ಮಲ್ಲೂರು, ಬೆಂಜನಪದವು, ಬಳಿ ಕೆಂಪು ಕಲ್ಲಿನ ಅಕ್ರಮ ಗಣಿಗಾರಿಕೆ; ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೌನ.!

ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಹಾವಳಿಯಿಂದ ಪ್ರಕೃತಿ ಜತೆಗೆ ಗಣಿಗಾರಿಕೆಯ ಅಕ್ಕಪಕ್ಕದ ಗ್ರಾಮಗಳಲ್ಲಿ ಭಾರಿ ಅನಾಹುತಗಳು ಸಂಭವಿಸುತ್ತಿರುವುದರಿಂದ ಜನ, ಜಾನುವಾರುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಮೀತಿ ಮೀರಿ ನಡೆಯುತ್ತಿರುವ ಗಣಿಗಾರಿಕೆಯಿಂದ ದಿನ ಕಳೆದಂತೆ ಪರಿಸರದಲ್ಲಿನ ಪ್ರಾಣಿ ಪಕ್ಷಿಗಳು ಮಾತ್ರವಲ್ಲದೆ ಸುಂದರವಾದ ಪ್ರಕೃತಿ ಕೂಡ ನಶಿಸಿ ಹೋಗುತ್ತಿದೆ.! ಬಲಾಢ್ಯರ ಲಾಭಿಯಿಂದ ನಡೆಯುತ್ತಿರುವ ಗಣಿಗಾರಿಕೆಗೆ ಯಾವುದೇ ತರಹದ ಪರವಾನಿಗೆ ಪಡೆದಿರುವುದಿಲ್ಲ. ತನ್ನ ಸ್ವಂತ ಜಾಗದಲ್ಲೇ ಕೃಷಿಗಾಗಿ ಗಣಿಗಾರಿಕೆ ಮಾಡುವುದು ಎಂದು ನಂಬಿಸುವ ಗಣಿಧಣಿಗಳು ಸರಕಾರಿ ಜಾಗಗಳನ್ನು ಕಬಳಿಸಿ ಅಕ್ರಮ […]

Continue Reading

ಕುಡುಪು 10.8 ಎಕರೆ ಟಿ.ಡಿ.ಆರ್ ಹಗರಣ ರಾಜ್ಯ ಸರಕಾರದ ತನಿಖಾ ಏಜನ್ಸಿಯಿಂದ ತನಿಖೆಗೆ ಆಗ್ರಹಿಸಿ ಉಸ್ತುವಾರಿ ಸಚಿವರಿಗೆ ಮನವಿ

ಟಿ.ಡಿ.ಆರ್ ಹಗರಣದಲ್ಲಿ ನಗರದ ಬಿಜೆಪಿ ಶಾಸಕರು ಶಾಸಕರು ಹಾಗೂ ವಿನಾಯಕಾ ಬಾಳಿಗಾ ಕೊಲೆಯ ಸೂತ್ರಧಾರರ ನೆರಳು. ಮನವಿಯಲ್ಲಿ ಆರೋಪ ನಿಯೋಗದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್, ವಸಂತ ಆಚಾರಿ, ಜೆ ಬಾಲಕೃಷ್ಣಶೆಟ್ಟಿ, ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು. ರಿಗೆಶ್ರೀ, ದಿನೇಶ್ ಗುಂಡೂರಾವ್ಉಸ್ತುವಾರಿ ಸಚಿವರುದಕ್ಷಿಣ ಕನ್ನಡ ಜಿಲ್ಲೆ ರಿಂದಸಂತೋಷ್ ಬಜಾಲ್ಕಾರ್ಯದರ್ಶಿಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಮಾನ್ಯರೇ, ವಿಷಯ: […]

Continue Reading

ತುಳುನಾಡಿನ ಅಭಿವೃದ್ಧಿ ಹಾಗೂ ಸೌಹಾರ್ದತೆಗೆ ಸಂಘಪರಿವಾರದ ಹಿಂದುತ್ವ ಮಾರಕ: ಸುನಿಲ್ ಕುಮಾರ್ ಬಜಾಲ್

