ವಿಟ್ಲ: ದಲಿತ ಬಾಲಕಿಯ ಮುಕ್ಕಿದ ವಿಕೃತ ಕಾಮುಕ ಮಹೇಶ್ ಭಟ್ಟನನ್ನು ಬಂಧಿಸಿ ಪೊಲೀಸರೇ. ಇಲ್ಲವೇ ಖಾಕಿ ಕಳಚಿ ಭಟ್ಟನ ತೋಟದಲ್ಲಿ ಕೆಲಸ ಮಾಡಿ: ಸಂತೋಷ್ ಕುಮಾರ್ ಬಜಾಲ್

ವಿಟ್ಲ : ಅಪ್ರಾಪ್ತ ದಲಿತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಬಂಧಿಸಬೇಕು ಹಾಗೂ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸಂತ್ರಸ್ತಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ವಿಟ್ಲದಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಆಕ್ರೋಶ ಮೆರವಣಿಗೆ ನಡೆಯಿತು.ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ನಾಡ ಕಛೇರಿ ಬಳಿ ಸಾರ್ವಜನಿಕ ಸಭೆ ನಡೆಸಿದರು. ದಲಿತ ಹಕ್ಕುಗಳ ರಾಜ್ಯ ಸಮಿತಿ ಮುಖಂಡರಾದ ಈಶ್ವರಿ ಪದ್ಮುಂಜ ಮಾತನಾಡುತ್ತಾ ದಲಿತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ […]

Continue Reading

ಉಳಾಯಿಬೆಟ್ಟು: ‘ಮರಣದ’ ಹಂಪ್ಸ್ ಗೆ ಕೊನೆಗೂ ಮುಕ್ತಿ.. ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗೆ ಸೂಚನೆ

ಸ್ಪೆಷಲ್ ನ್ಯೂಸ್ ವರದಿಗೆ ಸ್ಪಂದಿಸಿದ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಮಂಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯ ಲೋಕೋಪಯೋಗಿ ರಸ್ತೆಯಲ್ಲಿ ಅಪಾಯಕಾರಿ ಹಂಪ್ಸ್ ಮರಣದ ಹಂಪ್ಸ್ ಆಗಿ ಹಲವಾರು ಪ್ರಾಣ ಹಾನಿಗಳು ಸಂಭವಿಸಿದ ಬಗ್ಗೆ ಕೆಲವು ದಿನಗಳ ಹಿಂದೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ಇತ್ತೀಚೆಗೆ ನಾಲ್ಕರಿಂದ ಐದು ಅಪಘಾತ ಪ್ರಕರಣಗಳು ಅವೈಜ್ಞಾನಿಕ ಹಂಪ್ಸ್ ನಿಂದಾಗಿ ನಡೆದಿತ್ತು. ಮೊನ್ನೆಯಷ್ಟೇ ಇಫ್ತಾರ್ ಗಾಗಿ ಸಂಬಂಧಿಕರ ಮನೆಗೆ ಬಂದಿದ್ದ ಗುರುಪುರದ ಮಹಿಳೆಯೊಬ್ಬರು […]

Continue Reading

ಉದ್ಯಮಿ ರಾಕೇಶ್‌ ವೈಷ್ಣವ್‌ ಎಂಬುವರ ಹನಿಟ್ರ್ಯಾಪ್‌; ಲಕ್ಷಾಂತರ ಸುಲಿಗೆ ಪ್ರಕರಣ

ಡಿವೈಎಸ್ಪಿ, ಪಿಎಸ್‌ಐ ಹೆಸರು ಬಳಸಿ ಹಣ ವಸೂಲಿ, ಸಿಸಿಬಿ ಪೊಲೀಸರ ತನಿಖೆಯಿಂದ ಬಹಿರಂಗ ಉದ್ಯಮಿ ರಾಕೇಶ್‌ ವೈಷ್ಣವ್‌ ಎಂಬುವರನ್ನು ಹನಿಟ್ರ್ಯಾಪ್‌ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಿಕ್ಷಕಿ ಮತ್ತು ಆಕೆಯ ಪ್ರಿಯಕರ ಸೇರಿ ಮೂವರು ಆರೋಪಿಗಳು ಡಿವೈಎಸ್ಪಿ ಹಾಗೂ ಪಿಎಸ್‌ಐ ಹೆಸರು ಬಳಸಿಕೊಂಡಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಡಿವೈಎಸ್ಪಿ ಅರುಣ್‌ ಮತ್ತು ಪಿಎಸ್‌ಐ ಮುರಳಿ ಎಂಬುವರ ಹೆಸರು ಬಳಸಿಕೊಂಡಿದ್ದಾರೆ. ಆದರೆ, ಪ್ರಕರಣಕ್ಕೂ ಅಧಿಕಾರಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಸದ್ಯದ […]

