ಮಧ್ಯಪ್ರದೇಶದಲ್ಲಿ ರೈಲಿನಿಂದ ನಾಪತ್ತೆಯಾಗಿದ್ದ ನ್ಯಾಯಾಂಗ ಸೇವಾ ಆಕಾಂಕ್ಷಿ ಅರ್ಚನಾ ಕೊನಗೂ ಭಾರತ-ನೇಪಾಳ ಗಡಿಯಲ್ಲಿ ಪತ್ತೆ

ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ರೈಲಿನಿಂದ ನಾಪತ್ತೆಯಾಗಿದ್ದ 28 ವರ್ಷದ ನ್ಯಾಯಾಂಗ ಸೇವೆಗಳ ಆಕಾಂಕ್ಷಿ ಅರ್ಚನಾ ತಿವಾರಿ ಅವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಕಟ್ನಿ ನಿವಾಸಿ ಅರ್ಚನಾ, ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಇಂದೋರ್ ನಲ್ಲಿ ವಾಸಿಸುತ್ತಿದ್ದರು. ಆಗಸ್ಟ್ 7 ರಂದು, ಅವರು ಮನೆಗೆ ಪ್ರಯಾಣಿಸಲು ಇಂದೋರ್-ಬಿಲಾಸ್ಪುರ್ ನರ್ಮದಾ ಎಕ್ಸ್ಪ್ರೆಸ್ ಹತ್ತಿದರು. ಅವರು ಕಟ್ನಿಯಲ್ಲಿ ಇಳಿಯಬೇಕಿತ್ತು, ಆದರೆ ಇಳಿಯಲಿಲ್ಲ. ನಂತರ ಅವರ ಬ್ಯಾಗ್ ಉಮಾರಿಯಾ ನಿಲ್ದಾಣದಲ್ಲಿ ಕಂಡುಬಂದಿತು, ಆದರೆ ಅವರು ಎಲ್ಲಿಯೂ ಕಾಣಲಿಲ್ಲ. ಆ ದಿನ ಬೆಳಿಗ್ಗೆ 10:15 ರ […]

Continue Reading

ಮಂಗಳೂರು: ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ ಅಪಹರಿಸಿ 350 ಗ್ರಾಂ ಚಿನ್ನ ದರೋಡೆ

ಕೃತ್ಯ ಭೇದಿಸಿದ ಪೊಲೀಸರು; ಐವರು ಅಂದರ್ ಆಗಸ್ಟ್ 13 ರಂದು ಮಂಗಳೂರಿನಲ್ಲಿ ನಡೆದಿದ್ದ ಆಭರಣ ವ್ಯಾಪಾರಿಯ ಅಪಹರಣ ಮತ್ತು ದರೋಡೆ ಪ್ರಕರಣ ಭೇದಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಪ್ರಕಾರ, ಆಗಸ್ಟ್ 13 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ, ದೂರುದಾರ ಹರಿ ಭಾನುದಾಸ್ ಥೋರಟ್, ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿಯ ಕೈರಾಲಿ ಹೋಟೆಲ್ ಬಳಿ ಆಟೋಗಾಗಿ ಕಾಯುತ್ತಿದ್ದರು. ಆ ಸಮಯದಲ್ಲಿ, ಆರು ಅಪರಿಚಿತ ವ್ಯಕ್ತಿಗಳು ಬಿಳಿ ಇನ್ನೋವಾ ಕಾರಿನಲ್ಲಿ ಆಗಮಿಸಿ, ತಮ್ಮನ್ನು ಕಸ್ಟಮ್ಸ್ ಅಧಿಕಾರಿಗಳೆಂದು […]

Continue Reading

ಉಪ್ಪಿನಂಗಡಿ ಪೊಲೀಸರ ಕಾರ್ಯಾಚರಣೆ: ಚಿನ್ನದ ಸರ ಕಸಿದ ಆರೋಪಿಯ ಬಂಧನ, 5,05,000 ರೂ. ಮೌಲ್ಯದ ಸೊತ್ತು ವಶ

