ಬಿಟ್ ಕಾಯಿನ್ ಹಗರಣದ ಆರೋಪಿ, ಕುಖ್ಯಾತ ಹ್ಯಾಕರ್ ಶ್ರೀಕಿಗೆ ಗನ್ ಮ್ಯಾನ್

ಕೊಲೆ ಬೆದರಿಕೆ ಹಿನ್ನೆಲೆಯಲ್ಲಿಲಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್ ನೀಡಲಾಗಿದೆ.ಎಸ್‌ಐಟಿ ಮುಂದೆ ಸ್ಫೋಟಕ ಮಾಹಿತಿ ನೀಡಿದ್ದ ಶ್ರೀಕಿಗೆ ಈಗ ಕೊಲೆ ಬೆದರಿಕೆ ಇದೆ. ಅಷ್ಟೇ ಅಲ್ಲದೇ ಶ್ರೀಕಿ ಪೊಲೀಸರ ಕೈಯಲ್ಲಿ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಹೀಗಾಗಿ ಎಸ್‌ಐಟಿ ಶ್ರೀಕಿಗೆ ಗನ್ ಮ್ಯಾನ್ ನೀಡಿದೆ. ಬಿಟ್‌ ಕಾಯಿನ್‌ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು, ರಾಜಕರಣಿಗಳ ಮಕ್ಕಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ […]

Continue Reading

ಬಂಡಾಯ ಸಾರಿದ ಈಶ್ವರಪ್ಪರ ಕೋಪ ಶಮನವಾಯಿತೇ.! ಶಾ ನೀಡಿದ ಭರವಸೆಯ ಮಹಾಪೂರ ಯಾವುದು.?

ಹಾವೇರಿ ಕ್ಷೇತ್ರದಿಂದ ಈಶ್ವರಪ್ಪ ಮಗನಿಗೆ ಟಿಕೆಟ್ ಬೇಕೆಂದು‌ ಮೊದಲೇ ಡಿಮ್ಯಾಂಡ್ ಇಟ್ಟಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಹಾವೇರಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರಿಗೆ ನೀಡಿದೆ. ಇದರಿಂದ ಕೋಪಗೊಂಡಿದ್ದ ಈಶ್ವರಪ್ಪ ಬಂಡಾಯ ಸಾರಿದ್ದರು. ಶಿವಮೊಗ್ಗದಲ್ಲಿಯೇ ನನ್ನ ಮಗನನ್ನು ನಿಲ್ಲಿಸುತ್ತೇನೆ ಎಂದಿದ್ದರು. ಇದೀಗ ಅವರ ಕೋಪ ಶಮನವಾಗಿದ್ದು, ಬಿಎಸ್ವೈ ಪುತ್ರ ಬಿವೈ ರಾಘವೇಂದ್ರ ಅವರ ವಿರುದ್ಧ ಸ್ಪರ್ಧಿಸುವ ವಿಚಾರದಲ್ಲಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಮೊಗ್ಗ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಈಶ್ವರಪ್ಪ […]

Continue Reading

ನ್ಯಾಯಾಧೀಶರನ್ನು ನಿಂದಿಸಿ, ಜನ್ಯಾಯಾಂಗದ ಪ್ರತಿಷ್ಠೆಗೆ ಧಕ್ಕೆ ತಂದ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್.

ಆರೋಪಿಯೊಬ್ಬರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನಿನ ಪ್ರತಿಯನ್ನು ಹರಿದು, ನೆಲಕ್ಕೆ ಎಸೆದು, ಜಾಮೀನು ಮಂಜೂರು ಮಾಡಿದ ಸೆಷನ್ಸ್ ನ್ಯಾಯಾಧೀಶರನ್ನು ನಿಂದಿಸಿ ನ್ಯಾಯಾಂಗದ ಪ್ರತಿಷ್ಠೆಗೆ ಧಕ್ಕೆ ತಂದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ವಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.2021ರಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಹರೀಶ್ ಸಬ್‌ಇನ್ಸ್‌ಪೆಕ್ಟರ್ ಆಗಿದ್ದಾಗ ಈ ಘಟನೆ ನಡೆದಿತ್ತು. ‘ಅರ್ಜಿದಾರರು ಪೊಲೀಸ್ ಅಧಿಕಾರಿಯಾಗಿದ್ದು, ನ್ಯಾಯಾಲಯದ ಆದೇಶವನ್ನು ಅವಮಾನಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಹರಿದು, ಅದನ್ನು ನೆಲದ ಮೇಲೆ ಎಸೆದಿದ್ದಾರೆ ಮತ್ತು ನಿರೀಕ್ಷಣಾ […]

