ಸುರತ್ಕಲ್: ದೈವಗಳ ಮೂರ್ತಿ, ಪೂಜಾ ಸಾಮಗ್ರಿ ಕಳ್ಳತನ ಪ್ರಕರಣ; ಇಬ್ಬರ ಬಂಧನ, ಸ್ವತ್ತು ವಶ

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಯಶೋದ ಕ್ಲಿನಿಕ್ ಸಮೀಪದ ಮನೆಯೊಂದರಲ್ಲಿ ನಡೆದ ದೈವಗಳ ಮೂರ್ತಿ ಹಾಗೂ ಪೂಜಾ ಪರಿಕರಗಳ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಳಾಯಿ ಗ್ರಾಮದ ಅಮಿತಾ ಅವರ ದೂರಿನಂತೆ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಇದ್ದು ಆ ಮನೆಯಲ್ಲಿ ಯಾರೂ ವಾಸವಿರದೇ ಕೇವಲ ಪೂಜೆ ಮಾಡಿ ದೀಪ ಹಚ್ಚಿ ನಂತರ ಬೀಗ ಹಾಕುತ್ತಿದ್ದರು ಎನ್ನಲಾಗಿದೆ. ದಿನಾಂಕ: 26-12-2025 ರಂದು ರಾತ್ರಿ […]

Continue Reading

ಪುತ್ತೂರು: ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ. ನಾಲ್ಕು ಮಂದಿ ಆರೋಪಿಗಳ ಬಂಧನ, ಕಾರು ವಶ

ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿರುತ್ತಾರೆ. ಆರೋಪಿಗಳಾದ ಮೊಹಮ್ಮದ್ ಹರ್ಷದ್, ಮಹಮ್ಮದ್ ಆರೀಶ್, ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ ಎಂಬವರುಗಳನ್ನು ಹಾಗೂ ಎಂಡಿಎಂಎ ನೀಡುತ್ತಿದ್ದ, ಬಂಟ್ವಾಳ ನಿವಾಸಿ ಮುಸ್ತಾಫ ಎಂಬವರನ್ನು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಗಳಿಂದ ಅಂದಾಜು ರೂ. 50,000/- ಮೌಲ್ಯದ ಸುಮಾರು 6.39 ಗ್ರಾಂ ಎಂಡಿಎಂಎ, ಗಾಂಜಾ 0.87 […]

Continue Reading

ಬಿಲ್ಲವ ಸಮುದಾಯದ ವ್ಯಕ್ತಿ ಯಾವ ಪಕ್ಷದಲ್ಲೂ ಬೇಕಾದರೂ ಅಭ್ಯರ್ಥಿಯಾಗಿ ನಿಲ್ಲಲಿ, ಗೆಲ್ಲಿಸುವ ಜವಾಬ್ದಾರಿ ನಮ್ಮದು: ಕಾಂಗ್ರೆಸ್ ನಾಯಕಿ ವಿವಾದಾತ್ಮಕ ಭಾಷಣ

ರಾಜಕೀಯ ವ್ಯಕ್ತಿಗಳು ಜಾತಿ ಪ್ರೇಮ ತೋರಿಸುವುದು ಸಹಜ, ಆದರೆ ಅದುವೇ ರಾಜಕೀಯ ಆಗಬಾರದು. ಇತ್ತೀಚೆಗೆ ಮೂಡಬಿದ್ರೆಯ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡಬಿದ್ರೆ ಆಯೋಜಿಸಿದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿಯೊಬ್ಬರು ಮಾಡಿರುವ ಭಾಷಣ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ರಾಜಕಾರಣದಲ್ಲಿ ಬೆಳೆದು ಬಂದಿರುವುದು ಅಹಿಂದ ಸಮುದಾಯಗಳ ಮತಗಳಿಂದ. ಅಲ್ಪಸಂಖ್ಯಾತ ವರ್ಗ ಬಿಟ್ಟರೆ ಬೇರೆ ಸಮುದಾಯಗಳು ಹೋಲ್ ಸೇಲ್ ಆಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದು ವಿರಳ. ಅದರಲ್ಲೂ ಬಿಲ್ಲವ […]

Continue Reading

ಅಧಿಕಾರ ದುರುಪಯೋಗ ಪ್ರಕರಣ; ನೆಲ್ಲಿಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಆರು ವರ್ಷಗಳ ಕಾಲ ಚುನಾವಣೆಗೆ ಅನರ್ಹ

