ಮಂಗಳೂರು ತಾಲೂಕು ಆಡಳಿತ ಸೌಧ: ಲಂಗರು ಹಾಕಿದ ನುಂಗಾಸುರರು

ಆನೆ ನಡೆದದ್ದೇ ದಾರಿ ಅನ್ನುವಂತೆ ಇಲ್ಲಿನ ಕೆಲವೊಂದು ಸ್ಟಾಪ್‍ಗಳದ್ದು ಧಿಮಾಕು.! ಮಂಗಳೂರು ಆಡಳಿತ ಸೌಧಕ್ಕೆ ಹಿಡಿದ ಸಡೇಸಾತ್ ಬಿಡುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿ ಲಂಗರು ಹಾಕಿದ ನುಂಗಾಸುರರ ಕಥೆಯನ್ನು ಹೇಳ ಹೊರಟರೆ ಅದೊಂದು ದೊಡ್ಡ ಕಾದಂಬರಿಯಾದೀತು. ಹತ್ತಾರು ವರ್ಷಗಳಿಂದ ಝಂಡಾ ಊರಿ ಕುಳಿತಿರುವ ಕೆಲವೊಂದು ಅಧಿಕಾರಿಗಳು, ನೌಕರರು ಮುಂಡಾ ಮೋಚಿದ್ದೆ. ಲಂಚ ಕಂಡರೆ ಕಣ್ಣು, ಬಾಯಿ ಬಿಡುತ್ತಾರೆ. ಲಂಚ ಇಲ್ಲದೆ ಇಲ್ಲಿ ಕೆಲಸವೇ ಆಗಲ್ಲ. ಕೆಲವೊಂದು ಅಧಿಕಾರಿಗಳು ಲಂಚ ಪಡೆಯಲೇ ಕಚೇರಿಯಲ್ಲಿ ನೌಕರರನ್ನು ಇಟ್ಟಿರುತ್ತಾರೆ. ಅವರ ಮೂಲಕವೇ […]

Continue Reading

ಕಾರ್ಕಳ: ನಾಲ್ಕು ಬಾರಿ ಗೆದ್ದ ಶಾಸಕರ ಕ್ಷೇತ್ರದಲ್ಲಿ ರಸ್ತೆ ಸಂಚಾರವೇ ಸಂಚಿಕಾರ.. ಇಲ್ಲಿ ರಸ್ತೆ ದಾಟಲು ಗುಂಡಿಗೆ ಬೇಕು!

ಶಾಸಕರ ಕನಸಿನ ಸ್ವರ್ಣ ನಗರಿಯಲ್ಲಿ ಹೊಂಡಗಳ ಸಾಮ್ರಾಜ್ಯ! ಮುಂಗಾರು ಮಳೆ ತೀವ್ರತೆ ಪಡೆದುಕೊಂಡಿದೆ. ಸುಸ್ಥಿತಿಯಲ್ಲಿರುವ ರಸ್ತೆಯಲ್ಲೇ ವಾಹನ ಓಡಿಸುವುದು ಕಷ್ಟ. ಅಂತಹದರಲ್ಲಿ ರಸ್ತೆಯನ್ನೇ ನುಂಗಿದ ಹೊಂಡ ಗುಂಡಿಗಳಲ್ಲಿ ಸಂಚಾರವೇ ಸಂಚಿಕಾರ. ಇಂತಹದ್ದೊಂದು ನರಕಯಾತನೆ ಇರುವುದು ಯಾವುದೋ ಒಂದು ಕುಗ್ರಾಮದ ರಸ್ತೆಯಲ್ಲಿ ಅಲ್ಲ. ಬದಲಾಗಿ ಕಾರ್ಕಳ ಪೇಟೆಯ ಹೃದಯ ಭಾಗವಾದ ಪೆರ್ವಾಜೆ, ಕಲ್ಲೊಟ್ಟೆ ಮೂಲಕ ಬಂಡಿಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಂತ ಚಿತ್ರಣ ಇದು. ಈ ಭಾಗದಲ್ಲಿ ಸತತ ನಾಲ್ಕು ಬಾರಿ ಹಿಂದುತ್ವದ ಅಲೆಯಲ್ಲಿ ಗೆದ್ದು ಬೀಗುತ್ತಿರುವ ಸುನೀಲ್ […]

