ಬೆಳ್ಳಾರೆ: ವಿದ್ಯಾರ್ಥಿ ನಿಲಯಕ್ಕೆ ಅಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರ ಬಟ್ಟೆ ಕಳವು ಪ್ರಕರಣ: ಪುತ್ತೂರಿನ ರಾಮಚಂದ್ರ ಅರೆಸ್ಟ್

ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ ಬಟ್ಟೆಗಳು ಕಳವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಕೆ. ರಾಮಚಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 2 ರಂದು ಬೆಳಿಗ್ಗೆ ವಿದ್ಯಾರ್ಥಿನಿಯರು ಒಣಗಲು ಹಾಕಿದ್ದ ಬಟ್ಟೆಗಳು ಕಾಣೆಯಾಗಿರುವ ಸಂಗತಿ ಗಮನಕ್ಕೆ ಬಂದಿದ್ದು ಈ ವಿಚಾರವನ್ನು ವಿದ್ಯಾರ್ಥಿನಿಲಯದ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ. ಸಿ ಸಿ ಕ್ಯಾಮರಾ ಪರಿಶೀಲಿಸಿದಾಗ ದಿನಾಂಕ: 02.09.2026 ರಂದು ಬೆಳಗ್ಗಿನ ಜಾವ ಅಪರಿಚಿತ ಯುವಕನೋರ್ವ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿಗಳು ಒಣಗಿಸಲು ಹಾಕಿದ ಬಟ್ಟೆಗಳಲ್ಲಿ ಕೆಲವು ಬಟ್ಟೆಗಳನ್ನು ಕಳವು […]

Continue Reading

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಿರುದ್ದದ ಕೇಸ್ ವಜಾಗೊಳಿಸಿದ ಸುಪ್ರೀಂಕೋರ್ಟ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಯಮ ಮೀರಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದೆ ಹಾಗೂ ಕಾನೂನುಬಾಹಿರವಾಗಿ ಮನಿ ಲೆಂಡಿಂಗ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ ನಾಗರಿಕ ಸೇವಾ ಟ್ರಸ್ಟ್‌ನ ರಂಜನ್ ರಾವ್ ಯೆರ್ದೂರ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನಾಗರಿಕ ಸೇವಾ ಟ್ರಸ್ಟ್‌ನ ರಂಜನ್ ರಾವ್ ಯೆರ್ದೂರ್ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯು ಕಾನೂನುಬಾಹಿರವಾಗಿ ಬಡ್ಡಿ ದಂಧೆ ನಡೆಸುತ್ತಿದೆ, ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಮತ್ತು ಸಾರ್ವಜನಿಕರಿಗೆ ವಂಚನೆ ಎಸಗುತ್ತಿದೆ ಎಂದು ಆರೋಪಿಸಿ […]

Continue Reading

ಮೂಲ್ಕಿ: ಕಿಲ್ಪಾಡಿ ದೈವಸ್ಥಾನದ ಬೆಲೆಬಾಳುವ ಆಭರಣ ಕಳ್ಳತನ – ನಾಲ್ವರು ಆರೋಪಿಗಳು ಅಂದರ್

ಮೂಲ್ಕಿ ಕಿಲ್ಪಾಡಿಯ ಕೋರ್ದಬ್ಬು ದೈವಸ್ಥಾನದಲ್ಲಿ ಬೆಲೆಬಾಳುವ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಲ್ಕಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು ಉಳಿದ ಇಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಆರೋಪಿಗಳನ್ನು ಪಡುಬಿದ್ರೆ ಕಂಚಿನಡ್ಕ ನಿವಾಸಿ ಜಾಹಿದ್ ಸಿನಾನ್ , ಕಾರ್ಕಳ ನಿಟ್ಟೆ ನಿವಾಸಿ ಪ್ರಸ್ತುತ ಕಾರ್ನಾಡ್ ಬಳಿ ವಾಸ್ತವ್ಯವಿರುವ ನಿವಾಸಿ ಯಾಸಿನ್, ದಾವಣಗೆರೆ ನಿವಾಸಿಗಳಾದ ಅಬ್ದುಲ್ ಜುಮಾಲ್ , ಮಹಮ್ಮದ್ ಆಫ್ರಿದ್ ಎಂದು ಗುರುತಿಸಲಾಗಿದ್ದು, ಕಳ್ಳತನದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ದೈವಸ್ಥಾನದಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪೂರ್ವ […]

