ಕೆಎಫ್ ಡಿಸಿ: ರಣ ಹಸಿವಿನ ಭ್ರಷ್ಟ ಅಧಿಕಾರಿಯ ಭಕ್ಷಣೆ; ಉಪ್ಪು ನೀರು ಕುಡಿಸೋರ್ಯಾರು.?

ಮಂಗಳೂರು ಮೀನುಗಾರಿಕಾ ಅಭಿವೃದ್ದಿ ನಿಗಮದ ದೊಡ್ಡ ಗಾತ್ರದ ತಿಮಿಂಗಿಲಗಳು ಸ್ವಚ್ಛಂದವಾಗಿ ಈಜಾಡುವ ಸಮೃದ್ಧ ಜಾಗ ‘ದುನಿಯಾ ಝಕತಾ ಹೈ, ಝಕಾನೇ ವಾಲಾ ಚಾಹಿಯೇ’ ಅಂತ ಹಿಂದಿಯಲ್ಲೊಂದು ಪಾಪ್ಯುಲರ್ ಡೈಲಾಗ್ ಇದೆ. ಅಂದರೆ ‘ಪ್ರಪಂಚ ಬಗ್ಗುತ್ತೆ ಬಗ್ಗಿಸೋನು ಬೇಕಷ್ಟೇ’ ಅನ್ನುವ ಹಾಗೆ ಯಾಮಾರಿಸುವ ಕಲೆಯಲ್ಲಿ, ಚಮಚಾಗಿರಿಯಲ್ಲಿ ನಿಪುಣರಾಗಿದ್ದರೆ ಎಷ್ಟೋ ದೊಡ್ಡವರನ್ನು ಮುಂಡಾಮೋಚಬಹುದು ಅನ್ನುವುದಕ್ಕೆ ನಾವು ಇವತ್ತು ಹೇಳುವ ವರದಿಯೇ ಪ್ರತ್ಯಕ್ಷ ಸಾಕ್ಷಿ. ಪರಶುರಾಮನ ನಾಡಿನಲ್ಲಿ ಈಗ ತರಹೇವಾರಿ ಕಾನೂನು ಬಾಹಿರ ದಂಧೆಗಳದ್ದೇ ದೊಡ್ಡ ಸದ್ದು. ಭರ್ಜರಿ ಸುದ್ದಿ. ಬರೋಬ್ಬರಿ […]

Continue Reading

ವಿಐಪಿಗಳನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡು, ಬ್ಲ್ಯಾಕ್ ಮೆಲ್ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ವಿಐಪಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡು ನಂತರ ಅವರಿಂದ ಕೋಟ್ಯಾಂತರ ರೂಪಾಯಿ ಹಣದ ಬೇಡಿಕೆ ಇಟ್ಟು ಬ್ಲ್ಯಾಕ್ ಮೆಲ್ ಮಾಡುತ್ತಿದ್ದ ಆರೋಪಿಗಳನ್ನು ಎಂದು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಸಂತೋಷ ಮತ್ತು ಪುಟ್ಟರಾಜು ಬಂಧಿತ ಆರೋಪಿಗಳು ಎಂದು ಹೇಳಲಾಗುತ್ತಿದೆ. ಕೋಟ್ಯಾಂತರ ರೂಪಾಯಿಗೆ ಬೇಡಿಕೆ ಇಟ್ಟು ಆರೋಪಿಗಳು ಬ್ಲಾಕ್ ಮೇಲ್ ಮಾಡಿದ್ದರು. ಈ ಸಂಬಂಧ ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ದೂರು ದಾಖಲಿಸಿದ್ದರು. ಸಿಸಿಬಿ ಪೊಲೀಸ್ […]

Continue Reading

ನಟ ದರ್ಶನ್‌ಗೆ ರಾಜಾತೀಥ್ಯ ನೀಡಲು ಜೈಲಲ್ಲಿ ಎರಡು ರೌಡಿ ಗ್ಯಾಂಗ್ ಗಳ ಮದ್ಯೆ ಪೈಪೋಟಿ.!

