ಬಿ.ಸಿ ರೋಡ್-ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯ ಸಾಮರ್ಥ್ಯ ಪರಿಶೀಲನೆ

ಎನ್ ಐ ಟಿ ಕೆ ಅಧಿಕಾರಿಗಳ, ಪುರಸಭಾಧ್ಯಕ್ಷರ ಉಪಸ್ಥಿತಿಯಲ್ಲಿ ಸೇತುವೆಯ ಧಾರಣಾ ಸಾಮರ್ಥ್ಯ ಪರಿಶೀಲನೆ ಬಂಟ್ವಾಳ: ಬಿ.ಸಿ ರೋಡಿನಿಂದ ಪಾಣೆಮಂಗಳೂರು ಪೇಟೆಗೆ ಸಂಪರ್ಕ ಕಲ್ಪಿಸುವ ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸುರತ್ಕಲಿನ ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯದ (ಎನ್ ಐ ಟಿ ಕೆ) ಅಧಿಕಾರಿಗಳು ಗುರುವಾರ ಪುರಸಭಾಧ್ಯಕ್ಷ ಬಿ. ವಾಸು ಪೂಜಾರಿ ಲೊರೆಟ್ಟೊ ಅವರ ಉಪಸ್ಥಿತಿಯಲ್ಲಿ ಸೇತುವೆಯ ಧಾರಣಾ ಸಾಮರ್ಥ್ಯವನ್ನು ಪರಿಶೀಲನೆ ನಡೆಸಿದ್ದಾರೆ. ಎನ್ ಐ ಟಿ ಕೆ ಪ್ರೊಫೆಸರ್ ಡಾ ಪಲಿನಿ ಸ್ವಾಮಿ ವಿಜಯನ್ […]

Continue Reading

ಹೈಸ್ಕೂಲಿನಲ್ಲಿ ಲವ್, ಕಾಲೇಜಿನಲ್ಲಿ ಡೆಲಿವರಿ.! ಬಿಜೆಪಿ ಮುಖಂಡನ ಪುತ್ರ ಭೂಗತ

ಪುತ್ತೂರು ಲವ್, ಸೆಕ್ಸ್, ದೋಖಾ ಕಹಾನಿ.! ಪ್ರತಿಷ್ಠಿತ ಕುಟುಂಬದ ಪ್ರೇಮ ಕಹಾನಿ ಕೊನೆಗೂ ಬೀದಿಗೆ ಬಿದ್ದಿದೆ. ಮಾತೃ ದೇವೋ ಭವ ಅನ್ನುವ ಬಿಜೆಪಿ ಮುಖಂಡನ ಪುತ್ರನೇ ಯುವತಿಯೊಬ್ಬಳಿಗೆ ಗರ್ಭದಾರಣೆ ಮಾಡಿ ವಂಚಿಸಿ ಪರಾರಿಯಾಗಿದ್ದಾನೆ. ಹೈಸ್ಕೂಲಿನಲ್ಲಿ ಉಂಟಾಗಿದ್ದ ಪ್ರೇಮ ಕಹಾನಿ ಕಾಲೇಜಿನಲ್ಲಿ ಮಗುವಿಗೆ ಜನ್ಮ ನೀಡುವ ಹಂತಕ್ಕೆ ಬಂದು ತಲುಪಿದೆ. ಪುತ್ತೂರು ಲವ್, ಸೆಕ್ಸ್, ದೋಖಾ ಕಹಾನಿ ಇದೀಗ ದೊಡ್ಡ ಸುದ್ಧಿಯಾಗುತ್ತಿದೆ. ಎಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ಸಹಪಾಠಿ ತರುಣಿಯನ್ನು ಪ್ರೀತಿಸಿ ಆಕೆಯನ್ನು ಗರ್ಭವತಿ ಮಾಡಿದ ಪ್ರಕರಣಕ್ಕೆ ಇದೀಗ ರೋಚಕ […]

Continue Reading

ಜಾತಿ ನಿಂದನೆ ಪ್ರಕರಣ: ತಂದೆ, ಮಗ ದೋಷಮುಕ್ತ; ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ

