ವೇಣೂರು: ಬಾಲಕಿಯ ನಿರಂತರ ಅತ್ಯಾಚಾರ, ಬಾಲಕಿ ಗರ್ಭಿಣಿ, ಆರೋಪಿ ಸನತ್ ವಿರುದ್ದ ಪ್ರಕರಣ ದಾಖಲು.

ಜಿಲ್ಲೆಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಯುವಕನೊಬ್ಬ ಅಪ್ರಾಪ್ತೆ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರು ಎಂಬಲ್ಲಿ ನಡೆದಿದೆ. ಶಿರ್ಲಾಲು ಗ್ರಾಮದ ನಿವಾಸಿ ಸನತ್ ಎಂಬಾತನೇ ಅತ್ಯಾಚಾರವೆಸಗಿದ ಆರೋಪಿ. ಚಾಲಕನಾಗಿ ದುಡಿಯುತ್ತಿದ್ದ ಸನತ್ ಬಾಲಕಿಯ ತಂದೆಯೊಂದಿಗೆ ಅಗಾಗ ಮನೆಗೆ ಬದ್ದು ಹೋಗುತ್ತಿದ್ದ. ಈ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಬಾಲಕಿಯ ಹುಟ್ಟು ಹಬ್ಬದ ಕಾರ್ಯಕ್ರಮದ ದಿನದಂದು ಹುಡುಗಿಯ ಮನೆಗೆ ಬಂದು ಆರೋಪಿ ರಾತ್ರಿ […]

Continue Reading

ಮಾಣಿ ಲಕ್ಕಪ್ಪಕೋಡಿ ಎಂಬಲ್ಲಿ ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ

ವಿಟ್ಲ: ಹುಟ್ಟು ಅಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವಿನ ಮಧ್ಯೆ ನಾವು ಮಾಡಿದ ಪುಣ್ಯದ ಕೆಲಸ ನಮ್ಮನ್ನು ಕಾಪಾಡುತ್ತದೆ. ಇದೂ ಒಂದು ಮೂಲಭೂತ ಸೌಕರ್ಯದ ಭಾಗವಾಗಿದೆ. ಈಗಿನ ಕಾಲಘಟ್ಟದಲ್ಲಿ ರುದ್ರಭೂಮಿಯ ಅವಶ್ಯಕತೆ ಬಹಳಷ್ಟಿದೆ. ಎಂದು ಮಾಜಿ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆರವರು ಹೇಳಿದರು. ಅವರು ಮೇ. 6ರಂದು ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಕಪ್ಪಕೋಡಿ ಎಂಬಲ್ಲಿ ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಂಟ್ವಾಳ […]

Continue Reading

ಪಂಕ್ಚರ್ ಹಾಕಿಯೇ ಇರಬೇಕಾ ಮುಸ್ಲಿಂ ಸಮುದಾಯ.? ಪೊಲೀಸ್ ಠಾಣೆಯ ಆಯಕಟ್ಟಿನ ಜಾಗದಲ್ಲಿರುವ ಮುಸ್ಲಿಂ ಪೊಲೀಸ್ ಅಧಿಕಾರಿಗಳ ಬಗ್ಗೆ ಯಾಕೆ ಹಿಂದುತ್ವವಾದಿಗಳಿಗೆ ಅಸಹನೆ.!

