ಒಂದೇ ವೇದಿಕೆಯಲ್ಲಿ ಯುಎಇಯ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಒಟ್ಟುಗೂಡಿಸಿದ ಯಕ್ಷಗಾನ ಅಭ್ಯಾಸ ಕೇಂದ್ರ

ಜೂನ್ 29 ರಂದು ನಡೆಯಲಿರುವ “ದುಬೈ ಯಕ್ಷೋತ್ಸವ-2025” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಸಂಭ್ರಮವು ಯಕ್ಷಧ್ರುವ ಪಟ್ಲ ಪೌಂಡೇಶನ್ ಯುಎಇ(ದುಬೈ) ಘಟಕದ ಸಹಯೋಗದೊಂದಿಗೆ ಜೂನ್ 29 ರಂದು ಜರಗಲಿರುವ “ದುಬೈ ಯಕ್ಷೋತ್ಸವ-2025” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಮೆ.11 ರಂದು ಜರುಗಿತ್ತು. ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಯುಎಇ ಬಂಟ್ಸ್ […]

Continue Reading

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ: ಒಂದು ಯುಗದ ಅಂತ್ಯ

ನಾಯಕತ್ವ: 68 ಪಂದ್ಯಗಳಲ್ಲಿ 40 ಗೆಲುವುಗಳು, 20 ಶತಕಗಳೊಂದಿಗೆ 5,864 ರನ್‌ಗಳು (ಸರಾಸರಿ 54.80) ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು. ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ, ಮಾಜಿ ನಾಯಕ ಮತ್ತು ಆಧುನಿಕ ಕ್ರಿಕೆಟ್‌ನ ಐಕಾನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ನಿರ್ಧಾರವು ಕ್ರಿಕೆಟ್ ಜಗತ್ತಿನಾದ್ಯಂತ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಕೊಹ್ಲಿಯ ಟೆಸ್ಟ್ ವೃತ್ತಿಜೀವನವು 14 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ಕ್ರಿಕೆಟ್‌ನ ಬೆನ್ನೆಲುಬಾಗಿತ್ತು. ಅವರ ಈ ನಿರ್ಧಾರವು ಕ್ರಿಕೆಟ್ ಇತಿಹಾಸದಲ್ಲಿ […]

Continue Reading

ದೇಶದಾದ್ಯಂತ 515ಕ್ಕೂ ಹೆಚ್ಚು ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಮಾರು 20 ಆರೋಪಿಗಳ ಬಂಧನ

ದೇಶದಾದ್ಯಂತ 515ಕ್ಕೂ ಹೆಚ್ಚು ಸೈಬರ್‌ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಮಾರು 20 ಆರೋಪಿಗಳನ್ನು ತೆಲಂಗಾಣ ಸೈಬರ್‌ ಭದ್ರತಾ ಬ್ಯೂರೊ ಅಧಿಕಾರಿಗಳು ಗುಜರಾತ್‌ನ ಸೂರತ್‌ನಲ್ಲಿ ಸೋಮವಾರ ಬಂಧಿಸಿದ್ದಾರೆ. ಈ ಪ್ರಕರಣಗಳ ಪೈಕಿ 60 ‍ಪ್ರಕರಣಗಳು ತೆಲಂಗಾಣದಲ್ಲಿಯೇ ದಾಖಲಾಗಿವೆ. ಪ್ರಕರಣಗಳ ಸಂಬಂಧ ಖಾಸಗಿ ಕಂಪನಿಗಳ ಉದ್ಯೋಗಿಗಳು, ಉದ್ಯಮಿಗಳು ಹಾಗೂ ಖಾಸಗಿ ಬ್ಯಾಂಕ್‌ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಟಿಜಿಸಿಎಸ್‌ಬಿ ನಿರ್ದೇಶಕ ಶಿಖಾ ಗೋಯಲ್‌ ಮಾಹಿತಿ ನೀಡಿದರು. ಅಕ್ರಮಗಳಿಂದ ಬಂದ ಹಣವನ್ನು ಇತರೆ ಖಾತೆಗಳಿಗೆ ವರ್ಗಾಯಿಸಿದ ಮತ್ತು ಚೆಕ್‌ ಮೂಲಕ ಹಣ ಪಡೆದುಕೊಂಡದ್ದನ್ನು […]

