‘ಕ್ರಿಸ್ಮಸ್’ಗೆ ಎಲ್ಲೂ ಇಲ್ಲದ ನಿರ್ಬಂಧ ಕರ್ನಾಟಕದಲ್ಲಿ ಯಾಕೆ.? ಮಾರ್ಮಿಕ ಪ್ರಶ್ನೆ ಮುಂದಿಟ್ಟ ಕ್ರೈಸ್ತ ಸಮುದಾಯ

ಕ್ರಿಸ್ಮಸ್’ ಪ್ರಾರ್ಥನಾ ಕಾರ್ಯಕ್ರಮವನ್ನು ರಾತ್ರಿ ವೇಳೆ ಆಚರಿಸಲು ಅವಕಾಶ ನೀಡದಿರುವ ಕ್ರಮವು ತಾರತಮ್ಯವಾಗಿದೆ ಬೆಂಗಳೂರು: ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವನ್ನಾಗಿ ಮಾಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ಕ್ರೈಸ್ತ ಧರ್ಮೀಯರ ಸಮಸ್ಯೆ ಸವಾಲಾಗಿ ಪರಿಣಮಿಸಿದೆ. ದೇಶದೆಲ್ಲೆಡೆ ಇರುವಂತೆ ಕರಾವಳಿ ಸಹಿತ ರಾಜ್ಯದ ಎಲ್ಲಾ ಚರ್ಚ್‌ಗಳಲ್ಲೂ ಸಂಪ್ರದಾಯದಂತೆ ಮಧ್ಯರಾತ್ರಿ ಕ್ರಿಸ್ಮಸ್ ಹಬ್ಬ ಆಚರಣೆಗೆ ಅವಕಾಶ ಕಲ್ಪಿಸಲು ಕ್ರೈಸ್ತ ಸಮುದಾಯವು ಸರ್ಕಾರಕ್ಕೆ ಮನವಿ ಮಾಡಿದೆ. ಸಾಮಾಜಿಕ ಹೋರಾಟಗಾರರೂ ಆದ ಹಿರಿಯ ಪತ್ರಕರ್ತ ಆಲ್ವಿನ್ ಮೆಂಡೋನ್ಸಾ ಅವರು […]

Continue Reading

ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಅವಾಚ್ಯ ಶಬ್ದಗಳಿಂದ ‌ನಿಂದನೆ; ಬಿಜೆಪಿ ಕಾರ್ಯಕರ್ತನ ಮೇಲೆ ಪ್ರಕರಣ ದಾಖಲು

ಬಜಪೆ: ಡಿಸೆಂಬರ್ 11 ಸೋಮವಾರದಂದು ಸಂಜೆ ಹೊತ್ತು ಬಿಜೆಪಿ ಕಾರ್ಯಕರ್ತ ಎನ್ನಲಾದ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತೂರು ಗ್ರಾಮದ ಬೊಳಿಯ ನಿವಾಸಿ ಸಂತೋಷ್ ಪೂಜಾರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶ್ರೀ ನಾರಾಯಣ ಗುರು ಯುವ ವೇದಿಕೆ ಎಂಬ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ವಾಯ್ಸ್ ಬಿಟ್ಟಿದ್ದು, ಆ ವಾಯ್ಸ್ ಕ್ಲಿಪ್ ಗಳು ಇತರ ಹಲವಾರು ಗ್ರೂಪ್ ಗಳಲ್ಲೂ ವೈರಲ್ ಆಗಿತ್ತು ಎನ್ನಲಾಗಿದೆ. ಈ ಬಗ್ಗೆ […]

Continue Reading

ರಾಜ್ಯದಲ್ಲಿ ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಗಳು ಏನು ಮಾಡುತ್ತಿವೆ.?

ದ್ರೌಪದಿಯ ಸೀರೆಯ ಅಪಹರಣಕ್ಕಿಂತಲೂ ಇದು ಕ್ರೂರ: ಹೈಕೋರ್ಟ್ ಮಗನ ಮೇಲಿನ ಸಿಟ್ಟಿಗೆ ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದ ಮಹಿಳೆಯೊಬ್ಬಳನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಥಳಿಸಿರುವ ಘಟನೆ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ‘ನಾವೆಲ್ಲಾ 21ನೇ ಶತಮಾನದಲ್ಲಿದ್ದೇವೆಯೊ ಅಥವಾ 17-18ನೇ ಶತಮಾನಕ್ಕೆ ವಾಪಸು ಹೋಗುತ್ತಿದ್ದೇವೆಯೊ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ […]

Continue Reading

ಒಂಬತ್ತು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಹಾಗೂ ಮಕ್ಕಳ ಸುರಕ್ಷತಾ ಕ್ರಮಗಳ ಕುರಿತಂತೆ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಒಂಬತ್ತು ತಿಂಗಳು ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಹೆಲ್ಮೆಟ್ ಹಾಗೂ ಮಕ್ಕಳ ಸುರಕ್ಷತಾ ಕ್ರಮಗಳ ಕುರಿತಂತೆ ನಿರ್ದೇಶಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.ಮಕ್ಕಳಿಗೆ ಹೆಲ್ಮೆಟ್‌ ಹಾಗೂ ಸುರಕ್ಷತಾ ಸಾಧನಗಳು ಲಭ್ಯವಾಗುವಂತೆ ಮಾಡಲು ತುರ್ತು ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಮಕ್ಕಳ ಹೆಲ್ಮೆಟ್‌ ಹಾಗೂ ಸುರಕ್ಷತಾ ಸಾಧನಗಳ ಕುರಿತು ಡಾ.ಕೆ. ಅರ್ಚನಾ ಭಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ […]

