ಕಾರ್ಪೊರೇಟ್ ಪರ ಕಾರ್ಮಿಕ ಸಂಹಿತೆಗಳ ವಿರುದ್ಧ ದೇಶಾದ್ಯಂತ ಪ್ರಬಲ ಮುಷ್ಕರ ; ಮಂಗಳೂರಿನಲ್ಲಿ ಕಾರ್ಮಿಕರ ಮೆರವಣಿಗೆ, ಪ್ರತಿಭಟನಾ ಸಭೆ

ಕಾರ್ಮಿಕ ವರ್ಗದ ಪ್ರಮುಖ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ರೂಪಿಸಿದ ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ,ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದೇಶಾದ್ಯಂತ ನಡೆದ ಮಹಾಮುಷ್ಕರ ಮಂಗಳೂರಿನಲ್ಲಿಯೂ ಅತ್ಯಂತ ಯಶಸ್ವಿಯಾಗಿ ನಡೆದಿದೆ.ಎಲ್ಲಾ ವಿಭಾಗದ ಕಾರ್ಮಿಕರು,ಮಾಧ್ಯಮ ವರ್ಗದ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ._ ನಗರದ ಅಂಬೇಡ್ಕರ್ ವ್ರತ್ತದಿಂದ ಸಾವಿರಕ್ಕೂ ಮಿಕ್ಕಿದ ಕಾರ್ಮಿಕರು, ನೌಕರರು ಕೇಂದ್ರ ಸರ್ಕಾರದ ಆಕ್ರಮಣಕಾರಿ ನೀತಿಗಳ ವಿರುದ್ಧ ತೀವ್ರ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಬಳಿಕ ಕ್ಲಾಕ್ […]

Continue Reading

ಆಧುನಿಕ ಸೌಲಭ್ಯ, ಉನ್ನತ ವಿಧಾನ, ನುರಿತ ಅಧ್ಯಾಪಕರನ್ನು ನಿಯೋಜಿಸಲಾಗಿದೆ, ಸಾಧನೆ ಮಾಡುವ ಇಚ್ಛಾಶಕ್ತಿ ಮತ್ತು ಶ್ರಮ ವಿದ್ಯಾರ್ಥಿಗಳಲ್ಲಿ ಇರಬೇಕು: ನಿವೃತ್ತ ಡಿಸಿಪಿ. ಜಿ. ಎ ಬಾವಾ

ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಆರಂಭದ ಹಂತದಲ್ಲೇ ಸರಿಯಾದ ಶೈಕ್ಷಣಿಕ ಮಾರ್ಗದರ್ಶನ ಮತ್ತು ಉತ್ತೇಜನ ನೀಡುವ ಉದ್ದೇಶದಿಂದ ಇಂದು ವಿ.ಕೆ. ಒಬೇದುಲ್ಲಾ ಸ್ಕೂಲ್ ನಲ್ಲಿ ಹೆತ್ತವರ ಜೊತೆ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ ನಡೆಯಿತು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಶಿಸ್ತು, ಕಲಿಕೆಯ ವಿಧಾನ ಮತ್ತು ಕಲಿಯ ಗುರಿಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು. ಹೆತ್ತವರು ತಮ್ಮ ಮಕ್ಕಳ ಕುರಿತ ಕಾಳಜಿ ಮತ್ತು ಪಾತ್ರಗಳನ್ನು ನಿರ್ವಹಿಸುವ ಬಗ್ಗೆಯೂ ಮನಮುಟ್ಟುವ ಹಿತವಚನ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಡಿಸಿಪಿ ಜಿ. ಎ. ಬಾವಾರವರು […]

Continue Reading

ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ: ನಿಷ್ಪಕ್ಷಪಾತ ತನಿಖೆ, ದೂರುದಾರ ಹಾಗು ನ್ಯಾಯವಾದಿಗಳಿಗೆ ರಕ್ಷಣೆ ಒದಗಿಸಲು ಸಿಪಿಐಎಂ ಆಗ್ರಹ

“ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ ಹತ್ಯೆಗಳು, ಅತ್ಯಾಚಾರಗಳು ಸರಣಿಯಾಗಿ ನಡೆದಿದೆ, ನನ್ನಿಂದಲೆ ಈ ಶವಗಳನ್ನು ಹೂತು ಹಾಕಿಸಿದ್ದಾರೆ, ವಿಲೆವಾರಿ ಮಾಡಿಸಿದ್ದಾರೆ. ನಾನು ಧರ್ಮಸ್ಥಳ ದೇವಸ್ಥಾನದ ಆಡಳಿತದಡಿ ಆ ಸಂದರ್ಭ ನೈರ್ಮಲ್ಯ ಕಾರ್ಮಿಕನಾಗಿದ್ದೆ” ಎಂದು ಗುರುತು ಮರೆಮಾಚಲ್ಪಟ್ಟ ವ್ಯಕ್ತಿಯೋರ್ವ ವಕೀಲರುಗಳ ಉಪಸ್ಥಿತಿಯಲ್ಲಿ ದೂರು ದಾಖಲಿಸಿರುವ ಪ್ರಕರಣ ಸಾರ್ವಜನಿಕ ವಲಯದಲ್ಲಿ ಕಂಪನಗಳನ್ನು ಎಬ್ಬಿಸಿದೆ. ಭೀತಿಗೆ ಕಾರಣವಾಗಿದೆ. ಈ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿ ಹಾಗು ಆಸುಪಾಸು ಪತ್ತೆಯಾಗಿದ್ದ ಅನುಮಾನಾಸ್ಪದ, ಸಾಲು ಸಾಲು ಅನಾಥ ಶವಗಳು, ಆ ಕುರಿತು ಸಾರ್ವಜನಿಕವಾಗಿ ವ್ಯಕ್ತವಾಗಿದ್ದ ಅನುಮಾನಗಳಿಗೆ […]

Continue Reading

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ವೀಸಾ ಕೊಡಿಸುವುದಾಗಿ ವಂಚನೆ- ಅಬ್ದುಲ್ ಸತ್ತಾರ್ ಖಾನ್, ಕಿಶೋರ್ ಕುಮಾರ್ ಅರೆಸ್ಟ್‌

ಬೆಂದೂರ್‌ವೆಲ್‌ನಲ್ಲಿ ಹೈರ್‌ಗ್ಲೋ ಎಲಿಗಂಟ್ ಓವರ್‌ಸೀಸ್ ಇಂಟರ್‌ನ್ಯಾಷನಲ್ (ಪ್ರೈ) ಲಿಮಿಟೆಡ್ ಎಂಬ ಕಚೇರಿ, 286 ಜನರಿಗೆ ಮೋಸ, 4.5 ಕೋಟಿ ರೂ. ವಂಚನೆ ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಹೇಳಿ ನಂಬಿಸಿ ಮಂಗಳೂರು ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಮುಂಬೈನ ಇಬ್ಬರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಂಬೈ ನಿವಾಸಿಗಳಾದ ದಿಲ್ಶಾದ್ ಅಬ್ದುಲ್ ಸತ್ತಾರ್ ಖಾನ್ (45), ಹಾಗೂ ಸಾಹುಕಾರಿ ಕಿಶೋರ್ ಕುಮಾರ್ ಯಾನೆ ಅನಿಲ್ ಪಾಟೀಲ್ (34) ಬಂಧಿತ ಆರೋಪಿಗಳು. ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ ಹೈರ್‌ಗ್ಲೋ ಎಲಿಗಂಟ್ […]

Continue Reading

ಪಾಣೆಮಂಗಳೂರು ಸೇತುವೆ ಧಾರಣಾ ಸಾಮರ್ಥ್ಯ; ಎನ್ಐಟಿಕೆ ತಂಡದಿಂದ ವರದಿ ಸಲ್ಲಿಕೆ.