ಸುಹಾಸ್ ಶೆಟ್ಟಿ ಹತ್ಯೆಯ ನಂತರ ಮುಸ್ಲಿಂ ಅಧಿಕಾರಿಗಳನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವ ಸಂಘಪರಿವಾರ.. ಮುಸ್ಲಿಂ ಆಫೀಸರ್ಸ್ ಜಿಹಾದ್ ಹಿಂದಿನ ಷಡ್ಯಂತ್ರ ಏನು.? ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ದೇಶದಲ್ಲಿರುವ ವಕ್ಫ್ ಆಸ್ತಿಯನ್ನು ಆ ಸಮುದಾಯದ ಮುಖಂಡರು ಸಮುದಾಯದ ಸಬಲೀಕರಣಕ್ಕೆ ಬಳಸಿಕೊಂಡಿದ್ದರೆ ಮುಸ್ಲಿಂ ಸಮುದಾಯ ಪಂಕ್ಚರ್ ಹಾಕುವ ಕೆಲಸ ಮಾಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅದೇ ರೀತಿ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮಹರಾಷ್ಟ್ರದಲ್ಲಿರುವ ಸುಲಭ್ ಶೌಚಾಲಯದಲ್ಲಿ ಇಪ್ಪತ್ತೆರಡಕ್ಕೂ ಹೆಚ್ಚು ಮಂದಿ ಮುಸಲ್ಮಾನರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು […]

Continue Reading

ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮೀನು ವ್ಯಾಪಾರಿಯ ಕೊಲೆ ಯತ್ನ: ಕುಖ್ಯಾತ ರೌಡಿ ಶೀಟರ್ ಕೋಡಿಕೆರೆ ಲೋಕು ಅರೆಸ್ಟ್

ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕುಂಟಿಕಾನ ಬಳಿ ಮೀನು ವ್ಯಾಪಾರಿ ಲುಕ್ಮಾನ್ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಕುಖ್ಯಾತ ರೌಡಿ ಶೀಟರ್ ಕೋಡಿಕೆರೆ ಲೋಕೇಶ್ ನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಸಂದರ್ಭ ಬಡ ಮೀನು ವ್ಯಾಪಾರಿ ಲುಕ್ಮಾನ್ ನನ್ನು ಕುಂಟಿಕಾನದ ಬಳಿ ಅಟ್ಟಾಡಿಸಿಕೊಂಡು ಹೋಗಿದ್ದ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲ್ಲಲು ಪ್ರಯತ್ನಿಸಿದ್ದರು. ಅಲ್ಲಿಯೇ ಇದ್ದ ಮೀನು ವ್ಯಾಪಾರ ಮಾಡುವ ಮಹಿಳೆಯ ಸಮಯ ಪ್ರಜ್ಞೆಯಿಂದ ಲುಕ್ಮಾನ್ ಬಚವಾಗಿದ್ದ. […]

Continue Reading

ಸುಹಾಸ್ ಶೆಟ್ಟಿ ಮರ್ಡರ್: ರಿವೇಂಜ್ ಗೆ ನಡೆಯುತ್ತಿದೆಯಾ ಗೇಮ್ ಪ್ಲ್ಯಾನ್..? ಬಜಪೆ, ಜೋಕಟ್ಟೆ, ಸುರತ್ಕಲ್ ಪರಿಸರದಲ್ಲಿ ಆತಂಕ ಮೂಡಿಸುತ್ತಿದೆ ಮಾರಕಾಸ್ತ್ರ ಸದ್ದು.!

ಕರಾವಳಿಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ರೌಡಿಶೀಟರ್ ಸುಹಾಸ್ ಶೆಟ್ಟಿ ಮರ್ಡರ್ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಆರೋಪಿಗಳ ಹೆಡೆಮುರಿ ಕಟ್ಟಲು ಪೊಲೀಸರು ತಯಾರಿಯಲ್ಲಿದ್ದಾರೆ. ಈ ನಡುವೆಯೇ ಸುಹಾಸ್ ಮರ್ಡರ್ ಗೆ ಗೇಮ್ ಪ್ಲ್ಯಾನ್ ನಡೆಯುತ್ತಿದೆಯಾ ಅನ್ನುವ ಸುದ್ದಿಗಳು ಹರಿದಾಡುತ್ತಿವೆ. ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಲವು ಆಯಾಮಗಳಲ್ಲಿ ಸುದ್ದಿಯಾಗಿತ್ತು. ಸುಹಾಸ್ ಶೆಟ್ಟಿ ಯದ್ದು ಧರ್ಮ ದ್ವೇಷಕ್ಕೆ ಬಲಿ ಎಂದು […]

