ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್, ಒಂದು ಚಿನ್ನ, ಒಂದು ಬೆಳ್ಳಿ ಪದಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025ರಲ್ಲಿ 2 ಪದಕಗಳು ದೊರೆತಿವೆ. ಚಿಕ್ಕಮಗಳೂರು ಶತಮಾನೋತ್ಸವ ಒಳಾಂಗಣ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಪಟುಗಳು 1 ಚಿನ್ನ ಹಾಗೂ 1 ಬೆಳ್ಳಿ ಸಹಿತ ಒಟ್ಟು 2 ಪದಕಗಳನ್ನು ತಮ್ಮದಾಗಿಸಿಕೊಂಡು ಸಾಧನೆಗೈದಿದ್ದಾರೆ. ಮೊಹಮ್ಮದ್ ನಿಹಾಲ್ ನಝೀರ್ ಅವರು 69 ಕೆಜಿ ವಿಭಾಗದಲ್ಲಿ […]

Continue Reading

ಮಂಡ್ಯ ‘ಧರ್ಮ ದಂಗಲ್’ ಹಿಂದೆ ಲೀಥಿಯಂ ಗಣಿಗಾರಿಕೆ ವಾಸನೆ.!

ಸಂಘಪರಿವಾರ ತೋಡಿದ ಖೆಡ್ಡಾಕ್ಕೆ ಮಂಗಳೂರು ನಂತರ ಮಂಡ್ಯದ ಜನತೆ ಬಲಿಪಶು ಆಗುತ್ತರಾ.? ಕೆರೆಗೋಡಿನ ಹನುಮ ಧ್ವಜ ಗಲಾಟೆ, ನಾಗಮಂಗಲದ ಗಣೇಶನ ಗಲಾಟೆ, ಮದ್ದೂರಿನ ಗಣೇಶನ ಗಲಾಟೆ ಹೀಗೆ ಕಳೆದ 2-3 ವರ್ಷಗಳಿಂದ ಶಾಂತವಾಗಿದ್ದ ಸಕ್ಕರೆ ನಾಡು ಮಂಡ್ಯದಲ್ಲಿ ಕೋಮುದ್ವೇಷಗಳು, ಕೋಮು ಗಲಾಟೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಬಹಳ ದೊಡ್ಡ ಕಾರಣವೂ ಇದೆ. ಇತ್ತೀಚೆಗೆ ಕೇಂದ್ರ ಸರಕಾರದ ಅಧೀನದಲ್ಲಿರುವ ಡಿಪಾರ್ಟ್ ಮೆಂಟ್ ಆಫ್ ಅಟಾಮಿಕ್ ಎನರ್ಜಿ (DAF) ಎಂಬ ಸಂಸ್ಥೆಯು 2021 ರಲ್ಲಿ ನಡೆಸಿದ ಒಂದು ಸಂಶೋಧನೆಯಿಂದ ಇದರ ಹಿಂದಿನ […]

Continue Reading

ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಅಸ್ತು, ಕನಿಷ್ಠ ಏಳು ವರ್ಷ ಪೂರೈಸಿದ ಸಿಬ್ಬಂದಿಗೆ ಅನುಮತಿ.

ಪೊಲೀಸ್‌ ಇಲಾಖೆ ಸಿಬ್ಬಂದಿಗಳನ್ನು ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ಕೋರಿಕೆ ಆಧಾರದ ಮೇಲೆ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಅಂತರ ಜಿಲ್ಲಾ ಘಟಕಗಳ ವರ್ಗಾವಣೆಗೆ ಇಲಾಖೆಯಿಂದ ರೂಪಿಸಲಾಗಿರುವ ಅಧಿಕೃತ ಆನ್‌ಲೈನ್‌ ಪೋರ್ಟಲ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರವೇ ಪರಿಗಣಿಸಬೇಕು. ಪ್ರತಿ ಘಟಕದಿಂದ ವರ್ಗಾವಣೆ ಆಗಿ ಹೋಗುವ ಸಿಬ್ಬಂದಿ ಸಂಖ್ಯೆ ಶೇ 15ಕ್ಕಿಂತ ಹೆಚ್ಚಿರಬಾರದು. ಸೇವಾ ಜ್ಯೇಷ್ಠತೆ ಆಧಾರದ ಮೇಲೆಯೇ ವರ್ಗಾವಣೆ ನಡೆಸಬೇಕು. ಎಲ್ಲ ವೃಂದದ ವರ್ಗಾವಣೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ನಿರಾಕ್ಷೇಪಣಾ ಪತ್ರ ಕಡ್ಡಾಯ ಆಗಿರುತ್ತದೆ ಎಂದು ಆದೇಶ […]

