72 ವರ್ಷದ ವಯೋವೃದ್ದನೊದಿಗೆ ಲೈಂಗಿಕ ಕ್ರಿಯೆಯ ವಿಡಿಯೋ ವೈರಲ್ ; ಮರ್ಯಾದೆಗೆ ಅಂಜಿ ವೃದ್ದ ಆತ್ಮಹತ್ಯೆ

ವಿದ್ಯಾರ್ಥಿನಿಯೋರ್ವಳು ವೃದ್ಧನ ಜೊತೆ ಲೈಂಗಿಕ ಕ್ರಿಯೆ ನಡೆಸಿ ಅದನ್ನು ರೆಕಾರ್ಡ್​ ಮಾಡಿಕೊಂಡು ವೆಬ್​ಸೈಟ್​ಒಂದಕ್ಕೆ ಅಪ್​ಲೋಡ್​ ಮಾಡಿದ್ದು, ವೃದ್ಧ ಅವಮಾನ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ವಿಡಿಯೋವೊಂದು ಸೋರಿಕೆಯಾದ ಬೆನ್ನಲ್ಲೇ 72 ವರ್ಷದ ವೃದ್ಧನೊಬ್ಬ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಸ್ಸಾಂನ ಜೊರ್ಹಾತ್ ಜಿಲ್ಲೆಯಲ್ಲಿ ನಡೆದಿದೆ. ಯುವತಿಯನ್ನು ದರ್ಶನಾ ಭಾರಾಲಿ ಎಂದು ಗುರುತಿಸಲಾಗಿದೆ.ಯುವತಿ ವೃದ್ಧನಿಗೆ ನಂಬಿಸಿ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ,ವಿಡಿಯೋ ರೆಕಾರ್ಡ್​ ಮಾಡಿಕೊಂಡು ವೆಬ್​ಸೈಟ್​ಗೆ ಅಪ್​ಲೋಡ್​ ಮಾಡಿರುವ ಆರೋಪ ಕೇಳಿಬಂದಿದೆ.ಜೋರ್ಹಾತ್​ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋ ಸಿಕ್ಕಾಪಟ್ಟೆ […]

Continue Reading

ಚುನಾವಣಾ ಕರ್ತವ್ಯ ಲೋಪ, ಶೃಂಗೇರಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟೇಗೌಡ ಅಮಾನತು

ಚುನಾವಣಾ ‌ಕರ್ತವ್ಯ ಲೋಪ, ನಿರ್ಲಕ್ಷ್ಯದಡಿಯಲ್ಲಿ ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟೇಗೌಡ ಅವರನ್ನು ಅಮಾನತುಗೊಳಿಸಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್. ರಮೇಶ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪುಟ್ಟೇಗೌಡ ಅವರು ಚುನಾವಣಾ ಕೆಲಸಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಮಹಿಳಾ ಸಿಬ್ಬಂದಿಗಳೊಂದಿಗೆ ಅವಾಚ್ಯ, ಅಶ್ಲೀಲ ಪದ ಬಳಸಿ ಮಜುಗುರವಾಗುವಂತೆ ನಡೆದುಕೊಂಡಿರುವುದು ಕಂಡುಬಂದ ತಕ್ಷಣದಿಂದ ಅವರನ್ನು ಕರ್ತವ್ಯದಿಂದ ಆಮಾತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ರಮೇಶ್‌ ರವರು ತಿಳಿಸಿದ್ದಾರೆ.

Continue Reading

ಬಿಜೆಪಿಗೆ ಮತ ಹಾಕದಂತೆ ಮತದಾರರಿಗೆ ಮಮತಾ ಬ್ಯಾನರ್ಜಿ ಮನವಿ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನತೆ ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ಮತ ಚಲಾಯಿಸಿ,ಬಿಜೆಪಿಗೆ ಮತ ಚಲಾಯಿಸಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಮತದಾರರಿಗೆ ಮನವಿ ಮಾಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನತೆ ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ಮತ ಚಲಾಯಿಸಿ,ಬಿಜೆಪಿಗೆ ಮತ ಚಲಾಯಿಸಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಮತದಾರರಿಗೆ ಮನವಿ ಮಾಡಿದ್ದಾರೆ.ಟಿಎಂಸಿ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರೂ ಕರ್ನಾಟಕ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬೇಡಿ, ಕಾಂಗ್ರೆಸ್ ಅಥವಾ […]

Continue Reading

ವಿಜಯೇಂದ್ರ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆ.. ಮಲೆನಾಡಲ್ಲಿ‌ ಮೊಳಗಿದ ಕ್ರೈಸ್ತರ ಘೋಷಣೆ

