ಬಿಲ್ಕಿಸ್​ ಬಾನು ಪ್ರಕರಣದ ಆರೋಪಿಗಳು ಭಾನುವಾರ ತಡರಾತ್ರಿ ಗೋಧ್ರಾ ಉಪ ಜೈಲಿಗೆ ಶರಣು

ಬಿಲ್ಕಿಸ್​ ಬಾನೊ ಪ್ರಕರಣದ ಹನ್ನೊಂದು ಮಂದಿ ಆರೋಪಿಗಳು ಸುಪ್ರೀಂ ಕೋರ್ಟ್ ವಿಧಿಸಿರುವ ಗಡುವಿಗೆ ಅನುಗುಣವಾಗಿ ಭಾನುವಾರ ತಡರಾತ್ರಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಜೈಲಿನಲ್ಲಿ ಶರಣಾಗಿದ್ದಾರೆ.ಶರಣಾಗತಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಜನವರಿ 21 ರ ಮಧ್ಯರಾತ್ರಿ ಗಡುವು ಮೀರುವ ಮುನ್ನ ಎಲ್ಲಾ ಅಪರಾಧಿಗಳು ಜೈಲು ತಲುಪಿದ್ದಾರೆ 2002ರ ಗುಜರಾತ್‌ನ ಗೋದ್ರಾ ಗಲಭೆ ಸಂದರ್ಭದಲ್ಲಿ, ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಈ ಕ್ರೂರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು […]

Continue Reading

ಲಿಂಗ ಬದಲಾವಣೆಗೆ ಒಳಗಾಗಿ ಸುದ್ದಿಯಾಗಿದ್ದ ಪೊಲೀಸ್ ಪೇದೆ ಇದೀಗ ಗಂಡು ಮಗುವಿನ ತಂದೆ

ಮುಂಬೈ: ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೊಳಗಾಗಿ ಸುದ್ದಿಯಾಗಿದ್ದ ಮುಂಬೈನ ಪೊಲೀಸ್‌ ಪೇದೆಯೊಬ್ಬರು ಇದೀಗ ತಮ್ಮ ಜೀವನದ ಅತ್ಯಂತ ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಮಹಿಳೆಯಿಂದ ಪುರುಷನಾಗಿ ಬದಲಾಗಿದ್ದ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಲಲಿತ್ ಸಾಳ್ವೆ ಮಗುವಿಗೆ ತಂದೆಯಾಗಿದ್ದಾರೆ. 36 ವರ್ಷದ ಲಲೀತ್ ಸಾಳ್ವೆ 2018 ರಿಂದ 2020ರಲ್ಲಿ ಮೂರು ಬಾರಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು , ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಈ ಲಿಂಗ ಬದಲಾವಣೆಗೆ ಒಳಗಾಗಿದ್ದ ಅವರು ಭಾರಿ ಚರ್ಚೆಗೆ ಕಾರಣರಾಗಿದ್ದರು. ತದ ನಂತರ 2020 ರಲ್ಲಿ […]

Continue Reading

ಜನವರಿ 21 ರೊಳಗೆ 11 ಮಂದಿ ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ

ಶರಣಾಗಲು ಹೆಚ್ಚುವರಿ ಕಾಲಾವಕಾಶ ಕೋರಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲಾ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ನ್ಯಾಯಾಲಯವು ನಿಗದಿಪಡಿಸಿದ ಮೂಲ ಗಡುವಿನ ಪ್ರಕಾರ ಜನವರಿ 21 ರೊಳಗೆ ಎಲ್ಲಾ 11 ಅಪರಾಧಿಗಳು ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ಆರೋಪದಲ್ಲಿ ಹನ್ನೊಂದು ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದರು. […]

Continue Reading

ಅತ್ಯಾಚಾರ ಸಂತ್ರಸ್ತೆಗೆ ಎರಡು ಬೆರಳಿನ ಮೂಲಕ ಪರೀಕ್ಷಿಸಿದ ಪ್ರಕರಣ; ಮಹಿಳೆಯ ಪಾವಿತ್ರ್ಯತೆ ಮತ್ತು ಘನತೆಗೆ ವಿರುದ್ಧವಾಗಿದೆ: ಹೈಕೋರ್ಟ್

