ಗೌತಮ್ ಅದಾನಿ ಸಮೂಹಕ್ಕೆ ಮತ್ತೊಂದು ಸಂಕಟ; ಒಸಿಸಿಆರ್ ಪಿ ವರದಿ ಬಳಿಕ ನೆಲಕಚ್ಚಿದ ಷೇರು

ಹಿಂಡನ್ ಬರ್ಗ್ ವರದಿಯ ನಂತರ ಉದ್ಯಮಿ ಗೌತಮ್ ಅದಾನಿ ಅವರ ಕಂಪನಿಗಳ ವಿರುದ್ಧ ಮತ್ತೊಂದು ಗುರುತರ ಆರೋಪ ಕೇಳಿ ಬಂದಿದೆ. ಸಾರ್ವಜನಿಕವಾಗಿ ಪಟ್ಟಿ ಮಾಡಲ್ಪಟ್ಟ ಅದಾನಿ ಕಂಪನಿಗಳ ಷೇರುಗಳಲ್ಲಿ ‘ಅಪಾರದರ್ಶಕ’ ಮಾರಿಷಸ್ ನಿಧಿಗಳ ಹಣದ ಹರಿವು ಕಂಡು ಬಂದಿದೆ ಎಂದು ತನಿಖಾ ವರದಿಯನ್ನು ಮಾಡುವ ಒಸಿಸಿಆರ್ ಪಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಹಗರಣದಲ್ಲಿ ಅದಾನಿ ಕುಟುಂಬದ ಪಾಲುದಾರರ ಪಾತ್ರ ಇದೆ ಎಂದು ವರದಿ ಆರೋಪಿಸಿದೆ. ಆದರೆ ಒಸಿಸಿಆರ್ ಪಿ ಮಾಡಿದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದೇನೆ ಎಂದು ಅದಾನಿ […]

Continue Reading

ವಿವಾಹ ಸಂಬಂಧ ಮುರಿದು ಬೀಳುವ ಅಂಚಿನಲ್ಲಿರುವಾಗ, ಅದನ್ನು ಉಳಿಸಲು ಅವಕಾಶವಿಲ್ಲದಿದ್ದಾಗ, ಗಂಡ-ಹೆಂಡತಿಯನ್ನು ಒಟ್ಟಿಗೆ ಇಡುವುದು ಕ್ರೌರ್ಯಕ್ಕೆ ಸಮಾನ: ಸುಪ್ರೀಂ ಕೋರ್ಟ್

ವಿವಾಹ ಸಂಬಂಧ ಮುರಿದು ಬೀಳುವ ಅಂಚಿನಲ್ಲಿರುವಾಗ ಮತ್ತು ಅದನ್ನು ಉಳಿಸಲು ಯಾವುದೇ ಅವಕಾಶವಿಲ್ಲದಿದ್ದಾಗ, ಗಂಡ ಮತ್ತು ಹೆಂಡತಿಯನ್ನು ಒಟ್ಟಿಗೆ ಇಡುವುದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.ನಿರಂತರ ಕಹಿ, ಭಾವನೆಗಳ ನಷ್ಟ ಮತ್ತು ದೀರ್ಘಕಾಲದ ಪ್ರತ್ಯೇಕತೆಗೆ ಕಾರಣವಾಗುವ ಸಂದರ್ಭಗಳನ್ನು “ವಿವಾಹದ ಸರಿಪಡಿಸಲಾಗದ ಕುಸಿತ” ಪ್ರಕರಣವೆಂದು ಪರಿಗಣಿಸಬಹುದು ಎಂದು ನ್ಯಾಯಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ನ್ಯಾಯಪೀಠವು […]

Continue Reading

ಉ.ಪ್ರದೇಶ:ನ್ಯಾಯಾಲಯದ ಅವರಣದಲ್ಲಿ ನ್ಯಾಯವಾದಿಯ ಗುಂಡಿಕ್ಕಿ ಭೀಕರ ಹತ್ಯೆ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ತಹಸಿಲ್ ನ್ಯಾಯಾಲಯದ ಸಂಕೀರ್ಣದಲ್ಲಿರುವ ಕೊಠಡಿಯಲ್ಲೇ ವಕೀಲರೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮನೋಜ್ ಚೌಧರಿ ಅಲಿಯಾಸ್ ಮೋನು ಜಾತ್ ಅವರು ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಮ್ಮ ಚೇಂಬರ್‌ನಲ್ಲಿ ಊಟ ಮಾಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಕೋಣೆಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಮೋನು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದ ನಂತರ, ಪೊಲೀಸ್ ತಂಡ ವಿಧಿವಿಜ್ಞಾನ ತಜ್ಞರೊಂದಿಗೆ […]

Continue Reading

ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ಹಗರಣ:ನಕಲಿ ಸಂಸ್ಥೆಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲು

ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆ ಪ್ರಾರಂಭಿಸಿರುವ ಸಿಬಿಐ ನಕಲಿ ಸಂಸ್ಥೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. 2017ರಿಂದ 2022ರ ಅವಧಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ಯೋಜನೆಯಡಿಯಲ್ಲಿ 830 ನಕಲಿ ಶಿಕ್ಷಣ ಸಂಸ್ಥೆಗಳು ಲಾಭ ಪಡೆದಿದ್ದು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಸುಮಾರು ರೂಪಾಯಿ 144.83 ಕೋಟಿ ನಷ್ಟ ಉಂಟು ಮಾಡಿವೆ ಎಂಬ ಆರೋಪ ಕೇಳಿಬಂದಿತ್ತು.ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ, ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳು, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು […]

Continue Reading

ಅದಾನಿ ಸಮೂಹ ನಿಯಮಗಳನ್ನು ಉಲ್ಲಂಘಿಸಿರುವುದು ಸೆಬಿ ತನಿಖೆಯಿಂದ ಪತ್ತೆ

ಷೇರುಪಟ್ಟಿಗೆ ಸೇರಿರುವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ವಿದೇಶಗಳಲ್ಲಿರುವ ನಿಧಿ ಮತ್ತು ಮಿತಿಯ ವಿವರಗಳ ಘೋಷಣೆಯಲ್ಲಿ ಅದಾನಿ ಸಮೂಹ ನಿಯಮಗಳನ್ನು ಉಲ್ಲಂಘಿಸಿರುವುದು ಸೆಬಿ ತನಿಖೆಯಿಂದ ಪತ್ತೆಯಾಗಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ ಮೂಲಗಳು ಇದನ್ನು ದೃಢಪಡಿಸಿವೆ. ಅದಾನಿ ಸಮೂಹವು ಷೇರುಮೌಲ್ಯಗಳ ಏರಿಳಿತದಲ್ಲಿ ತೊಡಗಿದೆ ಎಂಬ ಅಮೆರಿಕದ ಹಿಂಡನ್‌ಬರ್ಗ್‌ ಸಂಶೋಧನಾ ಸಂಸ್ಥೆ ವರದಿ ಬಳಿಕ ಸೆಬಿ ತನಿಖೆ ಆರಂಭಿಸಿತ್ತು.ಬಂದರು ವಹಿವಾಟಿನಿಂದ ವಿದ್ಯುತ್ ಉತ್ಪಾದನೆಯವರೆಗೂ ವಿವಿಧ ಉದ್ಯಮಗಳನ್ನು ಹೊಂದಿರುವ ಅದಾನಿ ಸಮೂಹವು ತನ್ನಿಂದ ಯಾವುದೇ ಲೋಪವಾಗಿಲ್ಲ ಎಂದು ಇದೇ ವರ್ಷದ ಜನವರಿ ತಿಂಗಳಲ್ಲಿ […]

Continue Reading

ಗೆರಿಲ್ಲಾ ಯುದ್ಧ ತಂತ್ರ ಬಳಸುತ್ತಿದ್ದಾರೆ ಶರದ್ ಪವಾರ್: ಸಂಜಯ್ ರಾವತ್

ಪಕ್ಷ ತೊರೆದವರ ವಿರುದ್ಧ ಶರದ್ ಪವಾರ್ ಗೆರಿಲ್ಲಾ ಯುದ್ಧ ತಂತ್ರ ಹೆಣೆಯುತ್ತಿದ್ದಾರೆ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ರಾವತ್,ಪಕ್ಷ ಬಿಟ್ಟವರ ವಿರುದ್ಧ ಎನ್ ಸಿ ಪಿ ಮುಖ್ಯಸ್ಥ ಶರದ್‌ ಪವಾರ್‌ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸುತ್ತಿದ್ದಾರೆ. ನಮ್ಮ ಪಕ್ಷವೂ ರಣರಂಗದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ. ಶರದ್‌ ಪವಾರ್ ಹಾಗೂ ಅವರ ಸಂಗಡಿಗರು ಪಕ್ಷ ಬಿಟ್ಟವರ ವಿರುದ್ಧ […]

Continue Reading

ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ ಭೀತಿ: ರಾಜ್ಯದೆಲ್ಲೆಡೆ ವ್ಯಾಪಕ ಕಟ್ಟೆಚ್ಚರ.ಹಂದಿ,ಕೋಳಿಗಳ ಮೇಲೆ ನಿಗಾ.