Continue Reading

ಮಾರಣಾಂತಿಕ ರಸ್ತೆ ಗುಂಡಿಗಳು- ದುರಂತಗಳ ಹಿಂದೆ ಇರುವ ವ್ಯವಸ್ಥೆಯ ವೈಫಲ್ಯ; ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿರುವ ಅಮಾಯಕ ಜೀವಗಳು.

ಜೀವಕಳೆದುಕೊಂಡವರ ಆತ್ಮಕ್ಕೆ ಮೋಕ್ಷ ಸಿಗಬೇಕಾದರೆ, ಅದು ದುಃಖದಿಂದಲ್ಲ. ಬದಲಾಗಿ ಈ ಅವ್ಯವಸ್ಥೆಗೆ ಕಾರಣೀಕರ್ತರನ್ನು ಹೊಣೆಗಾರನ್ನಾಗಿ ಮಾಡುವುದರಿಂದ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು 2025ರ ಸೆಪ್ಟೆಂಬರ್ 9ರಂದು, ಮಂಗಳೂರಿನ ಪಣಂಬೂರು ಕೂಳೂರು ರಾಷ್ಟ್ರೀಯ ಹೆದ್ದಾರಿ-66ಯಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಲ್ಯಾಬ್ ತಂತ್ರಜ್ಞೆ ಮಾಧವಿ ಎಂಬವರು, ಮಾರಣಾಂತಿಕ ರಸ್ತೆ ಗುಂಡಿಗೆ ಬಿದ್ದು ಅವರ ಮೇಲೆ ಮೀನಿನ ಲಾರಿ ಹರಿದು ದಾರುಣವಾಗಿ ಮೃತಪಟ್ಟಿರುತ್ತಾರೆ. ಯಾರದೋ ತಪ್ಪಿಗೆ ಆ ಅಮಾಯಕ ಮಹಿಳೆ ತಮ್ಮ ಜೀವನ್ನೇ ಕಳೆದುಕೊಳ್ಳುವಂತಾಗಿದ್ದು, ದುರದೃಷ್ಟವೇ ಸರಿ.ಸುರತ್ಕಲ್‌ನ ಟೋಲ್ ಗೇಟ್ ವಿರುದ್ಧ […]

Continue Reading

ಕೇಂದ್ರದಿಂದ ರಾಜ್ಯಕ್ಕೆ ಎಲೆಕ್ಟ್ರಿಕ್ ಬಸ್ ಗಿಫ್ಟ್ ಎಂದ BJPಗೆ ಟಾಂಗ್.. ಬಸ್ ಕೊಡುಗೆಯ ಇತಿಹಾಸ ತೆರೆದಿಟ್ಟ KPCC

ಬೆಂಗಳೂರು: ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದು ಸಾರಿಗೆ ಸಂಸ್ಥೆಗಳಿಗೆ ನೀಡಿರುವುದನ್ನು ಕೇಂದ್ರ ಸರ್ಕಾರ ಬಸ್ ಖರೀದಿ ಮಾಡಿ ಸಾರಿಗೆ ಸಂಸ್ಥೆಗಳಿಗೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ಬೊಬ್ಬೆ ಹೊಡೆಯುವುದನ್ನು ಬಿಟ್ಟು ಬಾಡಿಗೆ/ಲೀಸ್ ಮತ್ತು ಖರೀದಿಯ ವ್ಯತ್ಯಾಸವನ್ನಾದರೂ ತಿಳಿಯಬೇಡವೇ? ಒಂದಷ್ಟಾದರೂ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ, ನಿಮ್ಮ ಮಾಹಿತಿಗಾಗಿ ಓದಿಕೊಳ್ಳಿ ಎಂದು ಕಾಂಗ್ರೆಸ್ ಪಕ್ಷ ಟಾಂಗ್ ಕೊಟ್ಟಿದೆ. PM e-Drive / PM e-Seva ಯೋಜನೆಗಳಡಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ 5250 ಎಲೆಕ್ಟ್ರಿಕ್ ಬಸ್ಸುಗಳನ್ನು‌ ಕೇಂದ್ರ ಸರ್ಕಾರ ಖರೀದಿಸಿ ನೀಡಿದೆ […]