ಪರಪ್ಪನ ಅಗ್ರಹಾರದ ಜೈಲಲ್ಲಿ ಮುದ್ದೆ ಮುರಿಯುತ್ತಿರುವ ಆರೋಪಿ ದರ್ಶನ್‌ಗೆ ರಾಜಾತೀಥ್ಯ ನೀಡಲು ಎರಡು ರೌಡಿ ಗ್ಯಾಂಗ್ ಗಳ ಮದ್ಯೆ ಪೈಪೋಟಿ ಶುರುವಾಗಿದೆ. ಆರೋಪಿ ದರ್ಶನ್‌ರನ್ನು ನಾವು ನೋಡಿ ಕೊಡ್ತೀವಿ.. ಅಂತಾ ಈ ಎರಡು ರೌಡಿ ಗ್ಯಾಂಗ್‌ಗಳು ಕಾಂಪಿಟೇಷನ್‌ಗೆ ಇಳಿದಿದೆಯಂತೆ. ವಿಲ್ಸನ್ ಗಾರ್ಡನ್ ನಾಗ ಮತ್ತು ನಟೋರಿಯಸ್ ರೌಡಿ ಸೈಕಲ್ ರವಿ ಗ್ಯಾಂಗ್‌ ನಡುವೆ ಈ ಪೈಪೋಟಿ ಶುರುವಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲೇ ಇರುವ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಜೈಲು ಆತಿಥ್ಯ ವಹಿಸಿಕೊಳ್ಳಲು ಮುಂದಾದರೆ ಇತ್ತ […]

Continue Reading

ರಾಜ್ಯಾದ್ಯಂತ ವೆಜ್, ಚಿಕನ್, ಫಿಶ್ ಕಬಾಬ್ ತಯಾರಿಕೆ ವೇಳೆ ಕೃತಕ ಬಣ್ಣ ಬಳಕೆ ನಿಷೇಧ; ಉಲ್ಲಂಘಿಸಿದರೆ ಜೀವಾವಧಿ ಶಿಕ್ಷೆ

ಗೋಬಿ ಮಂಚೂರಿಗೆ ಕೃತಕ ಬಣ್ಣ ಉಪಯೇಗದ ಬ್ಯಾನ್ ಹೇರಿದ ಬೆನ್ನಲ್ಲೇ ಇದೀಗ ಕಬಾಬ್‌ಗಳಿಗೂ ಕೃತಕ ಬಣ್ಣ ಬಳಸದಂತೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಆಹಾರ ಸುರಕ್ಷತೆ ವಿಚಾರದಲ್ಲಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಮೀನು ಸೇರಿದಂತೆ ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನು ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು ಆಹಾರಕ್ಕೆ ಕೃತಕ ಬಣ್ಣದ ಬಳಕೆ ಮಾಡುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ […]

Continue Reading

ಯುವತಿಯ ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ, ಒತ್ತಾಯಪೂರ್ವಕ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ; ಬಿಜೆಪಿ ಯುವ ಮೋರ್ಚಾ ಮುಖಂಡನ ಬಂಧನ

ಶಿವಮೊಗ್ಗ: ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ, ಒತ್ತಾಯಪೂರ್ವಕ ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೇ ಇಡೀ ಕುಟುಂಬವನ್ನೇ ನಾಶಮಾಡುವುದಾಗಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮುಖಂಡನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಥಮ ವರ್ತಮಾನ ವರದಿ ದಾಖಲಿಸಿ ಆರೋಪಿ ಬಿಜೆಪಿ ಮುಖಂಡ ಅರುಣ್ ಕುಗ್ವೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅರುಣ್ ಕುಗ್ವೆ, ಮಾಜಿ ಶಾಸಕ ಹರತಾಳು […]

