ಸಾಲ ವಸೂಲಾತಿ ನೆಪದಲ್ಲಿ ವೃದ್ದೆ ಮೇಲೆ ದರ್ಪ; ಮಂಗಳೂರಿನ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಮತ್ತೊಂದು ಪ್ರಕರಣ

ಮಂಗಳೂರು: ಹಣಕಾಸು ವಹಿವಾಟು ಹೆಸರಿನಲ್ಲಿ ಅಮಾಯಕರನ್ನು ಪೀಡಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತಂದಿದ್ದರೂ ಸಹಕಾರಿ ಸಂಘಗಳು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಸಾಲ ವಸೂಲಾತಿ ಹೆಸರಲ್ಲಿ ಅಮಾಯಕ (ಸಾಲವನ್ನೇ ಪಡೆಯದ) ವೃದ್ಧೆಯನ್ನು ಪೀಡಿಸಿರುವ ಅಮಾನವೀಯ ಕೃತ್ಯವೊಂದು ಮಂಗಳೂರು ಬಳಿ ನಡೆದಿದೆ. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರ ಸಚಿವಾಲಯವನ್ನೇ ಮುಜುಗರಕ್ಕೀಡು ಮಾಡಿದೆ. ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಫೆರ್ನಾಂಡೀಸ್ […]

Continue Reading

ಪುತ್ತೂರು: ಹೆಲ್ಮೇಟ್ ಧರಿಸಿ ಮನೆ ದರೋಡೆಗೆ ಯತ್ನ, ದಂಪತಿ ಅರೆಸ್ಟ್; ಆರೋಪಿ ಕಾರ್ತಿಕ್ ರಾವ್ ಅರ್ಚಕ

ಪುತ್ತೂರು ಕಸಬಾ ನಿವಾಸಿ , ನಿವೃತ್ತ ಪ್ರಾಂಶುಪಾಲರಾದ ಎ.ವಿ ನಾರಾಯಣ (84) ಎಂಬವರ ಮನೆಯಲ್ಲಿ ಮಧ್ಯರಾತ್ರಿ ನಡೆದ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೊಲೀಸರು ದಂಪತಿಗಳ ಹೆಡೆಮುರಿ ಕಟ್ಟುವಲ್ಲಿ ಸಫಲರಾಗಿದ್ದಾರೆ. ಡಿಸೆಂಬರ್ 17 ,2025 ರಂದು ಮಧ್ಯರಾತ್ರಿ, ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಹೆಲ್ಮೆಟ್ ಧರಿಸಿಕೊಂಡು, ಮುಖಚಹರೆಯನ್ನು ಮರೆಮಾಚಿ, ನಾರಾಯಣ ಅವರ ಮನೆಯಿಂದ ಬೆಲೆ ಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಮನೆಯ ಹಿಂಬಾಗಿಲಿನಿಂದ ಮನೆಗೆ ಪ್ರವೇಶಿಸಿದ್ದರು . ಈ ಸಂದರ್ಭ ದರೋಡೆಕೋರರು ನಾರಾಯಣ ಹಾಗೂ ಅವರ […]

Continue Reading

ಸುಳ್ಯ: ರಿಕ್ಷಾ ಚಾಲಕ ಅಬ್ದುಲ್ ಜಬ್ಬಾರ್ ಅಸಹಜ ಸಾವಲ್ಲ; ಕೊಲೆ: ವೈದ್ಯಕೀಯ ವರದಿಯಲ್ಲಿ ದೃಢ. ಆರೋಪಿಗಳಾದ ರಫೀಕ್ ಪಡು, ಮನು ಬಂಧನ

ಸುಳ್ಯ ತಾಲೂಕಿನಲ್ಲಿ ಸಾಕಷ್ಟು ಸುದ್ಧಿಗೆ ಕಾರಣವಾಗಿದ್ದ ರಿಕ್ಷಾ ಚಾಲಕ ಅಬ್ದುಲ್ ಜಬ್ಬಾರ್ ಅವರದ್ದು ಅಸಹಜ ಸಾವಲ್ಲ, ಕೊಲೆ ಎಂಬುವುದಾಗಿ ಕೃತ್ಯ ನಡೆದ ಮೂರು ತಿಂಗಳ ನಂತರ ದೃಢವಾಗಿದ್ದು, ವೈದ್ಯಕೀಯ ವರದಿಯಲ್ಲಿ ಹಲ್ಲೆ ನಡೆಸಿದ ಪರಿಣಾಮ ಸಾವು ಸಂಭವಿಸಿದೆ ಎಂದು ದೃಡಪಡಿಸಿದೆ. ಅಕ್ಟೋಬರ್ 16 ರಂದು ಬಾಡಿಗೆ ನೆಪದಲ್ಲಿ ಮೊಹಮ್ಮದ್ ರಫೀಕ್ ಹಾಗೂ ಇತರರು ದುಗ್ಗಲಡ್ಕಕ್ಕೆ ಕರೆಸಿಕೊಂಡಿದ್ದರು. ಬಾಡಿಗೆಗೆಂದು ಹೊರಟ ಅಬ್ದುಲ್ ಜಬ್ಬಾರ್ ಅವರನ್ನು ಸುಳ್ಯ ಕಲ್ಲಗುಂಡಿಗೆ ಕರೆತಂದು ಮಾರಣಾಂತಿಕ ಹಲ್ಲೆ ನಡೆಸಿ ಬಿಟ್ಟಿದ್ದರು. ಮರುದಿನ ಹಲ್ಲೆಯಿಂದ ಅನಾರೋಗ್ಯಕ್ಕೀಡಾದ […]

