ಈದ್ ಮೆರವಣಿಗೆ ವಿಚಾರ: ಧಮ್ಕಿ ಪ್ರಕರಣ..ಹಿಂದೂ ಸಂಘಟನೆಗಳಿಂದ ಬಿ.ಸಿ.ರೋಡ್ ಚಲೋ.. ಸವಾಲ್-ಪ್ರತಿ ಸವಾಲ್ ಗೆ ಕಾವೇರಿದ ಬಿ.ಸಿ.ರೋಡ್

ಈದ್ ಮೆರವಣಿಗೆ ವಿಚಾರದಲ್ಲಿ ಧಮ್ಕಿ ಹಾಕಿದ ವಿಚಾರವಾಗಿ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾವಣೆಯಾದ ಬಿ.ಸಿ.ರೋಡ್ ಪಟ್ಟಣ ಸಂಪೂರ್ಣ ಪೊಲೀಸ್ ಸುಪರ್ದಿಯಲ್ಲಿದೆ. ಶರಣ್ ಪಂಪ್ ವೆಲ್ ಹಾಗೂ ಸುಮಾರು ನಾಲ್ಕು ಸಾವಿರದಷ್ಟು ಕಾರ್ಯಕರ್ತರು ರಕ್ತೇಶ್ವರಿ ಗುಡಿ ಮುಂಭಾಗ ಸೇರಿದ್ಜಾರೆ. ಹೆಚ್ಚುವರಿ ಪೊಲೀಸ್ ತುಕಡಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

Continue Reading

ಕೋಮು ಪ್ರಚೋದನಕಾರಿ ಹೇಳಿಕೆ; ಬಜರಂಗದಳ ಮುಖಂಡ ಪುನೀತ್ ಅತ್ತಾವರ ಮತ್ತು ಮಾಜಿ ಪುರಸಭೆ ಅಧ್ಯಕ್ಷ ಮಹಮ್ಮದ್ ಶರೀಫ್ ಪೊಲೀಸ್ ವಶ, ಓರ್ವ ಪರಾರಿ.!

ಬಜರಂಗದಳದ ಮುಖಂಡ ಪುನೀತ್ ಅತ್ತಾವರನನ್ನು ಮಂಡ್ಯದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಂಡವಪುರದ RSS ಕಾರ್ಯಲಯಕ್ಕೆ ಆಗಮಿಸುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಬಂಟ್ವಾಳದಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ನೀಡಿರುವ ಹೇಳಿಕೆಗೆ ವ್ಯಕ್ತಿಯೋರ್ವ ಆಡಿಯೋ ರಿಲೀಸ್ ಮಾಡಿದ್ದು ತಾಕತ್ತಿದ್ದರೆ ಸೋಮವಾರದ ಈದ್ ಮಿಲಾದ್ ಮೆರವಣಿಗೆ ತಡೆಯಿರಿ ಎಂದು ಸವಾಲೋಡಿದ್ದರು. ಈ ಸವಾಲು ಸ್ವೀಕರಿಸಿದ ಪುನೀತ್ ಅತ್ತಾವರ ಬಿ.ಸಿ ರೋಡ್ ಚಲೋ ಮಾಡುವುದಾಗಿ ಘೋಷಿಸಿದ್ದರು. ಈ ನಡುವೆ ಮಧ್ಯರಾತ್ರಿ ಪೊಲೀಸರು ಪುನೀತ್ ಅತ್ತಾವರರನ್ನು […]

Continue Reading

ಮುಡಿಪು ಬಳಿ ದುರ್ಘಟನೆ. ಸ್ಟೇರಿಂಗ್ ಕಟ್ಟಾಗಿ ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್; ಸಿಬ್ಬಂದಿಗಳು, ಪ್ರಯಾಣಿಕರು ಅದೃಷ್ಟವಶಾತ್ ಬಚಾವ್.