Continue Reading

ಜೀವ ಕಸಿಯುವ ಅಲೆಗಳು ಹಾಗೂ ನೀರಿನಿಂದ ದೂರವಿರಿ, ಹುಚ್ಚು ಸಾಹಸಕ್ಕೆ ಯುವ ಜೀವಗಳು ಬಲಿಯಾಗದಿರಲಿ.

ದುರಂತಗಳು ನಮಗೆ ನೀಡುವ ಸಂದೇಶ ಸರಳ “ಜೀವನವೇ ಮೊದಲ ಆದ್ಯತೆ” “ಸಾಹಸ, ಉಲ್ಲಾಸ, ಸೆಲ್ಫಿಎಲ್ಲವೂ ನಗಣ್ಯ” ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಪ್ರಕೃತಿ ಯಾವಾಗಲೂ ಮಾನವನನ್ನು ಆಕರ್ಷಿಸಿ, ತನ್ನತ್ತ ಸೆಳೆಯುತ್ತದೆ. ಕಡಲತೀರದ ಅಲೆಗಳು, ಜಲಪಾತಗಳ ಘರ್ಜನೆ, ನದಿಗಳ ಹರಿವು ಈ ಎಲ್ಲವೂಗಳು ವಿಸ್ಮಯಕಾರಿಗಳಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಥಳಗಳು ಅನೇಕ ಕುಟುಂಬಗಳಿಗೆ ಸಂತೋಷದ ನೆನಪಿಗಿಂತ ದುಃಖದ ಕಣ್ಣೀರನ್ನು ನೀಡುತ್ತಿವೆ. ಇದರಲ್ಲಿ ಪ್ರಕೃತಿಯ ತಪ್ಪಿಲ್ಲವಾದರೂ, ಮನುಷ್ಯ ತನ್ನ ಪ್ರವೃತ್ತಿಯಿಂದ ತನಗೆ ತಾನೇ ಕಂಕಟಕಾರಿಯಾಗಿ ಪರಿಣಮಿಸುತ್ತಾನೆ. ವಿಶೇಷವಾಗಿ […]

Continue Reading

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು, ಇದರ ಆಶ್ರಯದಲ್ಲಿ ಸೆಪ್ಟೆಂಬರ್ 11 ರಂದು ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ. 11-09-2025 ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ. ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. […]

Continue Reading

ಬೆಂಗಳೂರು ಸನ್‌ರೂಫ್ ಘಟನೆ: ರಸ್ತೆ ಸುರಕ್ಷತೆಯ ಎಚ್ಚರಿಕೆ ಗಂಟೆ.

ರಸ್ತೆಯಲ್ಲಿ ರೋಮಾಂಚಕ್ಕೆ ಬದಲು, ಸುರಕ್ಷತೆ ಯಾವಾಗಲೂ ಮೊದಲ ಆದ್ಯತೆ ಆಗಬೇಕು. “ಸನ್‌ರೂಫ್ ಬೆಳಕು ಮತ್ತು ಗಾಳಿ ಒಳಗೆ ಬಿಡಲು ಮಾತ್ರ, ಮನರಂಜನೆಗಾಗಿ ಅಲ್ಲ” ✍️. ಇಸ್ಮಾಯಿಲ್ ಸುನಾಲ್ ವಕೀಲರು, ಮಂಗಳೂರು 2025ರ ಸೆಪ್ಟೆಂಬರ್ 6ರಂದು, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದ ಸನ್‌ರೂಫ್ ಅಪಘಾತ ಘಟನೆ ಈಗ ರಸ್ತೆ ಸುರಕ್ಷತೆ ಕುರಿತ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕಾರಿನ ಸನ್‌ರೂಫ್ ಮೂಲಕ ತಲೆ ಹೊರಗೆ ಹಾಕಿ ದೃಶ್ಯವನ್ನು ಆನಂದಿಸುತ್ತಿದ್ದ ಆರು ವರ್ಷದ ಬಾಲಕನ ತಲೆ ಕಡಿಮೆ ಎತ್ತರದ ಕಬ್ಬಿಣದ ಬಾರಿಯರ್‌ಗೆ ಬಡಿದು […]