Continue Reading

ಬಡ ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಹಗರಣ; ಲೋಕಾಯುಕ್ತದಿಂದ ತನಿಖೆಗೆ ಕ್ಷಣಗಣನೆ

ಉರಿಬಿಸಿಲಲ್ಲೂ ನಡುಗುತ್ತಿರುವ ಬಿಇಓ-ಸಿಆರ್‌ಪಿಗಳು; ಕಾನೂನು ಉರುಳಿಗೆ ಸಿಲುಕುವರಾರು .? ವರದಿ: ಎಂ.ಎ.ಸಲಾವುದ್ದೀನ್ ಮಲೆನಾಡಿನ ಮೂಡಿಗೆರೆಯಲ್ಲಿ ಬಾರಿ ಸದ್ದು ಮಾಡಿದ್ದ ಸರ್ಕಾರಿ ಶಾಲೆಗಳಲ್ಲಿ ಯೂಕೆಸಿ ಶೂ ಮತ್ತು ಸಾಕ್ಸ್ ಹಗರಣ, ಈ ಪ್ರಕರಣದ ಬಗ್ಗೆ 13 ನವೆಂಬರ್ 2023 ರಲ್ಲಿ ದೂರು ದಾಖಲಾಗಿದ್ದು. ಈಗ ರಾಜ್ಯದ ಉಪ-ಲೋಕಾಯುಕ್ತರು ಲೋಕಾಯುಕ್ತ ಎಸ್‌ಪಿ ಯಿಂದ ತನಿಖೆಗೆ ಆದೇಶ ಹೊರಡಿಸಿರುವ ಬಗ್ಗೆ ವರದಿಯಾಗಿದೆ. ಶಾಲಾ ಬಡ ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಹಗರಣ ಲೋಕಾಯುಕ್ತದಿಂದ ತನಿಖೆಗೆ ಕ್ಷಣಗಣನೆ ಆರಂಭವಾಗಿರುವುದರಿಂದ ಉರಿಬಿಸಿಲಲ್ಲೂ ನಡುಗುತ್ತಿರುವ ಬಿಇಓ-ಸಿಆರ್‌ಪಿಗಳು. […]

Continue Reading

ಈಶ್ವರಪ್ಪ ಕೋಪ ತಣ್ಣಿಗಾಗಿಸಲು ಬಿಜೆಪಿ ಹೈಕಮಾಂಡ್ ನಾಯಕರು ಎಂಟ್ರಿ ಆಗೋದು ಪಕ್ಕಾ ಎನ್ನಲಾಗಿದೆ.!

ಶಿವಮೊಗ್ಗದಲ್ಲಿ ಬಂಡಾಯದ ಬಿಸಿ ಕೊಂಚ ಜೋರಾಗಿಯೇ ತಟ್ಟಿದೆ. ಕೆ.ಎಸ್.ಈಶ್ವರಪ್ಪರ ಕೋಪ ತಣ್ಣಿಗಾಗಿಸಲು ಬಿಜೆಪಿ ಹೈಕಮಾಂಡ್ ನಾಯಕರು ಎಂಟ್ರಿ ಆಗೋದು ಪಕ್ಕಾ ಎನ್ನಲಾಗಿದೆ. ಶಿವಮೊಗ್ಗ ಕ್ಷೇತ್ರದ ಬಂಡಾಯ ಶಮನಗೊಳಿಸಲು ಹೈಕಮಾಂಡ್ ನಾಯಕರು ಎಂಟ್ರಿಗೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಹಾವೇರಿ ಲೋಕಸಭಾ ಟಿಕೆಟ್ ಈಶ್ವರಪ್ಪರ ಪುತ್ರ ಕಾಂತೇಶ್‌ಗೆ ಮಿಸ್ ಆದ ಕಾರಣ ಬಂಡಾಯವೆದ್ದು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಫರ್ಧೆ ಮಾಡಲು ಈಶ್ವರಪ್ಪ ಮುಂದಾಗಿದ್ದಾರೆ. ಈಶ್ವರಪ್ಪರ ಕೋಪ ತಣ್ಣಿಗಾಗಿಸಲು ಬಿಜೆಪಿ ಹೈಕಮಾಂಡ್ ನಾಯಕರ ಎಂಟ್ರಿ ಆಗ್ತಿದೆ.ನೇರವಾಗಿ ಅಮಿತ್ ಶಾ ರನ್ನೇ ಕಣಕ್ಕಿಳಿಸಲು ಬಿಜೆಪಿ […]