Continue Reading

ದೊಡ್ಡಗೌಡರ ಕುಟುಂಬ ಸುತ್ತ ದಿನಕ್ಕೊಂದರಂತೆ ಲೈಂಗಿಕ ಕಿರುಕುಳದ ಹಗರಣ ಸುತ್ತುತ್ತಿದೆ

ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಸೂರಜ್ ನನ್ನು ಸಂತ್ರಸ್ತನ ದೂರು ಆಧರಿಸಿ ಬಂಧನ ದೇವೇಗೌಡರ ಕುಟುಂಬ ಮೇಲೆ ದಿನಕ್ಕೊಂದರಂತೆ ಲೈಂಗಿಕ ಕಿರುಕುಳದ ಹಗರಣ ಸುತ್ತುತ್ತಿದೆ. ಇದೀಗ ಮೊಮ್ಮಗ, ರೇವಣ್ಣರ ಪುತ್ರ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣರವರನ್ನು ಅಸಹಜ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವಶಕ್ಕೆ ಪಡೆಯಲಾಗಿದೆ. ಹೊಳೇನರಸಿಪುರದಲ್ಲಿ ದಾಖಲಾಗಿದ್ದ ಸಲಿಂಗ ಕಾಮ ಆರೋಪದಡಿ ಕೇಸ್ ದಾಖಲಾದ ನಂತರ, ಬೆಂಗಳೂರಿನ ಕಡೆ ಹೋಗಿ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ಸೂರಜ್ ನನ್ನು ಸಂತ್ರಸ್ತನ ದೂರು ಆಧರಿಸಿ ಪೊಲೀಸರು ವಶಕ್ಕೆ […]

Continue Reading

ಮೋಹನ್ ರಾಜ್ ಬಿಜೆಪಿ ಶಾಸಕರೊಬ್ಬರ ಆಪ್ತರು, ಮೋಹನ್ ರಾಜ್ ಹೆಸರು ಹೊರಗಡೆ ಬರುತ್ತಿದ್ದಂತೆ ಅವರ ಪೋನ್ ಸ್ವೀಚ್ ಆಫ್‌

ಮೋಹನ್ ರಾಜ್ ಬಿಜೆಪಿ ಪಕ್ಷದೊಡನೆ ಗುರುತಿಸಿಕೊಂಡಿರುವ ವ್ಯಕ್ತಿ. ದರ್ಶನ್ ಮನೆಯಲ್ಲಿ 70 ಲಕ್ಷ ರೂ. ವಶಪಡಿಸಿಕೊಂಡ ಹಣದಲ್ಲಿ 40 ಲಕ್ಷ ಹಣ ಕೊಟ್ಟದ್ದು ಮೋಹನ್ ರಾಜ್ ಎಂದು ಕಾಮಾಕ್ಷಿ ಪಾಳ್ಯ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ದರ್ಶನ್ ಗೆ ಹಣ ಕೊಟ್ಟಿರುವ ಮೋಹನ್ ರಾಜ್ ಶಾಸಕರೊಬ್ಬರ ಆಪ್ತರು ಎಂದು ತಿಳಿದು ಬಂದಿದೆ. ತನ್ನ ಹೆಸರು ಹೊರಗಡೆ ಬರುತ್ತಿದ್ದಂತೆ ಮೋಹನ್ ರಾಜ್ ಎಂಬುವವರು ಪೋನ್ ಸ್ವೀಚ್ ಆಫ್‌ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಮೋಹನ್ ರಾಜ್ ಕೂಡ ಬಿಜೆಪಿ ಪಕ್ಷದೊಡನೆ […]

Continue Reading

ರಾಜ್ಯದಲ್ಲಿ ಇನ್ನು ಮುಂದೆ ವಾಹನಗಳಿಗೆ ಎಲ್‌ಇಡಿ ದೀಪ ಅಳವಡಿಸುವುದನ್ನು ನಿರ್ಬಂಧಿಸಲಾಗಿದೆ.