Continue Reading

ಬೆಳ್ತಂಗಡಿ: ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ; ತೆರವಿಗೆ ತಹಶೀಲ್ದಾರ್ ಆದೇಶ

ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿ ನೇತಾಜಿ ಬಡಾವಣೆ ಪಕ್ಕದ ಸರ್ಕಾರಿ ಜಾಗ 116/1 ರಲ್ಲಿ 0.05 ಎಕ್ರರೆಯಲ್ಲಿ ನಿರ್ಮಿಸಲಾಗುತ್ತಿರುವ ಅನಧಿಕೃತ ಕಟ್ಟಡ ತೆರವಿಗೆ ಬೆಳ್ತಂಗಡಿ ತಹಶೀಲ್ದಾರ್ ಆದೇಶಿಸಿದ್ದು, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಕಟ್ಟಡಕ್ಕೆ ನೋಟೀಸ್ ಅಂಟಿಸಿದ್ದಾರೆ. ಲಾಯಿಲ ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಪಂಪ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೂರಪ್ಪ ಎಂಬವರು ಪಡ್ಲಾಡಿ ಬಳಿ ಸರ್ಕಾರಿ ಜಾಗದಲ್ಲಿ ಯಾವುದೇ ಅನುಮತಿಗಳಿಲ್ಲದೆ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕಳೆದ ಕೆಲವು […]

Continue Reading

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ ಎಸ್ ಎಸ್ – ಕಾಂಗ್ರೆಸ್ ಸಂಘರ್ಷದ ಮೊದಲ ಬಲಿ; ಕಾಂಗ್ರೆಸ್ ಪ್ರಭಾವಿ ನಾಯಕ ಕಲ್ಲಡ್ಕ ಇಸ್ಮಾಯಿಲ್ ಹತ್ಯೆಗೆ ಸಂದಿತು 50 ವರ್ಷ

ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗಿದ್ದ ಅಪಹರಣ, ಹತ್ಯೆ ಪ್ರಕರಣ ಮುಚ್ಚಿ ಹೋಗಿದ್ದು ಹೇಗೆ..? ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ ಜಿಲ್ಲಾ ರಾಜಕಾರಣದಲ್ಲಿ ಇಸ್ಮಾಯಿಲ್ ಅವರದ್ದು ದೊಡ್ಡ ಹೆಸರು. ಪ್ರಭಾವಶಾಲಿ ರಾಜಕಾರಣಿಯಾಗಿ ಬೆಳೆದಿದ್ದ ಇಸ್ಮಾಯಿಲ್ ಅವತ್ತಿನ ಮುಖ್ಯಮಂತ್ರಿ ಆದಿಯಾಗಿ ಪ್ರಮುಖ ನಾಯಕರೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ಉತ್ತಮ ಭಾಷಣಕಾರರಾಗಿ, ಸಂಘಟನಾ ಚತುರರಾಗಿ ಮಿಂಚುತ್ತಿದ್ದ ಕಲ್ಲಡ್ಕ ಇಸ್ಮಾಯಿಲ್ ದೊಡ್ಡ ನಾಯಕರಾಗಿ ಬೆಳೆದುಬರುತ್ತಿದ್ದರು. ಆ ಹೊತ್ತಿನಲ್ಲೇ ಅವರ ಹತ್ಯೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲಡ್ಕ ಎಂದರೆ ಕೊತ ಕೊತ ಕುದಿಯುತ್ತಿದ್ದ ಊರು. ಅದು ತುರ್ತು […]

Continue Reading

ಮಚ್ಲಿ ಮಾಫಿಯಾ..! ಮೀನು ತಿನ್ನಲು ಮಂಗಳೂರಿನ ಸೀ ಫುಡ್ ರೆಸ್ಟೋರೆಂಟ್ ಗೆ ಹೋದರೆ ಜೋಕೆ.. ಜೇಬು ಖಾಲಿ ಖಾಲಿ.!