Continue Reading

ಕೋಟೆಕಾರ್ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು CITU ಒತ್ತಾಯ

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು CITU ಸಂಯೋಜಿತ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಕೋಟೆಕಾರ್ ಪಟ್ಟಣ ಪಂಚಾಯತ್ ಆಡಳಿತವನ್ನು ಒತ್ತಾಯಿಸಿದೆ. ಈ ಬಗ್ಗೆ ಇಂದು(02-04-2025) ಸಂಘದ ಉನ್ನತ ಮಟ್ಟದ ನಿಯೋಗವೊಂದು ಪಂಚಾಯತ್ ನ ಮುಖ್ಯಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು. ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಸ್ಥರು ತಮ್ಮ‌ಪಾಡಿಗೆ ಬದುಕು ಕಟ್ಟಿಕೊಂಡು ದಿನಕಳೆಯುತ್ತಿದ್ದಾರೆ.ಅದರಲ್ಲಿ ಕೋಟೆಕಾರ್ ಬೀರಿ ಜಂಕ್ಷನ್ ಬಳಿ ಕಳೆದ ಹಲವಾರು ವರ್ಷಗಳಿಂದ ದೈನಂದಿನ […]

Continue Reading

ಮಂಗಳೂರು ಮನಪಾ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತದಲ್ಲಿ ಅವ್ಯವಸ್ಥೆ; ಜನರ ದುರ್ಗತಿಗೆ ಕಾರಣರಾದವರ ನಿಷ್ಕ್ರಿಯತೆ

ಖಾಲಿ ಜಮೀನುಗಳಿಗೆ ಇ-ಖಾತಾ ಪಡೆಯಲು ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (ಇಸಿ) ಡಿ.ಸಿ. ಹೊಸ ಕಟ್ಟಡದ ನಿರ್ಮಾಣದಲ್ಲಿ ಬ್ಯುಸಿ”; ಶಾಸಕರು, ಸಂಸದರು ಈ ಸಮಸ್ಯೆಯ ಬಗ್ಗೆ ಮೌನಿ.! ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಒಂದು ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಖಾಲಿ ಜಮೀನುಗಳಿಗೆ ಹೊಸ ಇ-ಖಾತಾ ನೀಡುವ ಸಂಬಂಧ ಮಂಗಳೂರು ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಕಾವೇರಿ 2.0 ಸಾಫ್ಟ್‌ವೇರ್‌ನ ರಾಜ್ಯ ಮಟ್ಟದ ಮೇಲ್ವಿಚಾರಕರು ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಖಾಲಿ ಜಮೀನುಗಳಿಗೆ ಇ-ಖಾತಾ ಪಡೆಯಲು ಎನ್‌ಕಂಬರೆನ್ಸ್ […]