Continue Reading

ಉತ್ತಮ ಸಮಾಜ ಮತ್ತು ಮುಂದಿನ ಪೀಳಿಗೆಗೆ ಜಾನಪದ ಸಾಹಿತ್ಯ, ಬಳಕೆ ಮತ್ತು ಅದರ ಸಂಪೂರ್ಣ ಅರಿವು ಅತ್ಯಗತ್ಯವಾಗಿದೆ: ಸಾಹಿತಿ ಡಾ.ಸಂಪತ್ ಬೆಟ್ಟಗೆರೆ

ಮೂಡಿಗೆರೆ : ಕಣ್ಣಾಮುಚ್ಚೆ ಕಾಡು ಗೋಡು, ಹುಯ್ಯೋ ಹುಯ್ಯೋ ಮಳೆರಾಯ ದಂತಹ ಅದ್ಬುತ ಗಾಯನಗಳು ಪುಸ್ತಕಗಳಿಂದ ಮಸ್ತಕಕ್ಕೆ ತೆಗೆದುಕೊಳ್ಳುವ ಮೂಲಕ ಅದರಿಂದ ಒಳಿತನ್ನು ತೆಗೆದುಕೊಂಡು ಸಮಾಜದಲ್ಲಿ ಉತ್ತಮ ವಾತವರಣ ಸೃಷ್ಠಿಗೆ ಕಾರಣವಾಗಿದ್ದ ಪಾಠಗಳು ಮತ್ತು ಜಾನಪದ ಗೀತೆಗಳು ಇಂದು ಎಳೆ ಮರೆಯಾಗಿ ಸಮಾಜವನ್ನು ಕೆಲವು ಕೀಳು ಸಾಹಿತ್ಯಗಳು ಇಂದಿನ ಯುವ ಪೀಳಿಗೆಯ ದಾರಿಯನ್ನು ತಪ್ಪಿಸುತ್ತಿವೆ ಮತ್ತು ದುರಂತವನ್ನು ತಂದೊಡ್ಡುತ್ತಿದೆ. ಉತ್ತಮ ಸಮಾಜ ಮತ್ತು ಮುಂದಿನ ಪೀಳಿಗೆಗೆ ಜಾನಪದ ಸಾಹಿತ್ಯ, ಬಳಕೆ ಮತ್ತು ಅದರ ಸಂಪೂರ್ಣ ಅರಿವು ಅತ್ಯಗತ್ಯವಾಗಿದೆ […]

Continue Reading

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ನೀಡದ ಪೊಲೀಸ್ ಅಧಿಕಾರಿಗೆ ಹತ್ತು ಸಾವಿರ ರೂ. ದಂಡ

ದಂಡದ ಮೊತ್ತವನ್ನು ಸಂಬಳದಿಂದ ಕಡಿತಗೊಳಿಸಿ ಆಯೋಗದ ಖಾತೆಗೆ ಜಮೆ ಮಾಡುವಂತೆ ಆದೇಶ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಮಾಹಿತಿ ನೀಡುವಂತೆ ಸಲ್ಲಿಸಿದ ಅರ್ಜಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ ಹಾಗೂ ಮಾಹಿತಿ ಅಧಿಕಾರಿ ಅಜಯ್ ಎಂಬ ಪೊಲೀಸ್ ಅಧಿಕಾರಿಗೆ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ. ಮಂಗಳೂರು ನಿವಾಸಿ ಮಹಮ್ಮದ್ ಝಮೀರ್ ಆಯೋಗಕ್ಕೆ ದೂರು ನೀಡಿದ್ದರು. […]

Continue Reading

ಮಾಯಾ ನಗರಿಯಲ್ಲಿ ಕಾಣೆಯಾಗುತ್ತಿರುವ ಮಹಿಳೆಯರು, ಬಾಲಕಿಯರು ಎಲ್ಲಿ.?

