ಮಾಜಿ ಶಾಸಕ‌ ಯು.ಆರ್.ಸಭಾಪತಿ ಅಸ್ತಂಗತ

ಕಾಂಗ್ರೆಸ್ ‌ಪಕ್ಷದ ಹಿರಿಯ ಮುಖಂಡ, ಮಾಜಿ ಶಾಸಕ ಯು.ಆರ್. ಸಭಾಪತಿ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ. 1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್‌ನ ಉದ್ಯಾವರ ಕ್ಷೇತ್ರದ ಸದಸ್ಯರಾಗಿದ್ದ ಇವರು, ಪರಿಷತ್‌ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಮನೋರಮಾ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ […]

Continue Reading

ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್

ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಅವರನ್ನು ನೇಮಿಸಲಾಗಿದೆ.ಹಿರಿಯ ಅಧಿಕಾರಿಯಾಗಿದ್ದ ಅಲೋಕ್ ಮೋಹನ್ ಅವರನ್ನು ಪೊಲೀಸ್ ಮಹಾನಿರ್ದೇಶಕರ ಸ್ಥಾನಕ್ಕೆ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸೇವಾ ಜೇಷ್ಠತೆ ಆಧಾರದಲ್ಲಿ ಡಾ. ಅಲೋಕ್ ಮೋಹನ್ ಅವರನ್ನು ಸರಕಾರ ಡಿಜಿ-ಐಜಿ ಹುದ್ದೆಗೆ ನೇಮಿಸಿದೆ.ಅಲೋಕ್ ಮೋಹನ್, 1987ನೇ ಬ್ಯಾಚ್ ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಅವರು, ಅಗ್ನಿಶಾಮಕದಳ,ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ […]

Continue Reading

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಜೊತೆಗೆ ಎಂಟು ಮಂದಿ ಶಾಸಕರೂ ಪ್ರಮಾಣ ವಚನ

ಇಂದು ಮಧ್ಯಾಹ್ನ 12:30 ಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರ ಜೊತೆಗೆ ಎಂಟು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಂಟು ಜನ ಸಚಿವರು ಅಂತಿಮ ಎನ್ನಲಾದ ಪಟ್ಟಿಯೊಂದು ಹೊರಬಿದ್ದಿದೆ. ಶುಕ್ರವಾರ ದೆಹಲಿಯಲ್ಲಿ ತಡರಾತ್ರಿವರೆಗೂ ವೇಣುಗೋಪಾಲ್ ಮನೆಯಲ್ಲಿ ಚರ್ಚೆ ನಡೆದರೂ ಸಚಿವ ಪಟ್ಟಿ ಇನ್ನೂ ಅಂತಿಮ ಆಗಿಲ್ಲ. ಇಬ್ಬರು ನಾಯಕರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಂತಿಮಗೊಂಡಿಲ್ಲ ಎನ್ನಲಾಗಿದೆ. ದೆಹಲಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಂಟಿಯಾಗಿ ತೆರಳಿದರೂ, […]

Continue Reading

ಕರ್ನಾಟವನ್ನು ಗೆದ್ದ ಕಾಂಗ್ರೆಸ್ ಗೆ ಅಭಿನಂದಿಸಲು ಈ ಬರಹ

ಕಾಂಗ್ರೆಸ್ಸಿನಲ್ಲಿ ಮತೀಯ ಮನಸ್ಥಿತಿಯವರು, ಕೋಮುವಾದಿಗಳು,ಕಡುಭ್ರಷ್ಟರು,ಮುಸ್ಲಿಮರನ್ನು ಕಂಡರಾಗದವರು ಬಹಳಷ್ಟು ಮಂದಿ ಇದ್ದಾರೆ. ✍️. ಇಸ್ಮಾಯಿಲ್ ಸುನಾಲ್ಖ್ಯಾತ ವಕೀಲರು,ಮಂಗಳೂರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವನ್ನು ಕಂಡಿದೆ. ಸೋಲಿನ ಮೇಲೆ ಸೋಲು ಕಾಣುತ್ತಿದ್ದ ಕಾಂಗ್ರೆಸ್ ಕೊನೆಗೂ ಗೆದ್ದು ಬೀಗಿದೆ. ಈ ಹಿಂದೆ ಪಂಜಾಬಿನಲ್ಲಿ ಆದಂತ ಸೋಲಂತೂ ಕಾಂಗ್ರೆಸ್ಸಿಗೆ ಬಹು ದೊಡ್ಡ ಆಘಾತವನ್ನೇ ನೀಡಿತ್ತು. ಜೊತೆಗೆ ಗೋವಾದಂತಹ ಸಣ್ಣ ಪುಟ್ಟ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬರಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ. ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಂತೂ ಈ ಪಕ್ಷ ಹೀನಾಯ ಸೋಲು ಕಂಡಿತು. ಹೇಗೆ […]