Continue Reading

ಕೊಂದು ಸತ್ತವರೆಲ್ಲರೂ ಕ್ರಿಮಿನಲ್ ಗಳೇ ಹೊರತು ಹಿಂದುತ್ವವಾದಿಗಳಲ್ಲ – ಒಂದು ವಿವರಣೆ

ಕರಾವಳಿಯ ಆರ್ ಎಸ್ ಎಸ್ ನ ಹಿಂದುತ್ವವಾದಿಗಳು ಚೂರಿ, ತಲವಾರು ಹಿಡಿದು ಬೀದಿಗೆ ಇಳಿಯಲ್ಲ. ಕೊಲೆ ಮಾಡಿ ಜೈಲು ಸೇರಿಲ್ಲ, ಕೊಲೆ ಆಗಿಲ್ಲ. ಕೋಮುವಾದಕ್ಕಾಗಿ ಕೊಂದು ಸತ್ತವರೆಲ್ಲರೂ ಭೂಗತ ಲೋಕದ ಕ್ರಿಮಿನಲ್ ಗಳೇ ಹೊರತು ಹಿಂದುತ್ವವಾದಿಗಳಲ್ಲ. ✍️. ನವೀನ್ ಸೂರಿಂಜೆ, ಪತ್ರಕರ್ತರು “ಹಿಂದುತ್ವವಾದಿ ಸಂಘಟನೆಗಳ ಹೆಸರಲ್ಲಿ ಕೊಂದು ಸತ್ತವರೆಲ್ಲರೂ ಕ್ರಿಮಿನಲ್/ಅಂಡರ್ ವಲ್ಡ್ ನವರೇ ಹೊರತು ಹಿಂದುತ್ವವಾದಿಗಳಲ್ಲ” ಎಂಬ ನನ್ನ ಹೇಳಿಕೆ ಚರ್ಚೆಯಾಗುತ್ತಿದೆ. ನಾನು ಪತ್ರಕರ್ತನಾಗಿ ಸುಮಾರು ಎರಡು ದಶಕಗಳಿಂದ ಕರಾವಳಿಯ ಕೋಮುವಾದದ ಬಗ್ಗೆ ವರದಿಯನ್ನು ಮಾಡುತ್ತಿದ್ದೇನೆ. ಈ […]

Continue Reading

ರಂಗಭೂಮಿ ಆನಂದೋತ್ಸವ : ಟಿ. ಅಶೋಕ್ ಪೈ ಅವರಿಗೆ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ ಪ್ರದಾನ

ರಂಗಭೂಮಿ ಉಡುಪಿ ಸಂಸ್ಥೆ ರಂಗಭೂಮಿಗೆ ಮಾದರಿ: ಟಿ. ಅಶೋಕ್ ಪೈ ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಹಲವಾರು ಅವಕಾಶಗಳಿವೆ. ದೇಶಿಯ ಸಂಘಸoಸ್ಥೆಗಳಲ್ಲದೆ ವಿದೇಶಿ ಅನುದಾನಗಳ ಮೂಲಕ ರಂಗಭೂಮಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಂಗಭೂಮಿ ಚಿಂತನೆ ನಡೆಸಬೇಕು ಎಂದು ಡಾ.ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ.ಅಶೋಕ್ ಪೈ ಹೇಳಿದರು. ಅವರು ಭಾನುವಾರ ಎಂಜಿಎA ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿ.ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ನಡೆದ ‘ರಂಗಭೂಮಿ ಆನಂದೋತ್ಸವ’ ಕಾರ್ಯಕ್ರಮದಲ್ಲಿ ಉಡುಪಿಯ ತಲ್ಲೂರ್ಸ್ […]

Continue Reading

ಶರಣ್ ಪಂಪ್ ವೆಲ್ ಮೇಲೆ ಪ್ರಕರಣ ಹೂಡಿರುವುದು ಸ್ವಾಗತಾರ್ಹ, ತಕ್ಷಣವೆ ಬಂಧಿಸಿ ಬಿಗು ಕ್ರಮ ಕೈಗೊಳ್ಳಿ : ಸಿಪಿಐಎಂ ಆಗ್ರಹ