ಜಾತಿ ನಿಂದನೆ ಆರೋಪ ಎದುರಿಸುತ್ತಿದ್ದ ನೆಲ್ಯಾಡಿ ನಿವಾಸಿಗಳಾದ ಗಣಪಯ್ಯ ಗೌಡ ಹಾಗೂ ಮಗ ಸೋಮಶೇಖರ ಗೌಡರನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ನೀಡಿದೆ. ನೆಲ್ಯಾಡಿ ಗ್ರಾಮದ ನಿವಾಸಿ ಅಣ್ಣು ಎಂಬವರು 22-2-2017ರಂದು ರಾತ್ರಿ ಮನೆಯಲ್ಲಿದ್ದ ಸಮಯ ನೆರೆ ಮನೆಯ ಗಣಪಯ್ಯ ಗೌಡ, ಮಗ ಸೋಮಶೇಖರ ಏಕಾಏಕಿಯಾಗಿ ಅಣ್ಣು ಅವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕೈ ಹಾಗೂ ಕತ್ತಿಯಿಂದ ಹಲ್ಲೆ […]

Continue Reading

ಮಂಗಳೂರಿನ ಕ್ರೈಂ ಇತಿಹಾಸದಲ್ಲೇ ಅತ್ಯಂತ ಭಯಾನಕ ಡಬ್ಬಲ್ ಮರ್ಡರ್ ನಡೆದಿದ್ದು ಮಂಗಳೂರು ಸಬ್ ಜೈಲಿನಲ್ಲಿ.! ಇದೀಗ ಮತ್ತೆ ಸಬ್ ಜೈಲೊಳಗೆ ಮಾರಾಮಾರಿ

ಅಕ್ಷಯ್ ಹಂತಕ ಕೇಶವ ಮೇಲೆ ಮುಗಿಬಿದ್ದ ನಟೋರಿಯಸ್ ರೌಡಿ ಮುಖ್ತಾರ್ ನ ಪಡೆ.. ಚೊಟ್ಟೆ ನೌಶಾದ್ ಮೇಲೂ ನಡೆದಿತ್ತು ಅಟ್ಯಾಕ್.! ಮಂಗಳೂರಿನ ಕ್ರೈಂ ಇತಿಹಾಸದಲ್ಲೇ ಅತ್ಯಂತ ಘೋರ ಘಟನೆ ನಡೆದದ್ದು 2015 ನವೆಂಬರ್ 2 ರಂದು. ಅದು ಮಂಗಳೂರಿನ ಸಬ್ ಜೈಲಿನಲ್ಲಿ. ಈ ಸಬ್ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದ ಮಾಡೂರು ಯೂಸುಫ್ ಹಾಗೂ ಮೂಲತಃ ಮಂಗಳೂರಿನ ನಿವಾಸಿ ಮುಂಬೈ ಅಂಡರ್ ವರ್ಲ್ಡ್ ನಲ್ಲಿ ಗುರುತಿಸಿಕೊಂಡಿದ್ದ 1994 ರಲ್ಲಿ ಹಫ್ತಕ್ಕಾಗಿ ಮಹೇಂದ್ರ ಪ್ರತಾಪ್ ರನ್ನು ಕೊಂದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ, […]

Continue Reading

ರೈತರ ಭೂಮಿ ಸ್ವಾಧೀನದ ವಿರುದ್ದದ ಹೋರಾಟವನ್ನು ಹತ್ತಿಕ್ಕಲು ಮುಂದಾದ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣದ 13 ಗ್ರಾಮಗಳ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿರುವುದರ ವಿರುದ್ದ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಕರ್ನಾಟಕ ರಾಜ್ಯ ಸರಕಾರವು ರಾಜ್ಯ ಮಟ್ಟದ ರೈತ ಕಾರ್ಮಿಕ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಇಂದು(26-06-2025) ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಕ್ಲಾಕ್ ಟವರ್ ಬಳಿಯಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ನಾಯಕರಾದ ಕೆ ಯಾದವ […]

Continue Reading

ಮಂಗಳೂರು: ಅತ್ಯಾಧುನಿಕ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಕಾರ್ಯಾರಂಭ