ಮೋಸ ಜಾಲದಲ್ಲಿ ಸಿಲುಕಿ ಹೊರ ಬರಲಾಗದೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆಯೇ.? ಸಿಲಿಕಾನ್ ಸಿಟಿ ಎಂಬ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಕಾಣೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2021ರಲ್ಲಿ 4,205, 2022ರಲ್ಲಿ 4,854 ಮತ್ತು 2023ರಲ್ಲಿ 6,017 ಮಂದಿ ನಾಪತ್ತೆಯಾಗಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕಾಣೆಯಾಗಿರುವುದು ಆತಂಕಕಾರಿ. ಮೂರು ವರ್ಷಗಳಲ್ಲಿ ಒಟ್ಟು 15,076 ಮಂದಿ ಕಾಣೆಯಾಗಿದ್ದಾರೆ. ಇವರಲ್ಲಿ 8,338 ಮಂದಿ ಮಹಿಳೆಯರೇ ಕಾಣೆಯಾಗಿದ್ದಾರೆ. ಕಾಣೆಯಾದ ನಂತರ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ರಾಜ್ಯದ ಪ್ರತಿ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುತ್ತಾರೆ. ರಾಜ್ಯ […]

Continue Reading

ವಜಾಗೊಂಡ ಪೊಲೀಸಪ್ಪನಿಂದ ಲೋಕಾಯುಕ್ತರ ಹೆಸರಿನಲ್ಲಿ ಹಣ ವಸೂಲಿ.!

ಅಧಿಕಾರಿಗಳೇ ಎಚ್ಚರ.. ವಸೂಲಿಗಾರ ಬಂದಾನು. ಕೆಲವು ಅಧಿಕಾರಿಗಳಿಗೆ ದೂರವಾಣಿ ಕರೆಯೊಂದು ಬರುತ್ತಿದ್ದು ಆ ಕರೆಯಲ್ಲಿ ನಾನು ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿ ನೋಡು ನಿನ್ನ ಬಗ್ಗೆ ದೂರು ಬಂದಿದೆ ಕೂಡಲೇ ಬಂದು ನಾನು ತಿಳಿಸಿದ ಅಕೌಂಟಿಗೆ ಹಣ ಹಾಕಿದರೇ ನೀನು ಸೇಫಾಗುತ್ತಿಯಾ. ಇಲ್ಲದಿದ್ದರೆ ಜೈಲಿಗೆ ಹೋಗುತ್ತಿಯಾ ಯಾವುದು ಬೇಕು ನಿನಗೆ ಎಂದು ವ್ಯಕ್ತಿಯೊಬ್ಬನಿಂದ ಪೋನ್ ಬಂದಾಕ್ಷಣ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ಆ ವ್ಯಕ್ತಿ ಹೇಳಿದ ಅಕೌಂಟ್ ಗೆ ಹಣ ಹಾಕಿರುವ ಪ್ರಕರಣ ವರದಿಯಾಗಿದೆ. ಈ ಹಿಂದೆ ಶೃಂಗೇರಿ ಮತ್ತು ಕಡೂರು […]

Continue Reading

ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ; ತನಿಖೆ ನಡೆಸಿ ದಂಡ ಹಾಕಿದ ಒಂಬಡ್ಸ್ ಮನ್

ಮೂಡಿಗೆರೆ : ತಾಲ್ಲೂಕಿನ ತರುವೆ ಗ್ರಾಮ ಪಂಚಾಯಿತಿಯಲ್ಲಿ 2023-24ನೇ ಸಾಲಿನಲ್ಲಿ ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ ನಡದಿದೆ ಎಂದು ತರುವೆ ಗ್ರಾಮದ ಸಾಗರ್ ಎಂಬವರು ದೂರು ನೀಡಿದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಒಂಬಡ್ಸ್‌ಮನ್ ಅಧಿಕಾರಿ ನಟರಾಜ ಪರಿಶೀಲನೆ ನಡೆಸಿ ಅವ್ಯವಹಾರ ನಡೆದಿದ್ದು ಸ್ಪಷ್ಟವಾದ ಕಾರಣ ಅಧ್ಯಕ್ಷರ ಸಹಿತ ಇಬ್ಬರು ಪಿಡಿಒಗಳು, ಕಛೇರಿಯ ಸಿಬ್ಬಂಧಿಗಳಿಬ್ಬರು ಮತ್ತು ನರೇಗಾ ಅಭಿಯಂತರರೋರ್ವರಿಗೆ ಹಾಗೂ ಕಾಯಕಬಂಧುಗಳಿಗೆ ದಂಢ ವಿಧಿಸಿ ಕ್ರಮ ಜರುಗಿಸುವಂತೆ ಆದೇಶ ನೀಡಿರುವ ಪ್ರಕರಣ ವರದಿಯಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಒಂಬಡ್ಸ್ […]

Continue Reading