ ಕಾಲಂ 11ರ ಋಣಗಳು ಕಾಲಂನಲ್ಲಿ ಎಂಆರ್‌ಟಿ 4/2024-2025 Spl. Case NO. ನಂಬ್ರ 34/2025(Crime No. 30/2021 of and N Crime […]

Continue Reading

ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ, ಸಿದ್ದು ಸಂಪುಟಕ್ಕೆ ಇವರೆಲ್ಲ ಸೇರಲಿದ್ದಾರೆ.

ಬಿಜೆಪಿ-ಆರೆಸ್ಸೆಸ್ ನಲ್ಲಿ ಹೊಸ ಕೂಗು ✍️. ಅರ್.ಟಿ.ವಿಠ್ಠಲಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ.ದಿಲ್ಲಿಯಿಂದ ಬರುತ್ತಿರುವ ವರ್ತಮಾನಗಳ ಪ್ರಕಾರ ಸಂಪುಟದಲ್ಲಿರುವ ಹದಿನೈದಕ್ಕೂ ಹೆಚ್ಚು ಮಂತ್ರಿಗಳು ಪಕ್ಷದ ಕೆಲಸಕ್ಕೆ ನಿಯೋಜಿತರಾಗಿ,ಅಷ್ಟೇ ಮಂದಿ ಶಾಸಕರು ಮಂತ್ರಿಗಳಾಗಲಿದ್ದಾರೆ.ಅಂದ ಹಾಗೆ ಇದುವರೆಗೆ ಮಂತ್ರಿ ಮಂಡಲ ಪುನರ್ರಚನೆಯ ವಿಷಯವನ್ನು ಅಧಿಕಾರ ಹಂಚಿಕೆಗೆ ತಳುಕು ಹಾಕಲಾಗುತ್ತಿತ್ತು. ಅರ್ಥಾತ್, ಎರಡೂವರೆ ವರ್ಷ ಕಳೆದ ನಂತರ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.ಅವರ ಜಾಗಕ್ಕೆ ಬೇರೆಯವರು ಬಂದ ಕಾಲಕ್ಕೆ ಸಂಪುಟ ಪುನರ್ರಚನೆ ಕಾರ್ಯ ನಡೆಯಲಿದೆ ಎಂಬ‌ ಮಾತು […]

Continue Reading

‘ಮಾರ್ವಾಡಿ’ ಗೂಂಡಾಗಿರಿ.!

ಸ್ಥಳೀಯ ನಾಗರೀಕರ ಮೇಲೆಯೇ ರೋಷಾ ವೇಷ, ಗೂಂಡಾಗಿರಿ ತೋರ್ಪಡಿಸುವ ಮಾರ್ವಾಡಿಗಳ ದಬ್ಬಾಳಿಕೆಗೆ ಮುಕ್ತಿ ಯಾವಾಗ.? ಇಲ್ಲಿನ ನೆಲ, ಜಲ ಉಪಯೋಗಿಸಿ ಇಲ್ಲಿಯೇ ವ್ಯವಹಾರ ಮಾಡಿ ಇಲ್ಲಿನ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸುತ್ತಾ ಗೂಂಡಾಗಿರಿ ಪ್ರದರ್ಶಿಸುವ ಮಾರ್ವಾಡಿಗಳ ಆಟಾಟೋಪ ಜಾಸ್ತಿಯಾಗಿದೆ. ಗುಜರಾತ್, ಉತ್ತರ ಭಾರತ ಮೊದಲಾದ ಕಡೆಯಿಂದ ವ್ಯವಹಾರಕ್ಕೆ ಬಂದು ಇಲ್ಲಿಯೇ ಸೆಟ್ಲ್ ಆಗಿ ಸ್ಥಳೀಯ ನಾಗರೀಕರ ಮೇಲೆಯೇ ರೋಷಾ ವೇಷ ತೋರ್ಪಡಿಸುವ ಮಾರ್ವಾಡಿಗಳ ದಬ್ಬಾಳಿಕೆಗೆ ಮುಕ್ತಿ ಯಾವಾಗ.? ಬೆಂಗಳೂರು, ಮಂಗಳೂರು ನಂತಹ ಮಹಾನಗರಗಳಲ್ಲಿ ವ್ಯಾಪಾರದಲ್ಲಿ ಮಾರ್ವಾಡಿಗಳದ್ದೇ ರಾಜ […]

Continue Reading