Continue Reading

ಪೆರ್ಮುದೆ ಮನೆಯಲ್ಲಿ ಕಳ್ಳರ ಕೈಚಳಕ, ಕೆ.ಜಿ ಗಟ್ಟಲೆ ಚಿನ್ನಾಭರಣ ಕಳವು

12 ಸಿಸಿ ಕ್ಯಾಮರಾ, 11 ಹೈಬ್ರಿಡ್ ನಾಯಿಗಳು, ವಾಚ್ ಮ್ಯಾನ್ ಇದ್ದರೂ, ಲಾಕರ್ ಒಡೆದು ಚಿನ್ನಾಭರಣ ದೋಚಿದ ಕಳ್ಳರು ಬಜಪೆ: ಪೆರ್ಮುದೆ ಪೇಟೆಯಲ್ಲಿರುವ ಮನೆಯೊಂದರ ಕಿಟಿಕಿಯನ್ನು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಲಾಕರ್‌ನಲ್ಲಿದ್ದ ಸುಮಾರು ಒಂದು ಕೆ.ಜಿ. ಚಿನ್ನಾಭರಣ, ಕಳವು ಮಾಡಿರುವ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ ಬೆಳಕಿಗೆ ಬಂದಿದೆ. ಪೆರ್ಮುದೆಯ ನಿವಾಸಿ ಪ್ರವೀಣ್ ಪಿಂಟೋ ಎಂಬವರಿಗೆ ಸೇರಿದ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಜಾನ್ವಿನ್ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್‌ ಪಿಂಟೋ […]

Continue Reading

ವಿಟ್ಲ: ಮಹೇಶ್ ಭಟ್ಟರ ದಿನಸಿ ಅಂಗಡಿಯಲ್ಲಿ ಬೆಂಕಿ ದುರಂತ. ಒಕ್ಕೆತ್ತೂರು ಇಸ್ಮಾಯಿಲ್ ಸಾಬ್ರ ಸಮಯಪ್ರಜ್ಞೆ, ತಪ್ಪಿದ ಭಾರಿ ದುರಂತ.

ವಿಟ್ಲ : ಇಲ್ಲಿನ ಹೃದಯ ಭಾಗದ ನಾಲ್ಕು ರಸ್ತೆ ಜಂಕ್ಷನಲ್ಲಿರುವ ದಿನಸಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ತಕ್ಷಣವೇ ಸ್ಥಳೀಯ ಕಿಟ್ ಕ್ಯಾಟ್ ಪೆಟ್ ಶಾಪ್ ಮಾಲಿಕನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದಂತಾಗಿದೆ. ವಿಟ್ಲ-ಮಂಗಳೂರು ರಸ್ತೆಯಲ್ಲಿರುವ ನೆತ್ರಕೆರೆ ದಿನಸಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಮಾಲಿಕರಾದ ನೆತ್ರಕೆರೆ ನಿವಾಸಿ ಮಹೇಶ್ ಭಟ್ ಅವರು ದೇವರಿಗೆ ದೀಪ ಹಚ್ಚಿ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು. ಕೆಲ ಕ್ಷಣದಲ್ಲೇ ಅಂಗಡಿ ಒಳಗಡೆಯಿಂದ ಭಾರಿ ಪ್ರಮಾಣದಲ್ಲಿ ಹೊಗೆ ಬರಲಾರಂಭಿಸಿತು. […]

Continue Reading

ಕರಾವಳಿಯ ದೈವರಾಧನೆಗೂ ಬ್ಯಾರಿ ಮುಸ್ಲೀಮರಿಗೂ ಅವಿನಾನುಭವ ಸಂಬಂಧವಿದೆ.

ಬೈಲುಪೇಟೆ ಜುಮ್ಮಾ ಮಸೀದಿಯ ಧರ್ಮಗುರು ಮತ್ತು ಜುಮಾದಿಯ ಪೂಜಾರಿಯ ನಡುವಿನ ಮಾನವೀಯ ಸಂಬಂಧ ✍️. ನವೀನ್ ಸೂರಿಂಜೆ, ಪತ್ರಕರ್ತರು ದೈವವೆಂದರೆ ಹಾಗೆಯೇ ! ಎಲ್ಲರನ್ನೂ ಪ್ರೀತಿಸುವ, ಪೊರೆಯುವ ಶಕ್ತಿಗಳು. ಹಿಂದೂ, ಮುಸ್ಲಿಂ, ಗಂಡು, ಹೆಣ್ಣು, ಆಜಾನ್, ಗಂಟೆನಾದ ಇವುಗಳ ಮಧ್ಯೆ ದೈವಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಹಾಗಾಗಿಯೇ ಕರಾವಳಿಯ ಹಿಂದೂಗಳ ದೈವಾರಾಧನೆಯ ಜೊತೆಗೆ ಬ್ಯಾರಿ ಮುಸ್ಲೀಮರ ಕತೆಗಳು ಇರಲೇಬೇಕು ಕರ್ನಾಟಕದ ಕರಾವಳಿಯ ದೈವರಾಧನೆಗೂ ಬ್ಯಾರಿ ಮುಸ್ಲೀಮರಿಗೂ ಅವಿನಾನುಭವ ಸಂಬಂಧವಿದೆ. ಅನೇಕ ಕ್ರಾಂತಿಕಾರಿ ಮುಸ್ಲೀಮರು ತುಳುನಾಡಿನಲ್ಲಿ ಹಿಂದೂಗಳ ದೈವಗಳಾಗಿ ಆರಾಧನೆಗೊಳ್ಳುತ್ತಿದ್ದಾರೆ. […]