Continue Reading

ಬಿಎಂಆರ್ ಲಕ್ಕಿ ಸ್ಕೀಂ: ಲಬೋ ಲಬೋ ಗ್ರಾಹಕರು. ಬಡ-ಮಧ್ಯಮ ವರ್ಗದವರಿಗೆ ಆಮಿಷ ತೋರಿಸಿ ಪಂಗನಾಮ.!

ಪ್ರಭಾವಿ ನಾಯಕರೊಂದಿಗೂ ಸಖ್ಯ. ಗಡುವು ಮುಗಿದು ಗ್ರಾಹಕರಿಗೆ ಉಂಡೆನಾಮ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಣಬೆಗಳಂತೆ ಹುಟ್ಟಿಕೊಂಡ ಲಕ್ಕಿ ಸ್ಕೀಂ ಗಳು ಬಾಗಿಲು ಮುಚ್ಚಿ ಗ್ರಾಹಕರು ಲಬೋ ಲಬೋ ಅನ್ನುವಂತಾಗಿದೆ. ಈಗಾಗಲೇ ಹತ್ತಾರು ಲಕ್ಕಿ ಸ್ಕೀಂ ಗಳು ಗೋತಾ ಹೊಡೆದು ಕೋಟಿ ಕೋಟಿ ದುಡ್ಡು ಬಾಚಿ ಎಸ್ಕೇಪ್ ಆಗಿದೆ. ಕೆಲವರು ಜೈಲು ಕಂಬಿ ಎಣಿಸಿದ್ದು ಇದೆ. ಅದರಲ್ಲೂ ಸುರತ್ಕಲ್ ಭಾಗದ ಪ್ರಭಾವಿಯೊಬ್ಬನ ಬಿಎಂಆರ್ ಲಕ್ಕಿ ಸ್ಕೀಂ ಕೂಡ ಮುಳುಗಡೆಯಾಗಿದೆ.ದುಡ್ಡು ಕಟ್ಟಿದ ಗ್ರಾಹಕರು ಬಿಎಂಆರ್ ಕಚೇರಿಗೆ ನುಗ್ಗಿ […]

Continue Reading

ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಸುಲಿಗೆ ಮಾಡಿದ ಆರೋಪಿಯ ಬಂಧನ; 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ವಶ.

ದಿನಾಂಕ: 25-12-2025 ರಂದು ಸಂಜೆ ಗುರುನಗರ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಯೆಯ್ಯಾಡಿಯಲ್ಲಿರುವ ತಮ್ಮ ಅಂಗಡಿಯಿಂದ ಮನೆಯ ಕಡೆಗೆ ಶಂಕರಭವನ ಹೊಟೇಲ್ ಬಳಿಯ ಕೊಪ್ಪಳಕಾಡು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಸಂಜೆ ಸುಮಾರು 6.30 ಗಂಟೆಗೆ ಹಿಂದಿನಿಂದ ಬಂದ ಓರ್ವ ಅಪರಿಚಿತ ವ್ಯಕ್ತಿ ಏಕಾಏಕಿ ರತ್ನಾವತಿಯವರ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಬೆಲೆ ಬಾಳುವ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ಓಡಿ ಹೋಗಿರುತ್ತಾನೆ. ಈ ಬಗ್ಗೆ ಅದೇ ದಿನ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 128/2025 ರಂತೆ […]

Continue Reading

ಮಳಲಿ: ಅನೈತಿಕ ಪೊಲೀಸ್ ಗಿರಿ; ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು; ಪ್ರತ್ಯೇಕ ಪ್ರಕರಣ ದಾಖಲು

ಅಮಾಯಕರ ಪೋಟೋ ವೈರಲ್ ಮಾಡಿದರೆ ಕ್ರಮ ಎಂದ ಪೊಲೀಸ್ ಕಮಿಷನರ್ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ಎಂಬಲ್ಲಿ ತಂದೆ ಮಗಳ ಮೇಲೆ ಅನೈತಿಕ ಪೊಲೀಸ್ ಗಿರಿ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಎರಡೂ ಕಡೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮೂಲರಪಟ್ನ ನಿವಾಸಿ ಅಬ್ದುಲ್ ಸತ್ತಾರ್ ಎಂಬವರು ತನ್ನ ಅಪ್ರಾಪ್ತ ವಯಸ್ಸಿನ ಮಗಳ ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಮಳಲಿ ನಾರ್ಲಪದವು ಬಳಿ ಟಾಟಾ ಸುಮೊ ವಾಹನದಲ್ಲಿ ಬಂದ ಇಬ್ಬರು ಬೈಕನ್ನು ಅಡ್ಡಗಟ್ಟಿ, […]

Continue Reading

ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ: ಮಾಜಿಗಳದ್ದೇ ದರ್ಬಾರ್.!