Continue Reading

ಇಲ್ಲಿ ನದಿ ದಾಟುವುದು ನಿಷೇಧ; ಮೂಲ ನಿವಾಸಿಗಳಿಗೆ ದಿಗ್ಬಂಧನ ವಿಧಿಸಿದ ಇಲಾಖೆ

ಆದಿವಾಸಿ ಮಲೆಕುಡಿಯ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾದ ಜಿಲ್ಲಾಢಳಿತ ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಎಂಬಲ್ಲಿ ಕಳೆದ ವರ್ಷ ಜೂನ್ 15 ರಂದು ದ್ವಿಚಕ್ರ ವಾಹನದ ಮೂಲಕ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಪ್ರದೇಶದಲ್ಲಿ ನದಿ ತುಂಬಿ ಹರಿಯುತ್ತಿದೆ. ಇಲ್ಲಿ ನದಿ ದಾಟುವುದು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಹಾಕುವ ಮೂಲಕ ಮೂಲನಿವಾಸಿಗಳಿಗೆ ದಿಗ್ಬಂಧನ ವಿಧಿಸುವ ಕಾರ್ಯವನ್ನು ಇಲಾಖೆಗಳು ಮಾಡಿದೆ. ಸವಣಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಎಂಬಲ್ಲಿ […]

Continue Reading

ಸುರತ್ಕಲ್: ಅಜ್ಞಾನಿ ಪೋಷಕ, ಮುಗ್ಧ ಮಗು, ಬಲಿಪಶು ಸಮಾಜ ‘ಖಳನಾಯಕ’ ಯಾರು.?

ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಿದ ಮೂರು ಪ್ರಶ್ನೆಗಳು ಕಳೆದ ವಾರ ಮಂಜನಾಡಿಯ ಉರುಮಣೆ ಅಶ್ರಫ್ ಮಾಲಿಕಿ ಉಸ್ತಾದ್ ಸುಸೈಡ್ ಕೇಸ್ ಸಮುದಾಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿತ್ತು. ಅವರು ಆತ್ಮಹತ್ಯೆಗೈದರು ಅನ್ನುವ ಕಾರಣಕ್ಕಾಗಿ ಅಲ್ಲ. ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಸಮುದಾಯದೊಳಗಡೆ ವ್ಯಾಪಕ ಚರ್ಚೆಗೆ ಕಾರಣವಾದವು. ಬ್ಯಾಂಕ್ ಸಾಲದ ಕರಾಳ ಮುಖ, ಮದರಸ ಅಧ್ಯಾಪಕರನ್ನು ಜಮಾಅತ್ ಕಮಿಟಿ ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳುತ್ತಿರುವುದು ಈ ಬಗ್ಗೆ ಚರ್ಚೆಗಳು ನಡೆದವು. ಇವತ್ತು ಮಸೀದಿಗೆ ಅನಗತ್ಯವಾಗಿ ಕೋಟಿಗಟ್ಟಲೆ ದುಡ್ಡು ಸುರಿಸಿ ಬಿಲ್ಡಪ್ ಕೊಡುವ ಕೆಲವು […]

Continue Reading

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಅಪರಾದಿಗೆ 20 ವರ್ಷ ಕಠಿಣ ಸಜೆ; ಅಫ್ರಿದಿ ಯಾನೆ ಅಪ್ಪಿ ಶಿಕ್ಷೆಗೊಳಗಾದ ಅಪರಾಧಿ

ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ, ಜೀವ ಬೆದರಿಕೆ ಹಾಕಿದ ಗುರುಪುರ ಅಡ್ಡೂರು ಕೆಳಗಿನಕೆರೆಮನೆ ನಿವಾಸಿ ಅಫ್ರಿದಿ (20) ಎಂಬಾತನಿಗೆ 20 ವರ್ಷ ಕಠಿಣ ಸಜೆ ಮತ್ತು ಒಟ್ಟು 50 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಪೋಕ್ಸೊ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ಬಂಟ್ವಾಳ ತಾಲೂಕಿನ 17 ವರ್ಷದ ಅಪ್ರಾಪ್ತ ಬಾಲಕಿ ಪ್ಯಾಶನ್ ಡಿಸೈನಿಂಗ್ ಕೋರ್ಸ್‌ ಕಲಿಯುತ್ತಿದ್ದಳು. ಈ ಸಂದರ್ಭ ಬಾಲಕಿಗೆ ಇನ್‌ಸ್ಟಾಗ್ರಾಂ ಮೂಲಕ ಕಾರು ಚಾಲಕ ಅಡ್ಡೂರಿನ […]