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಗೆ ಬೆರಳಿನ ಮೂಲಕ ಪರೀಕ್ಷಿಸಿದ ಪ್ರಕರಣ ವರದಿಯಾಗಿದ್ದು ಕಾಂಗ್ರಾ ಸಿವಿಲ್ ಆಸ್ಪತ್ರೆಯ ವೈದ್ಯರಿಗೆ ಹಿಮಾಚಲ ಹೈಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೆ ಸಂತ್ರಸ್ತೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. ಈ ಮೊತ್ತವನ್ನು ವೈದ್ಯರ ವೇತನದಿಂದ ಕಡಿತಗೊಳಿಸಬೇಕು. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರನ್ನೇ ಹೊಣೆಗಾರರನ್ನಾಗಿಸಬೇಕು. ಅತ್ಯಾಚಾರ ಸಂತ್ರಸ್ತೆಯ ಘನತೆಗೆ ಧಕ್ಕೆಯಾಗಿದೆ ಎಂದು ನ್ಯಾಯಮೂರ್ತಿ ತರ್ಲೋಕ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಸತ್ಯನ್ ವೈದ್ಯ ಅವರ ಪೀಠವು ಆದೇಶ ನೀಡಿದೆ. […]

Continue Reading

ಮಂದಿರವಲ್ಲೇ ಕಟ್ಟಿದೆವು.! ಅಡ್ವಾಣಿ ಎಲ್ಲಿ.?

ಅಡ್ವಾಣಿ, ಜೋಷಿ, ಕಟಿಯಾರ್, ಉಮಾಭಾರತಿ, ತೊಗಾಡಿಯಾ ಮುಂತಾದ ಹಿಂದೂ ಹುಲಿಗಳು ಮೋದಿಯ ಹಠಾತ್ ದಾಳಿಯಿಂದ ತತ್ತರಿಸಿ ನೇಪಥ್ಯಕ್ಕೆ ಸರಿದು ತಮಗಾದ ​ ಗಾಯವನ್ನು ನೆಕ್ಕಿಕೊಳ್ಳುತ್ತಾ ಹಲ್ಲು ಮಸೆದುಕೊಳ್ಳುತ್ತಿದ್ದಾರೋ ಏನೋ.? ಸಂಘಪರಿವಾರದ ಮುಖ್ಯಸ್ಥ ಮುರಳಿ ಮನೋಹರ ಜೋಷಿಯವರ ವಸತಿಗ್ರಹದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯ ಜಾಗದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ತೆಗೆದುಕೊಂಡ ಸಣ್ಣ ಮಟ್ಟದ ತೀರ್ಮಾನವು ಕ್ರಮೇಣ ಲಾಲ್‌ಕೃಷ್ಣ ಅಡ್ವಾಣಿಯವರ ರಥಯಾತ್ರೆಯ ಮೂಲಕ ದೇಶದಾದ್ಯಂತ ಸಂಚಲನ ಸೃಷ್ಠಿಸಿತು. “ಮಂದಿರವಲ್ಲೇ ಕಟ್ಟುವೆವು” ಎಂಬ ಅಡ್ವಾಣಿಯವರ ಘೋಷಾ ವಾಕ್ಯವು ಭಾರತದ ಹಳ್ಳಿಹಳ್ಳಿಯಲ್ಲೂ ಅನುರಣಿಸತೊಡಗಿತು. ಶಾಬಾನು […]

Continue Reading

ಪತಿಯ ಜೊತೆ ಪತ್ನಿ ದೈಹಿಕ ಸಂಪರ್ಕ ನಿರಾಕರಿಸುವುದು ಕ್ರೂರತನವಾಗಿದ್ದು, ಡಿವೋರ್ಸ್ ನೀಡಲು ಪ್ರಮುಖ ಕಾರಣವಾಗಬಹುದು: ಮಧ್ಯಪ್ರದೇಶ ಹೈಕೋರ್ಟ್