ಕಳೆದ 33 ವರ್ಷಗಳಲ್ಲಿ ದ.ಕ.ಜಿಲ್ಲೆಯ ಅಭಿವೃದ್ಧಿಗೆ ಎಳ್ಳಷ್ಟೂ ಕಾಳಜಿ ವಹಿಸದೆ, ಜಾತಿ ಧರ್ಮದ ಹೆಸರಿನಲ್ಲಿ ದ್ವೇಷ ರಾಜಕಾರಣದ ಮೂಲಕ ಅದೆಷ್ಟೋ ಅಮಾಯಕ ಯುವಕರನ್ನು ಬಲಿ ತೆಗೆದುಕೊಂಡು, ಹಿಂದುತ್ವ, ಧರ್ಮ ರಕ್ಷಣೆಯ ಅಮಲನ್ನು ಯುವಕರ ತಲೆಗೇರಿಸಿ ಸಾವಿರಾರು ಯುವಕರ ಬಾಳನ್ನೇ ಸರ್ವನಾಶ ಮಾಡಿದ ಸಂಘಪರಿವಾರದ ಹಿಂದುತ್ವದಿಂದಾಗಿಯೇ ಜಿಲ್ಲೆಯ ಸೌಹಾರ್ದತೆ ಹಾಳಾಗಿದೆ. ಮಾತ್ರವಲ್ಲದೆ ಜಿಲ್ಲೆಯ ಅಭಿವೃದ್ದಿಯೂ ಕೂಡ ಕುಂಠಿತವಾಗಿದೆ ಎಂದು CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು. ಅವರು CPIM ನೇತ್ರತ್ವದಲ್ಲಿ […]

Continue Reading

ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು

ಪಣಜಿ: ಪಣಜಿಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಇಮ್ಯಾಜಿನ್ ಸ್ಮಾರ್ಟ್ ಸಿಟಿ ಡೆವಲಪ್‌ಮೆಂಟ್ ಲಿಮಿಟೆಡ್‌ನ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ವಿಭಾಗೀಯ ಪೀಠ ಬಾಂಬೆ ಹೈ. ಗೋವಾ ನ್ಯಾಯಾಲಯದ ನ್ಯಾಯಮೂರ್ತಿಗಳು ಸೋಮವಾರ ರಾಜಧಾನಿಯಲ್ಲಿ ಕಾಮಗಾರಿಯನ್ನು ಪರಿಶೀಲಿಸಿದರು. ನ್ಯಾಯಮೂರ್ತಿಗಳಾದ ಮಹೇಶ್ ಸೋನಕ್ ಮತ್ತು ವಾಲ್ಮೀಕಿ ಎಸ್‌ಎ ಮೆನೇಜಸ್ ಅವರು ಸೋಮವಾರ ಪಣಜಿ ನಗರದಲ್ಲಿ ರಸ್ತೆ, ಒಳಚರಂಡಿ, ನೀರಿನ ಪೈಪ್‌ಲೈನ್ ಮತ್ತು ಇತರ ಮೂಲಸೌಕರ್ಯಗಳ ಕಾಮಗಾರಿಯನ್ನು ಪರಿಶೀಲಿಸಿದರು. ಇಮ್ಯಾಜಿನ್ ಸ್ಮಾರ್ಟ್ ಸಿಟಿ ಡೆವಲಪ್‌ಮೆಂಟ್ […]

Continue Reading

ಆರ್ಥಿಕ ಸಂಕಷ್ಟದಲ್ಲಿ ಮೀನುಗಾರ ಕುಟುಂಬಗಳು, ಸಾಲ ನೀಡಿದ ಸಂಸ್ಥೆಗಳಿಂದ ಕಿರುಕುಳ; ಸಂತ್ರಸ್ತರ ನೆರವಿಗೆ ಜಿಲ್ಲಾಢಳಿತಕ್ಕೆ ಒತ್ತಾಯ: ಡಿವೈಎಫ್ಐ

