ಕರವೇ ಪ್ರವೀಣ್ ಶೆಟ್ಟಿ ಬಣದ ನೂತನ ಜಿಲ್ಲಾಧ್ಯಕ್ಷರಾಗಿ ಸುಜಯ್ ಪೂಜಾರಿ ಹಾಗೂ ಜಿಲ್ಲಾಧ್ಯಕ್ಷೆಯಾಗಿ ಜ್ಯೋತಿ ಸೇರಿಗಾರ್ತಿ ಆಯ್ಕೆ

ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಮಾಜಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರ ಸೂಚನೆಯ ಮೇರೆಗೆ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಸುಜಯ್ ಪೂಜಾರಿ ಹಾಗೂ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಶ್ರೀಮತಿ ಜ್ಯೋತಿ ಸೇರಿಗಾರ್ತಿ ರವರನ್ನು ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ನೇಮಕಗೊಳಿಸಿ ಅದೇಶ ಹೊರಡಿಸಿರುತ್ತಾರೆ. ಅನ್ಸಾರ್ ಅಹಮದ್ ರವರನ್ನು ಉಡುಪಿ ಜಿಲ್ಲಾ ಗೌರವಾಧ್ಯಕ್ಷ ರನ್ನಾಗಿ ನೇಮಿಸಿ ಸಂಘಟನೆಯನ್ನು ಅನ್ಸಾರ್ ಅಹಮದ್ ರವರ ನೇತೃತ್ವದಲ್ಲಿ ಮುನ್ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಿರು ತ್ತಾರೆ. […]

Continue Reading

ಉಳ್ಳಾಲ ತಾಲೂಕಿನ ಸಮಗ್ರ ಅಭಿವೃದ್ದಿಗೆ ಆಗ್ರಹಿಸಿ ಬೃಹತ್ ಹಕ್ಕೊತ್ತಾಯ ಸಮಾವೇಶ

ಉಳ್ಳಾಲ ತಾಲೂಕಿನಲ್ಲಿ ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ ಕ್ಷೇತ್ರದ ಲಾಬಿಗಳ ದರ್ಬಾರ್ ನಡೆಯುತ್ತಿದೆ: ಮುನೀರ್ ಕಾಟಿಪಳ್ಳ ಉಳ್ಳಾಲ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ತಾಲೂಕಿನ ಜನಸಾಮಾನ್ಯರ 28 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ಉಳ್ಳಾಲ ಮತ್ತು ಮುಡಿಪು ವಲಯ ಸಮಿತಿಗಳ ಜಂಟಿ ನೇತೃತ್ವದಲ್ಲಿ ದೇರಳಕಟ್ಟೆ ಮೈದಾನದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಯಿತು. ಸಮಾವೇಶಕ್ಕೂ ಮುನ್ನ ನಿಟ್ಟೆ ಮೆಡಿಕಲ್ ಕಾಲೇಜು ಹಾಗೂ ನಾಟೆಕಲ್ ಜಂಕ್ಷನ್ ನಿಂದ ಸಿಪಿಐಎಂ ಕಾರ್ಯಕರ್ತರು ದೇರಳಕಟ್ಟೆ ಮೈದಾನದವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು. ಸಮಾವೇಶವನ್ನು ಸಿಪಿಐಎಂ ಜಿಲ್ಲಾ […]