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಯಾಡಿ, ಪಡುಬೆಟ್ಟು ಎಂಬಲ್ಲಿ ದಿನಾಂಕ 04-06-2025 ರಂದು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು, ಬೈಕಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಎಳೆದು ಬಲವಂತವಾಗಿ ಕಸಿದುಕೊಂಡು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಪ್ಪಿನಂಗಡಿ ಠಾಣಾ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ಸುಳ್ಯ ಆಲೆಟ್ಟಿ ನಿವಾಸಿ ಅಬ್ದುಲ್ ರೆಹಮಾನ್ ಎಂಬಾತನನ್ನು ಪುತ್ತೂರು, ನೆಕ್ಕಿಲಾಡಿ ಸಮೀಪ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿತನಿಂದ ಅಂದಾಜು 4,54,000 ರೂ. ಮೌಲ್ಯದ ಚಿನ್ನದ […]

Continue Reading

ಕಾಂಗ್ರೆಸ್ ಗ್ಯಾರಂಟಿಗೆ ಮೊರೆ ಹೋದ ಬಿಜೆಪಿ..

ವಿರೋಧ ಪಕ್ಷದ ರಾಜ್ಯದಲ್ಲಿ ಹಿಗ್ಗಾಮುಗ್ಗಾ ತರಾಟೆ..ಆಡಳಿತದ ರಾಜ್ಯಗಳಲ್ಲಿ ರತ್ನಗಂಬಳಿ ಹಾಸಿ ಸ್ವಾಗತ..ಬಿಜೆಪಿಯ ಇಬ್ಬಗೆಯ ಬಣ್ಣ ಬಯಲು ರಾಜಕೀಯ ಪಕ್ಷಗಳ ನಿಜವಾದ ಬಣ್ಣ ಬಯಲಾಗಬೇಕಾದರೆ ಚುನಾವಣೆಗಳು ಬರಬೇಕು. ಚುನಾವಣೆಗಳು ಬಂದಾಗ ಗೆಲುವು ತನ್ನದಾಗಿಸಿಕೊಳ್ಳಲು ಸಿದ್ಧಾಂತಕ್ಕೆ ಎಳ್ಳು ನೀರು ಬಿಡುತ್ತಾರೆ. ಬಹುಶಃ ಬಿಜೆಪಿಯ ವಿಷಯದಲ್ಲಿ ಇದೆ ಆದಂತಿದೆ. ಅಭಿವೃದ್ಧಿ ಆಧಾರಿತ ಆಡಳಿತದ ಪಿತಾಮಹನಂತೆ, ಆರ್ಥಿಕ ಶಿಸ್ತಿನ ಹರಿಕಾರನಂತೆ ಬಿಂಬಿಸಿಕೊಳ್ಳುವ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಬಂದಾಗ ತಾನು ಕೂಡ ಇತರ ಪಕ್ಷಗಳಂತೆ ಜನಪ್ರಿಯ ಯೋಜನೆಗಳ ಹಿಂದೆ ಬೀಳುತ್ತಿರುವುದು ನಿಜಕ್ಕೂ ಅಚ್ಚರಿ […]

Continue Reading

ಮೂಡಬಿದ್ರೆ: ಕಿಡ್ನಿ ರೋಗಿಯ ನೆರವಿಗೆ ನೀಡಿದ ಚರ್ಚ್ ಪತ್ರದ ದುರುಪಯೋಗ; ಆರೋಪಿ ವಿನೋದ್ ವಾಲ್ಟರ್ ಪಿಂಟೋ ವಿರುದ್ಧ ಪ್ರಕರಣ ದಾಖಲು

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೋಲಿ ಕ್ರಾಸ್ ಚರ್ಚ್ ತಾಕೊಡೆ ಕಿಡ್ನಿ ರೋಗಿಯೊಬ್ಬರಿಗೆ ಆರ್ಥಿಕ ನೆರವು ನೀಡುವಂತೆ ಕೋರಿ ನೀಡಿದ್ದ ಪತ್ರವನ್ನು ದುರುಪಯೋಗ ಪಡಿಸಿಕೊಂಡು ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗಸ್ಟ್ 18 ರಂದು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಲಿ ಕ್ರಾಸ್ ಚರ್ಚ್ ಆರ್ಥಿಕ ಸಮಿತಿ ಸದಸ್ಯರಾದ ಐವಿ ಕ್ರಾಸ್ತಾ ಎಂಬವರು ದೂರು ನೀಡಿದ್ದು ಆರೋಪಿ ವಿನೋದ್ ವಾಲ್ಟರ್ ಪಿಂಟೋ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಸಾರಾಂಶ ತಾಕೋಡೆ ಚರ್ಚ್ ಗುರುಗಳಾದ ಫಾ/ […]

