ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದರೋಡೆ: ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ 8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣ ದೋಚಿಕೊಂಡು ಪರಾರಿ

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಂಗಳವಾರ ಸಂಜೆ ಹೊತ್ತಿಗೆ ಏಳೆಂಟು ಮುಸುಕುದಾರಿ ದರೋಡೆಕೋರರ ತಂಡ ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿ 8 ಕೋಟಿ ರೂಪಾಯಿ ನಗದು, ಸರಿ ಸುಮಾರು 50 ಕೆ.ಜಿಯಷ್ಟು ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಜನ ನಿಬಿಡ ಪ್ರದೇಶದಲ್ಲಿರುವ ಎಸ್‌ಬಿಐ ಶಾಖೆಯ ಸಿಬ್ಬಂದಿ ಕೆಲಸ ಮುಗಿಸಿಕೊಂಡು […]

Continue Reading

ಮೂಗಿನ ಶಸ್ತ್ರಚಿಕಿತ್ಸೆ ಒಳಗಾಗಿದ್ದ ವ್ಯಕ್ತಿಗೆ ಆಸ್ಪತ್ರೆಯ ವೆಚ್ಚ ಭರಿಸಲು ಕೇರ್ ಹೆಲ್ತ್ ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯ

ಉಸಿರಾಟ ಸಮಸ್ಯೆಗೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೂರ್ಯ ಗ್ರಾಮದ ನಿವಾಸಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆಯ ನಂತರ ಆಸ್ಪತ್ರೆಯ ವೆಚ್ಚವನ್ನು ಮಂಜೂರು ಮಾಡಲು ನಿರಾಕರಿಸಿದ್ದ ಕೇರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಗೆ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯ ಚಿಕಿತ್ಸಾ ವೆಚ್ಚವನ್ನು ಪರಿಹಾರ ಮತ್ತು ವ್ಯಾಜ್ಯ ವೆಚ್ಚ ಸಮೇತ ಪಾವತಿಸಲು ಆದೇಶ ನೀಡಿದೆ. ದೂರುದಾರರು ತನ್ನ ಕುಟುಂಬಕ್ಕೆ ಕೇರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಯ ಪಾಲಿಸಿಯನ್ನು 2021 ರಿಂದಲೇ ಹೊಂದಿದ್ದು, 2024 ಇಸವಿಯಲ್ಲಿ ದೂರುದಾರರ ಮಗಳಿಗೆ ಉಸಿರಾಟದ ಸಮಸ್ಯೆ ಇದ್ದ ಕಾರಣ ವೈದ್ಯರು ರಿನೋ […]

Continue Reading

ಜಾತಿ ಗಣತಿ ಜೊತೆ ಒಂದು ಮಹತ್ವದ ಕೆಲಸವೂ ನಡೆಯಲಿದೆ. ಮೊಬೈಲ್, ಆಧಾರ್ ಕಾರ್ಡ್ ರೆಡಿ ಮಾಡಿಟ್ಟುಕೊಳ್ಳಬೇಕು: ಸಿಎಂ ಸಿದ್ದರಾಮಯ್ಯ

ಕರ್ನಾಟಕ ಸರ್ಕಾರ ನಡೆಸಲುದ್ದೇಶಿಸಿರುವ ಜಾತಿ ಗಣತಿ ಜೊತೆ ಈ ಒಂದು ಮಹತ್ವದ ಕೆಲಸವೂ ನಡೆಯಲಿದೆ. ಅದಕ್ಕಾಗಿ ಮೊಬೈಲ್, ಆಧಾರ್ ಕಾರ್ಡ್ ರೆಡಿ ಮಾಡಿಟ್ಟುಕೊಳ್ಳಬೇಕು. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಜಾತಿ ಗಣತಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ಸಂದರ್ಭದಲ್ಲಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವ ಕಾರ್ಯವನ್ನು ಮಾಡಲಾಗುವುದು’ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಹೀಗಾಗಿ ಸಮೀಕ್ಷೆಗೆ ಬರುವವರಿಗೆ ನಿಮ್ಮ ಜಾತಿ, ಶಿಕ್ಷಣ, ಸಾಮಾಜಿಕ ಸ್ಥಿತಿಗತಿಯ ಮಾಹಿತಿ […]

Continue Reading

ಕೈರಂಗಳ: ಯಕ್ಷಗಾನ ಅಕಾಡೆಮಿಯಿಂದ ಯಕ್ಷಧಾರೆ ಸಂಪನ್ನ; ಯಕ್ಷಗಾನ ಬೆಳೆಸಲು ಕಲಾಪೋಷಕರ ಕೊಡುಗೆ ಅಗತ್ಯ: ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