ಮೂಡಬಿದ್ರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ಹಾಲಿ ಉಪಾದ್ಯಕ್ಷರು ಶ್ರೀಮತಿ ಸುಶೀಲ ಎಂಬವರು ಅಧಿಕಾರ ಮತ್ತು ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪಗಳು ಸಾಬೀತಾಗಿರುವುದರಿಂದ ಅವರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮದ ಪ್ರಕಾರ ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಿರುವುದಲ್ಲದೇ, ಮುಂದಿನ ಆರು ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಪಂಚಾಯತ್ ರಾಜ್ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಸರಕಾರಕ್ಕೆ ಸಂಬಂದ ಪಟ್ಟ ರೂ.48,289 ಗಳನ್ನು ದುರುಪಯೋಗ ಪಡಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ದಿನಾಂಕದಿಂದ ಶೇ.8ರ […]

Continue Reading

ಮಂಗಳೂರಿನ ಹೃದಯಬಾಗದಲ್ಲಿ ದಿನದ ಅತ್ಯಮೂಲ್ಯ (ಪ್ರೈಮ್ ಟೈಮ್) ವೇಳೆಯಲ್ಲಿ “ತಲಾ 15 ನಿಮಿಷದಂತೆ ಒಟ್ಟು 11 ಬಾರಿ ಸಂಚಾರ ದಿಗ್ಬಂಧನ! ” ರೈಲ್ವೆ ಕಾರ್ಯಾಚರಣೆಯ ಹೆಸರಿನಲ್ಲಿ ನಗರಕ್ಕೆ ದಿಗ್ಬಂಧನ!

✍️. ಇಸ್ಮಾಯಿಲ್ ಸುನ್ನಾಲ್, ವಕೀಲರು ಮಂಗಳೂರು. ಮಂಗಳೂರು: ಒಂದು ಕಡೆ ‘ಸ್ಮಾರ್ಟ್ ಸಿಟಿ’ಯ ಕನಸು, ಇನ್ನೊಂದು ಕಡೆ ದಶಕಗಳಷ್ಟು ಹಳೆಯದಾದ ರೈಲ್ವೆ ಗೇಟ್ ಸಮಸ್ಯೆ. ಮಂಗಳೂರಿನ ಹೃದಯಭಾಗದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ (LC Gate) ಈಗ ನಗರದ ಸಂಚಾರ ವ್ಯವಸ್ಥೆಯ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ನಾಗರಿಕರು ತಮ್ಮ ಅಮೂಲ್ಯ ಸಮಯವನ್ನು ರಸ್ತೆಯಲ್ಲೇ ಕಳೆಯುವಂತಾಗಿದೆ. ಅಂಕಿಅಂಶಗಳ ಆಘಾತಕಾರಿ ಸತ್ಯರೈಲ್ವೆ ಇಲಾಖೆ ಪ್ರಕಟಿಸಿದ ವೇಳಾ ಪಟ್ಟಿ ಪ್ರಕಾರವೇ, ಈ ರೈಲ್ವೆ ಗೇಟ್‌ ಕೇವಲ ಹನ್ನೆರಡು (12) […]

Continue Reading

ಬೆಳ್ತಂಗಡಿ: ಯಾವುದೆ ಪರವಾನಿಗೆ ಪಡೆಯದೆ ಅಕ್ರಮ ಕಟ್ಟಡ ನಿರ್ಮಾಣ; ದ. ಕ ಜಿಲ್ಲಾ ಉಸ್ಸುವಾರಿ ಸಚಿವರಿಗೆ ದೂರು

ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಕ್ಕೆ ವಂಚಿಸಿ, ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಬಹು ಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಮಾಜಿಕ ಕಾರ್ಯಕರ್ತ ಶೇಖರ್. ಲಾಯಿಲ ಮನವಿ ಸಲ್ಲಿಸಿದ್ದಾರೆ. ಇಂದು ಕುಕ್ಕೇಡಿ ಡಾ.ಬಿ.ಆರ್ ಅಂಬೇಡ್ಕರ್ ಭವನದ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಅಭ್ಯಾಸ್ ಕಾಲೇಜ್, […]