ತೈಲ, ರಾಸಾಯನಿಕ ನಿರ್ವಹಣಾ ಕೈಗಾರಿಕೆಗಳಿಗೆ ನಿಖರ, ಸುರಕ್ಷಿತ ವ್ಯವಸ್ಥೆಗಾಗಿ ಈ ನೂತನ ಸೌಲಭ್ಯ ಮಂಗಳೂರು, ಜೂ.25:‘ಎಸ್‌ಎಸ್ ಮೆಟಲ್ಸ್ ಆಂಡ್ ಇಂಡಸ್ಟ್ರೀಸ್‌’ನ ಅತ್ಯಾಧುನಿಕ ಟ್ಯಾಂಕರ್ ಮಾಪನಾಂಕ ನಿರ್ಣಯ ಘಟಕ ಮಂಗಳವಾರ ನಗರದಲ್ಲಿ ಉದ್ಘಾಟನೆಗೊಂಡಿದೆ. ಮಂಗಳೂರಿನ ಓಷನ್ ಪರ್ಲ್ ಹೊಟೇಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಈ ಘಟಕವು ಮಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಬೃಹತ್ ತೈಲ, ರಾಸಾಯನಿಕ ನಿರ್ವಹಣೆ ಮಾಡುವ ಕೈಗಾರಿಕೆಗಳಿಗೆ ನಿಖರತೆ, ಸುರಕ್ಷತೆ ಮತ್ತು ನಿಯಂತ್ರಕ ಕ್ರಮಗಳನ್ನು ಅನುಸರಿಸಲು ಪೂರಕವಾಗಲಿದೆ.ಉದ್ಘಾಟನಾ ಸಮಾರಂಭದಲ್ಲಿ ಉದ್ಯಮದ ಮುಖಂಡರು ಮತ್ತು ಧಾರ್ಮಿಕ ನಾಯಕರು […]

Continue Reading

ವರ್ಕಾಡಿಯಲ್ಲಿ ನಡೆದ ಭೀಬತ್ಸ ಘಟನೆ: ಬೆಂಕಿ ಹಚ್ಚಿ ತಾಯಿಯನ್ನು ಕೊಂದ ಮಗ, ನೆರೆಮನೆಯ ಮಹಿಳೆಗೂ ಗಂಭೀರ

ಮಂಜೇಶ್ವರ: ರಾತ್ರಿ ಹೊತ್ತು ಮನೆಯಲ್ಲಿ ಮಲಗಿದ ತಾಯಿಗೆ ಬೆಂಕಿ ಹಚ್ಚಿ ಆಕೆಯನ್ನು ಕೊಂದು ಬಳಿಕ, ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ, ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದ್ದು ತಾಯಿ ಸಾವನ್ನಪ್ಪಿದ್ದಾರೆ. ನೆರೆಮನೆಯ ಮಹಿಳೆ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರ್ಕಾಡಿ ನಲ್ಲಂಗಿ ನಿವಾಸಿ ದಿ. ಲೂಯಿಸ್ ಮೊಂತೇರೋರವರ ಪತ್ನಿ ಹಿಲ್ಡಾ (60) ಮೃತಪಟ್ಟ ಮಹಿಳೆ. ಪುತ್ರ ಮೇಲ್ವಿನ್ ಈ ಕೃತ್ಯವೆಸಗಿಧ್ಧಾನೆ. ನೆರೆಮನೆಯ ವಿಕ್ಟರ್ ರವರ ಪತ್ನಿ ಲೊಲಿಟಾ (30) ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೂನ್ 26 ಗುರುವಾರ […]

Continue Reading

ಮಂಗಳೂರು-ಬೆಂಗಳೂರು ಪೆಟ್ರೋಲಿಯಂ ಸರಭರಾಜು ಪೈಪ್‌ಲೈನ್ ಗೆ ಕನ್ನ ಕೊರೆದು ಕಳ್ಳತನ, ಪ್ರಕರಣ ದಾಖಲು; ಕಳ್ಳತನಕ್ಕೆ ಬಳಸಿದ ಪರಿಕರ, ಟ್ಯಾಂಕರ್ ಪೊಲೀಸರ ವಶ