ಉಡುಪಿ: ಸರಕಾರ ಯಕ್ಷಗಾನ ಅಕಾಡೆಮಿಗೆ ನೀಡುವ ಅನುದಾನವನ್ನು ಯಕ್ಷಗಾನ ಕಲೆಯ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಸಂಘಸoಸ್ಥೆಗಳಿಗೆ ತಲುಪಿಸಬೇಕು ಎಂಬುದೇ ಅಕಾಡೆಮಿಯ ಆಶಯವಾಗಿದೆ. ಯಕ್ಷಗಾನ ಕಲೆ ಇಂದು ದೇಶವಿದೇಶದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣ ಅದಕ್ಕೆ ಸಿಕ್ಕಿರುವ ಜನಾದಾರದ ಜೊತೆಗೆ ಕಲಾಪೋಷಕರ ಪಾತ್ರ ಹಿರಿದಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ದ.ಕ.ಜಿಲ್ಲೆಯ ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ […]

Continue Reading

ಅಸಹಜ ಸಾವು, ಅತ್ಯಾಚಾರ, ಕೊಲೆ, ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ತನಿಖೆಗೆ ಒತ್ತಾಯಿಸಿ ಸೆ. 25 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ನ್ಯಾಯ ಸಮಾವೇಶ

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳು, ಅತ್ಯಾಚಾರ, ಕೊಲೆ, ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ಬಗ್ಗೆ ತನಿಖೆಗೆ ಒತ್ತಾಯಿಸಿ ಸೆಪ್ಟೆಂಬರ್ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ನ್ಯಾಯ ಸಮಾವೇಶ ನಡೆಯಲಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಎಲ್ಲಾ ಅಸಹಜ ಸಾವುಗಳು , ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಎಸ್ಐಟಿ ತನಿಖೆಗೆ ಒಳಪಡಿಸಬೇಕು, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ಅಕ್ರಮ, ದೌರ್ಜನ್ಯಗಳ ಬಗ್ಗೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಬೇಕು, ಎಸ್ಐಟಿ ತಂಡಕ್ಕೆ […]

Continue Reading

ಬಂಟ್ವಾಳ: ಅಳಿಕೆ ಗ್ರಾಮದ ಬರೆಂಗೋಡಿಯಲ್ಲಿ ಅಕ್ರಮ ಗಣಿಗಾರಿಕೆ, ಹಲವು ಮನೆಗಳು ಬಿರುಕು; ಬಿಜೆಪಿ-ಕಾಂಗ್ರೆಸ್ ರಾಜಕೀಯ ‌ಜುಗಲ್ ಬಂದಿ

ಗಣಿಗಾರಿಕೆಯನ್ನು ಶೀಘ್ರ ಸ್ಥಗಿತಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ದೂರು. ಮಂಗಳೂರು: ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬರೆಂಗೋಡಿ, ಕೋಡಿಜಾಲು ಎಂಬಲ್ಲಿ ಕಪ್ಪು ಕಲ್ಲು ಗಣಿಗಾರಿಕೆಯಲ್ಲಿ ಬಾರಿ ಪ್ರಮಾಣದ ಕಲ್ಲಿನ ಸ್ಪೋಟದ ತೀವ್ರತೆಗೆ ಸ್ಥಳೀಯ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಜೀವ ಭಯದಿಂದ ದಿನ ಕಳೆಯುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿ, ಶೀಘ್ರ ಪರಿಶೀಲಿಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಸ್ಥಳೀಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರಿಗೆ ದೂರು ಸಲ್ಲಿಸಿದ್ದಾರೆ.ಗಣಿಗಾರಿಕೆಗೆ ಪರವಾನಿಗೆ ನೀಡುವ ಸಂಧರ್ಭದಲ್ಲಿ ಸ್ಥಳೀಯ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳು […]

Continue Reading

ಅರಸು, ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

ಅಧಿಕಾರದ ಸನಿಹ ಬಂದಿದ್ದ ಅನಂತ್; ಅರಸರು ಮೇಲೆದ್ದು ನಿಂತ ಕತೆ, ರಾಚಯ್ಯ ಅವರಿಗೆ ಆಫರ್ ಬಂದಿತ್ತು ✍️. ಆರ್.ಟಿ.ವಿಠ್ಠಲಮೂರ್ತಿ ಇದು 1999 ರಲ್ಲಿ ನಡೆದ ಘಟನೆ.ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕ ರಾಜಶೇಖರ ಮೂರ್ತಿ ಅವರನ್ನು ತರಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ನಿರ್ಧರಿಸಿದ್ದರು.ಹೀಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ನಾಯಕರನ್ನು ತರಬೇಕು ಅಂತ ಸೋನಿಯಾಗಾಂಧಿ ನಿರ್ಧರಿಸಲು ಹಲವು ಕಾರಣಗಳಿದ್ದವು.ಈ ಪೈಕಿ ಮುಖ್ಯವಾದುದೆಂದರೆ ಜನತಾದಳದಲ್ಲಿ ನಡೆದ ಬೆಳವಣಿಗೆ.ಅರ್ಥಾತ್,ಅ ಹೊತ್ತಿಗೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಜನತಾದಳ ಆಂತರಿಕ […]

Continue Reading

ಮಂಗಳೂರು ಪೊಲೀಸರಿಗೂ ಬಂತು ದಮ್ಮು, ತಾಕತ್ತು.!