ತಾತ್ಕಾಲಿಕವಾಗಿ ಲಘ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ಬಂಟ್ವಾಳ : ಬಿ.ಸಿ ರೋಡಿನಿಂದ ಪಾಣೆಮಂಗಳೂರು ಪೇಟೆಗೆ ಸಂಪರ್ಕ ಕಲ್ಪಿಸುವ ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸುರತ್ಕಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್ ಐ ಟಿ ಕೆ) ಇದರ ಅಧಿಕಾರಿಗಳು ಜೂನ್ 26 ರಂದು ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರ ಉಪಸ್ಥಿತಿಯಲ್ಲಿ ಸೇತುವೆಯ ಧಾರಣಾ ಸಾಮಥ್ರ್ಯವನ್ನು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಜುಲೈ 3 ರಂದು ತಾತ್ಕಾಲಿಕ ವರದಿ ನೀಡಿದ್ದಾರೆ. ಧಾರಣಾ ಸಾಮಥ್ರ್ಯ […]

Continue Reading

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ಉಡುಪಿ : ಖ್ಯಾತ ವಿದ್ವಾಂಸ, ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ತಮ್ಮ ಮಾತಪಿತರ ಸ್ಮರಣಾರ್ಥ ಯಕ್ಷಗಾನ ಕಲಾರಂಗದ ಮೂಲಕ ಕೊಡ ಮಾಡುವ ಪ್ರತಿಷ್ಠಿತ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ಶುಕ್ರವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಖ್ಯಾತ ವಿದ್ವಾಂಸ, ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಿದ್ವಾನ್ ಗುಂಡಿಬೈಲು […]

Continue Reading

ರಾಶಿ ರಾಶಿ ಸೆಕ್ಸ್ ವಿಡಿಯೋ.. ತನ್ನದೇ ಭಂಗಿಯಾಟದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಕಾಮುಕ ‘ಧರ್ಮ ರಕ್ಷಕ’ ಧರೆಗುಡ್ಡೆ.!

ಹೊರಗಡೆ ಹಿಂದುತ್ವದ ‘ಜಾಗರಣೆ’.. ಒಳಗಡೆ ‘ಕಾಮ ಕಸರತ್ತು’.. ಸಿಂಗಂ ಏಟಿಗೆ ಹೊರಬಂತು ಹಿಂದೂ ರಕ್ಷಕನ ಅಸಲಿ ಹಕೀಕತ್ತು.! ಅಬ್ಬಬ್ಬಾ.. ವೇದಿಕೆ ಸಿಕ್ಕರೆ ಸಾಕು ಧರ್ಮ ರಕ್ಷಣೆಯ ಪುಂಖಾನುಪುಂಖ ಮಾತು, ಉದ್ದುದ್ದದ ನಾಮ, ಕೇಸರಿ ಶಾಲು ಹೆಗಲೇರಿಸಿಕೊಂಡು ಗೋರಕ್ಷಣೆ, ಧರ್ಮದ ಜಾಗರಣೆ ಹೆಸರಿನಲ್ಲಿ ಮಾಡುವುದು ಹಲಾಲುಕೋರತನದ ಕೆಲಸ. ಅಂತಹ ಕಾಮ ಪಿಶಾಚಿಯೊಬ್ಬನ ಅಸಲಿ ಹಕೀಕತ್ತು ಇದೀಗ ಬಯಲಿಗೆ ಬಂದಿದೆ. ಮೂಡಬಿದ್ರೆ ಬಿಜೆಪಿ ನಾಯಕನ ಲೆಫ್ಟ್ ರೈಟ್ ಗಳಲ್ಲಿ ಗುರುತಿಸಿಕೊಂಡಿದ್ದ ಕಟ್ಟರ್ ಹಿಂದುತ್ವವಾದಿ ಸಮಿತ್ ರಾಜ್ ಧರೆಗುಡ್ಡೆಯ ಅಸಲಿ ಕಾಮಕಾಂಡ […]

Continue Reading

ನಗರದಲ್ಲಿ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಡ್ರಗ್ಸ್ ಸಪ್ಲೈ, ಮಾಲು ಸಹಿತ ಆರೋಪಿಗಳ ಹೆಡೆಮುರಿ ಕಟ್ಟಿದ ಸೆನ್‌ ಪೊಲೀಸರು