Continue Reading

ಮಂಗಳೂರು: ಗುಂಪು ಹಲ್ಲೆ; ಕುಡುಪು ಬಳಿ ಯುವಕನೊಬ್ಬನ ಹತ್ಯೆ ಪ್ರಕರಣ 15 ಮಂದಿ ಆರೋಪಿಗಳ ಬಂಧನ

ಜಿಲ್ಲೆಯಲ್ಲಿ ನಡೆದ ಗುಂಪು ಹತ್ಯೆಯ ಮೊದಲ ಪ್ರಕರಣ, ಮಾಜಿ ಕಾರ್ಪೊರೇಟರ್ ಒಬ್ಬರ ಪತಿ ಕೃತ್ಯದಲ್ಲಿ ಭಾಗಿ ನಗರದ ಹೊರವಲಯದ ಕುಡುಪುವಿನಲ್ಲಿ ಯುವಕನೊಬ್ಬ ಭಾನುವಾರ ಮೃತಪಟ್ಟಿದ್ದು, ಇದಕ್ಕೆ ಗುಂಪು ಹಲ್ಲೆಯೇ ಕಾರಣ. ಬಲವಾದ ಹಲ್ಲೆಯಿಂದ ದೇಹದೊಳಗೆ ಆಗಿರುವ ಗಾಯಗಳಿಂದ ಯುವಕ ಸತ್ತಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ. ಆತನಿಗೆ ಹಲ್ಲೆ ನಡೆಸಿದ 15 ಆರೋಪಿಗಳನ್ನು ಬಂಧಿಸಿದ್ದಾರೆ. ಕುಡುಪು ತಿರುವೈಲು ಗ್ರಾಮದ ನಡುಮನೆಯ ಸಚಿನ್, ದೇವದಾಸ್, ಮಂಗಳನಗರದ ಮಂಜುನಾಥ್, ನೀರುಮಾರ್ಗದ ಸಾಯಿದೀಪ್, ಮಂಗಳನಗರ ನಿತೇಶ್ ಕುಮಾರ್ ಅಲಿಯಾಸ್‌ ಸಂತೋಷ್, ಕುಡುಪು […]

Continue Reading

ಮಂಗಳೂರು: ಕುಡುಪು ಬಳಿ ವಲಸೆ ಕಾರ್ಮಿಕನ ಮೇಲೆ ಗುಂಪು ಹಲ್ಲೆ, ಹತ್ಯೆ. ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸಲು ಸಿಪಿಐಎಂ ಆಗ್ರಹ.

ಮಂಗಳೂರು ನಗರದ ಹೊರವಲಯದ ಕುಡುಪು ಎಂಬಲ್ಲಿ ನಿನ್ನೆ ಸಂಜೆ (ಎಪ್ರಿಲ್ 27) ಕ್ರಿಕೆಟ್ ಆಡುತ್ತಿದ್ದ ಗುಂಪೊಂದು ಅಲ್ಲಿದ್ದ ವಲಸೆ ಕಾರ್ಮಿಕನೋರ್ವನನ್ನು ಥಳಿಸಿ ಹತ್ಯೆಗೈದಿರುವ ಕುರಿತು ಆತಂಕಕಾರಿ ಮಾಹಿತಿಗಳು ಹೊರಬೀಳುತ್ತಿದೆ. ಘಟನೆ ನಡೆದು ಒಂದು ದಿನದ ಕಳೆದಿದ್ದರೂ ಪೊಲೀಸ್ ಇಲಾಖೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡುತ್ತಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಗುಂಪು ಹಲ್ಲೆ, ಹತ್ಯೆಯಲ್ಲಿ ಭಾಗಿಯಾಗಿರುವ ರಾಜಕಿಯ ಹಿನ್ನಲೆಯ ಕೆಲವು ಪ್ರಭಾವಿಗಳನ್ನು ರಕ್ಷಿಸುವ, ಪ್ರಕರಣದ ತೀವ್ರತೆಯನ್ನು ತಗ್ಗಿಸುವ, ಪ್ರಕರಣವನ್ನು ದುರ್ಬಲಗೊಳಿಸುವ ಯತ್ನವೂ ಪ್ರಭಾವಿ ರಾಜಕಾರಣಿಗಳಿಂದ, […]