ಕರಾವಳಿಯ ಹೊಟೇಲ್ ಗಳ ಹಗಲು ದರೋಡೆಗೆ ಕಡಿವಾಣ ಹಾಕುವವರು ಯಾರು..? ಮಂಗಳೂರಿನ ಜನ ಬುದ್ಧಿವಂತರಂತೆ. ಓದಿನಲ್ಲಿ ಬುದ್ದಿವಂತ ಇರಬಹುದು ಅಷ್ಟೇ. ಆದರೆ ನಮ್ಮ ಕಾಲಬುಡದಲ್ಲೇ ಸುಲಿಗೆಕೋರರಿದ್ದರೂ ಅದನ್ನು ಪ್ರಶ್ನಿಸುವ ಕೆಲಸ ಮಾಡದೆ ಮೌನ ವಹಿಸಿರುವುದು ನೋಡುವಾಗ ಇವರು ಬುದ್ಧಿವಂತರೋ.. ತುಳುವಿನಲ್ಲಿ ಹೇಳುವಂತೆ ಬುದ್ಧಿ ‘ವಂತೆ’ ಎಂಬುದೋ ಗೊತ್ತಿಲ್ಲ. ಮಂಗಳೂರಿನಲ್ಲಿ ಲಕ್ಕಿ ಸ್ಕೀಂ ಗಳಂತವು ಹುಟ್ಟಿ ಇಲ್ಲಿನ ಬುದ್ಧಿವಂತರಿಗೆ ಉಂಡೆನಾಮ ಹಾಕಿದ್ದು ಇದೆ. ಬ್ಲೇಡ್ ಕಂಪೆನಿಗಳು ಇಲ್ಲಿರುವಷ್ಟು ಬೇರೆ ಕಡೆ ಎಲ್ಲೂ ಇಲ್ಲ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ದೋಚುವುದನ್ನೇ […]

Continue Reading

ಸುಳ್ಯ ಸಂಪಾಜೆ ದರೋಡೆ ಪ್ರಕರಣ: 13 ವರ್ಷಗಳ ನಂತರ ಆರೋಪಿ ಖುಲಾಸೆ

ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ ನಡೆದಿದ್ದ ದರೋಡೆ ಪ್ರಕರಣದ ಆರೋಪಿಯಾಗಿದ್ದ ಶ್ರೀನಿವಾಸ್ ಯಾನೆ ಶೀನಾ ಎಂಬಾತನನ್ನು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ. ಘಟನೆ ನಡೆದ 13 ವರ್ಷಗಳ ನಂತರ ಆರೋಪಿ ಖುಲಾಸೆಗೊಂಡಿದ್ದಾನೆ. 2013 ಜನವರಿ 27ರಂದು ನಾಗರಾಜ್ ಎಂಬುವವರು ಬಾಡಿಗೆಯ ಟಾಟಾ ಇಂಡಿಕಾ ಕಾರ್ ನಲ್ಲಿ ಮೈಸೂರು ಕಡೆಗೆ ಸಂಚಾರಿಸುತ್ತಿರುವಾಗ ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ನಾಗರಾಜ್ ರವರು ಇದ್ದ ಕಾರಿನ […]

Continue Reading

ಮಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಂಚನೆ ಪ್ರಕರಣದ ಕುಖ್ಯಾತ ಆರೋಪಿ ಸ್ಯಾಮ್ ಪೀಟರ್ ಬಂಧನ.

