ತಡರಾತ್ರಿಯಲ್ಲಿ ಟಯರ್ ಪಂಕ್ಚರ್ ಆಗಿ ಒದ್ದಾಡುತ್ತಿದ್ದ ಪ್ರಯಾಣಿಕರು; ಟಯರ್ ಬದಲಾಯಿಸಿ ಕೊಟ್ಟು ಮಾನವೀಯತೆ ಮೆರೆದ ಉಪ್ಪಿನಂಗಡಿ ಪೊಲೀಸರು.

ಉಪ್ಪಿನಂಗಡಿ ಸಮೀಪದ ರಾಮನಗದಲ್ಲಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ‘ಯಕ್ಷ ತೆಲಿಕೆ’ ಕಲಾವಿದರ ತಂಡ ನೆಕ್ಕಿಲಾಡಿ ತಲುಪುತ್ತಿದ್ದಂತೆ ಟಯರ್ ಪಂಕ್ಚರ್ ಆಗಿದೆ. ಟಯರ್ ಬದಲಾಯಿಸಲು ಕಾರಿನಲ್ಲಿದ್ದವರು ಒದ್ದಾಡುತ್ತಿದ್ದಾಗ ಅದೇ ರಸ್ತೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಠಾಣೆಯ ಸಿಬ್ಬಂದಿಗಳಾದ ಮೋಹನ್ ಮತ್ತು ಗಜೇಂದ್ರ ಅವರು ತಮ್ಮ ವಾಹನದಲ್ಲಿ ಬಂದು ವಿಚಾರಿಸಿದ್ದಾರೆ. ಕಾರಿನ ಪ್ರಯಾಣಿಕರು ಟಯರ್ ಬದಲಾಯಿಸಲು ಕಷ್ಟಪಡುವುದನ್ನು ಗಮನಿಸಿದ ಸಮವಸ್ತ್ರಧಾರಿ ಸಿಬ್ಬಂದಿಗಳು ತಾವೇ ಮುಂದೆ ಬಂದು ಜಾಕ್ ಮೂಲಕ ಟಯರ್ ಬದಲಾಯಿಸಿ ಕೊಟ್ಟು ಹೃದಯವಂತಿಕೆ ಮೆರೆದಿದ್ದಾರೆ.ತಮ್ಮ ಕರ್ತವ್ಯದ […]

Continue Reading

ಮಂಗಳೂರು: ಬಲ್ಮಠದಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ಮಾರಾಮಾರಿ; ರೌಡಿಗಳಂತೆ ಬಡಿದಾಡಿಕೊಂಡ ಸೆಲಿನಾ-ಧರಿತ್ರಿ ಬಸ್ ಸಿಬ್ಬಂದಿಗಳು

ವಿಟ್ಲ-ಮಂಗಳೂರು ಮಧ್ಯೆ ಸಂಚರಿಸುವ ಸೆಲಿನಾ ಬಸ್ ಮತ್ತು ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಧರಿತ್ರಿ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ. ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಪರಸ್ಪರ ಬಡಿದಾಡಿ ಕೊಂಡಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್ ಟಿ ಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬಸ್ […]

Continue Reading

ಸಜಿಪ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಸ್ಥಾನದಿಂದ ಖತರ್ನಾಕ್ ಶಾಫಿ ನಂದಾವರ ವಜಾ..

ಇತ್ತ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಸತ್ತಾರ್ ಸುರತ್ಕಲ್ ಉಚ್ಛಾಟನೆ ಕೆಟ್ಟ ಮೇಲೆ ಬುದ್ಧಿ ಬಂತು.. ಧಾರ್ಮಿಕ ಸಂಘಟನೆಗಳಿಗೆ ಇದೊಂದು ಪಾಠವಾಗಲಿ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದು ಅನ್ನುತ್ತಾರಲ್ಲ ಆ ಸ್ಥಿತಿಯಾಗಿದೆ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸಂಘಟನೆಗಳ ಕಥೆ. ಎಲ್ಲಿಂದಲೋ ಬಂದ ಅಡ್ರೆಸ್ ಇಲ್ಲದ ವ್ಯಕ್ತಿಯನ್ನು ಹೂಗುಚ್ಛ, ಶಾಲು ಕೊಟ್ಟು ಅಧ್ಯಕ್ಷ ಕುರ್ಚಿ ನೀಡಿ ಸನ್ಮಾನಿಸಿದರೆ ಆತ ಇದನ್ನೆಲ್ಲ ಮಾಡದೆ ಇನ್ನೇನೂ ಮಾಡಲು ಸಾಧ್ಯ. ಮೂಲತಃ ಪಡುಬಿದ್ರಿಯ ನಿವಾಸಿಯಾದ ಶಾಫಿ ಯನ್ನು ನಂದಾವರ ಜಮಾಅತಿಗರು ತಲೆಯ […]

