ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ 1.31 ಕೋಟಿ ರೂಪಾಯಿ ಬಿಲ್ ಬಾಕಿ, ಬೆಳಗಾವಿ ಜಿಲ್ಲಾಧಿಕಾರಿ ಕಾರು ಜಪ್ತಿ

ಬ್ಯಾರೇಜ್ ನಿರ್ಮಿಸಿದ ಗುತ್ತಿಗೆದಾರನಿಗೆ ಬಡ್ಡಿ ಸಮೇತವಾಗಿ ರೂಪಾಯಿ 1.31 ಕೋಟಿ ಬಾಕಿ ಬಿಲ್ ನೀಡುವುದಕ್ಕೆ ವಿಫಲವಾದ ಕಾರಣ ಅರ್ಜಿದಾರರ ಪರ ವಕೀಲ ಓ.ಬಿ.ಜೋಶಿ ಅವರು, ಇಲ್ಲಿನ ಒಂದನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಲಯದ ಆದೇಶದಂತೆ ಬೆಳಗಾವಿ ಜಿಲ್ಲಾಧಿಕಾರಿ ಕಾರನ್ನು ಶುಕ್ರವಾರ ಜಪ್ತಿ ಮಾಡಿದರು. ಸಣ್ಣ ನೀರಾವರಿ ಇಲಾಖೆಗೆ ಸೇರಿದ ದೂಧಗಂಗಾ ನದಿಯ ಬ್ಯಾರೇಜ್ ನಿರ್ಮಾಣದ ಗುತ್ತಿಗೆಯನ್ನು ನಾರಾಯಣ ಕಾಮತ್ ಅವರಿಗೆ 1992-93ರಲ್ಲಿ ನೀಡಲಾಗಿತ್ತು. ಕಾಮಗಾರಿಗೆ ಬೇಕಿರುವ ಅನುದಾನ, ಸಾಮಾಗ್ರಿ ಇಲಾಖೆ ನೀಡುವುದಾಗಿ ತಿಳಿಸಿತ್ತು. ಆದರೆ, ಕಾಮಗಾರಿ ಆರಂಭವಾಗಿ […]

Continue Reading

ದೇಶದಾದ್ಯಂತ ಟ್ರೆಂಡ್ ಆಗಿರುವ ‘ಯ್ಯೂ ಶೇಫ್ ಕ್ಲಾಸ್ ರೂಂ’ ಮಲಯಾಳಿ ಪ್ರಾಡಕ್ಟ್ ಅನ್ನುವವರು ಈ ಸುದ್ದಿ ಓದಿ..

1996 ರಲ್ಲಿ ಸುಳ್ಯದ ಶಿಕ್ಷಕ ಡಾ. ಚಂದ್ರಶೇಖರ ದಾಮ್ಲೆ, 2024 ರಲ್ಲಿ ದಾವಣಗೆರೆ ಶಿಕ್ಷಕಿ ನಾಗವೇಣಿ ಯ್ಯೂ ಶೇಪ್ ಕ್ಲಾಸ್ ರೂಂ ಅಳವಡಿಸಿ ಭೇಷ್ ಅನ್ನಿಸಿದ್ದರು. ರಾಜ್ಯ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಈ ವಿಶಿಷ್ಟ ಪ್ರಯೋಗ ಯಶಸ್ವಿಯಾಗಿಲ್ಲ. ದೇಶದಾದ್ಯಂತ ಟ್ರೆಂಡ್ ಆಗಿರುವ ಯ್ಯೂ ಶೇಪ್ ಕ್ಲಾಸ್ ರೂಂ ಕಾನ್ಸೆಪ್ಟ್ ಮೊದಲ ಬಾರಿಗೆ ಪ್ರಯೋಗ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆ ಅಂದರೆ ನೀವು ನಂಬುತ್ತೀರಾ.. ನಂಬಲೇಬೇಕು. ಮಲಯಾಳಿ ಸಿನೆಮಾದ ಕಾನ್ಸೆಪ್ಟ್ ಎಂದು ಪ್ರಚಾರ ಪಡೆದಿರುವ ಯ್ಯೂ ಶೇಪ್ ಮಾದರಿ […]

Continue Reading

ಅಮಿತ್ ಶಾ ದೋಸ್ತ್ ಡಿಕೆಶಿ ಬಿಜೆಪಿ ಸೇರ್ತರಾ..? ರಾಜ್ಯ ರಾಜಕಾರಣದಲ್ಲಿ ಬಿಗ್ ಸಂಚಲನ.!