Continue Reading

26 ವರ್ಷಗಳ ಹಿಂದಿನ ಕೋಮು ಗಲಭೆ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್

1998 ಡಿಸೆಂಬರ್ 31ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ, ಬೆಂಕಿ ಹಚ್ಚಿ ನಡೆಸಿದ ಗಲಾಟೆ ಪ್ರಕರಣದಲ್ಲಿ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ಕಳೆದ 26 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು. ಹಿಂದಿನ ತನಿಖಾಧಿಕಾರಿಗಳು ಇವರ ವಿರುದ್ದ ತಲೆಮರೆಸಿಕೊಂಡಿರುವ ಬಗ್ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಇಬ್ಬರು ಆರೋಪಿಗಳು ತನಿಖಾಧಿಕಾರಿಯವರಿಗೆ ಸಿಗದೇ ನ್ಯಾಯಾಲಯ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡು ಪರಾರಿಯಾಗಿದ್ದ ಮೇರೆಗೆ […]

Continue Reading

ವಿಜಯೇಂದ್ರ-ನಿಖಿಲ್ ಈಗ ಜೋಡೆತ್ತುಗಳು; ಸಕ್ಸಸ್ ಆಗುತ್ತಿದ್ದಾರೆ ನಿಖಿಲ್

ದಿಲ್ಲಿಗೆ ನುಗ್ಗಲಿದ್ದಾರೆ ಜಾರಕಿಹೊಳಿ, ಶಾಸಕ ಸ್ಥಾನಕ್ಕೆ ರಾಜಣ್ಣ ರಾಜೀನಾಮೆ? ✍️. ಅರ್.ಟಿ.ವಿಠ್ಠಲಮೂರ್ತಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಳೆದ ವಾರ ಪದ್ಮನಾಭನಗರಕ್ಕೆ ಹೋದರು.ಹೀಗೆ ಹೋದವರು ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದರು.ಅಂದ ಹಾಗೆ ಮೊನ್ನೆ ಮೊನ್ನೆಯವರೆಗೆ ಜೆಡಿಎಸ್ ಜತೆಗಿನ ಮೈತ್ರಿಯ ವಿಷಯದಲ್ಲಿ ವಿಜಯೇಂದ್ರ ಉತ್ಸುಕರಾಗಿರಲಿಲ್ಲ.ಕಾರಣ?ಈ ಮೈತ್ರಿ ವಿಧಾನಸಭಾ ಚುನಾವಣೆಯಲ್ಲಿ ಮುಂದುವರಿದರೆ,ಮತ್ತು ಬಿಜೆಪಿ ಮಿತ್ರಕೂಟ ಗೆದ್ದು ಅಧಿಕಾರ ಹಿಡಿದರೆ ಧರ್ಮ ಸಂಕಟ ಶುರುವಾಗಬಹುದು ಎಂಬುದು.ಅರ್ಥಾತ್,ಅಧಿಕಾರ ಹಿಡಿಯುವ ಮೈತ್ರಿಕೂಟ ಸರ್ಕಾರಕ್ಕೆ ಕುಮಾರಸ್ವಾಮಿ ನಾಯಕರಾಗಬಹುದು ಎಂಬ ಆತಂಕ ವಿಜಯೇಂದ್ರ ಅವರಿಗಿತ್ತು.ಹೀಗಾಗಿ ಸಿದ್ಧರಾಮಯ್ಯ […]

Continue Reading