Continue Reading

ಹೆಂಡತಿಯರ ಅದಲು-ಬದಲು ಪ್ರಕರಣ: ರಾಜಧಾನಿ ಬೆಂಗಳೂರಿನಲ್ಲಿ ವೈಫ್​ ಸ್ವಾಪಿಂಗ್ ಪ್ರಕರಣ ದಾಖಲು

ರಾಜಧಾನಿ ಬೆಂಗಳೂರಿನಲ್ಲಿ ವೈಫ್​ ಸ್ವಾಪಿಂಗ್ ಪ್ರಕರಣ ದಾಖಲಾಗಿದೆ. ಕೇರಳದಲ್ಲಿ‌ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಈ ಕೆಟ್ಟ ಸಂಸ್ಕೃತಿ ಬೆಂಗಳೂರಿನಲ್ಲೂ ಕೇಳಿ ಬಂದಿದೆ. ವೈಫ್​​ ಸ್ವಾಪಿಂಗ್​ಗೆ ಪೀಡಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸರ ಮೊರೆ ಹೋಗಿ ದೂರು ದಾಖಲಿಸಿದ್ದಾರೆ. ಸ್ನೇಹಿತನ ಜೊತೆ ರಾತ್ರಿ ಕಳೆಯುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಪತಿ ವಿರುದ್ಧ ದೂರು ದಾಖಲಾಗಿದೆ. ಬಸವನಗುಡಿ ನಿವಾಸಿ ತನ್ನ ಪತ್ನಿಯನ್ನು ತನ್ನ ಸ್ನೇಹಿತನ ಜೊತೆ ಕಾಲಕಳೆಯುವಂತೆ ಪೀಡಿಸುತ್ತಿದ್ದನು. ಇದಕ್ಕೆ ಒಪ್ಪದಿದ್ದಕ್ಕೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾನೆ ಎಂದು ಪತಿ […]

Continue Reading

ಮೈಸೂರು ಸಂಸದರ ಅಪ್ತರ ಹೆಸರಲ್ಲಿ ಪಾಸ್ ಪಡೆದು ಸಂಸತ್ ಭವನ ಪ್ರವೇಶಿಸಿ ಭದ್ರತ ಲೋಪ.!

ಸಂಸತ್​ ಭವನದಲ್ಲಿ ಭದ್ರತಾ ಲೋಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪುರುಷ ಮತ್ತು ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಳೆಯ ಸಂಸತ್​ ಭವನದ ಮೇಲಿನ ಉಗ್ರ ದಾಳಿಗೆ ಇಂದು 22 ವರ್ಷ ತುಂಬಿದ್ದು, ಇದೇ ದಿನ ಮತ್ತೊಂದು ಕರಾಳ ಘಟನೆಗೆ ನೂತನ ಸಂಸತ್​ ಭವನ ಸಾಕ್ಷಿಯಾಗಿದೆ. ಬಂಧಿತರನ್ನು 42 ವರ್ಷದ ನೀಲಂ ಮತ್ತು 25 ವರ್ಷದ ಅಮೋಲ್ ಶಿಂಧೆ ಎಂದು ಗುರುತಿಸಲಾಗಿದೆ. ನೀಲಂ ಹರಿಯಾಣದ ಹಿಸಾರ್ ನಿವಾಸಿ ಮತ್ತು ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರ್ ನಿವಾಸಿ. ಈ […]

Continue Reading

ಹಲವು ಪ್ರಕರಣ ಬಾಕಿ ಇದ್ದರೂ 2024ರ ಸಾಲಿನ ರಾಷ್ಟ್ರಪತಿ ಪದಕಕ್ಕೆ ಎಡಿಜಿಪಿ ಅಲೋಕ್‌ಕುಮಾರ್ ಹೆಸರು ಶಿಫಾರಸು

ಬೆಂಗಳೂರು: 2024ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ರಾಜ್ಯ ಸರ್ಕಾರವು 32 ಮಂದಿ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡಿದೆ. ಫೋನ್‌ ಕದ್ದಾಲಿಕೆ, ಮಹಿಳೆ ಮೇಲೆ ಹಲ್ಲೆ, ಒಂದು ಕೋಟಿ ರೂ. ಲಂಚಕ್ಕೆ ಬೇಡಿಕೆ ಆರೋಪದ ಪ್ರಕರಣಗಳ ವಿಚಾರಣೆ ಬಾಕಿ ಇರುವಾಗಲೇ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಪ್ರತಿ ವರ್ಷ ಗಣರಾಜ್ಯೋತ್ಸವ ದಿನದಂದು ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಪದಕ ಪ್ರದಾನ ಮಾಡಲಾಗುತ್ತದೆ. 2024ನೇ ಸಾಲಿನ ಪದಕಕ್ಕೆ ಅರ್ಹರಿರುವ […]