ಎಸ್ ಎಂ ಕೃಷ್ಣ ಹಾದಿಯತ್ತ ಅವರ ಪಟ್ಟಾ ಶಿಷ್ಯ.! ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಸ್ಪೋಟಕ ಸುದ್ದಿಯೊಂದು ಹೊರಬರುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಜೆಪಿ ಸೇರ್ತಾರೆ ಅನ್ನುವ ಸೆನ್ಸೇಷನಲ್ ಸುದ್ದಿ ಅದು. ಈ ಸುದ್ದಿ ಇಂದು ನಿನ್ನೆ ಹುಟ್ಟಿದ್ದಲ್ಲ. ಹಲವು ಸಮಯದಿಂದಲೂ ಇಂತಹದ್ದೊಂದು ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಆದರೆ ಈ ಬಾರಿಯಂತೂ ಪಕ್ಕಾ ಅನ್ನುವಷ್ಟರ ಮಟ್ಟಿಗೆ ಸುದ್ದಿ ರಿವೀಲ್ ಆಗುತ್ತಿದೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಲು ಡಿಕೆಶಿ ಮಾನಸಿಕವಾಗಿ ತಯಾರಿ ನಡೆಸುತ್ತಿದ್ದಾರೆ ಅನ್ನುವ ವರದಿಗಳು ಕೇಳಿ […]

Continue Reading

ಸಿದ್ದು ದಿಲ್ಲಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದೇಕೆ.?, ಸಿದ್ದು ಗೂಢಚಾರರು ತಂದ ಸಂದೇಶ

ವೀರೇಂದ್ರ ಪಾಟೀಲ್-ಚೆನ್ನಾರೆಡ್ಡಿ ಎಪಿಸೋಡು.? ✍️. ಅರ್.ಟಿ.ವಿಠ್ಟಲಮೂರ್ತಿ ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಕೆಲ ದಿನಗಳ ಹಿಂದೆ ಸಿಎಂ ಸಿದ್ಧರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ. ಹೀಗೆ ಸಂಪರ್ಕಿಸಿದವರು:’ಸಿದ್ರಾಮಯ್ಯಾಜೀ, ಮುಂದಿನ ವಾರ ರಾಹುಲ್ ಗಾಂಧಿಯವರು ಪ್ರವಾಸದಿಂದ ವಾಪಸ್ಸಾಗುತ್ತಿದ್ದಾರೆ. ಅವರು ಬಂದ ತಕ್ಷಣ ನಿಮ್ಮ ಜತೆ ಮೀಟಿಂಗು ಮಾಡಲು ಬಯಸಿದ್ದಾರೆ’ ಎಂದಿದ್ದಾರೆ.ಅಂದ ಹಾಗೆ ವಿಧಾನಪರಿಷತ್ತಿಗೆ ಡಿ.ಜಿ.ಸಾಗರ್, ದಿನೇಶ್ ಅಮಿನ್ ಮಟ್ಟು, ರಮೇಶ್ ಬಾಬು ಮತ್ತು ಆರತಿ ಕೃಷ್ಣ ಅವರ ಹೆಸರುಗಳನ್ನು ಹೈಕಮಾಂಡಿಗೆ ಕಳಿಸಿ ಒಪ್ಪಿಗೆ ಪಡೆದಿದ್ದ ಸಿದ್ದರಾಮಯ್ಯ […]

Continue Reading

*ಹೊಸದಾಗಿ ರಚನೆಯಾಗಿರುವ ಐದು ಪಟ್ಟಣ ಪಂಚಾಯತ್ ಗಳಿಗೆ ಸಾರ್ವತ್ರಿಕ ಚುನಾವಣೆ *

ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಉಪ-ಚುನಾವಣೆ ಆಗಸ್ಟ್ 17 ರಂದು ಮತದಾನ, ಆಗಸ್ಟ್ 20 ರಂದು ಮತ ಎಣಿಕೆ ಹೊಸದಾಗಿ ರಚನೆಯಾಗಿರುವ ಐದು ಪಟ್ಟಣ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಉಪಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಆಗಸ್ಟ್ 17 ರಂದು ಮತದಾನ ನಡೆಯಲಿದೆ.ಜುಲೈ 29 ರಂದು ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 5 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. […]

Continue Reading

ಮೇಲ್ಮನೆ ನೇಮಕವೂ ಅಂತಿಮ, ವಿವಿಧ ನಿಗಮ ಮಂಡಳಿಗಳ ಪಟ್ಟಿ ಫೈನಲ್ ಸಾಧ್ಯತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಲೋಕಸಭೆ ವಿರೋಧ ಪಕ್ಷಧ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಉದ್ದೇಶಿಸಿದ್ದರು. ಆದರೆ, ರಾಹುಲ್ ಗಾಂಧಿ ಸಮಯ ನೀಡದ ಕಾರಣ ಸುರ್ಜೇವಾಲಾ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದರು. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಸಂಜೆಯ ವರೆಗೆ ಕಾದರು. […]

Continue Reading

KIADB ಅಧಿಸೂಚಿತ ಮತ್ತು ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕಾ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಅಧಿಕಾರವಿಲ್ಲ: ಹೈಕೋರ್ಟ್

