ಶಿವಮೊಗ್ಗ: ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ಪ್ರಕರಣ ದಾಖಲು

ಶಿವಮೊಗ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ. ಅಶ್ವಿನ್ ಹೆಬ್ಬಾರ್ ವಿರುದ್ಧ ಮತ್ತೊಮ್ಮೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಲೈಂಗಿಕ ಆರೋಪದ ಮೇಲೆ ಮೂರು ತಿಂಗಳ ಕಾಲ ಅಮಾನತಾಗಿದ್ದ ಹೆಬ್ಬಾರ್‌ ವಿರುದ್ಧ ಈಗ ಮೆಡಿಕಲ್ ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪ ಕೇಳಿಬರುತ್ತಿದ್ದಂತೆ ಡಾ. ಅಶ್ವಿನ್ ಹೆಬ್ಬಾರ್ ಕರ್ತವ್ಯಕ್ಕೆ ಗೈರಾಗಿದ್ದಾರೆ. ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ. ಈ ಘಟನೆ […]

Continue Reading

ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?, ಜೆಡಿಎಸ್ ಮೈತ್ರಿ ಏಕೆ ಬೇಕು?

ವಿಜಯೇಂದ್ರ ಅವರಿಗೆ ಸಿಕ್ಕ ಸಿಗ್ನಲ್ಲು ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ಕರ್ನಾಟಕಕ್ಕೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ದುಗುಡದಲ್ಲಿದ್ದರಂತೆ. ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಭವಿಷ್ಯದ ಬಗೆಗಿನ ಚಿಂತೆಯೇ ಈ ದುಗುಡಕ್ಕೆ ಕಾರಣ.ಅಂದ ಹಾಗೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಕಳೆಯುತ್ತಾ ಬಂದರೂ ಪಕ್ಷದ ಹಿರಿಯ ನಾಯಕರ ವಿಶ್ವಾಸ ಗಳಿಸಲು ಅವರಿಗೆ ಸಾಧ್ಯವಾಗಿಲ್ಲ. ಅವರ ಮಹತ್ವಾಕಾಂಕ್ಷೆಯೇ ಇದಕ್ಕೆ ಕಾರಣ.ಮುಂಬರುವ ವಿಧಾನಸಭಾ ಚುನಾವಣೆಯನ್ನು ಪಕ್ಷ ತಮ್ಮ ನೇತೃತ್ವದಲ್ಲಿ […]

Continue Reading

ರಾಜ್ಯದಲ್ಲಿ ಪ್ರಸವ ಮರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆ: ಸ್ತ್ರೀ ಸಂಕುಲದ ಮೊಗದಲ್ಲಿ ನಗು

ಲಕ್ಷಕ್ಕೆ 133 ರಿಂದ 58 ಕ್ಕೆ ತಗ್ಗಿದ ಸಾವು; ಹೊಸ ಸಮೀಕ್ಷೆಯಲ್ಲಿ ಬಹಿರಂಗ ರಾಜ್ಯದಲ್ಲಿ ಹೆರಿಗೆ ಸಂದರ್ಭದಲ್ಲಿನ ತಾಯಂದಿರ ಸಾವಿನ ಪ್ರಮಾಣ ಇಳಿಮುಖವಾಗಿರುವುದು ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ತಾಯಿ ಮರಣ ಅನುಪಾತವು ಇಳಿಮುಖಗೊಂಡಿರುವುದು ಹೊಸ ಸಮೀಕ್ಷೆಯಿಂದ ಬಹಿರಂಗವಾಗಿದ್ದು ಸ್ತ್ರೀ ಸಂಕುಲದ ಮುಖದಲ್ಲಿ ನಗು ಮೂಡಿಸಿದೆ. ಭಾರತದ ರಿಜಿಸ್ಟ್ರಾರ್ ಜನರಲ್ ಬಿಡುಗಡೆ ಮಾಡಿರುವ ಸ್ಯಾಂಪಲ್ ರಿಜಿಸ್ಟ್ರೇಷನ್ ವ್ಯವಸ್ಥೆಯ ಹೊಸ ವರದಿಯನ್ವಯ 2019-21 ನೇ ಸಾಲಿನಲ್ಲಿ ಪ್ರತಿ ಲಕ್ಷ ಹೆರಿಗೆಯಲ್ಲಿ 63 ರಷ್ಟಿದ್ದ ತಾಯಿ ಮರಣದ ಸಂಖ್ಯೆ 2020-22 ರಲ್ಲಿ […]

Continue Reading

ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದು ತಿರುಗಾಡಿದರೆ ರೌಡಿಶೀಟರ್ ಕೇಸು ಫಿಕ್ಸ್: ಪೊಲೀಸ್ ಕಮಿಷನರ್ ಎಚ್ಚರಿಕೆ