ಅಧಿಕಾರ ಅವಧಿ ಮುಗಿದರೂ ಅಧಿಕಾರ ಗುಂಗಿನಿಂದ ಹೊರಬರದ ಸದಸ್ಯರು; ಪ್ರತಿಭೆಗಳ ‘ಮಾಸ್ಟರ್’ ಪೀಸ್.! ಅಬ್ಬಬ್ಬಾ..ಅಧಿಕಾರದ ಅವಧಿ ಮುಗಿದು ಹತ್ತಿರ ಹತ್ತಿರ ಆರು ತಿಂಗಳಾಗುತ್ತಾ ಬಂದರೂ ಅಧಿಕಾರದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಫ್ಲೆಕ್ಸ್, ಸಮಾರಂಭಗಳಲ್ಲಿ ಇವರದ್ದೇ ರಾರಾಜಿಸುವ ಪೋಟೋಗಳು. ಸರಕಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದರೂ ತಾವಿನ್ನೂ ಮಾಜಿಗಳು ಎಂಬುದನ್ನು ಮರೆತು ಹಾಲಿ ರೀತಿ ವರ್ತಿಸುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ಸಲಹಾ ಸಮಿತಿಯ ಕಥೆ ವ್ಯಥೆಯ ಕಥೆ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅವಧಿ […]

Continue Reading

ಬೆದರಿಸಿ ಬಲವಂತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಕೋಡಿಕೆರೆ ಗ್ಯಾಂಗಿನ ನಾಲ್ವರು ಆರೋಪಿಗಳು ಅಂಧರ್

ಅಧಿಕ ಬಡ್ಡಿಗೆ ಸಾಲ ನೀಡಿ, ಬಳಿಕ ಸಾಲ ಪಡೆದವರನ್ನು ಬೆದರಿಸಿ ಬಲವಂತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಕೋಡಿಕೆರೆ ಗ್ಯಾಂಗಿನ ನಾಲ್ವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗಜೇಂದ್ರ ಬಜಿಲಕೇರಿ, ಶರತ್ ಗಟ್ಟಿ, ಪ್ರದೀಪ್ ಮತ್ತು ಧನರಾಜ್ ವಳಚ್ಚಿಲ್ ಎಂದು ಗುರುತಿಸಲಾಗಿದ್ದು, ಇವರು ಮನೋಜ್ ಕೋಡಿಕೆರೆ ಗ್ಯಾಂಗ್ ನ ಸದಸ್ಯರು. ಬಡ್ಡಿಗೆ ಹಣ ನೀಡಿ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಗಳು ಬೆದರಿಸಿ ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ […]

Continue Reading

ಸುರತ್ಕಲ್: ಆರೋಗ್ಯದ ಹಕ್ಕಿನ ಹೋರಾಟವನ್ನು ಜನತೆಯ ನಡುವೆ ವಿಸ್ತಾರಗೊಳಿಸಲು ನಿರ್ಧಾರ; ಯಶಸ್ವಿ ಸಮಾಲೋಚನಾ ಸಭೆ

ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳ ಸ್ಥಾಪನೆ ಸೇರಿದಂತೆ ಸರಕಾರಿ ಆಸ್ಪತ್ರೆಗಳ ಬಲವರ್ಧನೆಯ ಬೇಡಿಕೆಗಳ ಮೇಲೆ ನಡೆಯುತ್ತಿರುವ ಹೋರಾಟದ ಮುಂದಿನ ಹಂತದ ಕುರಿತು ಚರ್ಚಿಸಲು ಚೊಕ್ಕಬೆಟ್ಟು MJM ಸಭಾಂಗಣದಲ್ಲಿ‌ ಆಯೋಜಿಸಿದ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ ಯಶಸ್ವಿಯಾಗಿ ನಡೆಯಿತು. ಮುಂದಿನ‌ ಹಂತದಲ್ಲಿ ಸುರತ್ಕಲ್ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿ ಇರುವ ಸಂಘ ಸಂಸ್ಥೆಗಳನ್ನು‌ ಸಂಪರ್ಕಿಸುವುದು, ಸಮುದಾಯ ಆಸ್ಪತ್ರೆ, ಕ್ಯಾನ್ಸರ್, ಹೃದಯದ ಆಸ್ಪತ್ರೆಗಳ ಸ್ಥಾಪನೆ ಸಹಿತ ಹೋರಾಟ ಸಮಿತಿ ಮುಂದಿಟ್ಟಿರುವ […]

Continue Reading

ಡಿ. 29, 30 : ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ

ಡಿ. 31 ಹಾಗೂ ಜನವರಿ 1 ರಂದು ದಿ| ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಅಂಬಲಪಾಡಿ ನಾಟಕೋತ್ಸವ ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ “ರಂಗಭೂಮಿ ರಂಗ ಶಿಕ್ಷಣ” ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250 ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳ ಪ್ರದರ್ಶನ `ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ‘ ಡಿ.29 ಮತ್ತು ಡಿ.30 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 […]

Continue Reading