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಸೂಚಿತ ಮತ್ತು ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕಾ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳಿಗೆ ಕಾನೂನಿನಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ನೆಲಮಂಗಲದ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ನೆಲೆಗೊಂಡಿರುವ ಹಲವಾರು ಇತರ ಕೈಗಾರಿಕಾ ಸಂಸ್ಥೆಗಳಿಗೆ ಸೋಂಪುರ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್ ಗಳನ್ನು ಪ್ರಶ್ನಿಸಿ ಕಲ್ಪತರು ಬ್ರಿವರೀಸ್ ಮತ್ತು ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ […]

Continue Reading

ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ಸವಾಲ್.. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಪ್ರಕರಣಗಳ ಸಂಖ್ಯೆ, ಶಿಕ್ಷೆ ಪ್ರಮಾಣ ಭಾರಿ ಕಡಿಮೆ

5 ವರ್ಷಗಳಲ್ಲಿ 16,663 ಪೋಕ್ಸೋ ಪ್ರಕರಣಗಳು ದಾಖಲು. ಬರೀ 688 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವರ್ಷದಿಂದ ವರ್ಷಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದೆ. ಆದರೆ ಪೋಕ್ಸೋ ಪ್ರಕರಣದಲ್ಲಿ ಸಜೆಯಾಗುತ್ತಿರುವ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 16,663 ನೈಜ ಪೋಕ್ಸೋ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 688 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗಿದೆ. 2020-2025 ಏಪ್ರಿಲ್ ವರೆಗೆ ರಾಜ್ಯದಲ್ಲಿ 17,426 ಪೋಕ್ಸೋ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 16,663 ಪ್ರಕರಣಗಳನ್ನು ನೈಜ ಪೋಕ್ಸೋ ಪ್ರಕರಣವೆಂದು ಗುರುತಿಸಲಾಗಿದೆ. […]

Continue Reading

ಗ್ರಾಹಕರನ್ನು ಗೊಂದಲಕ್ಕೆ ಸಿಲುಕಿಸಬೇಡಿ; ಪಕ್ಕದ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್‌ಗೆ ರೂ. 900 ಶುಲ್ಕವಿದೆ, ಕರ್ನಾಟಕದಲ್ಲಿ ರೂ. 10 ಸಾವಿರ ಏಕೆ.?: ಹೈಕೋರ್ಟ್

ರಾಜ್ಯದಲ್ಲಿ ವಿದ್ಯುತ್ ಬಳಕೆಯನ್ನು ರಿಯಲ್-ಟೈಂನಲ್ಲಿ ಟ್ರ್ಯಾಕ್ ಮಾಡಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸ್ಮಾರ್ಟ್ ಪ್ರೀ-ಪೇಯ್ಡ್ ಮೀಟರ್‌ಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಗಿದೆ. ಆದರೆ, ಈ ಯೋಜನೆಗೆ ಆರಂಭಿಕ ವಿಘ್ನ ಎದುರಾಗಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಗೆ ವಿಧಿಸಲಾಗಿರುವ ಭಾರಿ ಶುಲ್ಕದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದೆ. ಬೆಸ್ಕಾಂನ ಸ್ಮಾರ್ಟ್ ಮೀಟರ್ ಕಡ್ಡಾಯ ನಿಯಮವನ್ನು ಪ್ರಶ್ನಿಸಿ ಜಯಲಕ್ಷ್ಮೀ ಎಂಬುವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ […]

Continue Reading

ಒಂದೂ ಮುಕ್ಕಾಲು ಶತಮಾನದ ಇತಿಹಾಸ ಹೊಂದಿರುವ ಕನ್ನಡ ಪತ್ರಿಕೋದ್ಯಮ, ಡಿಜಿಟಲ್ ಯುಗದಲ್ಲೂ ನಾಗರಿಕ ಬದುಕಿನ ಅವಿಭಾಜ್ಯ ಅಂಗ

ಕನ್ನಡ ಪ್ರತಿಕಾ ರಂಗಕ್ಕೆ 182 ನೇ ವಾರ್ಷಿಕೋತ್ಸವದ ಸಂಭ್ರಮ ಜುಲೈ 1 ಕನ್ನಡ ಪತ್ರಿಕಾ ದಿನಾಚರಣೆ : ಕನ್ನಡದ ಕೆಲಸಕ್ಕಾಗಿ ಮೊತ್ತ ಮೊದಲ ಗೌರ ಡಾಕ್ಟರೇಟ್ ಪ್ರಶಸ್ತಿ ಪಡೆದ ಕನ್ನಡ ಪತ್ರಿಕಾ ರಂಗದ ಪಿತಾಮಹ ರೆವರೆಂಡ್ ಹರ್ಮನ್ ಫ್ರೆಡರಿಕ್ ಮೊಗ್ಲಿಂಗ್ ಅವರ ಪತ್ರಿಕಾ ಸೇವೆ ಸ್ಮರಿಸುವ ದಿನ ✍️. ಪಿ.ಎಂ.ಎ. ಪಾಣೆಮಂಗಳೂರು, ಪತ್ರಕರ್ತರು. ಕನ್ನಡ ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣದ ಹೋರಾಟದಲ್ಲೂ, ನಾಗರಿಕತೆಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿದೆ. […]

Continue Reading