ಅಪ್ರಾಪ್ತರು ಕ್ರೈಂ ಫೀಲ್ಡಿನತ್ತ ಆಕರ್ಷಿತರಾಗುವುದನ್ನು ತಡೆಯಲು ಬೆಳಗಾವಿ ಪೊಲೀಸರಿಂದ ಆಂಟಿ ಸ್ಟಾಬ್ಯುಲಿಂಗ್ ವಿಂಗ್ ರಚನೆ ಬೆಳಗಾವಿ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕವಾಗಿ ಮಾರಕಾಸ್ತ್ರ ಹಿಡಿದುಕೊಂಡು ಸಮಾಜದಲ್ಲಿ ಭಯಭೀತಿ ಸೃಷ್ಟಿಸುವ ಸಮಾಜ ವಿದ್ರೋಹಿಗಳ ಕೃತ್ಯ ಮಿತಿಮೀರುತ್ತಿದ್ದು ಪೊಲೀಸ್ ಇಲಾಖೆ ಇದೀಗ ಇದಕ್ಕೆ ಕಡಿವಾಣ ಹಾಕಲು ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿ ಮಾಂಜ್ ಸನದಿ ಎಂಬಾತನ ಮೇಲೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಅಪ್ರಾಪ್ತ ಇಬ್ಬರು […]

Continue Reading

ಇನ್ಮುಂದೆ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮೂರನೇ ಶನಿವಾರ ಬ್ಯಾಗ್ ರಹಿತ ದಿನ: ಶಿಕ್ಷಣ ಇಲಾಖೆ ಆದೇಶ

ರಾಜ್ಯದ ಉರ್ದು ಶಾಲೆಗಳಿಗೆ ಮೂರನೇ ಶುಕ್ರವಾರದಂದು ಆಚರಿಸುವಂತೆ ಸೂಚನೆ ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆಯಾಗುತ್ತಿರುವ ಆರೋಪಗಳು ಕೇಳಿ ಬರುತ್ತಿರುವ ಹೊತ್ತಿನಲ್ಲಿ ತಿಂಗಳಲ್ಲಿ ಒಂದು ದಿನ ಮಕ್ಕಳಿಗೆ ಬ್ಯಾಗ್ ರಹಿತ ದಿನ ವನ್ನಾಗಿ ಆಚರಿಸುವ ಮೂಲಕ ಮಕ್ಕಳ ಮನೋಬಲ ಹೆಚ್ಚಿಸಲು ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.2025-26 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳ 3 ನೇ ಶನಿವಾರ ಬ್ಯಾಗ್ ರಹಿತ ‘ಸಂಭ್ರಮ ಶನಿವಾರ’ ಆಚರಿಸಲು ಶಿಕ್ಷಣ ಇಲಾಖೆ ಸುತ್ತೋಲೆ […]

Continue Reading

ದುಬಾಯಿ: ಜೂನ್ 29 ರಂದು ಸಾಧಕರಿಗೆ ಸನ್ಮಾನದ ಜೊತೆ ದಶಮಾನದ ಸಂಭ್ರಮ; ಅದ್ದೂರಿಯ ಕಾರ್ಯಕ್ರಮಕ್ಕೆ ಕ್ಷಣಗಣನೆ

ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಇದೇ ಬರುವ ಜೂನ್ 29 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ನಗರದ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಜರಗಲಿರುವುದು ಎಂದು ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತ ಜೂನ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ದಶಮ ಸಂಭ್ರಮದ ಪ್ರಯುಕ್ತ ಯುಎಇಯ […]

Continue Reading

ಸುಂದರ ಯುವತಿಯರನ್ನು ಬಳಸಿ ಹನಿಟ್ರ್ಯಾಪ್; ಪೊಲೀಸ್ ಪೇದೆ ಸಹಿತ ಐವರ ಬಂಧನ

ಸುಂದರವಾದ ಸುರಂಗಿಣಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಹಣ ದೋಚುತ್ತಿದ್ದ ಪೊಲೀಸ್ ಪೇದೆ ಸೇರಿದಂತೆ ಐವರನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹನಿಟ್ರ್ಯಾಪ್ ಜಾಲದಲ್ಲಿ ಭಾಗಿಯಾಗಿದ್ದ ಸೂತ್ರದಾರಿ ಪಿರಿಯಾಪಟ್ಟಣ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಶಿವಣ್ಣಮೂರ್ತಿ ಸೇರಿಂದತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರ ಸುಂದರವಾದ ಹುಡುಗಿಯರನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡಿ, ವಸೂಲಿಸಿ ಮಾಡುತ್ತಿದ್ದ ಗ್ಯಾಂಗ್ ಕಂಪಲಾಪುರದ ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ಅವರನ್ನು ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದರು. […]