Continue Reading

ದೇವೇಂದ್ರ ಫಡ್ನವೀಸ್ ಎಂಟ್ರಿ ಆಗಿದ್ದೇಕೆ.? ಬಿಜೆಪಿಯಲ್ಲಿ ಅಸಹಕಾರ ಚಳವಳಿ

ಭಾರತ-ಪಾಕಿಸ್ತಾನದ ನಡುವಣ ಸಂಘರ್ಷ ಕೂಡಾ ಸಿದ್ದುಗೆ ಟಾನಿಕ್ ಯೋಗಿ ಆದಿತ್ಯನಾಥ್ ಅವರನ್ನು ಪ್ರದಾನಿ ಪಟ್ಟಕ್ಕೆ ಕೂರಿಸುವ ಲೆಕ್ಕಾಚಾರ ಸಂಘಪರಿವಾರದಲ್ಲಿದೆ. ✍️. ಆರ್.ಟಿ.ವಿಠ್ಠಲಮೂರ್ತಿ ಕೆಲ ದಿನಗಳ ಹಿಂದೆ ಬಿಜೆಪಿಯಿಂದ ಉಚ್ಚಾಟಿತರಾದ ಬಸವನಗೌಡ ಪಾಟೀಲ್ ಯತ್ನಾಳ್ ಪಕ್ಷದ ವರಿಷ್ಟರಿಗೆ ಒಂದು ಸಂದೇಶ ರವಾನಿಸಿದರು. ಇನ್ನು ಪಕ್ಷದ ಶಿಸ್ತು ಉಲ್ಲಂಘನೆ ನಾಡುವುದಿಲ್ಲ ಎಂಬುದು ಈ ಸಂದೇಶ. ಅರ್ಥಾತ್, ಪಕ್ಷದಿಂದ ಉಚ್ಚಾಟಿತರಾದ ಯತ್ನಾಳ್ ಅವರು ಮರಳಿ ಬಿಜೆಪಿ ಪಾಳಯಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಆದರೆ ಯಡಿಯೂರಪ್ಪ ಗ್ಯಾಂಗನ್ನು ಕಂಡರೆ ಕುದಿಯುವ, ಎಗಾದಿಗಾ ಮಾತನಾಡುವ ಯತ್ನಾಳ್ […]

Continue Reading

ಕ್ರೈಸ್ತರ ವಿಶ್ವಗುರು ಪೋಪ್ ಆಗಿ ರಾಬರ್ಟ್ ಪ್ರಿವೋಸ್ಟ್; ರೋಮ್ ಧರ್ಮಕ್ಷೇತ್ರದ 267ನೇ ಧರ್ಮಾಧ್ಯಕ್ಷರಾಗಿ ಆಯ್ಕೆ

ಕ್ರೈಸ್ತರ ವಿಶ್ವಗುರು ಪೋಪ್ ಆಗಿ ರಾಬರ್ಟ್ ಪ್ರಿವೋಸ್ಟ್ ಆಯ್ಕೆಯಾಗಿದ್ದು, ಪೋಪ್ ಲಿಯೋ XIV ಹೆಸರಿನಿಂದ ಅವರು ಇನ್ನು ಮುಂದೆ ಪೋಪ್‌ ಆಗಿ ಗುರುತಿಸಿಕೊಳ್ಳಲಿದ್ದಾರೆ. ರೋಮ್ ಧರ್ಮಕ್ಷೇತ್ರದ 267ನೇ ಧರ್ಮಾಧ್ಯಕ್ಷರ ಆಯ್ಕೆಯ ವಿಚಾರವನ್ನು ಗುರುವಾರ ರಾತ್ರಿ ಕಾರ್ಡಿನಲ್ ಪ್ರೋಟೋ-ಡೀಕನ್ ಡೊಮಿನೀಕ್ ಮಾಂಬೆರ್ತಿ ಅವರು ಜನತೆಗೆ ಈ ಸುದ್ದಿಯನ್ನು ಘೋಷಿಸಿದರು. ನಿಮಗೆಲ್ಲರಿಗೂ ನಾನು ಸಂತೋಷದ ಸುದ್ದಿಯನ್ನು ಪ್ರಕಟಿಸುತ್ತೇನೆ : ನಮ್ಮ ವಿಶ್ವಗುರುವಿನ ಆಯ್ಕೆಯಾಗಿದೆ ಎಂದು ಮಾಂಬೆರ್ತಿ ಘೋಷಣೆ ಕೂಗಿ ಪೋಪ್‌ ಆಯ್ಕೆಯನ್ನು ಪ್ರಕಟಿಸಿದರು. ಕ್ಯಾಥೋಲಿಕ್ ಚರ್ಚ್ ನ 2,000 ವರ್ಷಗಳ […]