Continue Reading

ಕಾಂಗ್ರೆಸ್ ಗೆ ಕೈಕೊಟ್ಟ ‘ಬಿಲ್ಲವರು’.! ಜಿಲ್ಲಾಧ್ಯಕ್ಷರ ಹಠಾವೋ ಸದ್ದು

ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಕಮಾಲ್ ಮಾಡಿದೆ. 135 ರಷ್ಟು ಸ್ಥಾನ ಬಾಚಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಹಿಂದುತ್ವದ ಪ್ರಬಲ ಕೋಟೆಯಾಗಿರುವ ಚಿಕ್ಕಮಗಳೂರು,ಕೊಡಗಿನಲ್ಲೂ ಕಾಂಗ್ರೆಸ್ ವಿಜಯ ದುಂದುಭಿ ಬಾರಿಸಿದೆ.ಆದರೆ ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಪರಿಸ್ಥಿತಿಗೆ ತಲುಪಿದೆ. ಉಡುಪಿಯಲ್ಲಂತೂ ಬಿಜೆಪಿ 5 ರಲ್ಲಿ 5 ನ್ನು ಕ್ವೀನ್ ಸ್ವಿಪ್ ಮಾಡಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯು.ಟಿ.ಖಾದರ್ ಭರ್ಜರಿ ಜಯಭೇರಿ ಬಾರಿಸಿದರೆ, ಪುತ್ತೂರಿನಲ್ಲಿ ಅಶೋಕ್ ರೈ ಪ್ರಯಾಸದ ಗೆಲುವು ಕಂಡಿದ್ದಾರೆ. ಅಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ […]

Continue Reading

ರಾಜ್ಯದ 9 ಜಿಲ್ಲೆಗಳಲ್ಲಿ ಬಿಜೆಪಿಗೆ ಶೂನ್ಯ ಫಲಿತಾಂಶ; ಆಕ್ರೋಶದ ಅಲೆಯಲ್ಲಿ ಕೊಚ್ಚಿಹೋದ ಕಮಲ

‘ಇದು ಭ್ರಷ್ಟಾಚಾರದ ವಿರುದ್ದದ ಜನರ ತೀರ್ಪು’; ಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಪ್ರತಿಕ್ರಿಯೆ ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸುವ ಮೂಲಕ ಹೊಸ ಯುಗ ಆರಂಭವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಪ್ರತಿಕ್ರಿಯಿಸಿದ್ದಾರೆ. ತಾವೂ ಗೆದ್ದು, ಪಕ್ಷದ ನಾಯಕರನ್ನೂ ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾಗಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂಧಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಜನಮತ ಬಂದಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ […]

Continue Reading

ರಾಜ್ಯದಲ್ಲಿ ಬಿಜೆಪಿಯ ಹಿನಾಯ ಸೋಲು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್‌ ರಾಜೀನಾಮೆ ಸಾಧ್ಯತೆ

ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಹೀನಾಯ ಸೋಲು ಕಂಡ ಕಾರಣ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್‌ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇವತ್ತು ಸಂಜೆ ಅಥವಾ ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರವರ ನ್ನು ಭೇಟಿಯಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್‌ ತಮ್ಮ ರಾಜೀನಾಮೆಯನ್ನು ನೀಡುವ ಸಂಭವ ಇದೆ ಎನ್ನಲಾಗುತ್ತಿದೆ.. ರಾಜ್ಯದಲ್ಲಿ ಸಮರ್ಥವಾಗಿ ಕೆಲಸ ಮಾಡಿಲ್ಲ,ಚುನಾವಣೆ ವೇಳೆಯಲ್ಲಿ ಬಿಜೆಪಿಯನ್ನು ಸಂಘಟಿಸುವಲ್ಲಿ ಎಡವಿದ್ದರೆ ಎನ್ನಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷಗಳು ಸೋತ ಸಮಯದಲ್ಲಿ […]