ಉಸ್ಕು ದಮ್ಮಿಲ್ಲದ ದ್ವೇಷ ಭಾಷಣಕೋರರು, ರಿವಾಲ್ವರ್ ಹಿಡಿದಿಲ್ಲ.., ಲಾಠಿ ಬೀಸಲಿಲ್ಲ.., ಮಂಗಳೂರು ಶಾಂತ ಶಾಂತ.. That is police ಪವರ್.! ಮಂಗಳೂರಿನಲ್ಲಿ ಗಣೇಶೋತ್ಸವ ಮೆರವಣಿಗೆಗಳು ಮಸೀದಿ ಮುಂದೆ ಹಾದು ಹೋದರೂ, ಕೇಕೆ ಹಾಕಿ ಕುಣಿಯಲಿಲ್ಲ ಭಕ್ತರು, ಈದ್ ಮಿಲಾದ್ ಜಾಥಾದಲ್ಲಿ ಯುವಕರ ಗುಂಪು ಕರ್ಕಶ ಹಾರ್ನ್ ಹಾಕಿ ನಾಗರೀಕರ ನೆಮ್ಮದಿ ಕಸಿದುಕೊಂಡಿಲ್ಲ. ಡಿಜೆ ಅಬ್ಬರವಿಲ್ಲ, ಹತ್ತು ಗಂಟೆಗೆ ಸುಚ್ ಆಪ್. ಇದಕ್ಕೆಲ್ಲ ಕಾರಣ ಮಂಗಳೂರು ಪೊಲೀಸ್ ಅಧಿಕಾರಿಗಳ ದಿಟ್ಟತನದ ನಿರ್ಧಾರ. ರಾಜಿ ರಹಿತವಾಗಿ ಕಾನೂನು ಪಾಲಿಸಿಕೊಂಡ ಪರಿಣಾಮ, […]

Continue Reading

‘ಮ್ಯೂಲ್ ಅಕೌಂಟ್’ ದಂಧೆ ಪ್ರಕರಣ: ಹೊಸ ನಮೂನೆಯ ವಂಚನೆ ಬಯಲು; ಬಾಡಿಗೆ ರೂಪದಲ್ಲಿ ಬ್ಯಾಂಕ್ ಖಾತೆ ಪಡೆದು 500 ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಖದೀಮರು

ಕೇರಳದ ವಯನಾಡು ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಜನರು ‘ಮ್ಯೂಲ್ ಅಕೌಂಟ್’ (ಒಂದು ಬಗೆಯಲ್ಲಿ ಬಾಡಿಗೆ ರೂಪದಲ್ಲಿ ಬ್ಯಾಂಕ್ ಖಾತೆ ಪಡೆದು ಅದನ್ನು ಹಣ ಅಕ್ರಮ ವರ್ಗಾವಣೆ ಚಟುವಟಿಕೆಗಳಿಗೆ ಬಳಸುವುದು) ದಂಧೆಗೆ ಬಲಿಯಾಗಿ ಗಂಭೀರ ಕಾನೂನು ಸಂಕಷ್ಟ ಎದುರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರಿಂದ ಹೀಗೆ ಮೋಸ ಹೋದವರಲ್ಲಿ ಮಹಿಳೆಯರು ಹಾಗೂ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸೈಬರ್ ಪೊಲೀಸರು ಹೇಳಿದ್ದಾರೆ. ಜಿಲ್ಲೆಯ ಹೊರಗಿನಿಂದ ಬಂದ ವಂಚಕರು ಸ್ಥಳೀಯರಿಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆ ನೀಡುವಂತೆ ಆಮಿಷ […]

Continue Reading

ಬಜ್ಪೆ ಪಟ್ಟಣ ಪಂಚಾಯತ್ ಸೇರಿದಂತೆ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಆಸ್ಪತ್ರೆ ಇಲ್ಲದಿರುವುದು ಬಜ್ಪೆ ನಾಗರಿಕರ ದುರಂತ: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ

ಇತ್ತೀಚೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಬಜ್ಪೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಬಜ್ಪೆ ನಾಗರಿಕರ ಹಿತ ರಕ್ಷಣೆಯ ಬಗ್ಗೆ ನಡೆಸಿ, ಬಜ್ಪೆ ಪೇಟೆಯ ಸರ್ವಾಂಗೀಣ ಅಭಿವೃದ್ದಿ, ಬೆಳೆಯುತ್ತಿರುವ ಬಜ್ಪೆ ಪಟ್ಟಣ ಪಂಚಾಯತ್ನೊಳಗೊಂಡಂತೆ,ಸಮೀಪದ 4 ಗ್ರಾಮಪಂಚಾಯತ್ ಸೇರಿಸಿಕೊಂಡು, ಬಜ್ಪೆ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ,ಸಮುದಾಯ ಅರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವುದರ ಬಗ್ಗೆ ರಾಜಕೀಯ ಪಕ್ಷಗಳು, ನಮಗೆ ಇದುವರೆಗೆ ಆಶ್ವಾಸನೆ ಕೊಟ್ಟದು ಸಾಕು, ನಾವು ಇನ್ನೂ ತಡಮಾಡದೆ ಹಿತ ರಕ್ಷಣಾ ವೇದಿಕೆಯ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ತೀರ್ಮಾನಿಸಲಾಯಿತು. […]

Continue Reading