ಕೇರಳದಲ್ಲಿ ಮಾರಣಾಂತಿಕ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿದ್ದು, ಈ ಬೆಳವಣಿಗೆ ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ.ಇದು ಹಂದಿಗಳಲ್ಲಿ ಕಾಣಿಸಿಕೊಳ್ಳುವ ರೋಗವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ರಾಜ್ಯಕ್ಕೆ ಪ್ರಾಣಿಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.ಆಫ್ರಿಕನ್ ಹಂದಿ ಜ್ವರ ಆತಂಕ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಾವಲಿ ಮತ್ತು ಸುಲ್ತಾನ್ ಬತ್ತೇರಿ ಚೆಕ್ ಪೋಸ್ಟ್‌ಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳ ತಪಾಸಣೆಗಾಗಿ ಪಶುಸಂಗೋಪನಾ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಡಿ ಬಿ ಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂದಿ ಸಾಕಣೆ ಹಾಗೂ ಹಂದಿ ಮಾಂಸ ಮಾರಾಟವನ್ನು […]

Continue Reading

ಮಗು ಹೆರುವ ಆಯ್ಕೆಯ ಹಕ್ಕು ಮಹಿಳೆಯದ್ದೇ ಆಗಿದ್ದು, ಈ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಅನಗತ್ಯ.

ಮಗು ಹೆರುವ ಆಯ್ಕೆಯ ಹಕ್ಕು ಮಹಿಳೆಯದ್ದೇ ಆಗಿದ್ದು, ಈ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಅನಗತ್ಯ. ಇಲ್ಲಿ ಮಾನವನ ಘನತೆಯನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅತ್ಯಾಚಾರ ಸಂತ್ರಸ್ತೆಯೊಬ್ಬರ 27 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿ ಹೊರಡಿಸಿರುವ ಆದೇಶದಲ್ಲಿ ಸುಪ್ರೀಂಕೋರ್ಟ್‌ ತನ್ನ ಅದೇಶದಲ್ಲಿ ಹೇಳಿದೆ. ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ 25 ವರ್ಷದ ಸಂತ್ರಸ್ತೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಉಜ್ಜಲ್‌ ಭುಯಾನ್‌ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತ್ತು.ಗರ್ಭಪಾತಕ್ಕೆ ಒಳಗಾಗುವ […]

Continue Reading

ವರ್ಷಾಂತ್ಯದಲ್ಲಿ ನಡೆಯಲಿರುವ ಛತೀಸ್ ಘಡ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಸಾಧ್ಯತೆ:ಸಿ ವೋಟರ್

ವರ್ಷಾಂತ್ಯದಲ್ಲಿ ನಡೆಯಲಿರುವ ಛತೀಸ್ ಘಡ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಭೇರಿ ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ. “ಎಬಿಪಿ” ಸುದ್ದಿವಾಹಿನಿ “ಸಿ ವೋಟರ್‌’ ಸಂಸ್ಥೆ ಜತೆಗೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 48ರಿಂದ 54 ಸ್ಥಾನಗಳು ಲಭಿಸುವ ಸಾಧ್ಯತೆಗಳು ಇವೆ. ಕಾಂಗ್ರೆಸ್‌ಗೆ ಸರಳ ಬಹುಮತಕ್ಕಿಂತ ಹೆಚ್ಚು ಸ್ಥಾನಗಳು ಲಭಿಸಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಬಿಜೆಪಿಗೆ 35ರಿಂದ 41, ಇತರರಿಗೆ 4 ಸ್ಥಾನಗಳ ವರೆಗೆ ಲಭಿಸುವ ಸಾಧ್ಯತೆ ಇದೆ. ಆ ರಾಜ್ಯದ ವಿಧಾನಸಭೆಯ ಒಟ್ಟು ಸ್ಥಾನಗಳು 90.

Continue Reading

ಛತ್ತೀಸ್‌ಗಢ ಚುನಾವಣೆಗೆ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ರಚನೆ, ಮುಖ್ಯಸ್ಥರಾಗಿ ಕುಮಾರಿ ಸೆಲ್ಜಾ

ಛತ್ತೀಸ್‌ಗಢದ ಚುನಾವಣೆಗೆ ಒಳಪಡಲಿರುವ ಕಾಂಗ್ರೆಸ್ ತನ್ನ ರಾಜಕೀಯ ವ್ಯವಹಾರಗಳ ಸಮಿತಿಯನ್ನು ಗುರುವಾರ ರಚಿಸಿದ್ದು, ಪ್ರಧಾನ ಕಾರ್ಯದರ್ಶಿ ಕುಮಾರಿ ಸೆಲ್ಜಾ ಅಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್ ಇದರ ಸದಸ್ಯರಲ್ಲಿ ಸೇರಿದ್ದಾರೆ.”ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸಂವಿಧಾನದ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷರು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ” ಎಂದು ಪಕ್ಷದ ಹೇಳಿಕೆಯೊಂದು ತಿಳಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ದೀಪಕ್ ಬೈಜ್, ಹಿರಿಯ ಮುಖಂಡರಾದ ಚರಣ್ ದಾಸ್ ಮಹಂತ್, ತಾಮರಧ್ವಜ್ ಸಾಹು, […]

Continue Reading