ಗುಜರಿ ಕೇಂದ್ರಗಳ ಸ್ಥಾಪನೆಗೆ ಎರಡು ಕಂಪನಿಗಳ ಜತೆ ಮಾತುಕತೆ ಪೂರ್ಣ; ರಾಜ್ಯದಲ್ಲಿ ಕನಿಷ್ಠ 6 ಘಟಕಗಳನ್ನು ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ

ವರ್ಷ ತುಂಬಿರುವ ಖಾಸಗಿ ಹಾಗೂ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರಗಳ ಸ್ಥಾಪನೆ ಶ್ರೀಘ್ರದಲ್ಲೇ ಆರಂಭವಾಗಲಿದೆ. ಪ್ರಾಥಮಿಕವಾಗಿ 3 ಕಡೆ ಗುಜರಿ ಕೇಂದ್ರಗಳ ಸ್ಥಾಪಿಸಲು 3 ಕಂಪನಿಗಳು ಮುಂದೆ ಬಂದಿವೆ. ಇದರಲ್ಲಿ ನಿಯಮಾನುಸಾರ ಆಯ್ಕೆಯಾಗಿರುವ ಎರಡು ಕಂಪನಿಗಳ ಜತೆಗೆ ಮಾತುಕತೆ ಅಂತಿಮಗೊಂಡಿದ್ದು , ಎರಡು ಮೂರು ದಿನಗಳಲ್ಲಿ ಸರ್ಕಾರ ಅನುಮತಿ ನೀಡಲಿದೆ.ರಾಜ್ಯದಲ್ಲಿ 14.3 ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಗುಜರಿ ಕೇಂದ್ರ ಸ್ಥಾಪನೆಗೆ ಮಹೀಂದ್ರಾ ಕಂಪನಿ, […]

Continue Reading

ಆಂಧ್ರದಲ್ಲಿ ಮೆಗಾ ಪಾಲಿಟಿಕ್ಸ್ ಹೈಡ್ರಾಮಾ: ಮುಂಜಾನೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್

ದಕ್ಷಿಣ ಭಾರತದ ಆಂಧ್ರಪ್ರದೇಶ ಮೆಗಾ ಪಾಲಿಟಿಕ್ಸ್ ಹೈಡ್ರಾಮಾ ಕ್ಕೆ ಫೇಮಸ್. ಇಂದು ಮುಂಜಾನೆ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರವರನ್ನು ಅರೆಸ್ಟ್ ಮಾಡಲಾಗಿದ್ದು, ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸ್ಕಿಲ್ ಡೆವೆಲಪ್‌ಮೆಂಟ್ ಯೋಜನೆ ಹಗರಣ ಸಂಬಂಧ ಮುಂಜಾನೆ ಆಂಧ್ರದ ಸಿಐಡಿ ಪೊಲೀಸರು ಬಂಧಿಸಿದ್ದಾರೆ. 2014 ರಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಂಧ್ರದ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ 371 ಕೋಟಿ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿ ಬಂದಿತ್ತು. ಟೆಂಡರ್​ ಕರೆಯದೆ 371 ಕೋಟಿ ಹಣ […]

Continue Reading

ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾದಿಂದ 2 ರಿಂದ 3 ಲಕ್ಷ ಕೋಟಿ ರೂಪಾಯಿ ವರ್ಗಾವಣೆಗೆ ಯೋಜಿಸಿದ್ದ ಕೇಂದ್ರ.?

2019 ರ ಲೋಕಸಭೆ ಚುನಾವಣೆಗೆ ಮುನ್ನ, ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಸುಮಾರು 2 ರಿಂದ 3 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಯತ್ನಿಸಿತ್ತು. ಆದರೆ ಇದಕ್ಕೆ ಆರ್ ಬಿ ಐ ಅನುಮತಿಸಿರಲಿಲ್ಲ ಎಂದು 2018 ರಲ್ಲಿ ಆರ್ ಬಿಐ ಡೆಪ್ಯುಟಿ ಗೌವರ್ನರ್ ಆಗಿದ್ದ ವಿರಳ್ ಆಚಾರ್ಯ ಹೇಳಿದ್ದಾರೆ. “ಸಾರ್ವತ್ರಿಕ ಚುನಾವಣೆಗಳ ಪೂರ್ವಭಾವಿಯಾಗಿ ವೆಚ್ಚಗಳನ್ನು ಪೂರೈಸಲು 2-3 ಲಕ್ಷ ಕೋಟಿ ರೂಪಾಯಿಗಳನ್ನು ಹೊರತೆಗೆಯಲು ಕೆಲವು ಅಧಿಕಾರಿಗಳು ಯೋಜಿಸಿದ್ದರು. ಆದರೆ ಈ ಪ್ರಯತ್ನವನ್ನು ಆರ್ […]