Continue Reading

ಉಡುಪಿ: ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆ; ಸೂಕ್ತ ಕ್ರಮಕ್ಕೆ ಕರವೇ ಪ್ರವೀಣ್ ಶೆಟ್ಟಿ ಬಣದ ಮನವಿ, ಸ್ಪಂದಿಸಿದ ಉಡುಪಿ ಜಿಲ್ಲಾ ಪೊಲೀಸ್

ಉಡುಪಿ : ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಸ್ವತಿ ಕನ್ನಡ ಮಾಧ್ಯಮ ಶಾಲೆಯ ಆವರಣ ಅನೈತಿಕ ಚಟುವಟಿಕೆಯ ತಾಣವಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮನವಿಯನ್ನು ನೀಡಲಾಗಿತ್ತು. ಉಡುಪಿ ನಗರದ ಹೃದಯ ಭಾಗದಲ್ಲಿರುವ ಸರಸ್ವತಿ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ರಾತ್ರಿಯ ಹೊತ್ತು ಕುಡುಕರು ಹಾಗೂ ತೃತೀಯ ಲಿಂಗಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಶಾಲೆಯ […]

Continue Reading

ಡಾ. ತಲ್ಲೂರು ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಉಡುಪಿ : ಯಕ್ಷಗಾನ, ಜಾನಪದ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ರಂಗ ಹಾಗೂ ಸಮಾಜ ಸೇವೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಉಡುಪಿಯ ಉದ್ಯಮ ರತ್ನ, ಪ್ರಸ್ತುತ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರೂ ಆಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ, ಕೊಡಗು ಇವರ ಜಂಟಿ ಆಶ್ರಯದಲ್ಲಿ ಹಾಸನದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜ.18ರಂದು ನಡೆದ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ […]

Continue Reading

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯನನ್ನು ಅಂದ್ರಪ್ರದೇಶದಲ್ಲಿ ಬಂಧಿಸಿದ ಉರ್ವ ಪೊಲೀಸರು.

1997 ರ ಸಾಲಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ. ಉರ್ವಾ ಪೊಲೀಸ್ ಠಾಣಾ ಅ.ಕ್ರ ನಂಬ್ರ 113/1997, ಪ್ರಕರಣದಲ್ಲಿ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ, “ದಂಡುಪಾಳ್ಯ ಗ್ಯಾಂಗ್” ಎಂದೇ ಕುಖ್ಯಾತಿ ಪಡೆದಿರುವ ಗ್ಯಾಂಗ್ ನ ಸಹಚರ ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ ಪ್ರಾಯ: 55 ವರ್ಷ, ತಂದೆ: ವೆಂಕಟಪ್ಪ ವಾಸ: ದಂಡುಪಾಳ್ಯ ಗ್ರಾಮ, ಹೊಸಕೋಟೆ ತಾಲೂಕು. ಬೆಂಗಳೂರು ಜಿಲ್ಲೆ. ಹಾಲಿ ವಾಸ: ವಿಜಯನಗರ […]

Continue Reading

ಕೋಮುಧ್ವೇಶ, ಹಿಂಸೆಗೆ ಪ್ರಚೋದಿಸುವಂತೆ ಭಾಷಣ; ಕಲ್ಲಡ್ಕ ಪ್ರಭಾಕರ್ ಭಟ್, ವಿಕಸನ ಟಿ. ವಿ, ಆಯೋಜಕರ ವಿರುದ್ದ ಪ್ರಕರಣ ದಾಖಲು

ಪುತ್ತೂರು ನಿವಾಸಿ ರಾಮಚಂದ್ರ ಕೆ ಎಂಬವರ ದೂರಿನಂತೆ, ದಿನಾಂಕ 12.01.2026ರಂದು ಪುತ್ತೂರಿನ ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಆರೋಪಿತರಾದ ಡಾ.ಕಲ್ಲಡ ಪ್ರಭಾಕರ ಭಟ್ ರವರು, ಕಾರ್ಯಕ್ರಮದಲ್ಲಿ ನೆರೆದಿದ್ದ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರನ್ನು ಉದ್ದೇಶಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ, ಕೋಮುಧ್ವೇಶದ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿರುತ್ತಾರೆ. ಸದ್ರಿ ಭಾಷಣವನ್ನು “VIKASANA TV” (ವಿಕಸನ ಟಿವಿ) ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಿರುತ್ತಾರೆ. ಸದ್ರಿ ಕಾರ್ಯಕ್ರಮದಲ್ಲಿ ಕೋಮುಧ್ವೇಶದ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿದ […]

Continue Reading