ಮಂಗಳೂರು: ಇತಿಹಾಸ ಕಂಡರಿಯದ ರೀತಿಯಲ್ಲಿ ಮೀನಿನ ಕ್ಷಾಮ ಎದುರಾಗಿದ್ದು ಮೀನುಗಾರರು ಆರ್ಥಿಕ ಸಂಕಷ್ಟದಲ್ಲಿದ್ದು ಮೀನುಗಾರಿಕೆಯನ್ನು ನಂಬಿರುವ ಕುಟುಂಬಗಳು ತೀವ್ರ ಆರ್ಥಿಕ ಬಿಕ್ಕಟ್ಟಿನ ಹೊಡೆತದಿಂದ ತತ್ತರಿಸಿಹೋಗಿದೆ. ಅನೇಕ ಬೋಟುಗಳು ಲಂಗರು ಹಾಕಿವೆ. ಮೀನುಗಾರಿಕೆಗೆ ತೆರಳುವ ಬೋಟುಗಳು ಮೀನಿಲ್ಲದೆ ವಾಪಸು ಬರುತ್ತಿದೆ. ಬೋಟು ಮಾಲಕರು ಬ್ಯಾಂಕ್ ಸಾಲ ಸಂದಾಯ ಮಾಡಲು ಪರದಾಡುತ್ತಿದ್ದರೆ ಇನ್ನೊಂದೆಡೆ ಮೀನುಗಾರಿಕಾ ವೃತ್ತಿಯಲ್ಲಿರುವ ಒರಿಸ್ಸಾ, ತಮಿಳುನಾಡು ಮೂಲದ ವಲಸೆ ಕಾರ್ಮಿಕರು ಕೆಲಸವಿಲ್ಲದೆ ಬರಿಗೈಯಲ್ಲಿ ತಮ್ಮ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ. ಮಂಗಳೂರಿನ ಮೀನುಗಾರಿಕಾ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಕೇಳುವವರೇ ಇಲ್ಲದಾಗಿದ್ದಾರೆ. […]

Continue Reading

ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಟಾಬಯಲು ಮಾಡಿದ್ದ, ಗುಳುಂ ಗ್ಯಾಂಗ್ ವಿರುದ್ಧ ಸಮರ ಸಾರಿದ ಧೈರ್ಯವಂತ ಪದ್ಮನಾಭ ಸಾಮಂತ್..!

ಇದ್ದಕ್ಕಿದ್ದಂತೆ ಆತ್ಮಹತ್ಯೆಗೈಯ್ಯುವ ಹೇಡಿಯಲ್ಲ ಈತ. ಇದರ ಹಿಂದಿದೆಯಾ ಕಾಣದ ಕೈಗಳ ಕೈವಾಡ.? ಬಂಟ್ವಾಳ ವಿಧಾನಸಭಾ ಕ್ಷೇತ್ರ ರಾಜಕೀಯ ಜಂಗೀಕುಸ್ತಿಗಳ ತಾಣ. ಜೊತೆಗೆ ಬ್ರಹ್ಮಾಂಡ ಅಕ್ರಮಗಳ ತವರೂರು ಕೂಡ ಹೌದು. ಧೋ ನಂಬರ್ ದಂಧೆಕೋರರು ರಾಜಕಾರಣದ ಸಖ್ಯ ಬೆಳೆಸಿ ತಮ್ಮ ದಂಧೆಯನ್ನು ನಿರಾಂತಕವಾಗಿ ನಡೆಸಿಕೊಂಡು ಹೋಗುವ ಮೆಟ್ಟಿಲು ಮಾಡಿಕೊಂಡಿದ್ದರು. ಇಂತಹವರಿಗೆ ದೊಡ್ಡ ತಲೆನೋವಾಗಿದ್ದು ವಾಮದಪದವಿನ ಪದ್ಮನಾಭ ಸಾವಂತ್ ಅನ್ನುವ ತೆಳ್ಳಗಿನ ಯುವಕ. ಸಾಮಾಜಿಕ ಕಾರ್ಯಕರ್ತನಾಗಿ, ಕಾಂಗ್ರೆಸ್ ಪಕ್ಷದ ಮುಂದಾಳು ಆಗಿ, ಎಲ್ಲಕ್ಕಿಂತ ಹೆಚ್ಚಾಗಿ ಮಾಹಿತಿ ಹಕ್ಕು ಕಾರ್ಯಕರ್ತನಾಗಿ ಬಿಜೆಪಿ […]