ಶಿವಮೊಗ್ಗ: ಮಲೆನಾಡ ಸೆರಗು ಶಿವಮೊಗ್ಗ ಜಿಲ್ಲೆಯ ಚುನಾವಣಾ ಆಖಾಡವು ರಾಜಕೀಯ ಪಕ್ಷಗಳ ಭರ್ಜರಿ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ.ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಸೆಣಸಾಟದ ನಡುವೆ ಶಿಕಾರಿಪುರದಲ್ಲಿನ ಕ್ರೈಸ್ತ ಸಮುದಾಯದ ನಿರ್ಧಾರವೊಂದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಬಿಜೆಪಿ ಹುರಿಯಾಳು ವಿಜಯೇಂದ್ರ ಅವರನ್ನು ಭೇಟಿಯಾದ ಕ್ರೈಸ್ತ ಸಮುದಾಯದ ಪ್ರಬಲ ಸಂಘಟನೆಯಾಗಿರುವ ಶಾಜಿ ಟಿ ವರ್ಗೀಸ್ ಅವರನ್ನೊಳಗೊಂಡ ಕ್ರಿಶ್ಚಿಯನ್ ಸೇವಾ ಸಂಘದ ಪ್ರಮುಖರು ಹಾಗೂ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್ ನೇತೃತ್ವದ ಮಲೆನಾಡಿನ ಕ್ರಿಶ್ಚಿಯನ್ […]

Continue Reading

ಬಿಜೆಪಿಗೆ ಬಿಗ್ ಶಾಕ್ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ ವೀರಶೈವ-ಲಿಂಗಾಯಿತರು.

ಬಿಜೆಪಿಗೆ ಲಿಂಗಾಯಿತರ ಅಗತ್ಯವಿಲ್ಲದಿದ್ದರೆ ಲಿಂಗಾಯಿತರಿಗೂ ಬಿಜೆಪಿ ಬೇಕಿಲ್ಲ ಎಂದು ಹೇಳಿರುವ ವೀರಶೈವ-ಲಿಂಗಾಯಿತ ಸಮುದಾಯವು,ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.ರಾಜ್ಯ ಚುನಾವಣೆ ಪರ್ವ.ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳನ್ನು ಗಮನಿಸಿದರೆ ಲಿಂಗಾಯತ ಮತ್ತು ವೀರಶೈವ ಸಮುದಾಯಕ್ಕೆ ಆತಂಕಕಾರಿ ಬೆಳವಣಿಗೆಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ವೈದಿಕಶಾಹಿ ಮನ:ಸ್ಥಿತಿಯ ಮನುವಾದಿಗಳು ನಡೆಸುತ್ತಿರುವ ಕುತಂತ್ರ ಮೇಲುಗೈ ಸಾಧಿಸುತ್ತಿದೆಯೇನೋ ಎಂದೆನಿಸುತ್ತಿದೆ.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುಳಿದಾಡುತ್ತಿರುವ ಬಿಜೆಪಿ ಪಕ್ಷದ ಮುಖಂಡರು ಆಡಿದರು ಎನ್ನಲಾದ ಮಾತುಗಳು ಇದನ್ನು ಪುಷ್ಟೀಕರಿಸುತ್ತಿವೆ. ಮೊನ್ನೆ ನಡೆದ […]

Continue Reading

ದಸರಾ ಜಂಬೂ ಸವಾರಿಯಲ್ಲಿ 13 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಬಲರಾಮ ಇನ್ನಿಲ್ಲ

ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ 13 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಹೆಗ್ಗಳಿಕೆಯ ಬಲರಾಮ ಆನೆ ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ.ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಭೀಮನಕಟ್ಟೆ ಆನೆ ಶಿಬಿರದಲ್ಲಿರುವ ಕೆಲವು ದಿನಗಳಿಂದ ಆಹಾರ ಸೇವಿಸುತ್ತಿರಲಿಲ್ಲ. ಆನೆಯ ಗಂಟಲಿನಲ್ಲಿ ಹುಣ್ಣಾಗಿದ್ದು, ಆಹಾರ ನಿರಾಕರಿಸುತ್ತಿರುವುದರಿಂದ ನಿತ್ರಾಣಗೊಂಡಿದೆ. ಎಂಡೋಸ್ಕೋಪಿ ಮಾಡಿ ರಕ್ತ ಹಾಗೂ ಅಂಗಾಂಗದ ಮಾದರಿಯನ್ನು ಪರೀಕ್ಷೆಗಾಗಿ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ತಜ್ಞ ವೈದ್ಯರಿಂದ ಎಲ್ಲ ರೀತಿಯಿಂದಲೂ ಚಿಕಿತ್ಸೆ ನೀಡಲಾಗಿತ್ತು. ಉತ್ತಮವಾಗಿ ಸ್ಪಂದಿಸುತ್ತಿತ್ತು. ಆದರೆ, ಭಾನುವಾರ ಸಂಜೆ ಮೃತಪಟ್ಟಿದೆ.ಕಳೇಬರದ ಅಂತ್ಯಕ್ರಿಯೆಯನ್ನು ಸೋಮವಾರ ಬೆಳಿಗ್ಗೆ […]