Continue Reading

ವಕೀಲರ ಮೇಲೆ ಹಲ್ಲೆಗೆ 3 ವರ್ಷ ಜೈಲು ಶಿಕ್ಷೆ: ಬೆಳಗಾವಿ ಅಧಿವೇಶನದಲ್ಲಿ ವಿಧೇಯಕ ಮಂಡನೆ

ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ಅಥವಾ ಹಿಂಸಾಚಾರ ನಡೆಸುವವರಿಗೆ 6 ತಿಂಗಳಿನಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ-2023 ಅನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ಅವರು ವಿಧೇಯಕವನ್ನು ಮಂಡಿಸಿದರು. ವಕೀಲರು ತಮ್ಮ ಕರ್ತವ್ಯ ನಿರ್ವಹಿಸುವ ವಿಷಯದಲ್ಲಿ ಬೆದರಿಕೆಗಳು ಬಂದಾಗ, ಕರ್ತವ್ಯ ನಿರ್ವಹಣೆಗೆ ಅಡ್ಡಿಯಾದಾಗ ಮತ್ತು ಅವರ ಮೇಲೆ […]

Continue Reading

ಕಲ್ಲಡ್ಕ ಪ್ರಭಾಕರ ಭಟ್ಟರು ಸಧ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರೇ ಅಲ್ಲ.!

ಆರ್ ಎಸ್ ಎಸ್ ಮುಖಂಡ’ ಎಂದು ಹೆಚ್.ಡಿ ಕುಮಾರಸ್ವಾಮಿ ನಂಬಿರುವುದೇ ಮೂರ್ಖತನ.! ✍️.ನವೀನ್ ಸೂರಿಂಜೆ,ಪತ್ರಕರ್ತ “ಕಲ್ಲಡ್ಕ ಪ್ರಭಾಕರ್ ಭಟ್ ಬಗೆಗೆ ಕೆಲವರು ತಪ್ಪು ಮಾಹಿತಿ ನೀಡಿದ್ದರಿಂದ ನಾನು ಈ ಹಿಂದೆ ಅವರನ್ನು ಟೀಕಿಸಿದ್ದೆ. ಅದಕ್ಕಾಗಿ ವಿಷಾದಿಸುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕಾರ್ಯಕ್ರಮದಲ್ಲಿ ಹೇಳಿದ್ದು ಚರ್ಚೆಗೆ ಒಳಗಾಗಿದೆ. ವಾಸ್ತವವಾಗಿ ಈಗಲೂ ಕಲ್ಲಡ್ಕ ಪ್ರಭಾಕರ ಭಟ್ಟರ ಬಗ್ಗೆ ಕುಮಾರಸ್ವಾಮಿಯವರಿಗೆ ಯಾರೂ ಸರಿಯಾದ ಮಾಹಿತಿ ನೀಡಿಲ್ಲ ಎಂಬುದು ವಿಪರ್ಯಾಸ ! ಜೆಡಿಎಸ್ ಪಕ್ಷವು […]

Continue Reading

ವಕೀಲನ ಹತ್ಯೆಗೆ ಸುಫಾರಿ ನೀಡಿದ ಆರೋಪಿ ದಂಪತಿಗಳ ಬಂಧನ

ಕಲಬುರಗಿ ಉದನೂರು ಗ್ರಾಮದ ವಕೀಲ ಈರಣ್ಣಗೌಡ ಪಾಟೀಲ ಕೊಲೆ ಸಂಬಂಧ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ನೀಲಕಂಠರಾವ್ ಪಾಟೀಲ ಮತ್ತು ಸಿದ್ದಮ್ಮ ಪಾಟೀಲ ಬಂಧಿತ ದಂಪತಿ ಆರೋಪಿಗಳು. ಮಲ್ಲಿನಾಥ ಬಸಣ್ಣ‌, ಮತ್ತು ಅವ್ವಣಪ್ಪ ಭಗವಂತರಾವ್ ಅವರನ್ನು ಮೊದಲು ಬಂಧಿಸಲಾಗಿತ್ತು. ಈರಣ್ಣಗೌಡ ಕೊಲೆಯಾದ ದಿನ ಸಿದ್ದಮ್ಮ ಅವರು ಮಲ್ಲಿನಾಥಗೆ ರೂ.50 ಸಾವಿರ ನೀಡಿದ್ದರು. ಕೃತ್ಯ ನಡೆಯುವ ನಾಲ್ಕೈದು ದಿನಗಳು ಮೊದಲೇ ಕೊಲೆಗೆ ಯೋಜನೆ ಹಾಕಿಕೊಂಡಿದ್ದರು. ಕೊಲೆ ನಡೆಯುವ ದಿನದಂದು ದಂಪತಿ ತಮ್ಮ ಹೊಸ ಕಾರಿನ ಪೂಜೆಗಾಗಿ ಅಫಜಲಪುರದ […]

Continue Reading