Continue Reading

ಉಳ್ಳಾಲ ಮಂಜನಾಡಿಯಲ್ಲಿ ಯಕ್ಷಗಾನ ಕಾರ್ಯಾಗಾರ ಯಕ್ಷ ಸೌರಂಭ

ಯಕ್ಷಗಾನ ಕಾರ್ಯಾಗಾರಗಳ ಮೂಲಕ ಅಕಾಡೆಮಿಯಿಂದ ಯಕ್ಷಗಾನಕ್ಕೆ ಶಕ್ತಿ ತುಂಬುವ ಕಾರ್ಯ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಅಭಿಪ್ರಾಯ ಉಡುಪಿ : ಯಕ್ಷಗಾನ ಕಲೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಈ ಕಲೆಯ ಆಳ, ವಿಸ್ತಾರ, ಸೊಬಗನ್ನು ಯಕ್ಷಾಸಕ್ತರಿಗೆ ಮುಟ್ಟಿಸಲು ವಿವಿಧ ಕಡೆಗಳಲ್ಲಿ ಯಕ್ಷಗಾನ ಕಾರ್ಯಾಗಾರಗಳನ್ನು ಅಕಾಡೆಮಿ ಹಮ್ಮಿಕೊಳ್ಳುವುದರ ಮೂಲಕ ಕಲೆಯ ಬೆಳೆವಣಿಗೆಗೆ ಪ್ರೋತ್ಸಾಹಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಮಂಗಳೂರು ಉಲ್ಲಾಳದ ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದ ಆವರಣದಲ್ಲಿ […]

Continue Reading

ಉಳ್ಳಾಲ ತಾಲೂಕಿನ ಅಭಿವೃದ್ಧಿಗಾಗಿ ಎಪ್ರಿಲ್ 29ರಂದು ಹಕ್ಕೊತ್ತಾಯ ಸಮಾವೇಶ; ವಿವಿಧ ಸಂಘಟನೆಗಳ ಸಂಪೂರ್ಣ ಬೆಂಬಲ

ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ, ವಿವಿಧ ಜನವಿಭಾಗಗಳ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಎಪ್ರಿಲ್ 29ರಂದು ಬೆಳಿಗ್ಗೆ 10.30ಕ್ಕೆ ದೇರಳಕಟ್ಟೆ ಮೈದಾನದಲ್ಲಿ ಬ್ರಹತ್ ಹಕ್ಕೊತ್ತಾಯ ಸಮಾವೇಶ ನಡೆಯಲಿದ್ದು, ಈಗಾಗಲೇ ಹಲವಾರು ಸಂಘಟನೆಗಳು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ. ಉಳ್ಳಾಲ ತಾಲೂಕು ರಚನೆಯಾಗಿ 5 ವರ್ಷಗಳು ಕಳೆದರೂ ಇನ್ನೂ ಕೂಡ ತಾಲೂಕು ಕಚೇರಿ ಇಲ್ಲ, ಸರಕಾರಿ ತಾಲೂಕು ಆಸ್ಪತ್ರೆ ಇಲ್ಲ, ನ್ಯಾಯಾಲಯ ಸಬ್ ರಿಜಿಸ್ಟಾರ್ ಕಚೇರಿ ಇಲ್ಲ, ಸರಕಾರಿ ಪದವಿ ಕಾಲೇಜ್, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಪಾಲಿಟೆಕ್ನಿಕ್ ಇಲ್ಲ, ಕ್ರೀಡಾಂಗಣ, […]

Continue Reading

ಉಳ್ಳಾಲದಲ್ಲಿ ಸುದೀರ್ಘವಾಗಿ ಗೆಲುವು ಸಾಧಿಸಿದವರು ಜನರ ಬದುಕನ್ನು ಸೋಲಿಸಿದ್ದಾರೆ: ಸಂತೋಷ್ ಬಜಾಲ್