Continue Reading

ಸಜಿಪ ಬಳಿ ಚಾಲಕನ ನಿಯಂತ್ರಣ ತಪ್ಪಿದ ಥಾರ್ ಜೀಪ್, ಎರಡು ಆಟೋ, ಮೂರು ಬೈಕುಗಳಿಗೆ ಡಿಕ್ಕಿ, ಚಾಲಕ ಆಸ್ಪತ್ರೆಗೆ

ಚಾಲಕನ ನಿಯಂತ್ರಣ ಕಳೆದುಕೊಂಡ THAR ಜೀಪೊಂದು ರಸ್ತೆ ಬದಿಯಪಾರ್ಕಿಂಗ್ ಸ್ಥಳದಲ್ಲಿದ್ದ ಎರಡು ಆಟೋಗಳು, ಮೂರು ಬೈಕುಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ ಘಟನೆ ಮೆಲ್ಕಾರ್-ಮುಡಿಪು ರಸ್ತೆಯ ಸಜಿಪದಲ್ಲಿ ಇದೀಗ ನಡೆದಿದೆ. ಆಟೋ ಚಾಲಕರು, ಬೈಕುಗಳ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಅಂಗಡಿಗೆ ಹೋಗಿದ್ದ ಕಾರಣ ಅದೃಷ್ಟವಶಾತ್ ಬಚಾವಾಗಿ ತಮ್ಮ ಮನೆಯವರ ಮುಖ ನೋಡುವಂತಾಗಿದೆ. ಅಪಘಾತದ ತೀವ್ರತೆಗೆ ವಾಹನಗಳು ಸಾಕಷ್ಟು ಜಖಂಗೊಂಡಿದ್ದು ಥಾರ್ ಜೀಪು ಚಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯರು ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Continue Reading

ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಹೊತ್ತೊಯ್ದ ಖದೀಮರು.

ವಿಟ್ಲ ಠಾಣಾ ವ್ಯಾಪ್ತಿಯ ಅಳಕೆಮಜಲು ಎಂಬಲ್ಲಿ ಎರಡು ಮನೆ ಕಳ್ಳತನ. ಘಟನೆಯಿಂದ ತೀವ್ರ ಆಘಾತಕ್ಕೀಡಾಗಿ ಕುಸಿದುಬಿದ್ದು ಪ್ರಜ್ಞಾಹೀನರಾದ ಮನೆಯೊಡತಿ ವಿಟ್ಲ-ಕಬಕ ರಸ್ತೆಯ ಅಳಕೆಮಜಲು ಕೆಮನಾಜೆ ಎಂಬಲ್ಲಿ ಇಂದು ಮಧ್ಯಾಹ್ನ ಮನೆಯವರೆಲ್ಲ ಶಾರದೋತ್ಸವಕ್ಕೆ ಹೋಗಿದ್ದ ಸಂದರ್ಭ ಕಳ್ಳತನ ನಡೆದಿದೆ. ಕೆಮನಾಜೆ ನಿವಾಸಿ ಪುಷ್ಪರಾಜ್ ಮತ್ತು ಅಂದೆ ಪರಿಸರ ನಿವಾಸಿ ಕೃಷ್ಣಪ್ಪ ಕುಲಾಲ್(ಕುಂಞಣ್ಣ) ಮನೆಯವರೆಲ್ಲ ಅಳಕೆಮಜಲು ಭಜನಾ ಮಂದಿರದಲ್ಲಿ ನಡೆಯುವ ಶಾರದಾ ಪ್ರತಿಷ್ಠೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ಮನೆಗೆ ಬಂದಾಗ ಕಳ್ಳರು ದುಷ್ಕೃತ್ಯ ನಡೆಸಿರುವುದು ತಿಳಿದುಬಂದಿದೆ. ಪುಷ್ಪರಾಜ್ ಅವರ […]

Continue Reading

ಮೂಡಬಿದ್ರೆ: ಖಾಸಗಿ ಬಸ್ಸಿನ ‘ಯಮಸ್ವರೂಪಿ’ ವಿಡಿಯೋ ವೈರಲ್.!