ಸಾಲೆತ್ತೂರು-ಮುಡಿಪು-ಮಂಗಳೂರು ರಸ್ತೆಯ ಮುಡಿದು ಸಮೀಪದ ಪಾತೂರು ಎಂಬಲ್ಲಿ ಸಂಚರಿಸುತ್ತಿದ್ದ ‘ಅದ್ದಾದಿಯಾ’ ಹೆಸರಿನ ಖಾಸಗಿ ಬಸ್ ಸ್ಟೇರಿಂಗ್ ತುಂಡಾಗಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ತಾಂತ್ರಿಕ ಅಪಘಾತದ ಸಂದರ್ಭ ಚಾಲಕನ ಸಮಯ ಪ್ರಜ್ಞೆ ಯಿಂದಾಗಿ ಬಸ್ಸಿನಲ್ಲಿದ್ದ ಸಿಬ್ಬಂದಿಗಳು ಮತ್ತು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೇ ಬಚಾವಾಗಿದ್ದಾರೆ.

Continue Reading

ಬ್ಯಾಟರಿಯಲ್ಲಿ ಉಂಟಾದ ತೊಂದರೆಗೆ ಸ್ಪಂದಿಸದ ಕಾರು ಮಾರಾಟ ಕಂಪೆನಿ; ಪರಿಹಾರ ನೀಡುವಂತೆ ಮಂಗಳೂರಿನ ಗ್ರಾಹಕ ನ್ಯಾಯಾಲಯ ಆದೇಶ

ಕಾರಿನ ಬ್ಯಾಟರಿಯಲ್ಲಿ ಉಂಟಾದ ತೊಂದರೆಗೆ ಸ್ಪಂದಿಸದ ಕಾರು ಮಾರಾಟ ಕಂಪೆನಿಯು ಕಾರಿನ ಮಾಲಕರಿಗೆ ಪರಿಹಾರ ನೀಡುವಂತೆ ಮಂಗಳೂರಿನ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.ಪುತ್ತೂರಿನ ವೈದ್ಯೆ ಡಾ| ಉಷಾ ಅವರು ಮಂಗಳೂರಿನ ಬಿಜೈ ಮತ್ತು ಪುತ್ತೂರಿನ ಬೊಳುವಾರಿನಲ್ಲಿರುವ ಕಾರು ಮಾರಾಟ ಸಂಸ್ಥೆಯೊಂದರಿಂದ ಕಾರು ಖರೀದಿಸಿದ್ದರು. ಕಾರಿನ ಗ್ಯಾರಂಟಿ ಅವಧಿಯೊಳಗೆಯೇ ಬ್ಯಾಟರಿಯ ಸಮಸ್ಯೆ ಉಂಟಾಗಿತ್ತು. ಇದನ್ನು ಸಂಸ್ಥೆಯ ಗಮನಕ್ಕೆ ತಂದಿದ್ದರೂ ಸಂಸ್ಥೆಯವರು ಯಾವದೇ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಇದರಿಂದ ಮೈಲೇಜ್‌, ಪಿಕಪ್‌ ಮತ್ತು ಇತರ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ದವು. ಸಮಸ್ಯೆಗೆ ಸ್ಪಂದಿಸದ […]

Continue Reading

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ : ಕೃತಿ ಆಹ್ವಾನ

ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಮುಸ್ಲಿಮ್ ಬರಹಗಾರರ ಉತ್ತಮ ಕನ್ನಡ ಕೃತಿಗೆ ನೀಡುವ ರಾಜ್ಯ ಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ₹. 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಆಸಕ್ತ ಮುಸ್ಲಿಮ್ ಬರಹಗಾರರು, 2023ನೇ ಸಾಲಿನಲ್ಲಿ ಪ್ರಕಟವಾದ ತಮ್ಮ ಕನ್ನಡ ಕೃತಿಯ ನಾಲ್ಕು ಪ್ರತಿಗಳನ್ನು ಸೆಪ್ಟೆಂಬರ್ 20ರ ಒಳಗಾಗಿ ಸಂಚಾಲಕರು, ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ, ಮುಸ್ಲಿಮ್ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು – 575001 […]