Continue Reading

ನಮ್ಮ ಪಕ್ಷದ ಷರತ್ತುಗಳನ್ನು ಯಾರೇ ಒಪ್ಪಿಕೊಂಡರೂ ಅವರೊಂದಿಗೆ ಮೈತ್ರಿ:ಕುಮಾರ ಸ್ವಾಮಿ

ಮತಗಟ್ಟೆ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂಬ ಅಂದಾಜಿನ ಪ್ರಕಾರ ನಮ್ಮ ಪಕ್ಷ ಷರತ್ತುಗಳನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷಕ್ಕೆ ಬೆಂಬಲ ನಾವು ನೀಡುವುದಾಗಿ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಹುಮತದಿಂದ ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಹಲವು ಸಂಸ್ಥೆಗಳು ಚುನಾವಣೋತ್ತರ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.ಜೆಡಿಎಸ್ ಪಕ್ಷ 50 ಸೀಟುಗಳನ್ನು ಗೆಲ್ಲವ ವಿಶ್ವಾಸ ಇದೆ. ಈ ಸಲ ನಮ್ಮ ಪಕ್ಷದ ಷರತ್ತುಗಳನ್ನು ಯಾರು ಒಪ್ಪಿಕೊಳ್ಳುವರೋ ಅ ಪಕ್ಷದ ಜತೆ ಹೋಗುತ್ತೇವೆ ಕುಮಾರ ಸ್ವಾಮಿ ಹೇಳಿದ್ದಾರೆ. […]

Continue Reading

ಕಾಂಗ್ರೆಸ್‌ ಪಕ್ಷದ ಭರ್ಜರಿ ಫಲಿತಾಂಶದ ಹಿಂದೆ ತೆರೆ ಮರೆಯಲ್ಲಿ ತಂತ್ರ ರೂಪಿಸಿದ ಪ್ರಮುಖರು

ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್,ಸುನಿಲ್ ಕಾನುಗೋಲು ಇವರ ಪಾತ್ರ ಬುಧವಾರ ಮತದಾನ ಮುಕ್ತಾಯವಾಗಿದ್ದು,ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆರುವ ನಿರೀಕ್ಷೆಯಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಉತ್ಸಾಹದ ಪ್ರಚಾರ ನಡೆಸಿದ ಐವರು ಪ್ರಮುಖರಿದ್ದಾರೆ. ಅವರು ತೆರೆ ಮರೆಯಲ್ಲಿ ನಿಂತು ಕಠಿಣ ಶ್ರಮ ವಹಿಸಿದ್ದಾರೆ. ಪ್ರಣಾಳಿಕೆಯಿಂದ ಹಿಡಿದು ಆಕ್ರಮಣಕಾರಿ ಪ್ರಚಾರದವರೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಹೈಲೈಟ್ ಮಾಡಿದ ಎಲ್ಲಾ ಅಂಶಗಳು ರಾಜ್ಯದ ಜನರ ಗಮನ ಸೆಳೆಯಿತು. ಯಶಸ್ವಿ ಪ್ರಚಾರದ ಹಿಂದೆ ಪಕ್ಷದ ಮುಖಂಡರಾದ ಜಿ. ಪರಮೇಶ್ವರ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ […]

Continue Reading

ದ.ಕ ಬಿಜೆಪಿಗೆ 4, ಕಾಂಗ್ರೆಸ್ 2, ಎರಡು ಕ್ಷೇತ್ರಗಳು ತೀವ್ರ ಪೈಪೋಟಿ ಸಾಧ್ಯತೆ

ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದೆ.ಇನ್ನು ಎನಿದ್ದರೂ ಅಭ್ಯರ್ಥಿಗಳ ಸೋಲು ಗೆಲ್ಲುವಿನ ಬಗ್ಗೆ ಲೆಕ್ಕಾಚಾರಗಳು.ಇದೇ 13 ರಂದು ಗೆಲುವಿನ ನಗು ಬೀರಲಿದ್ದಾರೆ ಅಭ್ಯರ್ಥಿಗಳು. ದ.ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ 4 ಸ್ಥಾನದಲ್ಲಿ ಬಿಜೆಪಿ, 2 ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವುದು ಬಹುತೇಕ ಖಚಿತ ಎಂದು ಅಂದಾಜಿಸಲಾಗಿದೆ.ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮಾನ ಹೋರಾಟವಿದ್ದು, ಎರಡು ಪಕ್ಷಗಳು ಗೆಲ್ಲುವ ಸನಿಹದಲ್ಲಿ ಇದೆ. ಈ ಕಾರಣದಿಂದ ಈ ಕ್ಷೇತ್ರಗಳನ್ನು ಕಠಿಣ ಕ್ಷೇತ್ರವೆಂದು ಗುರುತಿಸಲಾಗಿದೆ. ಮಂಗಳೂರು ದಕ್ಷಿಣ ಬಿಜೆಪಿಯ ಗೆಲ್ಲುವ ಕ್ಷೇತ್ರ […]

Continue Reading