Continue Reading

ಮಂಗಳೂರು: ಮುಡಾ ಕಮೀಷನರ್ ಗೆ ಜೀವ ಬೆದರಿಕೆ, ವಾಮಾಚಾರ ಮಾಡುವುದಾಗಿ ಧಮ್ಕಿ, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು ನಗರದ ಮುಡಾ ಆಯುಕ್ತರಿಗೆ ಇಬ್ಬರು ಮಧ್ಯವರ್ತಿಗಳು ತಮಗೆ ಮಾನಹಾನಿಕರ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ, ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ಮಂಗಳೂರು ಮೂಡಾ ಆಯುಕ್ತೆ ಆರೋಪಿಸಿ, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜನವರಿ 7 ರಂದು ಸಿಬಂಧಿಗಳು ಊಟಕ್ಕೆ ಹೋದ ಸಮಯದಲ್ಲಿ ಮುಡಾ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ ಮೇಜಿನ ಮೇಲಿದ್ದ ಕಡತಗಳನ್ನು ವಿರೂಪಗೊಳಿಸಿದ ಆರೋಪದ, ಅಲ್ಲದೆ ಮೂಡಾದಲ್ಲಿ ನಡೆದಿರುವ ಕೆಲವು ವಿದ್ಯಾಮಾನ, ಮುಡಾ ಕಚೇರಿಯಲ್ಲಿನ ಏಕ-ಸ್ಥಳ ಅನುಮೋದನೆಗಳು ಮತ್ತು ಇತರ ಕೆಲಸಗಳಿಗೆ […]

Continue Reading

ಮಂಗಳೂರಿನಲ್ಲಿ ಸಂಚಲನ ಸೃಷ್ಟಿಸಿದ್ದ ನಂದಿಗುಡ್ಡೆ ಫ್ಲ್ಯಾಟ್ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣ ಸಾಕ್ಷ್ಯಾಧಾರ ಕೊರತೆಯಿಂದ ಆರೋಪಿಗಳು ಖುಲಾಸೆ

ಮಂಗಳೂರಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಅತ್ತಾವರದ ನಂದಿಗುಡ್ಡೆ ಫ್ಲ್ಯಾಟ್‌ನಲ್ಲಿ ನಡೆದಿದ್ದ ವೇಶ್ಯಾವಾಟಿಕೆ ಪ್ರಕರಣದ ಎಲ್ಲಾ 17 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. 2022 ರಲ್ಲಿ ಈ ಘಟನೆ ನಡೆದಿತ್ತು. ಮಂಗಳೂರಿನ ಮುಸ್ಲಿಂ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದ ಹಿಂದೆ ಪ್ರಭಾವೀಗಳು, ರಾಜಕಾರಣಿಗಳು ಶಾಮೀಲಾಗಿದ್ದರು. ಉಳ್ಳಾಲದ ಪ್ರಮುಖ ರಾಜಕಾರಣಿಗಳ ಸಹವರ್ತಿಗಳು ಹಾಗೂ ಬಿಲ್ಡರ್ ಗಳು ಸೇರಿದಂತೆ ಈ ಪ್ರಕರಣದಲ್ಲಿ 17 ಮಂದಿಯನ್ನು ಅಂದಿನ ಪೊಲೀಸ್ ಆಯುಕ್ತರಾದ ಶಶಿಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿತ್ತು. ಕಾಸರಗೋಡಿನ ಉಪ್ಪಳದ ಶಮೀನಾ ಎಂಬಾಕೆ […]

Continue Reading