Continue Reading

ಸಿಂಗ್ ಈಸ್ ಕಿಂಗ್; ಕುಸಿದ ನಮೋ.!ಅಂತಾರಾಷ್ಟ್ರೀಯ PEW ಸರ್ವೇ

ಯಾವಾಗ ಭಾರತವನ್ನು ಬಿಜೆಪಿ ತನ್ನ ಕೈ ವಶಪಡಿಸಿಕೊಂಡಿತೋ ಅಂದಿನಿಂದ ಭಾರತ ದೇಶಕ್ಕೆ ಸಂಕಟ ತಪ್ಪಿದ್ದಿಲ್ಲ! ಅದಕ್ಕೆ ಸಾಕ್ಷಿಯಾಗಿದೆ, PEW ರಿಸರ್ಚ್ ಸೆಂಟರ್ ನಡೆಸಿರುವ ಸರ್ವೆಯಿಂದ ಸಾಬೀತಾಗಿದೆ. ಅಮೇರಿಕಾದ ಪ್ರಜೆಗಳಿಗೆ ಭಾರತ ದೇಶದೊಂದಿಗಿರುವ ಭಾತೃತ್ವ ಕುಂಠಿತಗೊಳ್ಳುತ್ತಿದೆ ಎಂದು ನ್ಯೂ ರಿಸರ್ಚ್ ಸೆಂಟರ್ ಸರ್ವೆಯಿಂದ ಸಾಬೀತಾಗಿದೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ನಮಗೆ ಗೊತ್ತೇ ಇಲ್ಲ ಅವರ ಬಗ್ಗೆ ನಾವುಗಳು ತಿಳಿದೇ ಇಲ್ಲ ಎಂದು ಅಮೇರಿಕದ ಶೇಕಡ 40% ನಾಗರಿಕರ ಹೇಳಿಕೆಯನ್ನು PEW ರಿಸರ್ಚ್ ಸೆಂಟರ್ ತನ್ನ […]

Continue Reading

ಏನಿದು ಶಿಕ್ಷಕರ ದಿನಾಚರಣೆ?

” ಗುರುಗಳೇ! ನಾನು ನಿಮ್ಮ ಶಿಷ್ಯ. ನಿಮ್ಮ ಇನ್ನೂರು ರೂ. ಸಾಲವನ್ನು ತೀರಿಸಲು ಬಂದಿದ್ದೇನೆ” ✍️. ಡಿ. ಐ. ಅಬೂಬಕರ್ ಕೈರಂಗಳ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೈಸೂರು ವಿ.ವಿ. ತತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾಗಲೇ ಅವರನ್ನು ಉಪರಾಷ್ಟಪತಿಯಾಗಿ ಭಾರತ ಸರಕಾರ ಆಯ್ಕೆ ಮಾಡಿತ್ತು. ಹುದ್ದೆ ಸ್ವೀಕಾರಕ್ಕೆ ದೆಹಲಿಗೆ ಅವರು ಹೊರಟಾಗ ರೈಲ್ವೇ ಸ್ಟೇಶನ್ ತನಕ ಅಲಂಕೃತ ಕುದುರೆ ಸಾರೋಟ್ ನಲ್ಲಿ ಗೌರವಾದರ ಪೂರ್ವಕ ಕರಕೊಂಡು ಹೋಗಲಾಗಿತ್ತು. ಸಾರೋಟನ್ನು ಎಳೆದುಕೊಂಡು ಹೋಗಿದ್ದು ಕುದುರೆಗಳಾಗಿರಲಿಲ್ಲ. ವಿದ್ಯಾರ್ಥಿಗಳೇ ಅಲ್ಲಿ ತನಕ ಎಳೆದು ಕೊಂಡು […]

Continue Reading

ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ ಮೌಲ್ಯ 7,297.62 ಕೋಟಿ

ಬಿಜೆಪಿ ಶ್ರೀಮಂತ ಪಕ್ಷ,6,046 ಕೋಟಿ ಒಡೆಯ ದೇಶದ ಎಂಟು ರಾಷ್ಟ್ರೀಯ ಪಕ್ಷಗಳು 2021-22ರಲ್ಲಿ ಒಟ್ಟು 8,829.16 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿವೆ. ಈ ಪೈಕಿ ಆಡಳಿತರೂಢ ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷವಾಗಿದ್ದು, 6,046 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದೆ. 2020-21ರಲ್ಲಿ ಈ ಎಂಟು ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ 7,297.62 ಕೋಟಿ ರೂ.ಗಳಷ್ಟಿತ್ತು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದೆ. ಎಂಟು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಬಿಎಸ್‌ಪಿ, ಸಿಪಿಐ, ಸಿಪಿಐ(ಎಂ), ಎಐಟಿಸಿ […]

Continue Reading

ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಬಾರಿ ಹೊಡೆತ;ಶಾಸಕ ಸೇರಿ ಹಲವು ನಾಯಕರು ಕಾಂಗ್ರೆಸ್‌ ಸೇರ್ಪಡೆ

ಮಧ್ಯಪ್ರದೇಶದ ಬಿಜೆಪಿ ಹಾಲಿ ಶಾಸಕ ಹಾಗೂ ಹಲವು ಜಿಲ್ಲೆಗಳ ಇತರ ನಾಯಕರು ಇತ್ತೀಚೆಗೆ ಬಿಜಿಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ನಾಯಕರು ಭೋಪಾಲ್‌ನಲ್ಲಿರುವ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಮತ್ತು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಕೆಲವು ತಿಂಗಳುಗಳು ಬಾಕಿ ಇರುವಾಗ ಈ ಘಟನೆ ನಡೆದಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಾಜಿ […]