ಪತಿಯ ಜೊತೆ ಪತ್ನಿ ಸೆಕ್ಸ್ ನಿರಾಕರಿಸುವುದು ಕೂಡ ಕ್ರೂರತನವಾಗಿದ್ದು, ಡಿವೋರ್ಸ್ ನೀಡಲು ಪ್ರಮುಖ ಕಾರಣವಾಗಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಹಿಂದೂ ಮದುವೆ ನಿಯಮದ ಪ್ರಕಾರ ಮಹಿಳೆ ತನ್ನ ಪತಿ ಜೊತೆ ದೈಹಿಕ ಸಂಪರ್ಕ ನಿರಾಕರಿಸುವುದು ಮಾನಸಿಕ ಕ್ರೂರತನವಾಗಿದೆ. ಇದರಿಂದ ಪತಿ ಡಿವೋರ್ಸ್ ನೀಡಲು ಪ್ರಮುಖ ಕಾರಣವಾಗಿ ಪ್ರಸ್ತಾಪಿಸಬಹುದು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಧೀಶ ಶೀಲ್ ನಾಗು ಮತ್ತು ಸರಫ್ ಸೇಟ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜನವರಿ 3-2024ರ ಸುದೀಪ್ಟೊ ಸಾಹಾ ಮತ್ತು ಮೌಮಿತಾ ಸಾಹ ಪ್ರಕರಣದಲ್ಲಿ […]

Continue Reading

ಸನಾತನ ಧರ್ಮದ ಸಂತ್ರಸ್ತರಾದ ನರೇಂದ್ರ ಮೋದಿ.!

✍️. ನವೀನ್ ಸೂರಿಂಜೆ. ಪತ್ರಕರ್ತ “ನಿನ್ನನ್ನು ಕೊಲ್ಲುವ ಕತ್ತಿಯನ್ನು ನೀನೇ ರೆಡಿ ಮಾಡಿ ಕೊಡ್ತಿದ್ದಿಯಲ್ವೇನೋ ಕಾಟೇರಾ ?” ಎಂದು ಕಮ್ಮಾರನಿಗೆ ಹೇಳುವ ಮಾತು ಈಗಿನ ಹಿಂದುತ್ವವಾದಿ ಹಿಂದುಳಿದ ವರ್ಗಗಳಿಗೆ ಹೇಳುವಂತಿದೆ. “ಮೋದಿ ರಾಮನ ಮೂರ್ತಿ ಮುಟ್ಟುವುದೇ ? ಯಾರು ಎಷ್ಟೇ ದೊಡ್ಡ ಜನ ಆಗ್ಲಿ ಸನಾತನ ಶಾಸ್ತ್ರಗಳನ್ನು ಪಾಲಿಸಬೇಕು. ಮೋದಿಯವರ ಅತಿಯಾದ ಭಾಗಿಧಾರಿಕೆ, ಗರ್ಭಗುಡಿಯ ಸಾಮಿಪ್ಯವನ್ನು ನಾನು ವಿರೋಧಿಸುತ್ತೇನೆ. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ” ಎಂದು ದೇಶದ ನಾಲ್ವರು ಪ್ರಮುಖ ಸ್ವಾಮೀಜಿಗಳು ಹೇಳಿಕೊಂಡಿದ್ದಾರೆ. ಪುರೋಹಿತಶಾಹಿ ವ್ಯವಸ್ಥೆ ಎಲ್ಲರನ್ನೂ ಬಳಸಿ […]

Continue Reading

ಅಪ್ರಾಪ್ತ ಬಾಲಕಿಯ ಮದುವೆಯಾಗಿದ್ದ ವ್ಯಕ್ತಿಯ ವಿರುದ್ದದ ಪ್ರಕರಣ ರದ್ದು; ಪ್ರಕರಣ ರದ್ದುಗೊಳಿಸದೆ ಇದ್ದರೆ ನಿಜವಾದ ನ್ಯಾಯಕ್ಕೆ ಸೋಲುಂಟಾಗುತ್ತದೆ: ದೆಹಲಿ ಹೈಕೋರ್ಟ್

ಅಪ್ರಾಪ್ತ ವಯಸ್ಕಳೊಂದಿಗೆ ಓಡಿಹೋದ ಕಾರಣಕ್ಕೆ ಅತ್ಯಾಚಾರ ಮತ್ತು ಅಪಹರಣ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧದ ಪ್ರಕರಣವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ , “ಇಬ್ಬರು ವ್ಯಕ್ತಿಗಳ ನಡುವಿನ ನಿಜವಾದ ಪ್ರೀತಿಯನ್ನು, ಅವರಲ್ಲಿ ಒಬ್ಬರು ಅಪ್ರಾಪ್ತರಾಗಿರಲಿ ಅಥವಾ ಇಬ್ಬರೂ ಅಪ್ರಾಪ್ತರಾಗಿರಲಿ ಇಲ್ಲವೇ ಇಬ್ಬರೂ ಪ್ರೌಢ ವಯಸ್ಸಿನ ಸಮೀಪವಿರುವ ಅಪ್ರಾಪ್ತ ವಯಸ್ಕರಾಗಿರಲಿ, ಅವರನ್ನು ಕಾನೂನಿನ ಕಾಠಿಣ್ಯ ಅಥವಾ ಪ್ರಭುತ್ವದ ಕ್ರಮದ ಮೂಲಕ ನಿಯಂತ್ರಿಸಬಾರದು ಎಂಬ ತೀರ್ಮಾನಕ್ಕೆ ಈಗಾಗಲೇ ಹಲವು ಬಾರಿ ಈ […]