ಕಮ್ಯೂನಿಸ್ಟ್‌ ಪಕ್ಷದ ಶಾಸಕರಾಗಿದ್ದ ಕೃಷ್ಣ ಶೆಟ್ಟಿ ಗೇಣಿದಾರರ ಪರನಿಂತ ಜನನಾಯಕ. 1983 ರಲ್ಲಿ ಆಯ್ಕೆಯಾದ ಮೇಷ್ಟ್ರು ಹಲವು ಜನಪರ ಯೋಜನೆ ತಂದವರು. ಇತಿಹಾಸ ಪ್ರಸಿದ್ಧ ಉಳ್ಳಾಲ ಯಾವ ಹಂತಕ್ಕೆ ಅಭಿವೃದ್ಧಿಗೊಳ್ಳಬೇಕಿತ್ತು ಆದರೆ ಯಾವುದೇ ಅಭಿವೃದ್ಧಿ ಕಾಣದೆ ಇಂತಹ ಪರಿಸ್ಥಿತಿಗೆ ತಂದಿಡಲು ಯಾರು ಕಾರಣ. ಉಳ್ಳಾಲದಲ್ಲಿ ಜನಪ್ರತಿನಿಧಿಯೊಬ್ಬರು ಸುದೀರ್ಘವಾಗಿ ಗೆಲ್ಲುತ್ತಾ ಬರುತ್ತಿದ್ದರೂ ಇಲ್ಲಿನ ಜನರ ಬದುಕಿನ ಪ್ರಶ್ನೆ ಮಾತ್ರ ಸೋಲುತ್ತಾ ಬಂದಿದೆ ಎಂದು CPIM ಜಿಲ್ಲಾ ಯುವ ನಾಯಕರಾದ ಸಂತೋಷ್ ಬಜಾಲ್ ರವರು ಹೇಳಿದರು. ಅವರು CPIM ನೇತ್ರತ್ವದಲ್ಲಿ […]

Continue Reading

ರೈತರ ಕೃಷಿಭೂಮಿ ರಿಯಲ್ ಎಸ್ಟೇಟ್ ದಂಧೆಕೋರರ, ಮಾಫಿಯಾಗಳ ಪಾಲಾಗುತ್ತಿದೆ: ಕೆ ಯಾದವ ಶೆಟ್ಟಿ

ಗೇಣಿದಾರ ರೈತರು, ಬೀಡಿ, ಹೆಂಚು ಕಾರ್ಮಿಕರ ಸಮರಶೀಲ ಚಳವಳಿಗಳಿಂದ ಖ್ಯಾತಿ ಪಡೆದಿದ್ದ ಉಳ್ಳಾಲ ತಾಲೂಕಿನಲ್ಲಿ ಇಂದು ಜನ ಸಾಮಾನ್ಯರಿಗೆ ಧ್ವನಿಯೇ ಇಲ್ಲದಂತಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಇರುವ ಮನೆ, ನಿವೇಶನ ರಹಿತರಿಗೆ ಕಳೆದ ಒಂದೂವರೆ ದಶಕದಿಂದ ಒಂದು ವಸತಿ ಯೋಜನೆಯೂ ಜಾರಿಯಾಗಿಲ್ಲ, ಪಂಚಾಯತ್ ಗಳು ಕನಿಷ್ಟ ನಿವೇಶನರಹಿತರ ಪಟ್ಟಿಗಳನ್ನೂ ಸಿದ್ದಪಡಿಸಿಲ್ಲ ಎಂಬುದು ಇಲ್ಲಿನ ಜನಪ್ರತಿನಿಧಿಗಳ ಆದ್ಯತೆಯನ್ನು ಎತ್ತಿತೋರಿಸುತ್ತದೆ. ಬಡವರ, ಶ್ರಮಿಕರ, ಜನ ಸಾಮಾನ್ಯರ ಬೇಡಿಕೆಗಳು ಇಲ್ಲಿನ ರಾಜಕಾರಣದಲ್ಲಿ ಆದ್ಯತೆಯಾಗಿ ಉಳಿದಿಲ್ಲ. ರೈತರ ಕೈಯಲ್ಲಿರುವ ಅಲ್ಪ ಸ್ವಲ್ಪ ಜಮೀನು ವಿವಿಧ […]