Continue Reading

ಬಡವರ ಹಸಿವಿನ ಅರಿವಿಲ್ಲದ ಜನರಿಂದ ಬೀದಿ ವ್ಯಾಪಾರಿಗಳ ಮೇಲಿನ ದಬ್ಬಾಳಿಕೆ ಸಂವಿಧಾನ ವಿರೋಧಿ ಕೃತ್ಯ: ಮುನೀರ್ ಕಾಟಿಪಳ್ಳ ತೀವ್ರ ಆಕ್ರೋಶ

ಮಂಗಳೂರು: ಬಡವರ ಬದುಕಿನ ಬವಣೆಯ ಅರಿಯದೆ ಬಡ ಬೀದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ನಡೆಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ ಎಂದು ಸಿಪಿಐಎಂ ದ.ಕ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಂದು ಬೀದಿಬದಿ ವ್ಯಾಪಾರಿಗಳ ಮೇಲೆ ಮುಂದುವರಿದ ಧಾಳಿ ಖಂಡಿಸಿ, ಸಂಡೆ ಬಜಾರ್ ವ್ಯಾಪಾರಕ್ಕೆ ಮುಕ್ತ ಅವಕಾಶಕ್ಕೆ ಒತ್ತಾಯಿಸಿ, ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ CITU ನೇತೃತ್ವದಲ್ಲಿ ಇಂದು ಆರಂಭಗೊಂಡಿರುವ ಹಗಲು ರಾತ್ರಿ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದ […]

Continue Reading

ಬೆಳ್ತಂಗಡಿ : ‘ಮೋಕ್ಷ’ ದರ್ಶನ: ಜನ ಹೈರಾಣು!

ಬೆಳ್ತಂಗಡಿಗೆ ನಗರಾಭಿವೃದ್ಧಿ ಪ್ರಾಧಿಕಾರ ಇಲ್ಲ. ಬೆಳ್ತಂಗಡಿ ಜನರಿಗೆ ಸದ್ಯಕ್ಕೆ ಮೂಡಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರ ಗತಿಯಂತಾಗಿದೆ. ಬೆಳ್ತಂಗಡಿ ದೊಡ್ಡ ತಾಲೂಕು. ಆದರೆ ತಾಲೂಕು ಹೆಡ್ ಕ್ವಾಟರ್ಸ್ ಇನ್ನೂ ಪಟ್ಟಣ ಪಂಚಾಯಿತಿ ಲೆವೆಲ್‍ನಲ್ಲೇ ಇದೆ. ತಾಲೂಕು ಹೆಡ್ ಕ್ವಾಟರ್ಸ್‍ನ ಸಿಟಿ ಲಿಮಿಟ್ಸ್ ಕೂಡಾ ದೊಡ್ಡದಿದ್ದರೂ ಬೆಳ್ತಂಗಡಿಗೆ ನಗರಾಭಿವೃದ್ಧಿ ಪ್ರಾಧಿಕಾರ (ಬೂಡಾ) ಇಲ್ಲ. ಬೆಳ್ತಂಗಡಿ ಜನರಿಗೆ ಸದ್ಯಕ್ಕೆ ಮೂಡಾವೇ (ಮೂಡಬಿದಿರೆ ನಗರಾಭಿವೃದ್ಧಿ ಪ್ರಾಧಿಕಾರ) ಗತಿಯಂತಾಗಿದೆ. ಏಕೆಂದರೆ ಬೆಳ್ತಂಗಡಿಯನ್ನು ಮೂಡುಬಿದಿರೆಯೊಂದಿಗೆ ಲಿಂಕ್ ಮಾಡಲಾಗಿದೆ. ಇದು ಎತ್ತಿಂದೆತ್ತನ ಸಂಬಂಧ ಎಂದೇ ಅರ್ಥವಾಗುತ್ತಿಲ್ಲ. ಒಬ್ಬರು ನಸುಕಿನ […]