ಎಂಆರ್ ಪಿ ಎಲ್ ನ ಪೈಪ್‌ ಲೈನ್‌ ಕನ್ನ ಕೊರೆದು ಪೆಟ್ರೋಲ್‌ ಕಳ್ಳತನ ಮಾಡುತ್ತಿದ್ದ ಘಟನೆ ಚಿಕ್ಕಮಗಳೂರಿನ ಗೋಣಿಬೀಡು, ಹಿರೇಶಿಗರ ಎಂಬಲ್ಲಿ ಬೆಳಕಿಗೆ ಬಂದಿದೆ. ಹಾಸನ ಮಾರ್ಗವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್‌ ಸಾಗಿಸುವ ಪೈಪ್‌ಲೈನ್ ಸರಭರಾಜಿನಲ್ಲಿ ಸುಮಾರು 2 ಸಾವಿರ ಲೀಟರ್‌ ಪೆಟ್ರೋಲ್‌ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ ಎಂದು ಎಂಆರ್‌ಪಿಎಲ್‌ ಕಂಪನಿಯ ಮಾಹಿತಿ ಮೇರೆಗೆ ಕಂಪನಿ ಅಧಿಕಾರಿಗಳು ಗೋಣಿಬೀಡು ಪೊಲೀಸರ ಸಹಾಯ ಪಡೆದು ಪರಿಶೀಲಿಸಿದ್ದಾರೆ. ಈ ಸಂದರ್ಭ ಹಿರೇಶಿಗರ ಬಳಿ ನಂಬರ್‌ ಪ್ಲೇಟ್‌ ಇಲ್ಲದ ಪೆಟ್ರೋಲ್‌ ಸಾಗಿಸುವ […]

Continue Reading

ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬಿಜೆಪಿ ಸಭೆ.

ಕರ್ತವ್ಯ ಲೋಪ, ಬೇಜವಾಬ್ದಾರಿ ಆರೋಪದಲ್ಲಿ ಪಿ.ಡಿ.ಒ.ಗೋಕುಲ್ ದಾಸ್ ಭಕ್ತ ಸಸ್ಪೆಂಡ್. ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಇದೇ ಸಂದರ್ಭದಲ್ಲಿ ಬಂಟ್ವಾಳ ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಸಭೆ ನಡೆದಿದೆ. ರಾಜಕೀಯ ಪಕ್ಷಗಳ ಸಭೆಗಳು ಪಂಚಾಯತ್ ಸಭಾಂಗಣದಲ್ಲಿ ನಡೆಯುವಂತಿಲ್ಲ ಎಂಬ ಕಾನೂನು ಇದ್ದರೂ ಇಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ಅವಕಾಶ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಸಾಮಾಜಿಕ ಕಾರ್ಯಕರ್ತರೊಬ್ಬರು […]

Continue Reading

ಮೂಡಬಿದ್ರೆ: ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲಾ ವತಿಯಿಂದ ಶಂಸುಲ್ ಉಲಮಾ ಸ್ಮರಣಾರ್ಥ ಲಕ್ಷ್ಮೇಶ್ವರ ದೂದ್‌ನಾನಾ ಚಾರಿಟೇಬಲ್ ಟ್ರಸ್ಟ್ ಗೆ ಎರಡು ಆಂಬುಲೆನ್ಸ್ ಗಳ ಕೊಡುಗೆ

ದೂದ್ ನಾನ ವತಿಯಿಂದ ಬೆಳ್ತಂಗಡಿ ಹಝ್ರತ್ ಅನ್ವರ್ ಮಸ್ತಾನ್ ದರ್ಗಾಕ್ಕೆ ಒಂದು ಆ್ಯಂಬುಲೆನ್ಸ್ ಕೊಡುಗೆ ಮೂಡಬಿದಿರೆ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶೈಖುನಾ ಶಂಸುಲ್ ಉಲಮಾರವರ ಸ್ಮರಣಾರ್ಥ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಝ್ರತ್ ಸಯ್ಯಿದ್ ಸುಲೈಮಾನ್ ಬಾದುಶಾ ಖಾದ್ರಿ ಜಿಸ್ತಿಯಾ ಬಗ್ದಾದಿ ದೂದ್‌ನಾನಾ ದರ್ಗಾದ, ದೂದ್‌ನಾನಾ ಮುಹಿಬ್ಬೀನ್ ಚಾರಿಟೇಬಲ್ ಟ್ರಸ್ಟಿಗೆ ಸಾರ್ವಜನಿಕರ ಸೇವೆಗಾಗಿ ಎರಡು ಆಂಬುಲೆನ್ಸ್‌ಗಳನ್ನು ಮೂಡುಬಿದಿರೆಯ ಮಾರುತಿ ಶೋರೂಂನಿಂದ ಸಯ್ಯಿದ್ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿಯವರು ಬಿಡುಗಡೆಗೊಳಿಸಿದರು. ಎರಡು ಆಂಬುಲೆನ್ಸ್‌ಗಳಲ್ಲಿ ಒಂದನ್ನು ದೂದ್‌ನಾನಾ […]

Continue Reading