Continue Reading

ಭಾರತದ ಚೊಚ್ಚಲ ಸೌರ ಮಿಷನ್ ಉಡಾವಣೆಗೆ ಸಿದ್ಧವಾಗಿದೆ

ಇಸ್ರೋ ಶನಿವಾರದಂದು ಇಲ್ಲಿನ ಬಾಹ್ಯಾಕಾಶ ನಿಲ್ದಾಣದಿಂದ ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ ಎಲ್ 1 ಅನ್ನು ಉಡಾವಣೆ ಮಾಡಲು ಸಿದ್ಧವಾಗಿದೆ, ಇದಕ್ಕಾಗಿ ಕ್ಷಣಗಣನೆ ನಡೆಯುತ್ತಿದೆ. ಆದಿತ್ಯ-ಎಲ್1 ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ-ಆಧಾರಿತ ವೀಕ್ಷಣಾಲಯವಾಗಿದೆ ಮತ್ತು 11.50 ಕ್ಕೆ ಇಲ್ಲಿಂದ ಇಸ್ರೋದ ವಿಶ್ವಾಸಾರ್ಹ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಬಳಸಿ ಹಾರಿಸಲಾಗುತ್ತಿದೆ. 125 ದಿನಗಳಲ್ಲಿ ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ಪ್ರಯಾಣಿಸಿದ ನಂತರ ಬಾಹ್ಯಾಕಾಶ ನೌಕೆಯು ಸೂರ್ಯನಿಗೆ ಹತ್ತಿರವಿರುವ ಲಗ್ರಾಂಜಿಯನ್ ಪಾಯಿಂಟ್ L1 […]

Continue Reading

ಎಚ್ಚರ..ಭೀಕರ ಭೂ ಕುಸಿತಕ್ಕೆ ಕಾರಣವಾಗುತ್ತಿದೆ ಮಾನವ ನಿರ್ಮಿತ ಅಜಾಗರೂಕತೆ..!

ದುರಂತಗಳು ಯಾವಾಗಲೂ ದುರದೃಷ್ಟಕರವೇ. ಸಾವು ನೋವು ಮತ್ತು ವರ್ಷಗಳ ಕಠಿಣ ದುಡಿಮೆಯ ಮೂಲಕ ಸೃಷ್ಟಿಯಾದ ಸೊತ್ತಿನ ನಾಶಕ್ಕೆ ಇವು ಕಾರಣವಾಗುತ್ತವೆ. ದಿಢೀರ್‌ ಮತ್ತು ನಾವು ಊಹಿಸದೇ ಇದ್ದ ಸ್ಥಳದಲ್ಲಿ ಘಟಿಸುತ್ತವೆ. ಭೂಕಂಪ, ಪ್ರವಾಹ, ಭೂಕುಸಿತ, ಚಂಡಮಾರುತ, ಅತಿವೃಷ್ಟಿ, ಸುನಾಮಿಯಂತಹ ದುರಂತಗಳು ಇತಿಹಾಸ ಪೂರ್ವದಿಂದಲೂ ಇದ್ದೇ ಇದ್ದವು.ಇವು ನೈಸರ್ಗಿಕ ಪ್ರಕೋಪಗಳು. ಮನುಷ್ಯ ಕೈಗಾರಿಕೆಯನ್ನು ಶೋಧಿಸುವುದರೊಂದಿಗೆ ಮಾನವ ನಿರ್ಮಿತ ದುರಂತಗಳೂ ಇದಕ್ಕೆ ಸೇರ್ಪಡೆಯಾದವು.ನೈಸರ್ಗಿಕ ದುರಂತಗಳನ್ನು ಮೀರಿಸುವ ರೀತಿಯಲ್ಲಿ ಮಾನವ ನಿರ್ಮಿತ ದುರಂತಗಳು ಹಲವಾರು ಜೀವಗಳನ್ನು ಬಲಿ ಪಡೆದಿವೆ. ಮಾನವ ಕುಲವು […]

Continue Reading

ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳು ಪಿತ್ರಾರ್ಜಿತ ಆಸ್ತಿ ಪಡೆಯಲು ಅರ್ಹರು: ಸುಪ್ರೀಂ ಕೋರ್ಟ್

ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳು ತಮ್ಮ ಹೆತ್ತವರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ಕಾನೂನಿನಿಂದ ನಿಯಂತ್ರಿಸಲ್ಪಡುವ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಗಳಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಕೋರ್ಟ್‌ ತೀರ್ಪು ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ತೀರ್ಪು ಪ್ರಕರಣವೊಂದರ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ. 2011ರಲ್ಲಿ ಸಲ್ಲಿಕೆಯಾಗಿದ್ದ ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್‌, ಕಾನೂನು ಸಮ್ಮತ ವಿವಾಹ ಸಂಬಂಧದಲ್ಲಿ […]

Continue Reading