Continue Reading

ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಒಬ್ಬ ಭಯಂಕರ ಭಯೋತ್ಪಾದಕ: ಹಿಂದೂ ಫೈರ್ ಬ್ರ್ಯಾಂಡ್ ಉಮಾಭಾರತಿ ಅಚ್ಚರಿಯ ಹೇಳಿಕೆ

ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ‘ಭಯಂಕರ ಭಯೋತ್ಪಾದಕ’ ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಸಂಘಪರಿವಾರದ ನಾಯಕಿ ಉಮಾಭಾರತಿ ಕರೆದಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾಭಾರತಿ ಗೋಡ್ಸೆಯ ಕೃತ್ಯವು ಭಯೋತ್ಪಾದನೆಯನ್ನು ಮೀರಿದ ದೊಡ್ಡ ಪಾಪ’ ಎಂದು ಹೇಳಿದರು. ಖಾಸಗಿ ಹಿಂದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಗೋಡ್ಸೆಯನ್ನು ತೀವ್ರವಾಗಿ ಟೀಕಿಸಿದರು ಮತ್ತು ಗಾಂಧೀಜಿಯನ್ನು ಹೊಗಳಿದರು. ‘ನಾಥೂರಾಮ್ ಗೋಡ್ಸೆ ಹಿಂದೂವೇ? ಒಬ್ಬ ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ’ ಎಂದು ಉಮಾಭಾರತಿ ಹೇಳಿದರು. “ಸ್ವತಂತ್ರ ಭಾರತದ ದೊಡ್ಡ […]

Continue Reading

ಬಿಹಾರದಲ್ಲಿ ಜನಾದಿಪತ್ಯ ಮೌಲ್ಯಗಳಿಗೆ ಧಕ್ಕೆ – ಅಲ್ಪಸಂಖ್ಯಾತರ ಮತ ಹಕ್ಕಿಗೆ ಸವಾಲು

ಇಂತಹ ಧೋರಣೆ ಮುಂದುವರಿದರೆ, ಅದು ಜನಾದಿಪತ್ಯ ಮೌಲ್ಯಗಳ ನಾಶಕ್ಕೆ ಕಾರಣವಾಗುವ ಅಪಾಯವಿದೆ. ಜನಾದಿಪತ್ಯ ಮೌಲ್ಯಗಳನ್ನು ಲೆಕ್ಕಿಸದೆ, ಕೇವಲ ಅಧಿಕಾರವನ್ನು ಹಿಡಿಯುವ ಅಜೆಂಡಾವನ್ನು ಮುಂದಿರಿಸಿಕೊಂಡು ಬಿಹಾರದಲ್ಲಿ ರಾಜಕೀಯ ಕುತಂತ್ರಗಳು ನಡೆಯುತ್ತಿವೆ. ಮುಂಬರುವ ಚುನಾವಣೆಯನ್ನು ಎದುರಿಸಲು ಸಜ್ಜಾಗಿರುವ ಸಂಘಪರಿವಾರ ಶಕ್ತಿಗಳಿಗೆ ತೀವ್ರ ಪ್ರತಿರೋಧವಾಗಿ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ನೇತೃತ್ವವು ಬಲವಾದ ಹೋರಾಟದ ವಲಯವನ್ನು ಕಟ್ಟಿಕೊಟ್ಟಿದೆ. ಸುಮಾರು 67 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಅಸಂಬದ್ಧ ಕಾರಣಗಳನ್ನು ತೋರಿಸಿ ಕೈಬಿಟ್ಟಿರುವ ಚುನಾವಣಾ ಆಯೋಗದ ನಡೆ, ರಾಜ್ಯದಾದ್ಯಂತ “ಜನಾಧಿಕಾರ ಯಾತ್ರೆ” ಎಂಬ […]

Continue Reading

ಪರಮೇಶ್ವರ್ ಬೆನ್ನಲ್ಲಿ ಕಾಣುತ್ತಿದೆ ‘ರಾಮ’ಬಾಣ? ರಾಜಣ್ಣ ಎಪಿಸೋಡಿನ ಪರಿಣಾಮ ಏನು?