ಬಂದ್ ಗೆ ಕರೆ ನೀಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಶರಣ್ ಪಂಪ್ ವೆಲ್ ಮೇಲೆ ಎಫ್ಐಆರ್ ದಾಖಲಿಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಸ್ವಾಗತಿಸಿದೆ. ಆದರೆ ಇದು ಹಿಂದಿನ ಅನುಭವದಂತೆ ಆಗಬಾರದು. ಶರಣ್ ಪಂಪ್ ವೆಲ್ ಹಾಗೂ ಪೂತ್ತೂರು ಸಹಿತ ಜಿಲ್ಲೆಯ ಇತರೆಡೆ ಇದೇ ಆರೋಪ ಹೊತ್ತ ಪ್ರತಿಯೊಬ್ಬರನ್ನು ತಕ್ಷಣವೇ ಬಂಧನಕ್ಕೆ ಒಳಪಡಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ. ಈ ಹಿಂದೆ ಶರಣ್ ಪಂಪ್ ವೆಲ್ ಹಾಗೂ ಇನ್ನಿತರ ಸಂಘ ಪರಿವಾರದ ನಾಯಕರ ವಿರುದ್ಧ ಕೋಮು […]

Continue Reading

ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೂತನ ಪದಾಧಿಕಾರಿಗಳ ಆಯ್ಕೆ ಅನ್ಸಾರ್ ಅಹಮದ್ ರವರ ಅಧ್ಯಕ್ಷತೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಮಹಿಳಾ ಜಿಲ್ಲಾಧ್ಯಕ್ಷರಾದ ಜ್ಯೋತಿ ಸೇರಿಗಾರ್ತಿ ರವರ ನೇತೃತ್ವದಲ್ಲಿ ಇಂದು ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿ ರಚನೆಯಾಗಿ ಘೋಷಿಸಲಾಯಿತು. ಕರವೇ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಸಯ್ಯದ್ ನಿಜಾಮ್, ಅಲ್ಫೋನ್ಸ್ ಮಿನೇಜಸ್, ಸುಧೀರ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಪೂಜಾರಿ ಕಾರ್ಯದರ್ಶಿಯಾಗಿ ಸಂತೋಷ ಕುಲಾಲ ಸಂಘಟನಾ […]

Continue Reading

ಕಾಂಗ್ರೆಸ್ ಪಕ್ಷಕ್ಕೆ ದ.ಕ. ಜಿಲ್ಲಾ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ

ಈ ಹಿಂದಿನ ಎಲ್ಲಾ ನೋವುಗಳನ್ನು ಬಿಟ್ಟು, ಈ ರಾಜ್ಯದ ಮುಸ್ಲಿಂ ಮತದಾರರು ಶೇಕಡ 88 ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ತಮಗೆಲ್ಲಾ ಅಧಿಕಾರ ಕೊಟ್ಟಿದ್ದಾರೆ. ತಮಗೆ ಅಧಿಕಾರ ಸಿಕ್ಕಿದ್ದೆ ಹೊರತು ಈ ರಾಜ್ಯದ ಮುಸ್ಲಿಂ ಜನಪ್ರತಿನಿಧಿಗಳಿಗೆ, ಕಾರ್ಯಕರ್ತರಿಗೆ ಯಾವುದೇ ರೀತಿಯ ಅಧಿಕಾರ ಬಿಡಿ, ಈ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿಲ್ಲ. ಇದಕ್ಕೆಲ್ಲಾ ಕಾರಣ ಈ ರಾಜ್ಯದಲ್ಲಿ ಪರ್ಯಾಯ ಜಾತ್ಯತೀತ ಪಕ್ಷ ಇಲ್ಲದೆ ಇರುವುದನ್ನು ಮನಗಂಡು, ಈ ಸಮುದಾಯದ ಬಗ್ಗೆ ಕಾಳಜಿ ಇಲ್ಲದೆ ಇರಬಹುದು […]

Continue Reading