Continue Reading

ಪೌರತ್ವದ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪಾಕಿಸ್ತಾನಕ್ಕೆ ಗಡೀಪಾರು ಮಾಡದಂತೆ ಸುಪ್ರೀಂ ಕೋರ್ಟ್‌ ಸೂಚನೆ

ಜಮ್ಮು ಮತ್ತು ಕಾಶ್ಮೀರದ ಕುಟುಂಬದ ಆರು ಮಂದಿಯ ಪೌರತ್ವದ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡದಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚನೆ ನೀಡಿದೆ. ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ವಾಸವಿರುವ ಆರೋಪ ಅವರ ಮೇಲಿದೆ. ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ಎನ್‌.ಕೋಟೀಶ್ವರ ಸಿಂಗ್‌ ಅವರು, ಯಾವುದೇ ಕಾಲಮಿತಿ ನಿಗದಿ ಮಾಡದೆ, ಆ ಕುಟುಂಬದ ಪಾಸ್‌ಪೋರ್ಟ್‌, ಆಧಾರ್‌, ಪಾನ್‌ ಕಾರ್ಡ್‌ ಮತ್ತಿತರ ಗುರುತಿನ ದಾಖಲೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಿರ್ದಿಷ್ಟ ನಿರ್ಧಾರ ಕೈಗೊಳ್ಳುವವರೆಗೂ ಅಧಿಕಾರಿಗಳು […]

Continue Reading

ಪಹಲ್ಗಾಮ್​: ಭಯೋತ್ಪಾದಕ ಭೀಕರ ದಾಳಿ ವೇಳೆ ತನ್ನ ಪ್ರಾಣ ಪಣಕ್ಕಿಟ್ಟು ಪ್ರವಾಸಿಗರನ್ನು ರಕ್ಷಿಸಿದ ಸ್ಥಳೀಯ ನಿವಾಸಿ ರಯೀಸ್ ಅಹ್ಮದ್ ಭಟ್ ‘ಪಹಲ್ಗಾಮ್ ಹೀರೋ’

ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ಭೀಕರ ದಾಳಿ ವೇಳೆ ತನ್ನ ಪ್ರಾಣವನ್ನು ಲೆಕ್ಕಿಸದೇ ದಾಳಿಯಲ್ಲಿ ಗಾಯಗೊಂಡಿದ್ದ ಪ್ರವಾಸಿಗರನ್ನು ಉಳಿಸುವಲ್ಲಿ ಸಾಹಸ ಮೇರೆದ ಸ್ಥಳೀಯ ನಿವಾಸಿ ರಯೀಸ್ ಅಹ್ಮದ್ ಭಟ್ ಅವರನ್ನು ‘ಪಹಲ್ಗಾಮ್ ಹೀರೋ’ ಎಂದು ಗೌರವಿಸಲಾಗುತ್ತಿದೆ. ಭೀಕರ ದಾಳಿಯ ವೇಳೆ 5 ರಿಂದ 6 ಜನರ ಜೀವ ಉಳಿಸಿದ ರಯೀಸ್ ಅಹ್ಮದ್ ಭಟ್ ಇದೀಗ ‘ಪಹಲ್ಗಾಮ್ ಹೀರೋ’ ಆಗಿದ್ದಾರೆ. ದಾಳಿಯ ವೇಳೆ ಗಾಯಗೊಂಡ ಪ್ರವಾಸಿಗರಿಗೆ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಹಾಯ ಮಾಡಿದರು. ದಾಳಿಕೋರರ ದಾಳಿಗೆ ಸತ್ತರೂ […]