ರಘು ಮೂರ್ತಿಗೆ ಲಕ್ಕು, ವಿಜಯೇಂದ್ರ ಅವರಿಗೆ ನಡ್ಡಾ ಹೇಳಿದ್ದೇನು? ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದೊಂದು ವಾರದಿಂದ ದಿಲ್ಲಿಯ ಕಾಂಗ್ರೆಸ್ ವರಿಷ್ಟರಿಗೆ ಹಲವು ಸಂದೇಶಗಳು ರವಾನೆಯಾಗುತ್ತಿವೆ.ಆದರೆ ವರಿಷ್ಟರ ಕಿವಿಗೆ ಅವು ಹಿತಕರವಾಗಿ ಕೇಳಿಸುತ್ತಿಲ್ಲ.ಅಂದ ಹಾಗೆ ಇಂತಹ ಸಂದೇಶಗಳಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಎಪಿಸೋಡು ಕಾರಣ ಎಂಬುದು ರಹಸ್ಯವಲ್ಲ.ಇವತ್ತು ಮೇಲ್ನೋಟಕ್ಕೆ ರಾಹುಲ್ ಗಾಂಧಿ ಹೇಳಿಕೆಗೆ ಉಲ್ಟಾ ಹೊಡೆದರು ಎಂಬ ಕಾರಣಕ್ಕಾಗಿ ರಾಜಣ್ಣ ಅವರು ಸಂಪುಟದಿಂದ ವಜಾ ಆಗಿದ್ದಾರೆ.ಅದರೆ ಅಳಕ್ಕಿಳಿದು ನೋಡಿದರೆ ಅವರು ಸುರ್ಜೇವಾಲ ಅವರಿಗೆ ತಿರುಗೇಟು ಹೊಡೆದಿದ್ದರು ಎಂಬುದೇ ಅವರ […]

Continue Reading

ಪುತ್ತೂರು: ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ: ಆರೋಪಿ ದಯಾನಂದ ನಾಯ್ಕನ ಬಂಧನ, ಸೊತ್ತುಗಳ ವಶ

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದ, ಸುಮಾರು 31 ಗ್ರಾಂ ಬಂಗಾರ ಮತ್ತು ರೂ.5000 ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಪ್ರಕರಣದ ಆರೋಪಿಯಾದ ಪುತ್ತೂರು, ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29)ಎಂಬಾತನನ್ನು ಈಶ್ವರಮಂಗಲ ಎಂಬಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ದಯಾನಂದ ನಾಯ್ಕ್ ಕಳವುಗೈದ 30.120 ಗ್ರಾಂ ಚಿನ್ನ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ನ್ನು ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿರುತ್ತಾರೆ. […]

Continue Reading

ನಿಯಮ ಪಾಲಿಸದೇ ಅಕ್ರಮವಾಗಿ ನಿರ್ಮಾಣಮಾಡಿರುವ ಕಟ್ಟಡಗಳನ್ನು ಮುಲಾಜಿಲ್ಲದೆ ಒಡೆದು ಹಾಕುತ್ತೇವೆ: ಡಿಕೆಸಿ ಎಚ್ಚರಿಕೆ

ಸುರಕ್ಷಿತ ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ನಿರ್ಮಾಣಮಾಡಿರುವ ಕಟ್ಟಡಗಳನ್ನು ದುರಸ್ಥಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಲಾಜಿಲ್ಲದೆ ಒಡೆದು ಹಾಕುತ್ತೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ನಿನ್ನ ಅಗ್ನಿ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಶೇ. 70 ರಷ್ಟು ಕಟ್ಟಡಗಳ ನಿರ್ಮಾಣ ಅಕ್ರಮವಾಗಿದೆ. ಹಳೆಯ ಬಡಾವಣೆಗಳಷ್ಟೇ ಅಲ್ಲ, ಹೊಸ ಬಿಡಿಎ ಬಡಾವಣೆಗಳಲ್ಲೂ ಒಂದು ಮತ್ತು ನಾಲ್ಕು ಮಹಡಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. […]

Continue Reading