Continue Reading

ಕರಾವಳಿಯಲ್ಲಿ UPSC ಪರೀಕ್ಷೆಯ ಸಾಧನೆಗೆ ಮುನ್ನುಡಿ ಬರೆದ ACE IAS ಅಕಾಡಮಿ

✍️. ಹನೀಫ್ ಪುತ್ತೂರು ಹಲವಾರು ವರ್ಷದ ಕನಸು ನಿರಂತರ ಪರಿಶ್ರಮ ಮೂಲಕ ನನಸಾಗಿದೆ. Ace IAS academy ಇದುವರೆಗೂ ಹಲವಾರು ಸರಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಿದೆ. ಪೊಲೀಸ್ ಇಲಾಖೆ, ಇನ್ ಕಂ ಟ್ಯಾಕ್ಸ್, PWD, ಸರಕಾರಿ ಇಲಾಕೆಗಳಾದ ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹೀಗೆ ಹಲವಾರು ಇಲಾಖೆಯಲ್ಲಿ ಸಂಸ್ಥೆಯಲ್ಲಿ ಕೋಚಿಂಗ್ ಪಡೆದ ಅಭ್ಯರ್ಥಿಗಳು ಅಧಿಕಾರಿಗಳಾಗಿ, ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಸಂಸ್ಥೆಯ ಪ್ರಯೋಜನ ಪಡೆದಿದ್ದಾರೆ. ಇದೆ ಮೊದಲ ಬಾರಿ ಯುಪಿಎಸ್ಸಿ […]

Continue Reading

ಜನರ ಬದುಕಿನ ಕುರಿತು ಧ್ವನಿ‌ ಎತ್ತುವುದು, ಹೋರಾಟಗಳನ್ನು ಸಂಘಟಿಸುವುದೇ ನಿಜವಾದ ರಾಜಕಾರಣ: ಮುನೀರ್ ಕಾಟಿಪಳ್ಳ

ಜನರ ಬದುಕಿನ ಕುರಿತು ಧ್ವನಿ ಎತ್ತುವುದು, ಹೋರಾಟಗಳನ್ನು ಸಂಘಟಿಸುವುದು ನಿಜವಾದ ರಾಜಕಾರಣ. ಆದರೆ, ತುಳುನಾಡು ಅದಕ್ಕೆ ವಿರುದ್ಧವಾಗಿ ಚಲಿಸುತ್ತಿದೆ. ಇಲ್ಲಿನ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಅಬ್ಬರದ ಕಂಬಳ, ಹುಲಿ ಕುಣಿತ, ಹೊನಲು ಬೆಳಕಿನ ಕ್ರೀಡಾಕೂಟಗಳನ್ನು ಹಮ್ಮಿಕೊಂಡು ಜನರ ಗಮನ ಸೆಳೆಯುವುದೇ ರಾಜಕಾರಣವನ್ನಾಗಿಸಿವೆ. ಇಲ್ಲಿನ ಪ್ರತಿಯೊಬ್ಬ ಶಾಸಕ, ಮಾಜಿ ಶಾಸಕನಿಗೆ ಪ್ರತಿಷ್ಟೆ ಮೆರೆಯುವ ಒಂದೊಂದು ಕಂಬಳಗಳಿವೆ. ಇದರಿಂದ ಜನ ಸಾಮಾನ್ಯರ ಬದುಕಿನ ಬೇಡಿಕೆಗಳ ಧ್ವನಿ ಕಳೆದುಕೊಂಡಿವೆ. ಸಿಪಿಐಎಂ ಪಕ್ಷ ಮಾತ್ರ ಇದಕ್ಕೆ ವಿರುದ್ದವಾಗಿ ನಿಜವಾದ ಜನ […]

Continue Reading