Continue Reading

ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಮೇಯನೇಸ್ ನಿಷೇಧಿಸಿ ಆದೇಶ

ಮೇಯನೇಸ್ ಅನ್ನು ಸರಿಯಾಗಿ ತಯಾರಿಸದಿರುವುದು ಮತ್ತು ಸರಿಯಾಗಿ ಸಂಗ್ರಹಿಸದಿರುವುದು ಸೇರಿದಂತೆ ಹಲವು ಅಂಶಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತವೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಈ ನಿರ್ಧಾರ ಕೈಗೊಂಡಿವೆ. ತಮಿಳುನಾಡು ಸರ್ಕಾರವು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಪ್ರಕಾರ, ಮೊಟ್ಟೆಗಳಿಂದ ತಯಾರಿಸಿದ ಮೇಯನೇಸ್ ಅನ್ನು ಒಂದು ವರ್ಷ ನಿಷೇಧಿಸಿ ಆದೇಶಿಸಿದೆ. ಈ ಆದೇಶದ ಪ್ರಕಾರ, ಸಾರ್ವಜನಿಕರ ಹಿತದೃಷ್ಟಿಯಿಂದ, ತಮಿಳುನಾಡಿನ ಯಾವುದೇ ಭಾಗದಲ್ಲಿ ಮೇಯನೇಸ್ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಮಿಳುನಾಡು ಗೆಜೆಟ್‌ನಲ್ಲಿ […]

Continue Reading

ಉಗ್ರರ ವಿರುದ್ದ ಸೆಣಸಾಡಿ, ಅವರ ಗುಂಡಿಗೆ ಹುತಾತ್ಮನಾದ ಕಾಶ್ಮೀರಿ ಮುಸ್ಲಿಂ ಯುವಕ ಆದಿಲ್

ಆದಿಲ್‌ ಮಾನವೀಯತೆಯ ನೆಲೆಯಲ್ಲಿ ಪ್ರವಾಸಿಗರನ್ನು ರಕ್ಷಿಸಲು ಮುಂದಾದಾಗ ನಿರ್ಧಯಿ ರಕ್ತಪಿಪಾಸುಗಳು ಕೊಂದೆ ಬಿಟ್ಟರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಭೀಕರ ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿರುವ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕುದುರೆ ಸವಾರಿ ಮಾಡಿಕೊಂಡು 28 ವರ್ಷದ ಸೈಯದ್‌ ಆದಿಲ್‌ ಹುಸೈನ್ ಶಾ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹಲವಾರು ವರ್ಷಗಳಿಂದಲೂ ಪಹಲ್ಗಾಮ್‌ಗೆ ಬರುವ ಪ್ರವಾಸಿಗರಿಗೆ ಕುದುರೆ ಸವಾರಿಯ ಸೇವೆ ನೀಡುತ್ತಿದ್ದರು. ಬೈಸರ್‌ ವ್ಯಾಲಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಅವರನ್ನು ಸುರಕ್ಷಿತವಾಗಿ ಮರಳಿ ಅವರವರ ಹೋಟೆಲ್‌ಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದರು. ಏಪ್ರಿಲ್‌ […]

Continue Reading

ಪಹಲ್ಗಾಮ್ ಭಯೋತ್ಪಾದಕ ದಾಳಿ ಮನುಷ್ಯತ್ವದ ಮೇಲಿನ ದಾಳಿ, ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ಇದು ಸಕಾಲ

ಸ್ವರ್ಗದಲ್ಲಿ ರಕ್ತಪಾತ; ತುಂಬಿದೆ ಪಾಪಿಸ್ತಾನದ ಪಾಪದ ಕೊಡ: ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನ ಸುಂದರ ಹುಲ್ಲುಗಾವಲಿಯಲ್ಲಿ 2025ರ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯು ಭಾರತವನ್ನು ಮಾತ್ರವಲ್ಲದೆ ಇಡೀ ಮನುಕುಲವನ್ನೇ ಆಘಾತಕ್ಕೀಡು ಮಾಡಿದೆ. ಈ ದಾಳಿಯಲ್ಲಿ 26ಕ್ಕೂ ಹೆಚ್ಚು ಅಮಾಯಕ ಪ್ರವಾಸಿಗರು, ಸ್ಥಳೀಯರು ಮತ್ತು ಒಬ್ಬ ನೌಕಾಪಡೆಯ ಅಧಿಕಾರಿಯ ಸೇರಿದಂತೆ ಜೀವಗಳು ಬಲಿಯಾಗಿವೆ. ಈ ಕೃತ್ಯವು ಕೇವಲ ಒಂದು ದಾಳಿಯಲ್ಲ, ಮಾನವೀಯತೆಯ ಮೇಲಿನ ಕ್ರೂರ ಆಕ್ರಮಣವಾಗಿದೆ. ಈ ಕೃತ್ಯವನ್ನು […]

Continue Reading