ಮಂಗಳೂರು ನಗರ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ನಿರ್ದೇಶಕ/ಅಧಿಕಾರಿ ಎಂದು ಸುಳ್ಳು ಪರಿಚಯ ಮಾಡಿಕೊಂಡು ಸುಲಿಗೆ ಹಾಗೂ ವಂಚನೆ ನಡೆಸುತ್ತಿದ್ದ ಪ್ರಕರಣದಲ್ಲಿ ಬಂಧಿತರಾಗಿ, ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಸ್ಯಾಮ್ ಪೀಟರ್ @ ಡ್ಯಾನಿ ತಾರಕನ್ @ ಆಂಟನಿ, ಮರಿಯಾ ಕಾಟೇಜ್, ಕವನಾಡು, ಕೊಲ್ಲಂ, ಆಲಪ್ಪಿ, ಕೋಯಿಲಾಡ್, ಅಲಪ್ಪಿ ರೋಡ್, ಕೇರಳ. ಪ್ರಸ್ತುತ ವಿಳಾಸ: Chanakayapuri, Lucknow, Manas […]

Continue Reading

ಸಹಕಾರಿ ದಿಗ್ಗಜ ದಿವಂಗತ ಎಚ್. ನಾರಾಯಣ ಸನಿಲ್ ಹೆಸರಲ್ಲಿ ಮರಣೋತ್ತರ ಸಹಾಯ ನಿಧಿ ಸ್ಥಾಪಿಸಿದ ಪ್ರಿಯದರ್ಶಿನಿ ಕೋ.ಅಪರೇಟಿವ್ ಸೊಸೈಟಿ

ಹಳೆಯಂಗಡಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ವಾರ್ಷಿಕ ಮಹಾಸಬೆಯಲ್ಲಿ ಘೋಷಿಸಿದಂತೆ, ಸಹಕಾರಿ ದಿಗ್ಗಜ ದಿವಂಗತ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿಯನ್ನು ಸ್ಥಾಪನೆ ಮಾಡಿದ್ದು, ಈ ನಿಧಿಯ ಅನ್ವಯ ಸೊಸೈಟಿಯಲ್ಲಿ ಸದಸ್ಯರಾಗಿದ್ದ ವ್ಯಕ್ತಿಗಳು ಮರಣ ಹೊಂದಿದ್ದಲ್ಲಿ ಅವರ ವಾರಿಸುದಾರರಿಗೆ ಮೃತರ ಶವ ಸಂಸ್ಕಾರ ಬಾಬ್ತು 10 ಸಾವಿರ ರೂಪಾಯಿ ಮೊತ್ತವನ್ನು ಸಹಾಯ ರೂಪವಾಗಿ ನೀಡಲಾಗುವುದು. ಎಂದು ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ ಬರ್ನಾಡ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಹಳೆಯಂಗಡಿಯ ಎಚ್ ನಾರಾಯಣ […]

Continue Reading

ಅಪ್ಪಟ ಜಾತ್ಯಾತೀತವಾದಿ, ಕೋಮುವಾದಿಗಳಿಗೆ ಸಿಂಹ ಸ್ವಪ್ನ, ನೇರ ನಡೆನುಡಿಯ ದಲಿತ ನಾಯಕ ಶೇಖರ್ ಕುಕ್ಕೇಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ

ಮೃದು ಹಿಂದುತ್ವವಾದಿಗಳನ್ನು ದೂರ ಇಟ್ಟು ಅರ್ಹರನ್ನು ಪರಿಗಣಿಸಲಿ; ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತ ಮತ್ತು ಇಂದಿನ ಕಾಲಘಟ್ಟಕ್ಕೆ ಅತ್ಯಂತ ತುರ್ತು ಅಗತ್ಯವಾಗಿ ಮುಂಚೂಣಿಯಲ್ಲಿ ಕಾಣಿಸುವ ಏಕೈಕ ವ್ಯಕ್ತಿ ಶೇಖರ್ ಕುಕ್ಕೇಡಿ. ಸಾಮಾಜಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಯುವ ನಾಯಕ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, […]

Continue Reading