Continue Reading

2024 ರ ಮೇ ತಿಂಗಳ ಬಳಿಕ ಮೊಬೈಲ್ ಬಳಕೆದಾರರಿಗೆ ಶಾಕ್ ಕಾದಿದೆ.! ರಿಚಾರ್ಜ್ ದರಗಳಲ್ಲಿ ಭಾರೀ ಏರಿಕೆಯಾಗುವ ಸಾಧ‍್ಯತೆ

2024 ರ ಮೇ ತಿಂಗಳ ಬಳಿಕ ಮೊಬೈಲ್ ಬಳಕೆದಾರರಿಗೆ ಶಾಕ್ ಕಾದಿದೆ. ರಿಚಾರ್ಜ್ ದರಗಳಲ್ಲಿ ಭಾರೀ ಏರಿಕೆಯಾಗುವ ಸಾಧ‍್ಯತೆಯಿದೆ. ಸದ್ಯಕ್ಕೆ ವೊಡಾಫೋನ್, ಐಡಿಯಾ ಸೇರಿದಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಸಂಕಷ್ಟದಲ್ಲಿವೆ. ಈ ಸಂಸ್ಥೆಗಳು ಚೇತರಿಸಿಕೊಳ್ಳಲು ದರ ಹೆಚ್ಚಳ ಅನಿವಾರ್ಯವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆ ಬಳಿಕ ಟೆಲಿಕಾಂ ಸಂಸ್ಥೆಗಳು ಶೇ.20 ರಷ್ಟು ದರ ಏರಿಕೆ ಮಾಡುವ ಸಾಧ‍್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಇಷ್ಟು ದಿನ ಅಗ್ಗದ ದರದಲ್ಲಿ ಸಿಗುತ್ತಿದ್ದ ಮೊಬೈಲ್ ರಿಚಾರ್ಜ್ ಇನ್ನು ಮುಂದಕ್ಕೆ ದುಬಾರಿಯಾಗಬಹುದು. […]

Continue Reading

ಜೈಪುರ: ಬಸ್ಸಿನೊಳಗೆ ಕಂಡೆಕ್ಟರ್ ನಿಂದ 25 ವರ್ಷದ ವಿವಾಹಿತ ಮಹಿಳೆಯ ಅತ್ಯಾಚಾರ

ರಾಜಸ್ಥಾನದ ಭರತ್ಪುರ ಜಿಲ್ಲೆಯಲ್ಲಿ 25 ವರ್ಷದ ವಿವಾಹಿತ ಮಹಿಳೆಯನ್ನು ಬಸ್ಸಿನೊಳಗೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಸ್ ಕಂಡಕ್ಟರ್ ನನ್ನು ಬಂಧಿಸಲಾಗಿದೆ. ಆರೋಪಿಯನ್ನು ಜಿತೇಂದ್ರ ಸಿಂಗ್ ಗುರ್ಜರ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಇಲ್ಲಿನ ಟ್ರಾನ್ಸ್ಪೋರ್ಟ್ ನಗರದಿಂದ ಭರತ್ಪುರಕ್ಕೆ ತೆರಳುತ್ತಿದ್ದ ಬಸ್ಸಿಗೆ ಮಹಿಳೆ ಹತ್ತಿದ್ದರು. ಬಸ್ ಭರತ್ಪುರದ ಬಯಾನಾ ತಲುಪಿದ ನಂತರ ಗುರ್ಜರ್, ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಓಂಪ್ರಕಾಶ್ ಕಿಲಾನಿಯಾ ತಿಳಿಸಿದ್ದಾರೆ. ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು […]

Continue Reading