Continue Reading

ಬಿಜೆಪಿ ಸೋಲಿಸಲು ಕಾರ್ಯತಂತ್ರ; ಸಮಾನ ಮನಸ್ಕ ರಾಜಕೀಯ ಪಕ್ಷ, ಸಂಘಟನೆಗಳ ಸಮಾಲೋಚನಾ ಸಭೆ ; ಎಪ್ರಿಲ್ 15 ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆ

ಅಘೋಷಿತ ತುರ್ತು ಪರಿಸ್ಥಿತಿಯ ಭೀತಿಯ ನಡುವೆ ನಡೆಯುತ್ತಿರುವ ನಿರ್ಣಾಯಕ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಕಾರ್ಯತಂತ್ರ ರೂಪಿಸುವ ಉದ್ದೇಶದೊಂದಿಗೆ “ಇಂಡಿಯಾ” ಕೂಟದ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ಹಾಗೂ ಸಮಾನ ಮನಸ್ಕ ರೈತ, ದಲಿತ, ಕಾರ್ಮಿಕ, ಅಲ್ಪಸಂಖ್ಯಾತ, ವಿದ್ಯಾರ್ಥಿ, ಯುವಜನ, ಮಹಿಳಾ, ಸಾಂಸ್ಕೃತಿಕ ಸಂಘಟನೆಗಳ ಪ್ರಮುಖರ ಸಮಾಲೋಚನಾ ಸಭೆ ಮಂಗಳೂರಿನಲ್ಲಿ ಇಂದು ನಡೆಯಿತು. ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸಿದರೆ ದೇಶದ ಸಾಂವಿಧಾನ, ಜನಸಾಮಾನ್ಯರು, ದುರ್ಬಲ ವಿಭಾಗಗಳು, ದುಡಿಯುವ […]

Continue Reading

ಕುಡುಪು ಗ್ರಾಮದ 10.8 ಎಕರೆ ಜಮೀನಿನ ಟಿ.ಡಿ.ಆರ್ ಒಪ್ಪಂದ ರದ್ದುಗೊಳಿಸಲು ಆಗ್ರಹಿಸಿ, ರಾಜ್ಯ ಸರಕಾರ ಹಗರಣದ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಪಿಐಎಂ ದ.ಕ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಸರ್ವೆ ನಂಬ್ರ 57/ಪಿರಲ್ಲಿರುವ 10.8 ಎಕರೆ ಜಮೀನು ಟಿ.ಡಿ.ಆರ್ ಅಡಿ ಖರೀದಿಸುವ ಮಂಗಳೂರು ಪಾಲಿಕೆಯ ಒಪ್ಪಂದ ರದ್ದುಗೊಳಿಸಲು ಆಗ್ರಹಿಸಿ, ರಾಜ್ಯ ಸರಕಾರ ಹಗರಣದ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ದಿನಾಂಕ 23-03-2024 ರಂದು ಮಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಸ್ಧ ಹಾಗೂ ಬಿಲ್ಡರ್ ಆಗಿರುವ ಗಿರಿಧರ್ ಶೆಟ್ಟಿ ಎಂಬವರ ದೂರಿನ ಆಧಾರದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡ) ಆಯುಕ್ತರಾದ ಮನ್ಸೂರ್ ಅಲಿ […]

Continue Reading

ದಕ್ಷಿಣ ಕನ್ನಡ: ಪದ್ಮ-ಚೌಟ ವಿಜಯದ ಮಾಲೆ ಯಾರಿಗೆ? ವರ್ಕೌಟ್ ಆಗುತ್ತಾ ಜಾತಿ-ರಾಜಕಾರಣ.. ಇಲ್ಲಿದೆ ಸಖತ್ತ್ ಡೀಟೈಲ್ಸ್.!