Continue Reading

ನಾಳೆ ಸೋಮವಾರ 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪಲಿತಾಂಶ ಪ್ರಕಟ

2022–23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ನಾಳೆ ಸೋಮವಾರ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ.ಸೋಮವಾರ ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಫಲಿತಾಂಶ ಸಂಬಂಧ ಸುದ್ದಿಗೋಷ್ಠಿ ನಡೆಯಲಿದೆ. ನಂತರ ಫಲಿತಾಂಶ ಪ್ರಕಟಿಸಲಾಗುವುದು. ಮಧ್ಯಾಹ್ನ 11 ಗಂಟೆಯ ನಂತರ ಇಲಾಖೆಯ ವೆಬ್‌ಸೈಟ್‌ https://karresults.nic.in/ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.ನಾಳೆ‌ ಮಧ್ಯಾಹ್ನ ಆಯಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ.ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ ಎಸ್‌ಎಂಎಸ್‌ […]

Continue Reading

ಕಾಂಗ್ರೆಸ್‌ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದ್ದು, ಬಿಜೆಪಿಗೆ ಭಾರೀ ನಿರಾಶೆಯಾಗಲಿದೆ

ಕರ್ನಾಟಕದ ವಿಧಾನಸಭೆ ಮೇ 10 ರಂದು ಬುಧವಾರ ಚುನಾವಣೆ ನಡೆಯಲಿದೆ. ಮತದಾನಕ್ಕೆ 4 ದಿನಗಳು ಬಾಕಿ ಇರುವಾಗ ಲೋಕ್ ಪೂಲ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಮುಖಭಂಗವಾಗಲಿದೆ ಎಂಬ ಸಮೀಕ್ಷೆಯ ವರದಿ ತಿಳಿಸಿದೆ.2023ರ ಚುನಾವಣೆಯ ಕುರಿತು ಅಂತಿಮ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶದಂತೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಅಗತ್ಯವಿರುವ ಮ್ಯಾಜಿಕ್‌ ನಂಬರ್ 113 ಚುನಾವಣೆಗೆ 4 ದಿನಗಳು ಇರುವಾಗ ಪ್ರಕಟಗೊಂಡ ಸಮೀಕ್ಷೆ ಫಲಿತಾಂಶ ಆಡಳಿತ ಪಕ್ಷಕ್ಕೆ ನಿರಾಸೆ ಉಂಟು ಮಾಡಿದೆ. ಪ್ರತಿಪಕ್ಷ […]

Continue Reading

ರಾಜ್ಯದಲ್ಲಿ ಈ ಬಾರಿ ಅತಂತ್ರ ಪಲಿತಾಂಶ. ಯಾರಿಗೂ ಬಹುಮತವಿಲ್ಲ. ಜೆಡಿಎಸ್ ನಿರ್ಣಾಯಕ ಪಾತ್ರ.!

ಕರ್ನಾಟಕ ರಾಜ್ಯದಲ್ಲಿ ಈಗ ವಿಧಾನಸಭಾ ಚುನಾವಣಾ ಕಾವು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ಬಾರಿ ಸರ್ಕಾರ ನಮ್ಮದೇ ಎನ್ನುತ್ತಿವೆ. ಆದರೆ ಸಮೀಕ್ಷೆಗಳಂತೂ ಅತಂತ್ರ ವಿಧಾನಸಭೆಯ ಸುಳಿವು ನೀಡುತ್ತಿವೆ.ಒಂದು ಸಮೀಕ್ಷೆ ಕಾಂಗ್ರೆಸ್‍ಗೆ ಸರಳ ಬಹುಮತ ಸಿಗಬಹುದು ಎನ್ನುತ್ತಿದ್ದರೆ, ಮತ್ತೊಂದು ಬಿಜೆಪಿಗೆ ಜೈ ಎನ್ನುತ್ತಿದೆ. ಆದರೆ ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಿ ಜೆಡಿಎಸ್‍ಗೆ ಅವಕಾಶ ಸಿಗುವ ಸಾಧ್ಯತೆಗಳತ್ತ ಬೊಟ್ಟು ಮಾಡುತ್ತಿವೆ. ಈ ಹಂತದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಕರ್ನಾಟಕವನ್ನು ಕೈವಶ ಮಾಡಿಕೊಳ್ಳಲು ಹಲವು ತಂತ್ರಗಾರಿಕೆಗಳನ್ನು ನಡೆಸುತ್ತಿದೆ. ರಾಜ್ಯದ […]

Continue Reading

ಕಾಂಗ್ರೆಸ್ ಪಕ್ಷದ 6ನೇ ಗ್ಯಾರಂಟಿ ರಿಲೀಸ್, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ 15 ಸಾವಿರ ರೂಗೆ ಹೆಚ್ಚಳ: ಪ್ರಿಯಾಂಕಾ ಭರವಸೆ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ,ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು 15 ಸಾವಿರ ರೂಗೆ ಹಾಗೂ ಮಿನಿ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಗೌರವಧನವನ್ನು 10 ಸಾವಿರ ರೂಗೆ ಹೆಚ್ಚಿಸಲಾಗುವುದು ಎಂದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಂಚಣಿ ಸೌಕರ್ಯವಿಲ್ಲ. ಹಾಗಾಗಿ ಅವರು ಸೇವಾ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ,3 ಲಕ್ಷ ರೂ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 2 ಲಕ್ಷ ರೂ ನೀಡಲಾಗುವುದು. ಕೋವಿಡ್ ಸಂಕಷ್ಟ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 8 […]

Continue Reading