ಜುಲೈನಿಂದ ಎಲ್‌ಇಡಿ ಬಲ್ಪ್ ಅಳವಡಿಸಿರುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ರಾಜ್ಯದಲ್ಲಿ ವಾಹನಗಳಿಗೆ ಇನ್ನು ಮುಂದೆ ಎಲ್‌ಇಡಿ ದೀಪ ಅಳವಡಿಸುವುದನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಸಿದವರ ವಿರುದ್ದ ಜುಲೈಯಿಂದ ಕೇಸ್ ದಾಖಲಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ಬಲ್ಪ್‌ಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೆ, ಚಾಲಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಂಡುಬಂದಿದೆ. ಈ ಪೈಕಿ […]

Continue Reading

HSRP ಸುರಕ್ಷಿತ ನೋಂದಣಿ ಫ‌ಲಕ ಅಳವಡಿಕೆಯ ಅಂತಿಮ ಗಡುವನ್ನು ಸೆ. 15ರ ವರೆಗೆ ವಿಸ್ತರಣೆ: ಸಾರಿಗೆ ಸಚಿವರು

HSRP ಸುರಕ್ಷಿತ ನೋಂದಣಿ ಫ‌ಲಕ ಅಳವಡಿಕೆಯ ಅಂತಿಮ ಗಡುವನ್ನು ಸೆ. 15ರ ವರೆಗೆ ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.ಈಗಾಗಲೇ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಸಂಬಂಧಿಸಿ ಹಲವು ಬಾರಿ ಕಾಲಾವಕಾಶ ವಿಸ್ತರಿಸಲಾಗಿದೆ. ನ್ಯಾಯಾಲಯ ಕೂಡ ಜು. 4ರ ವರೆಗೆ ಯಾವುದೇ ಒತ್ತಡ ಹೇರುವಂತಿಲ್ಲ ಎಂದು ಸೂಚಿಸಿತ್ತು. ಇದೆಲ್ಲದರ ಹಿನ್ನೆಲೆಯಲ್ಲಿ ವಾಹನ ಮಾಲಕರಿಗೆ ಸೆ. 15ರ ವರೆಗೆ ಅಂತಿಮ ಗಡುವು ನೀಡಲಾಗಿದೆ. ಸುಮಾರು ಎರಡು ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದ್ದು, ಇದುವರೆಗೆ ಶೇ. 25ರಷ್ಟು ವಾಹನ ಗಳು ಈ ವ್ಯವಸ್ಥೆಯನ್ನು […]

Continue Reading

ಒಪ್ಪಿತ ಸಂಬಂಧವು ಆತನಿಗೆ ಆಕೆಯ ಮೇಲೆ ಹಲ್ಲೆ ನಡೆಸಲು ಲೈಸೆನ್ಸ್ ಆಗುವುದಿಲ್ಲ: ಹೈಕೋರ್ಟ್

ಒಪ್ಪಿತ ಸಂಬಂಧವು ಮಹಿಳೆಯ ಮೇಲೆ ಹಲ್ಲೆ ನಡೆಸಲು ಲೈಸೆನ್ಸ್ ಅಲ್ಲ ಎಂದು ಹೇಳಿರುವ ಹೈಕೋರ್ಟ್, ಹಲವು ವರ್ಷಗಳ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯ ಮೇಲೆ ಮಹಿಳೆ ಹೂಡಿದ್ದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ. ಆದರೆ, ಆರೋಪಿ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಮತ್ತು ವಂಚಿಸಿದ್ದಾನೆಂಬ ಆರೋಪಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ಪ್ರಕರಣ ರದ್ದುಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ‌. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, “ಆರೋಪಿ ವ್ಯಕ್ತಿ ಮತ್ತು ದೂರುದಾರ ಮಹಿಳೆ ನಡುವೆ ಎಷ್ಟು ವರ್ಷದ ಒಪ್ಪಿತ ಸಂಬಂಧವಿರಬಹುದು. […]

Continue Reading