Continue Reading

ಫರಂಗಿಪೇಟೆ: ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು; 3.5 ಲಕ್ಷ ಮೌಲ್ಯದ ನಗ-ನಗದು ಕಳವು

ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪೆರಿಯಾರ್ ನ ಬಾಲ್ಪಬೊಟ್ಟು ನಿವಾಸಿ ಮುಹಮ್ಮದ್ ಇಕ್ಬಾಲ್ ಮನೆಗೆ ಸೆಪ್ಟೆಂಬರ್ 8 ರಂದು ಮನೆಗೆ ನುಗ್ಗಿದ ಕಳ್ಳರು ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ನಗ-ನಗದು ಕಳವು ಮಾಡಿದ ಘಟನೆ ವರದಿಯಾಗಿದೆ. ವೃತ್ತಿಯಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಇಕ್ಬಾಲ್ ಸೆಪ್ಟೆಂಬರ್ 8 ರಂದು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಸೆಪ್ಟೆಂಬರ್ 12 ರಂದು ಮನೆಗೆ ವಾಪಸ್ ಬಂದಾಗ ಮನೆಯ ಮುಂದಿನ […]

Continue Reading

ಮೇರಮಜಲು ಗುಂಡಿ ದಾಟಲು ಗುಂಡಿಗೆ ಬೇಕು.!

ಜನಪ್ರತಿನಿಧಿಗಳ ನಿರ್ಲಕ್ಷ್ಯ ಕ್ಕೆ ತುತ್ತಾದ ಅರ್ಕುಳ ದ್ವಾರ -ಮೇರಮಜಲು ರಸ್ತೆ .. ಸಾರ್ವಜನಿಕರು, ರಿಕ್ಷಾ ಯೂನಿಯನ್ ವತಿಯಿಂದ ಪ್ರತಿಭಟನೆಗೆ ಸಿದ್ಧತೆ ಬಂಟ್ವಾಳ ತಾಲೂಕಿನ ಅರ್ಕುಳ ದ್ವಾರ -ಮೇರಮಜಲು ಜಿಲ್ಲಾ ಪಂಚಾಯತ್ ಮುಖ್ಯ ರಸ್ತೆಯ ದಾರುಣ ಕಥೆಯಿದು. ಇಲ್ಲಿ ಗುಂಡಿಗೆ ಇದ್ದವರಷ್ಟೇ ಪ್ರಯಾಣ ನಡೆಸಬಹುದು. ಅಷ್ಟೊಂದು ಮಟ್ಟಿಗೆ ಈ ರಸ್ತೆ ಹದೆಗೆಟ್ಟಿದೆ. ಗುಂಡಿಗಳದ್ದೇ ಕಾರುಬಾರು. ವಾಹನ ಸವಾರರು ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕುವಂತಾಗಿದೆ. ರಸ್ತೆಯನ್ನೇ ನುಂಗಿದ ಹೊಂಡ ಗುಂಡಿಗಳಲ್ಲಿ ವಾಹನ ಚಲಾಯಿಸುವ ಸಾಹಸವನ್ನು ಈಗ ಮಾಡಬೇಕಾಗಿದೆ. ಇಂತಹದ್ದೊಂದು ನರಕಯಾತನೆಗೆ […]