ಜೈನ್ ಚೇಸಿಂಗ್ ಗೆ ಸಿಂಗಂ ಹಾಕಿದರು ಬ್ರೇಕ್.! ಮಂಗಳೂರು -ಮೂಡಬಿದ್ರೆ-ಕಾರ್ಕಳ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ಸಿನ ಧಾವಂತಕ್ಕೆ ಕಡಿವಾಣ ಹಾಕುವವರೇ ಇಲ್ಲ. ಈ ರೂಟಿನಲ್ಲಿ ಖಾಸಗಿಯವರದ್ದೇ ದರ್ಬಾರ್. ಟೈಮಿಂಗ್ ವಿಚಾರದಲ್ಲಿ ಬಸ್ ಗಳ ನಡುವೆ ಗಲಾಟೆ ಇಲ್ಲಿ ಸರ್ವೇ ಸಾಮಾನ್ಯ. ಇನ್ನು ಈ ಖಾಸಗಿ ಬಸ್ ಗಳ ಭಯಾನಕ ಚಾಲನೆಗೆ ಹಲವಾರು ಮಂದಿ ಪ್ರಾಣ ಕಳೆದುಕೊಂಡವರು ಇದ್ದಾರೆ. ಈ ಬಗ್ಗೆ ಆರ್ ಟಿ ಓ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಖಾಸಗಿ ಪ್ರಭಾವಕ್ಕೆ ಆರ್ […]

Continue Reading

ಮುಡಿಪು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ. ಪ್ರಯಾಣಿಕರು ಅದೃಷ್ಟವಶಾತ್ ಪಾರು.

ಮುಡಿಪು ಕಡೆಯಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಟೊಯೊಟಾ ಅರ್ಬನ್ ಕ್ರೂಸರ್ ಕಾರು ಸಾಲೆತ್ತೂರು ಜಂಕ್ಷನಲ್ಲಿ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯಲ್ಲಿದ್ದ ಭಾರಿ ಗಾತ್ರದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಭಾಗಶ: ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ಎರಡು ಸುರಕ್ಷತಾ ಬೆಲೂನುಗಳೂ ಓಪನ್ ಆಗಿದ್ದರಿಂದಾಗಿ ಚಾಲಕ ಮತ್ತು ಪ್ರಯಾಣಿಕರು ಅದೃಷ್ಟವಶಾತ್ ಬಚಾವಾಗಿದ್ದಾರೆ.

Continue Reading

ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ; ಕಳೆಂಜಿಮಲೆ ರಕ್ಷಿತಾರಣ್ಯದಿಂದ ಹಾಲುಮಡ್ಡಿ ಎಗರಿಸಿದ ಖದೀಮರು ಬಂಧನ

ಅರಣ್ಯ ಇಲಾಖೆಯ ಉಕ್ಕುಡ ವಲಯ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿನ ದೂಪದ ಮರಗಳಿಂದ ಅಕ್ರಮವಾಗಿ ಹಾಲುಮಡ್ಡಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಂಬಳೆಬೆಟ್ಟು ಬಳಿ ವಶಕ್ಕೆ ಪಡೆದು ಬಂಧಿಸಿದೆ. ಬಂಟ್ವಾಳ ತಾಲೂಕು ಕೆದಿಲ ಪಾಟ್ರಕೋಡಿಯ ಉಮ್ಮರ್ ಫಾರೂಕ್(44), ಮಹಮ್ಮದ್ ಹಸೈನಾರ್ (30), ತಾಳಿಪಡ್ಪು ಉಮ್ಮರ್ ಫಾರೂಕ್(26), ಅಲಿ ಹೈದರ್ ಎಂ.ಕೆ.ಎಂಬವರನ್ನು ಬಂಧಿಸಿ ಆಟೋರಿಕ್ಷಾ ಸಹಿತ 1.05ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ.ನೇತೃತ್ವದಲ್ಲಿ ದಾಳಿ ನಡೆದಿದೆ. ಉಪ […]