ಪೋಷಕರ ಒಂದು ದೂರಿನಿಂದ 200 ಮಂದಿಗೆ ಡ್ರಗ್ಸ್‌ ಪೂರೈಕೆಗೆ ತಡೆ: ಮಂಗಳೂರು ಪೊಲೀಸ್ ಕಮೀಷನರ್ ನಗರದಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತರಿಸಲಾದ ಗಾಂಜಾವನ್ನು ಪಾಲು ಮಾಡುತ್ತಿದ್ದ ಐವರನ್ನು ನಗರದ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಸೆನ್‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ಮಂಗಳೂರಿನ ಬಿಕರ್ನಕಟ್ಟೆ ಮರೋಳಿ ನಿವಾಸಿ ತುಷಾರ್‌ ಅಲಿಯಾಸ್‌ ಸೋನು, ನಾಗುರಿಯ ದ್ವನಿ ಶೆಟ್ಟಿ, ಜಲ್ಲಿಗುಡ್ಡೆಯ ಸಾಗರ್‌ ಕಕೇರಾ, ಶಕ್ತಿನಗರದ ವಿಕಾಸ್‌ ಥಾಪ ಅಲಿಯಾಸ್‌ ಪುಚ್ಚಿ, ಮತ್ತು ಅಳಕೆ ಕಂಡೆಟ್ಟುವಿನ ವಿಘ್ನೇಶ್‌ ಕಾಮತ್‌ […]

Continue Reading

ಉಡುಪಿಯನ್ನೇ ಅಡ್ಡೆ ಮಾಡಿಕೊಂಡಿದ್ದ ಡ್ರಗ್ಸ್ ಪೆಡ್ಲರ್ ಗಳು.! ಅಂತರಾಜ್ಯ ಡ್ರಗ್ಸ್ ದಂಧೆಕೋರರ ಮಟ್ಟ ಹಾಕಿದ ಕೇಂದ್ರ NCB: ಅಮಿತ್ ಶಾ ಶ್ಲಾಘನೆ

ಉಡುಪಿ ಸೇರಿದಂತೆ ದೇಶದ ಹಲವು ನಗರಗಳ ಮೂಲಕ 10 ಕ್ಕೂ ಹೆಚ್ಚು ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬೃಹತ್ ಮಾದಕ ವಸ್ತು ಜಾಲವನ್ನು ಮಾದಕ ವಸ್ತು ನಿಗ್ರಹ ದಳ ಬಯಲಿಗೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ (NCB) ಎಂಟು ಮಂದಿಯನ್ನು ಬಂಧಿಸಿ ಅಪಾರ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಗ್ಯಾಂಗ್ ಉಡುಪಿಯನ್ನೇ ಅಡ್ಡೆ ಮಾಡಿಕೊಂಡು ಕಾಲ್ ಸೆಂಟರ್ ಸ್ಥಾಪಿಸಿ ಆ ಮೂಲಕ ಡ್ರಗ್ಸ್ ವ್ಯವಹಾರದ ಕಾರ್ಯಾಚರಣೆ ನಡೆಸುತ್ತಿತ್ತು. ಉಡುಪಿ, ದಿಲ್ಲಿ, ಜೈಪುರ, ರೂರ್ಕಿಯಲ್ಲಿ ಕಾಲ್ […]

Continue Reading

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಗಣನೀಯ ಹೆಚ್ಚಳ; 6 ತಿಂಗಳಲ್ಲಿ 380 ಹೃದಯಾಘಾತ ಪ್ರಕರಣ, 85 ಮಂದಿ ಸಾವು: ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ

ರಾಜ್ಯದ ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಯುವಕರು ಹೃದಯಾಘಾತದಿಂದ ಮೃತಪಟ್ಟ ಸುದ್ದಿಗಳು ವರದಿಯಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಿನ ಹೃದಯಾಘಾತ ಸಾವುಗಳು ಸಂಭವಿಸಿವೆ ಎಂಬ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ದಕ್ಷಿಣ ಕನ್ನಡದಲ್ಲಿ ಕಳೆದ ಆರು ತಿಂಗಳಲ್ಲಿ 85 ಮಂದಿ ಹೃದಯಾಘಾತದಿಂದ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಚ್‌ಆರ್ ತಿಮ್ಮಯ್ಯ […]

Continue Reading