ಬಿಲ್ಲವರ ಪರಮೋಚ್ಚ ನಾಯಕ ಪೂಜಾರಿಗೆ ಕೈ ಕೊಟ್ಟ ಬಿಲ್ಲವರು, ಪದ್ಮರಾಜ್ ಕೈ ಹಿಡಿದಾರೇ.! ಬಲು ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಂಗಳೂರು ಲೋಕಸಭೆ ಮಾರ್ಪಟ್ಟಿದೆ. ಚುನಾವಣೆ ದಿನಾಂಕ ಮೊದಲು ಅನಾಯಾಸವಾಗಿ ಬಿಜೆಪಿ ವಿಜಯ ದುಂದುಭಿ ಮೊಳಗಿಸುತ್ತದೆ ಅನ್ನುವ ಸುದ್ಧಿಯಲ್ಲಿದ್ದ ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಕೂಡ ಗೆಲುವಿಗೆ ಪಟ್ಟು ಹಾಕಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಮಂಗಳೂರು ಲೋಕಸಭೆಯಲ್ಲಿ ನಂ 1 ಸ್ಥಾನದಲ್ಲಿರುವ ಬಿಲ್ಲವ ಮತದಾರರ ಜಾತಿ ಪ್ರೇಮ. ಹಿಂದುತ್ವದ ಕೋಟೆಯಲ್ಲಿ ಜಾತಿ ಸಮೀಕರಣ ವರ್ಕೌಟ್ ಆಗುತ್ತದಾ.? ಕಾಂಗ್ರೆಸ್ […]

Continue Reading

ಚುನಾವಣಾ ಕರ್ತವ್ಯದಲ್ಲಿದ್ದು ನಾಪತ್ತೆಯಾಗಿದ್ದ ಅಮ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೃತದೇಹ ಧರ್ಮಸ್ಥಳ ಸಮೀಪದ ಪಟ್ರೆ ಹೊಳೆಯಲ್ಲಿ ಪತ್ತೆ.

ಮಡಂತ್ಯಾರು ಮಾಲಾಡಿ ಗ್ರಾಮದ, ವಿದ್ಯಾನಗರ ನಿವಾಸಿ, ಕಳೆದ ಆರು ವರ್ಷಗಳಿಂದ ಬಂಟ್ವಾಳ ತಾಲೂಕು ಅಮ್ಮಾಡಿ ಗ್ರಾಮ ಪಂಚಾಯತ್‌ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀನಾರಾಯಣ ಕೆ (52ವ) ಎಂಬವರು, ಮಾ.27 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿ ಬರುವುದಾಗಿ ತನ್ನ ಪತ್ನಿಗೆ ತಿಳಿಸಿ ಹೋದವರು ನಾಪತ್ತೆಯಾಗಿದ್ದರು. ಸಂಜೆಯಾದರೂ ಮನೆಗೆ ಅವರು ಬಂದಿರಲಿಲ್ಲ, ಈ ಬಗ್ಗೆ ವಿಷಯ ತಿಳಿದ ಮನೆಯವರು ಅಮ್ಮಾಡಿ ಪಂಚಾಯತ್ ನಲ್ಲಿ ವಿಚಾರಿಸಿದಾಗ, ಅಲ್ಲಿನ ಸಿಬ್ಬಂದಿಗಳು ಕಾಯ೯ದಶಿ೯ಯವರು ಮಧ್ಯಾಹ್ನದವರೆಗೆ ಕರ್ತವ್ಯ ನಿರ್ವಹಿಸಿ ಹೋಗಿರುವುದಾಗಿ ತಿಳಿಸಿದ್ದರು. ಎಲ್ಲೆಡೆ ಹುಡುಕಾಡಿದರೂ […]

Continue Reading