Continue Reading

ಮುಂದಿನ ವರ್ಷ ನಾನೇ ಸಿಎಂ ಆಗಿರ್ತೀನಲ್ಲ?; ವಿಜಯೇಂದ್ರ ಪಟ್ಟಾಭಿಷೇಕ ಗ್ಯಾರಂಟಿ

ಕುಮಾರಣ್ಣನ ಲೇಟೆಸ್ಟು ಯೋಚನೆ; ಮಹಿಳಾ ಕ್ಯಾಂಡಿಡೇಟ್ ಶೋಧಿಸುವ ಕೆಲಸಕ್ಕೆ ಚಾಲನೆ ✍️. ಆರ್.ಟಿ.ವಿಠ್ಠಲಮೂರ್ತಿ ಕೆಲ ದಿನಗಳ ಹಿಂದೆ ಕರ್ನಾಟಕದ ಆರೆಸ್ಸೆಸ್ ಮುಖಂಡರೊಬ್ಬರನ್ನು ಸಂಪರ್ಕಿಸಿದ ಬಿಜೆಪಿಯ ವರಿಷ್ಟರು ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕನ್ನಡಪರ ಧ್ವನಿ ತಾರಕಕ್ಕೇರುವ ಮುನ್ನ ಅದನ್ನು ಶಾಂತಗೊಳಿಸಿ ಎಂಬುದು ಅವರ ಮಾತು.ಅಂದ ಹಾಗೆ ಕರ್ನಾಟಕದಲ್ಲಿ ಐಟಿ-ಬಿಟಿ ಯುಗ ಆರಂಭವಾದ ನಂತರ ದೇಶದ ವಿವಿಧ ಭಾಗಗಳಿಂದ ಬಂದು ಜನ ನೆಲೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಆದರೆ ಪರಭಾಷಿಕರು ಹೆಚ್ಚಾದಂತೆ ಕರ್ನಾಟಕದ ಆರ್ಥಿಕ, ಸಾಮಾಜಿಕ ಚೌಕಟ್ಟು ಬದಲಾಗುತ್ತಾ […]

Continue Reading

2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಎಂಜಿನಿಯರಿಂಗ್ 6 ಸಾವಿರ ಸೀಟುಗಳ ಕಡಿತ

64,047 ಸರಕಾರಿ ಕೋಟಾ ಸೀಟುಗಳು ಸೇರಿ 1.35 ಲಕ್ಷ ಸೀಟುಗಳು ಮಾತ್ರ ಲಭ್ಯ. ಕಂಪ್ಯೂಟರ್ ಸೈನ್ಸ್ ಗೆ ಈ ಬಾರಿ ಅತ್ಯಧಿಕ ಸೀಟು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಜಿನಿಯರಿಂಗ್ ಪದವಿ ಕೋರ್ಸ್ ಪ್ರವೇಶಕ್ಕೆ ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿದರೂ ಸೀಟುಗಳು ಸುಲಭದಲ್ಲಿ ಸಿಗಲು ಕಷ್ಟಪಡುವಂತಹ ಕಾಲವಿತ್ತು. ಆದರೆ ಈಗ ಆ ರೀತಿಯಿಲ್ಲ. ರಾಜ್ಯದಲ್ಲಿ ವಿವಿಧ ಸರಕಾರಿ ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಉಳಿಯುತ್ತಿವೆ. ಪ್ರಸಕ್ತ 2025-26 ನೇ ಸಾಲಿನಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ […]

Continue Reading

ಅಖಿಲ ಭಾರತ ಬಾರ್ ಎಕ್ಸಾಮ್ ರದ್ದತಿಗೆ AILU ಒತ್ತಾಯ; ಮುಖ್ಯಮಂತ್ರಿಗಳಿಗೆ ಮನವಿ

ಅಖಿಲ ಭಾರತ ವಕೀಲರ ಒಕ್ಕೂಟದ ವತಿಯಿಂದ ಅವೈಜ್ಞಾನಿಕವಾದ ಅಖಿಲ ಭಾರತ ಬಾರ್ ಎಕ್ಸಾಮ್ (AIBE) ಸೇರಿದಂತೆ ವಕೀಲ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ವಕೀಲರಿಂದ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಅಖಿಲ ಭಾರತ ವಕೀಲರ ಒಕ್ಕೂಟ,ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಸಿ ಇಂದು ದಿನಾಂಕ 13-06-2026ರಂದು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷರರಾದ ಹಿರಿಯ ವಕೀಲರಾದ […]

Continue Reading