Continue Reading

ಗುರುತುಗಳ ಹೊರೆ ಹೊತ್ತುಕೊಂಡವರ ವರ್ತಮಾನದ ಕತೆ

ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ” ನಾಟಕದಲ್ಲಿ ಶ್ರೀರಾಮ್ ಸ್ವೀಟ್ ಬಾಕ್ಸ್ ಎಂಬ ಹೆಸರಿನಲ್ಲಿ ಬೀಫ್ ಬಾಕ್ಸ್ ಇಟ್ಟಿರುವ ಸಂದೇಶ ಏನು.? ನಗರ ಮತ್ತು ಹಳ್ಳಿಗಳಲ್ಲಿನ ಫ್ಯೂಡಲ್-ಬ್ರಾಹ್ಮಣ್ಯದ ಜಾತಿ ದೌರ್ಜನ್ಯಕ್ಕೆ ಪರಿಹಾರ ಏನು.? ✍️. ನವೀನ್ ಸೂರಿಂಜೆ. ಪತ್ರಕರ್ತರು “ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ” ನಾಟಕದಲ್ಲಿ ಶ್ರೀರಾಮ್ ಸ್ವೀಟ್ ಬಾಕ್ಸ್ ಎಂಬ ಹೆಸರಿನಲ್ಲಿ ಬೀಫ್ ಬಾಕ್ಸ್ ಅನ್ನು ಇಟ್ಟಿದ್ದರು. ದಲಿತರ ನೋವುಗಳನ್ನು ಪ್ರತಿಬಿಂಬಿಸುವ ನಾಟಕದಲ್ಲಿ ಈ ದೃಶ್ಯ ಅವಶ್ಯಕತೆ ಇತ್ತೆ ?  ಇದರಿಂದ ಅನಾವಶ್ಯಕವಾಗಿ ಒಂದು ಸಮುದಾಯದ ಭಾವನೆಗೆ […]

Continue Reading

ಕಿನ್ನಿಗೋಳಿ: ತಾಯಿಯನ್ನು ರಕ್ಷಿಸಿ ಸಾಹಸ ಮೆರೆದ ಬಾಲಕಿ ವೈಭವಿ ಗೆ ಮಂಗಳೂರು ಪೊಲೀಸ್ ಕಮಿಷನರ್ ರವರಿಂದ ಸನ್ಮಾನ

ದಿನಾಂಕ 06-09-2024 ರಂದು ಸಂಜೆ ಕಿನ್ನಿಗೋಳಿಯ ರಾಮನಗರ ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ತಾಯಿಗೆ ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದು ಒದ್ದಾಡುತ್ತಿದ್ದ ತಾಯಿಯನ್ನು ಕೂಡಲೇ ಧಾವಿಸಿ ಬಂದು ತನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ರಿಕ್ಷಾ ಮೇಲಕ್ಕೆತ್ತಿ ರಕ್ಷಿಸಿದ ಬಾಲಕಿ ವೈಭವಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ನೇತೃತ್ವದಲ್ಲಿ ಸನ್ಮಾನಿಸಿದರು. ಬಾಲಕಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಎಲ್ಲರೂ ಕೊಂಡಾಡಿದರು. ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಾಮಾಜಿಕ […]

Continue Reading

ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಬಿತ್ತುಪಾದೆ ನಿಧನ

ನೀರುಮಾರ್ಗ ಪರಿಸರದಲ್ಲಿ ಅಮ್ಮಿಯಾಕ ಎಂದೇ ಜನಪ್ರಿಯರಾಗಿದ್ದ ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ಇಂದು ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಸ್ಥಳೀಯವಾಗಿ ಜನಾನುರಾಯಿಯಾಗಿದ್ದ ಹಮೀದ್ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಹಲವು ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದರು. ಅಧ್ಯಕ್ಷರಾಗುವ ಅವಕಾಶ ಇದ್ದರೂ ಪಕ್ಷಕ್ಕಾಗಿ ತ್ಯಾಗ ಮಾಡಿದ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾಗಿದ್ದುಕೊಂಡು ತಾವೇ ಮುಂದಾಳತ್ವ ವಹಿಸಿ ನೀರಿನ ಪೈಪ್, ಚರಂಡಿ ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೆರವೇರಿಸಿಕೊಡುತ್ತಿದ್ದರು. ಅಮ್ಮಿ ಇದ್ದರೆ ಸಾಕು ಇಲ್ಲಿ ಸಮಸ್ಯೆ ಮುಗಿಯಿತು ಅನ್ನುವ ರೀತಿಯಲ್ಲಿ […]

Continue Reading