Continue Reading

ಮಮ್ತಾಜ್ ಅಲಿ ಆತ್ಮಹತ್ಯೆ, ಬ್ಲಾಕ್ ಮೇಲ್ ಪ್ರಕರಣ : ಆಳವಾದ ತನಿಖೆಗೆ ಹೋರಾಟ ಸಮಿತಿ ಆಗ್ರಹ

ಮುನೀರ್ ಕಾಟಿಪಳ್ಳ ಸಂಚಾಲಕರು, ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಪ್ರಸಿದ್ಧ ಉದ್ಯಮಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ ಸಮಾಜದಲ್ಲಿ ತಲ್ಲಣ ಮೂಡಿಸಿದೆ. ಹನಿ ಟ್ರಾಪ್, ಬ್ಲಾಕ್ ಮೇಲ್ ನಿಂದ ಕಂಗೆಟ್ಟು ಈ ಆತ್ಮಹತ್ಯೆ ಸಂಭವಿಸಿದೆ. ಇಷ್ಟಲ್ಲದೆ ಪ್ರಕರಣದಲ್ಲಿ ಇನ್ನುಷ್ಟು ನಿಗೂಢ ಅಂಶಗಳು, ಭಾಗೀದಾರಿಕೆಯ ಶಂಕೆ ಇದೆ. ಈ ಪ್ರಕರಣ ಮಾತ್ರವಲ್ಲದೆ ಇನ್ನಷ್ಟು ಹನಿಟ್ರಾಪ್, ಬ್ಲಾಕ್ ಮೇಲ್ ಪ್ರಕರಣಗಳು ಮಂಗಳೂರಿನ ಪ್ರತಿಷ್ಟಿತರು, ಉದ್ಯಮಿಗಳನ್ನು ಗುರಿಯಾಗಿಸಿ ನಡೆದಿರುವ ಸುದ್ದಿಗಳು ಹರಿದಾಡುತ್ತಿವೆ. ಸದ್ದಿಲ್ಲದೆ ಮುಗಿದು ಹೋಗಿರುವ […]

Continue Reading

ಹನಿಟ್ರ್ಯಾಪ್ ಬಗೆದಷ್ಟು..ಬಿಚ್ಚಿಡುತ್ತಿದೆ.!

ಪ್ರಖ್ಯಾತ ಧಾರ್ಮಿಕ ಪಂಡಿತರನ್ನೇ ಬಲೆಗೆ ಬೀಳಿಸುತ್ತಿದ್ದ ಹರಾಮಿಕೋರರು.! ಹನಿಟ್ರ್ಯಾಪ್.. ಖದೀಮರು ಸುಲಭದಲ್ಲಿ ದುಡ್ಡು ಮಾಡಿಕೊಳ್ಳಲು ಕಂಡುಕೊಂಡ ಮಾರ್ಗ ಇದು. ಶ್ರೀಮಂತ ಉದ್ಯಮಿಗಳು, ಪ್ರಖ್ಯಾತರ ವೀಕ್ನೆಸ್ ತಿಳಿದು ಚೆಂದುಳ್ಳಿ ಚೆಲುವೆಯರ ಮೂಲಕ ಅವರನ್ನು ಬಲೆಗೆ ಬೀಳಿಸಿ ಅಲ್ಲಿ ನಡೆಯುವ ಸಕಲ ಆಟವನ್ನು ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಸಂತ್ರಸ್ತರನ್ನು ಜೀವನ ಪರ್ಯಂತ ದೋಚುವ ಕಾಯಕ ಮಾಡಿಕೊಂಡಿರುವ ಇಂತಹ ಖತರ್ನಾಕ್ ಗ್ಯಾಂಗ್ ಮಂಗಳೂರಿನಲ್ಲಿ ಅಲ್ಲಲ್ಲಿ ತಲೆ ಎತ್ತಿ ನಿಂತಿದೆ. ನಿರಂತರ ಬ್ಲ್ಯಾಕ್ ಮೇಲ್ ಗೆ ಸಿಲುಕಿದರೂ ಮಾನ ಮರ್ಯಾದೆಗೆ ಹೆದರಿ ಪೊಲೀಸ್ […]

Continue Reading