Continue Reading

ಗುರುಪುರ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿಪಿಎಂ ನಿಯೋಗ ಬೇಟಿ

ಗುರುಪುರ ಹೋಬಳಿಯಲ್ಲಿರುವ ನಾಲ್ಕು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ, ಆರೋಗ್ಯ ಕೇಂದ್ರಗಳ ಔಷಧಿ ಮೂಲಭೂತ ಸೌಕರ್ಯಗಳ ಕೊರತೆಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಗುರುಪುರ ವಲಯ ಸಮಿತಿಯು ಸಮಿತಿಯನ್ನು ರಚಿಸಿದ್ದು, ಈ ನಿಯೋಗವು ಗುರುಪುರ ಹೋಬಳಿಯಲ್ಲಿರುವ ಕುಪ್ಪೆಪದವು, ಗಂಜಿಮಠ, ಕೊಂಪದವು, ಕುಡುಪು ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಿತು. ಗುರುಪುರ ಹೋಬಳಿಯಲ್ಲಿರುವ ನಾಲ್ಕು ಆರೋಗ್ಯ ಕೇಂದ್ರಗಳ ಪೈಕಿ ಕುಡುಪು ಮತ್ತು ಗಂಜಿಮಠ ಪ್ರಾಥಮಿಕ […]

Continue Reading

ಬೆಳ್ತಂಗಡಿಯಲ್ಲೊಂದು ಅಮಾನವೀಯ ಘಟನೆ: ಪರಿಶಿಷ್ಟ ಜಾತಿ ಬಿ.ಎಲ್.ಒ ಗೆ ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿ

ನ್ಯಾಯಕ್ಕಾಗಿ ತಹಶೀಲ್ದಾರ್, ಪೊಲೀಸ್ ಮೊರೆ ಹೋದ ಬೂತ್ ಮಟ್ಟದ ಅಧಿಕಾರಿ ಚುನಾವಣಾ ಆಯೋಗದ ಆದೇಶದಂತೆ ಸರಕಾರದ ಸೂಚನೆಯಂತೆ ಮತದಾರರ ಪಟ್ಟಿ ಪರಿಷ್ಕರಿಸುವ ಕ್ಷೇತ್ರ ಕಾರ್ಯದಲ್ಲಿದ್ದ ಕರ್ತವ್ಯ ನಿರತ ದಲಿತ ಬಿ.ಎಲ್.ಒ ಒಬ್ಬರಿಗೆ ‌ಜಾತಿವಾದಿ ಮಹಿಳೆಯೊಬ್ಬರು ಜಾತಿಯ ಕಾರಣಕ್ಕಾಗಿಯೇ ಅವಮಾನಿಸಿ ಅಂಗಳದಲ್ಲೇ ನಿಲ್ಲಿಸಿದ ಅಮಾನವೀಯ ಘಟನೆ ಶಿರ್ಲಾಲು ಗ್ರಾಮದಲ್ಲಿ ಜುಲೈ 6 ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬಿ.ಎಲ್.ಒ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಅವಮಾನಗೊಂಡ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. 2025 ರಲ್ಲಿ ಶಿರ್ಲಾಲು ಗ್ರಾಮದ ಅಂಗನವಾಡಿ […]

Continue Reading

ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡಲು ಒತ್ತಾಯಿಸಿ, ಹೋರಾಟ ಸಮಿತಿಯಿಂದ ಬಜ್ಪೆಯಲ್ಲಿ ಬೃಹತ್ ಮಾನವ ಸರಪಳಿ

ಜಿಲ್ಲೆಯ ಶಾಸಕರು ಕಾರ್ಪೊರೇಟ್ ವೈದ್ಯಕೀಯ ಲಾಬಿಯ ಸೂತ್ರದ ಗೊಂಬೆಗಳು: ಮುನೀರ್ ಕಾಟಿಪಳ್ಳ ಆರೋಪ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆದೇಶ ರದ್ದುಗೊಳಿಸಬೇಕು, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು, ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ‘ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬಜ್ಪೆ ಪೇಟೆಯಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಮಾನವ ಸರಪಳಿಗೆ […]

Continue Reading